ಬೆಂಗಳೂರು(ಜು.30): ಕೆಫೆ ಕಾಫಿ ಡೇ ಮಾಲೀಕ  ಸಿದ್ಧಾರ್ಥ ಹೆಗಡೆ ನಾಪತ್ತೆಯಾದ ಹಿನ್ನೆಲೆಯಲ್ಲಿ ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ದಿಢೀರ್ ಕುಸಿತ ಕಂಡಿದೆ. 

ಸಿದ್ಧಾರ್ಥ ಮಾಲೀಕತ್ವದ  ಕೆಫೆ ಕಾಫಿ ಡೇ, ಎಸ್ಐಸಿಎಎಲ್ ಷೇರು ಬೆಲೆ ತೀವ್ರ ಕುಸಿತಗೊಂಡಿದೆ. ನಿನ್ನೆಯ ವಹಿವಾಟು ಮುಕ್ತಾಯದ ಹೊತ್ತಿಗೆ 192 ರೂ ಮೌಲ್ಯವಿದ್ದ ಕೆಫೆ ಕಾಫಿ ಡೇ ಷೇರು ಮಾರುಕಟ್ಟೆ, ಇಂದು 153 ರೂ.ಗೆ ಇಳಿಕೆ ಕಂಡಿದೆ.

ಈ ಮಧ್ಯೆ ಮುಂಬೈ ಷೇರುಮಾರುಕಟ್ಟೆಗೆ ಪತ್ರ ಬರೆದಿರುವ ಸಂಸ್ಥೆ, ದೇಶಾದ್ಯಂತ ಸಂಸ್ಥೆಯ ಎಲ್ಲಾ ಶಾಖೆಗಳೂ ಎಂದಿನಂತೆ ಕೆಲಸ ನಿರ್ವಹಿಸಲಿದ್ದು, ಷೇರುದಾರರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದೆ.

"

ಸಂಸ್ಥೆಯ ಮಾಲೀಕ ನಾಪತ್ತೆಯಾಗಿದ್ದರೂ ದೇಶದ ಯಾವುದೇ ಶಾಖೆಯನ್ನು ಬಂದ್ ಮಾಡಲಾಗಿಲ್ಲ ಎಂದು ಕಾಫಿ ಡೇ ಸ್ಪಷ್ಟಪಡಿಸಿದೆ. ಈ ಪತ್ರದ ಹೊರತಾಗಿಯೂ  ಕೆಫೆ ಕಾಫಿ ಡೇ, ಎಸ್ಐಸಿಎಎಲ್ ಷೇರು ಬೆಲೆಯಲ್ಲಿ ಗಮನಾರ್ಹವಾದ ಬದಲಾವಣೆ ಕಂಡುಬಂದಿಲ್ಲ.