Asianet Suvarna News Asianet Suvarna News

ಆರ್‌ಬಿಐ ಮತ್ತು ಕೇಂದ್ರದ ನಡುವೆ ತಿಕ್ಕಾಟ: ಯಾರಾಡ್ತಿದ್ದಾರೆ ಅಸಲಿ ಆಟ?

ಮತ್ತೆ ಶುರುವಾಯ್ತು ಆರ್‌ಬಿಐ ಮತ್ತು ಕೇಂದ್ರದ ನಡುವೆ ತಿಕ್ಕಾಟ! ಪಾವತಿ ನಿಯಂತ್ರಣ ಮಂಡಳಿ ಮೇಲಿನ ನಿಯಂತ್ರಣಕ್ಕಾಗಿ ತಗಾದೆ! ಪಾವತಿ ನಿಯಂತ್ರಣ ಮಂಡಳಿಯನ್ನು ಸ್ವಾಯತ್ತ ಸಂಸ್ಥೆಯಾಗಿ ಮಾರ್ಪಡಿಸಲು ಕೇಂದ್ರದ ಒಲವು! ಪಾವತಿ ನಿಯಂತ್ರಣ ಮಂಡಳಿ ತನ್ನ ನಿಯಂತ್ರಣದಲ್ಲೇ ಇರಬೇಕೆಂದು ಆರ್‌ಬಿಐ ವಾದ!  
 

Central Bank Makes Dissent on Inter-ministerial Committee Recommendation
Author
Bengaluru, First Published Oct 20, 2018, 4:46 PM IST

ನವದೆಹಲಿ(ಅ.20): ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರದ ನಡುವೆ ಹೊಸದೊಂದು ತಿಕ್ಕಾಟ ಶುರುವಾಗಿದೆ. ಈ ಬಾರಿ ಪಾವತಿ ನಿಯಂತ್ರಣ ಮಂಡಳಿ ಮೇಲಿನ ನಿಯಂತ್ರಣ ಕುರಿತಂತೆ ಕೇಂದ್ರ ಮತ್ತು ಆರ್‌ಬಿಐ ಪರಸ್ಪರ ಎದುರಾಳಿಗಳಾಗಿವೆ.

ಪಾವತಿ ನಿಯಂತ್ರಣ ಮಂಡಳಿ(Payments Regulatory Board)ಯನ್ನು ಆರ್‌ಬಿಐ ನಿಯಂತ್ರಣದಿಂದ ಹೊರತಂದು ಅದನ್ನು ಸ್ವಾಯತ್ತ ಸಂಸ್ಥೆಯಾಗಿ ಮಾರ್ಪಡಿಸಬೇಕು ಎಂದು ಇತ್ತೀಚಿಗೆ ಕೇಂದ್ರ ಸರ್ಕಾರದ ಅಂತರ್ ಅಚಿವ ಸಮಿತಿ ತನ್ನ ವರದಿಯಲ್ಲಿ ಆಗ್ರಹಿಸಿತ್ತು.

ಈ ಪ್ರ್ತಾವನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಆರ್‌ಬಿಐ, ಪಾವತಿ ನಿಯಮತ್ರಣ ಮಂಡಳಿ ಆರ್‌ಬಿಐ ವ್ಯಾಪ್ತಿಯಲ್ಲೇ ಇರಬೇಕು ಎಂದು ಒತ್ತಾಯಿಸಿದೆ. ಆರ್‌ಬಿಐ ಗರ್ವನರ್ ನೇತೃತ್ವದಲ್ಲಿ ಈ ಮಂಡಳಿ ಕಾರ್ಯ ನಿರ್ವಹಿಸಬೇಕು ಎಂಬುದು ಆರ್‌ಬಿಐ ಆಗರಹವಾಗಿದೆ. ಆದರೆ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಜಂಟಿಯಾಗಿ 3 ಜನ ಸದಸ್ಯರನ್ನು ಈ ಮಂಡಳಿಗೆ ನೇಮಿಸಲು ತನ್ನ ಅಭ್ಯಂತರವಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಪಾವತಿ ನಿಯಮತ್ರಣ ಮಂಡಳಿಗೆ ಕೇಂದ್ರ ಸರ್ಕಾರವೇ ನಿದೇರ್ಶಕರನ್ನು ನೇಮಿಸಬೇಕು ಎಂಬುದು ಅಂತರ್ ಸಚಿವ ಸಮಿತಿಯ ಶಿಫಾರಸ್ಸಾಗಿತ್ತು. ಇದು 2018 ರ ಫೈನಾನ್ಸ್ ಬಿಲ್‌ನಲ್ಲಿ ಉಲ್ಲೇಖಿಸಿದ್ದ ಆರ್‌ಬಿಐ ಗರ್ವನರ್ ಅವರೇ ಇದರ ಮುಖ್ಯಸ್ಥರಾಗಿರಬೇಕೆಂಬ ನಿಯಮಕ್ಕೆ ವಿರುದ್ಧವಾಗಿದೆ.

Follow Us:
Download App:
  • android
  • ios