ಬ್ಯಾಂಕ್ ಲಾಕರ್‌ಗಳಲ್ಲಿ ನಗದು ಇಡುವಂತಿಲ್ಲ ಎಂದು ಆರ್‌ಬಿಐ ನಿಯಮ ಹೇಳುತ್ತದೆ. ಆಭರಣ, ದಾಖಲೆಗಳನ್ನು ಇಡಬಹುದು. ಬ್ಯಾಂಕಿನ ನಿರ್ಲಕ್ಷ್ಯದಿಂದ ನಷ್ಟವಾದರೆ, ವಾರ್ಷಿಕ ಬಾಡಿಗೆಯ 100 ಪಟ್ಟು ಪರಿಹಾರ ಸಿಗುತ್ತದೆ. ಲಾಕರ್‌ನಲ್ಲಿ ಶಸ್ತ್ರಾಸ್ತ್ರ, ಮಾದಕ ದ್ರವ್ಯ, ಹಾಳಾಗುವ ವಸ್ತುಗಳನ್ನೂ ಇಡುವಂತಿಲ್ಲ. ಗ್ರಾಹಕರು ನಿಯಮ ಪಾಲಿಸಬೇಕು.
ಬೆಲೆ ಬಾಳುವ ಬಂಗಾರ (Gold), ಚಿನ್ನದ ನಾಣ್ಯಗಳು (Gold coins) ಮನೆಯ ಲಾಕರ್ ನಲ್ಲಿದ್ರೆ ಸುರಕ್ಷಿತವಲ್ಲ. ಅದು ಕಳ್ಳತನವಾಗ್ಬಹುದು ಎನ್ನುವ ಭಯ ಪ್ರತಿಯೊಬ್ಬರಿಗೂ ಇರುತ್ತದೆ. ಜೀವನ ಪರ್ಯಂತ ದುಡಿದ ಹಣದಲ್ಲಿ ಇಲ್ಲವೇ ಹಿರಿಯರಿಂದ ಬಳುವಳಿಯಾಗಿ ಬಂದ ಹಳೆಯ ಆಭರಣ ಹಾಗೂ ಬಂಗಾರದ ನಾಣ್ಯಗಳನ್ನು ಜನರು ಸುರಕ್ಷಿತವಾಗಿಡಲು ಬಯಸ್ತಾರೆ. ಅದನ್ನು ಮಾರಾಟ ಮಾಡುವವರ ಸಂಖ್ಯೆ ಬಹಳ ಕಡಿಮೆ. ಬಂಗಾರದ ಆಭರಣಗಳ ಮೇಲೆ ಭಾರತೀಯರಿಗೆ ಮೋಹ ಜಾಸ್ತಿ. ಜೊತೆಗೆ ಇದನ್ನು ಸುರಕ್ಷಿತ ಹೂಡಿಕೆ ಎಂದೇ ಪರಿಗಣಿಸಲಾಗಿದೆ. ಅನಿವಾರ್ಯ ಬಿದ್ದಾಗ ಮಾತ್ರ ಈ ಆಭರಣಗಳನ್ನು ಮಾರಾಟ ಮಾಡುವ ಭಾರತೀಯರು, ಅದನ್ನು ಬ್ಯಾಂಕ್ ಲಾಕರ್ (bank locker) ನಲ್ಲಿ ಸುರಕ್ಷಿತವಾಗಿಡಲು ಹೆಚ್ಚು ಆದ್ಯತೆ ನೀಡ್ತಾರೆ.
ಪ್ರತಿಯೊಂದು ಬ್ಯಾಂಕ್ ನಲ್ಲೂ ಲಾಕರ್ ವ್ಯವಸ್ಥೆ ಇರುತ್ತದೆ. ಜನರು ಲಾಕರ್ ಪಡೆದು, ಅದ್ರಲ್ಲಿ ಆಭರಣಗಳನ್ನು ಇಡಬಹುದು. ಹಾಗೆಯೇ ಬ್ಯಾಂಕ್ ನಿಯಮದಂತೆ ಅದಕ್ಕೆ ಬಾಡಿಗೆ ಪಾವತಿ ಮಾಡ್ಬೇಕು. ಮನೆಯಲ್ಲಿರುವ ಆಭರಣಗಳನ್ನು ಅಥವಾ ಪ್ರಮುಖ ದಾಖಲೆ ಪತ್ರಗಳನ್ನು ಜನರು ಲಾಕರ್ ನಲ್ಲಿ ಇಡ್ತಾರೆ. ಅದೇ ನಗದನ್ನು ಕೂಡ ಲಾಕರ್ ನಲ್ಲಿ ಇಡಬಹುದಾ? ಈ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಬೆಂಗಳೂರಿನಲ್ಲಿ 1BHK ಮನೆ ಬಾಡಿಗೆ 70 ಸಾವಿರ ರೂ. ! ಇದಕ್ಕೆ ಕಾರಣ ಯಂಗ್ ಟೆಕ್ಕಿಗಳು?
ಲಾಕರ್ ಬಗ್ಗೆ ಆರ್‌ಬಿಐ ನಿಯಮ ಏನು? : ಬ್ಯಾಂಕ್ ಲಾಕರ್‌ಗಳ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸರಿಯಾದ ಮಾರ್ಗಸೂಚಿಯನ್ನು ರೂಪಿಸಿದೆ. ಇದರಲ್ಲಿ ಬ್ಯಾಂಕ್ ಗ್ರಾಹಕರು ಲಾಕರ್‌ನಲ್ಲಿ ಏನನ್ನು ಇಡಬಹುದು ಮತ್ತು ಏನನ್ನು ಇಡಬಾರದು ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಲಾಕರ್ ನಲ್ಲಿಟ್ಟ ವಸ್ತು ಕಳ್ಳತನವಾದ್ರೆ ಮತ್ತು ಬ್ಯಾಂಕಿನ ನಿರ್ಲಕ್ಷ್ಯದಿಂದ ನಷ್ಟ ಸಂಭವಿಸಿದಲ್ಲಿ ಪರಿಹಾರದ ಮೊತ್ತವಾಗಿ ಎಷ್ಟು ಪಾವತಿಸಬೇಕು ಎಂಬ ಬಗ್ಗೆಯೂ ಆರ್ ಬಿಐ ಮಾಹಿತಿ ನೀಡಿದೆ.
ನಗದು ನಿಷೇಧ : ಆರ್‌ಬಿಐ ಮಾರ್ಗಸೂಚಿ ಪ್ರಕಾರ, ಲಾಕರ್‌ನಲ್ಲಿ ಕೆಲವು ವಸ್ತುಗಳನ್ನು ಇಡಬಾರದು. ಅದ್ರಲ್ಲಿ ನಗದು ಕೂಡ ಸೇರಿದೆ. ಒಂದ್ವೇಳೆ ನಿಯಮ ಮೀರಿ ಗ್ರಾಹಕ ನಗದನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟು, ಯಾವುದೇ ನಷ್ಟ ಸಂಭವಿಸಿದಲ್ಲಿ ಬ್ಯಾಂಕ್ ಜವಾಬ್ದಾರನಾಗಿರುವುದಿಲ್ಲ. ಕೆಲ ವರ್ಷದ ಹಿಂದೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ನಿಯಮಕ್ಕೆ ವಿರುದ್ಧವಾಗಿ ಬ್ಯಾಂಕ್ ಲಾಕರ್ ನಲ್ಲಿ ನಗದನ್ನು ಇಟ್ಟಿದ್ದರು. ಅವರು ಇಟ್ಟಿದ್ದ 5 ಲಕ್ಷ ರೂಪಾಯಿ ಗೆದ್ದಲುಗಳು ತಿಂದುಹಾಕಿದ್ದವು. ಇದ್ರಲ್ಲಿ ಬ್ಯಾಂಕ್ ತಪ್ಪಿಲ್ಲದ ಕಾರಣ, ಬ್ಯಾಂಕ್ ಹಣ ನೀಡಿರಲಿಲ್ಲ.
ಬ್ಯಾಂಕ್ ಲಾಕರ್ ನಲ್ಲಿ ಇವುಗಳನ್ನೂ ಇಡುವಂತಿಲ್ಲ : ನಗದು ಹೊರತುಪಡಿಸಿ ಶಸ್ತ್ರಾಸ್ತ್ರಗಳು, ಮಾದಕ ದ್ರವ್ಯಗಳು, ವಿಷ, ಸ್ಫೋಟಕಗಳು, ತರಕಾರಿಗಳು, ಹಣ್ಣುಗಳು ಮುಂತಾದ ಹಾಳಾಗುವ ವಸ್ತುಗಳು, ವಿಕಿರಣಶೀಲ ವಸ್ತುಗಳು ಅಥವಾ ಅಕ್ರಮ ವಸ್ತುಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇಡಲು ಸಾಧ್ಯವಿಲ್ಲ. ನಿಗದಿತ ಮಾರ್ಗಸೂಚಿಗಳನ್ನು ಅನುಸರಿಸುವುದು ಗ್ರಾಹಕರ ಜವಾಬ್ದಾರಿಯಾಗಿದೆ.
ಲಾಕರ್ ನಲ್ಲಿ ಏನು ಇಡಬಹುದು? : ಆರ್ ಬಿಐ ನಿಯಮದ ಪ್ರಕಾರ ಬ್ಯಾಂಕ್ ಲಾಕರ್ ನಲ್ಲಿ ಗ್ರಾಹಕರು ಆಭರಣಗಳು, ಆಸ್ತಿ ಪತ್ರಗಳು, ಜನನ ಮತ್ತು ಮರಣ ಪ್ರಮಾಣಪತ್ರಗಳು, ಪ್ರಮುಖ ದಾಖಲೆಗಳು, ವಿವಾಹ ಪ್ರಮಾಣಪತ್ರ, ವಿಮಾ ಪಾಲಿಸಿ ಮತ್ತು ಕಿಸಾನ್ ವಿಕಾಸ್ ಪತ್ರ ಇತ್ಯಾದಿಗಳನ್ನು ಇಡಬಹುದು.
15 ಲಕ್ಷಕ್ಕಿಂತ ಕಮ್ಮಿ ಆದಾಯಕ್ಕೆ ತೆರಿಗೆ ವಿನಾಯಿತಿ ಸಾಧ್ಯತೆ
ಎಷ್ಟು ಪರಿಹಾರ ಸಿಗುತ್ತದೆ? : ಆರ್‌ಬಿಐ ಬ್ಯಾಂಕುಗಳ ಜವಾಬ್ದಾರಿಗಳನ್ನು ಸ್ಪಷ್ಟಪಡಿಸಿದೆ. ಬ್ಯಾಂಕ್ ನಿರ್ಲಕ್ಷ್ಯದಿಂದ ನಷ್ಟವಾದ್ರೆ ಗ್ರಾಹಕರಿಗೆ ಪರಿಹಾರವನ್ನು ಪಾವತಿಸಬೇಕಾಗುತ್ತದೆ. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕ್ ಲಾಕರ್‌ನ ವಾರ್ಷಿಕ ಬಾಡಿಗೆ 1000 ರೂಪಾಯಿ. ಅದರಲ್ಲಿ ಇರಿಸಲಾಗಿರುವ ವಸ್ತುಗಳು ಕಾಣೆಯಾದ್ರೆ ಗ್ರಾಹಕರು ಬಾಡಿಗೆಯ 100 ಪಟ್ಟು ಅಂದರೆ 1 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ಬ್ಯಾಂಕ್ ನಿಂದ ಪಡೆಯುತ್ತಾರೆ.
