ಶಾರುಖ್ ಜಾಹೀರಾತು ನೀಡುವ ಬೈಜುಸ್ ಮೇಲೆ ಇಡಿ ರೇಡ್: 28,000 ಕೋಟಿ ಮೌಲ್ಯದ ವಿದೇಶಿ ಹೂಡಿಕೆ ಮೇಲೆ ಹದ್ದಿನ ಕಣ್ಣು
ಕಂಪನಿಯು ಬೈಜುಸ್ ಹೆಸರಿನಲ್ಲಿ ಜನಪ್ರಿಯ ಆನ್‌ಲೈನ್ ಶಿಕ್ಷಣ ಪೋರ್ಟಲ್ ಅನ್ನು ನಡೆಸುತ್ತಿದೆ. ಇನ್ನು, ಶೋಧ ಮತ್ತು ವಶಪಡಿಸಿಕೊಳ್ಳುವ ಕ್ರಮದ ಸಮಯದಲ್ಲಿ, ವಿವಿಧ ದೋಷಾರೋಪಣೆಯ ದಾಖಲೆಗಳು ಮತ್ತು ಡಿಜಿಟಲ್ ಡೇಟಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು (ಏಪ್ರಿಲ್ 29, 2023): ಖ್ಯಾತ ಆನ್‌ಲೈನ್ ಶಿಕ್ಷಣ ಪೋರ್ಟಲ್ ಕಂಪನಿಯಾದ ಬೈಜುಸ್‌ಗೆ ಇಡಿ ಶಾಕ್ ಕಾದಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ನಿಬಂಧನೆಗಳ ಅಡಿಯಲ್ಲಿ ಸಿಇಒ ರವೀಂದರನ್ ಬೈಜು ಮತ್ತು ಅವರ ಕಂಪನಿ ‘ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್’ ವಿರುದ್ಧ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಶೋಧ ಕಾರ್ಯ ನಡೆಸಿದೆ. ಬೆಂಗಳೂರಿನ ಮೂರು ಕಚೇರಿಗಳಲ್ಲಿ ಶೋಧ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಕಂಪನಿಯು ಬೈಜುಸ್ ಹೆಸರಿನಲ್ಲಿ ಜನಪ್ರಿಯ ಆನ್‌ಲೈನ್ ಶಿಕ್ಷಣ ಪೋರ್ಟಲ್ ಅನ್ನು ನಡೆಸುತ್ತಿದೆ. ಇನ್ನು, ಶೋಧ ಮತ್ತು ವಶಪಡಿಸಿಕೊಳ್ಳುವ ಕ್ರಮದ ಸಮಯದಲ್ಲಿ, ವಿವಿಧ ದೋಷಾರೋಪಣೆಯ ದಾಖಲೆಗಳು ಮತ್ತು ಡಿಜಿಟಲ್ ಡೇಟಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2011 ರಿಂದ 2023 ರ ಅವಧಿಯಲ್ಲಿ ಕಂಪನಿಯು 28,000 ಕೋಟಿ ರೂಪಾಯಿಗಳ ವಿದೇಶಿ ನೇರ ಹೂಡಿಕೆಯನ್ನು ಸ್ವೀಕರಿಸಿದೆ ಎಂದು FEMA ಅಧಿಕಾರಿಗಳು ಪತ್ತೆಹಚ್ಚಿವೆ. ಇದಲ್ಲದೆ, ಈ ಕಂಪನಿಯು ಇದೇ ಅವಧಿಯಲ್ಲಿ ಸಾಗರೋತ್ತರ ನೇರ ಹೂಡಿಕೆಯ ಹಸರಲ್ಲಿ ವಿವಿಧ ವಿದೇಶಿ ನ್ಯಾಯವ್ಯಾಪ್ತಿಗಳಿಗೆ 9754 ಕೋಟಿ ರೂ. ಗಳನ್ನು ರವಾನೆ ಮಾಡಿದೆ” ಎಂದೂ ಏಜೆನ್ಸಿ ಹೇಳಿದೆ.
ಇದನ್ನು ಓದಿ: 2,500 ಉದ್ಯೋಗಿಗಳನ್ನು ವಜಾ ಮಾಡಿದ Byju's: ಭಾವನಾತ್ಮಕ ಪತ್ರ ಬರೆದ ಸಂಸ್ಥೆಯ ಸ್ಥಾಪಕ
ಅಲ್ಲದೆ, ಕಂಪನಿಯು ವಿದೇಶಿ ನ್ಯಾಯವ್ಯಾಪ್ತಿಗೆ ರವಾನೆಯಾದ ಮೊತ್ತ ಸೇರಿದಂತೆ ಜಾಹೀರಾತು ಮತ್ತು ಮಾರುಕಟ್ಟೆ ವೆಚ್ಚಗಳ ಹೆಸರಿನಲ್ಲಿ ಸುಮಾರು 944 ಕೋಟಿ ರೂ. ಅನ್ನು ಕಾಯ್ದಿರಿಸಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ, 2020-21ರ ಹಣಕಾಸು ವರ್ಷದಿಂದ ಕಂಪನಿಯು ತನ್ನ ಹಣಕಾಸು ಮಾಹಿತಿಯನ್ನು ಸಿದ್ಧಪಡಿಸಿಲ್ಲ ಮತ್ತು ಕಡ್ಡಾಯವಾಗಿದ್ದರೂ ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡಿಲ್ಲ ಎಂದೂ ತಿಳಿದುಬಂದಿದೆ. "ಆದ್ದರಿಂದ, ಕಂಪನಿಯು ಒದಗಿಸಿದ ಅಂಕಿಅಂಶಗಳ ನೈಜತೆಯನ್ನು ಬ್ಯಾಂಕ್‌ಗಳಿಂದ ಪರಿಶೀಲಿಸಲಾಗುತ್ತಿದೆ" ಎಂದೂ ಜಾರಿ ನಿರ್ದೇಶನಾಲಯ ತಿಳಿಸಿದೆ.
ವಿವಿಧ ಖಾಸಗಿ ವ್ಯಕ್ತಿಗಳಿಂದ ಬಂದ ವಿವಿಧ ದೂರುಗಳ ಆಧಾರದ ಮೇಲೆ ಬೈಜುಸ್ ಆನ್‌ಲೈನ್ ಪ್ಲಾಟ್‌ಫಾರ್ಮ್ ವಿರುದ್ಧ ತನಿಖೆಯನ್ನು ಪ್ರಾರಂಭಿಸಲಾಗಿದೆ. ಈ ತನಿಖೆಯ ಸಮಯದಲ್ಲಿ, ಬೈಜುಸ್ ಸಂಸ್ಥಾಪಕ ಮತ್ತು ಸಿಇಒ ರವೀಂದರನ್ ಬೈಜು ಅವರಿಗೆ ಹಲವು ಬಾರಿ ಸಮನ್ಸ್ ನೀಡಲಾಯಿತು. ಆದರೆ, ಅವರು ಯಾವಾಗಲೂ ತಪ್ಪಿಸಿಕೊಳ್ಳುತ್ತಿದ್ದರು ಮತ್ತು ತನಿಖೆಯ ಸಮಯದಲ್ಲಿ ಎಂದಿಗೂ ಕಾಣಿಸಿಕೊಂಡಿಲ್ಲ ಎಂದು ಇಡಿ ತಿಳಿಸಿದೆ.
ಇದನ್ನೂ ಓದಿ: Success Story: ಶಿಕ್ಷಕಿಯಾಗಿ ವೃತ್ತಿ ಶುರು ಮಾಡಿದ ಮಹಿಳೆ ಈಗ ಲಕ್ಷಾಂತರ ರೂ ಗಳಿಸ್ತಾರೆ
ಇನ್ನು, ಇಡಿ ರೇಡ್ ನಂತರ ಹೇಳಿಕೆ ನೀಡಿದ ಬೈಜು ಕಂಪನಿಯ ಕಾನೂನು ತಂಡದ ವಕ್ತಾರರು "ಫೆಮಾ ಅಡಿಯಲ್ಲಿ ಸಾಮಾನ್ಯ ವಿಚಾರಣೆ’’ ಎಂದು ಹೇಳಿಕೊಂಡಿದ್ದಾರೆ. “ಬೆಂಗಳೂರಿನಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಇತ್ತೀಚೆಗೆ ನಡೆಸಿದ ಭೇಟಿ ಫೆಮಾ ಅಡಿಯಲ್ಲಿ ವಾಡಿಕೆಯ ವಿಚಾರಣೆಗೆ ಸಂಬಂಧಿಸಿದೆ. ನಾವು ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಪಾರದರ್ಶಕವಾಗಿದ್ದೇವೆ ಮತ್ತು ಅವರು ಕೇಳಿದ ಎಲ್ಲಾ ಮಾಹಿತಿಯನ್ನು ಅವರಿಗೆ ಒದಗಿಸಿದ್ದೇವೆ. ನಮ್ಮ ಕಾರ್ಯಚಟುವಟಿಕೆಗಳ ಸಮಗ್ರತೆಯ ಬಗ್ಗೆ ನಮಗೆ ಹೆಚ್ಚಿನ ವಿಶ್ವಾಸವಿದ್ದು, ನೈತಿಕತೆಯ ಅತ್ಯುನ್ನತ ಮಾನದಂಡಗಳನ್ನು ಎತ್ತಿಹಿಡಿಯಲು ಬದ್ಧರಾಗಿದ್ದೇವೆ ಎಂದು ಕಾನೂನು ತಂಡದ ವಕ್ತಾರರು ಹೇಳಿದ್ದಾರೆ.
ಅಲ್ಲದೆ, "ಅಧಿಕಾರಿಗಳು ಅವರಿಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ನಾವು ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಮತ್ತು ಈ ವಿಷಯವನ್ನು ಸಮಯೋಚಿತ ಮತ್ತು ತೃಪ್ತಿಕರ ರೀತಿಯಲ್ಲಿ ಪರಿಹರಿಸಲಾಗುವುದು ಎಂದು ನಾವು ನಂಬುತ್ತೇವೆ. ಭಾರತ ಮತ್ತು ಪ್ರಪಂಚದಾದ್ಯಂತ ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಶೈಕ್ಷಣಿಕ ಉತ್ಪನ್ನಗಳು ಮತ್ತು ಸೇವೆಗಳನ್ನು ತಲುಪಿಸಲು ನಾವು ಬದ್ಧರಾಗಿದ್ದೇವೆ. ವಿದ್ಯಾರ್ಥಿಗಳು ಕಲಿಯುವ ಮತ್ತು ಅವರ ಭವಿಷ್ಯಕ್ಕಾಗಿ ತಯಾರಿ ಮಾಡುವ ವಿಧಾನವನ್ನು ಪರಿವರ್ತಿಸುವ ನಮ್ಮ ಉದ್ದೇಶದ ಮೇಲೆ ನಾವು ಗಮನಹರಿಸಿದ್ದೇವೆ’’ ಎಂದೂ ಬೈಜುಸ್ ಕಂಪನಿಯ ವಕ್ತಾರರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಎಜುಟೆಕ್ ಕಂಪನಿ ಬೈಜೂಸ್‌ನಿಂದ 1000 ನೌಕರರು ವಜಾ