ಏರ್‌ಟೆಲ್ ವಿರುದ್ಧ ವಿದ್ಯುತ್ ಕಳ್ಳತನ ಆರೋಪ! ಕಣಿವೆ ರಾಜ್ಯದ ಕಾರ್ಗಿಲ್ ಜಿಲ್ಲೆಯಲ್ಲಿ ಕಳ್ಳತನ! ಬಿಎಸ್‌ಎನ್ಎಲ್ ಟ್ರಾನ್ಸ್ಫಾರ್ಮರ್‌ನಿಂದ ಕಳ್ಳತನ! ಏರ್‌ಟೆಲ್ ವಿರುದ್ಧ ಪ್ರಕರಣ ದಾಖಲು 

ಶ್ರೀನಗರ(ಆ.5): ಪ್ರತಿಷ್ಠಿತ ಟೆಲಿಕಾಂ ಸಂಸ್ಥೆ ಏರ್‌ಟೆಲ್ ವಿರುದ್ಧ ವಿದ್ಯುತ್ ಕಳ್ಳತನದ ಆರೋಪ ಕೇಳಿ ಬಂದಿದೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ನಿಂದ ಏರ್‌ಟೆಲ್ ವಿದ್ಯುತ್ ಕಳ್ಳತನ ಮಾಡುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಜಮ್ಮು-ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಬಿಎಸ್ಎನ್ಎಲ್‌ನಿಂದ ವಿದ್ಯುತ್ ಕಳ್ಳತನ ಮಾಡುತ್ತಿದೆ ಎಂದು ಸಾರ್ವನಿಕ ಕ್ಷೇತ್ರದ ಟೆಲಿಕಾಂ ಸಂಸ್ಥೆ ದೂರು ದಾಖಲಿಸಿದ್ದು, ಪೊಲೀಸರು ಏರ್‌ಟೆಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಬಿಎಸ್ಎನ್ಎಲ್ ಸಂಸ್ಥೆ ಬಳಕೆ ಮಾಡುತ್ತಿರುವ ಟ್ರಾನ್ಸ್ಫಾರ್ಮರ್‌ನಿಂದ ಏರ್‌ಟೆಲ್ ಸಂಸ್ಥೆ ತನ್ನ ಟವರ್‌ಗಾಗಿ ವಿದ್ಯುತ್ ಕಳ್ಳತನ ಮಾಡುತ್ತಿದೆ ಎಂದು ಆ.03 ರಂದು ಬಿಎಸ್ಎನ್ಎಲ್ ಸಂಸ್ಥೆ ದೂರು ನೀಡಿತ್ತು. 

 ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಏರ್‌ಟೆಲ್ ಟವರ್‌ನ್ನು ಬಿಎಸ್ಎನ್ಎಲ್ ಟ್ರಾನ್ಸ್ಫಾರ್ಮರ್‌ಗೆ ಅಕ್ರಮವಾಗಿ ಕನೆಕ್ಟ್ ಮಾಡಲಾಗಿರುವುದು ಕಂಡುಬಂದಿದೆ. ವಿದ್ಯುತ್ ಕಾಯ್ದೆಯ ಸೆಕ್ಷನ್ 95 ರ ಅಡಿಯಲ್ಲಿ ಏರ್‌ಟೆಲ್ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.