Asianet Suvarna News Asianet Suvarna News

5 ಕೋಟಿ ವಹಿವಾಟಿಗೆ ವಾರ್ಷಿಕ ರಿಟರ್ನ್ಸ್‌ ವೇಳೆ ಸ್ವಯಂ ಪ್ರಮಾಣಪತ್ರ ಸಾಕು!

* ವಾರ್ಷಿಕ 5 ಕೋಟಿಗಿಂತಲೂ ಹೆಚ್ಚು ವಹಿವಾಟು ನಡೆಸಿ ಜಿಎಸ್‌ಟಿ ತೆರಿಗೆ ಕಟ್ಟುವ ಉದ್ಯಮಿಗಳು

* ಇನ್ನು ಮುಂದೆ, ಲೆಕ್ಕ ಪರಿಶೋಧಕರಿಂದ ಕಡ್ಡಾಯ ಲೆಕ್ಕ ಪರಿಶೋಧನೆ ವರದಿ ಸಲ್ಲಿಸುವ ಬದಲು ಸ್ವಯಂ ಪ್ರಮಾಣಪತ್ರ ಒದಗಿಸಿದರೆ ಸಾಕು 

* ಸಣ್ಣ ಉದ್ಯಮಿಗಳಿಗೆ ಭಾರೀ ಪ್ರಮಾಣದಲ್ಲಿ ನೆರವಾಗಲಿದೆ

Businesses can now self certify GST annual returns instead of mandatory audit by CA pod
Author
Bangalore, First Published Aug 2, 2021, 2:23 PM IST

ನವದೆಹಲಿ(ಆ.02): ವಾರ್ಷಿಕ 5 ಕೋಟಿಗಿಂತಲೂ ಹೆಚ್ಚು ವಹಿವಾಟು ನಡೆಸಿ ಜಿಎಸ್‌ಟಿ ತೆರಿಗೆ ಕಟ್ಟುವ ಉದ್ಯಮಿಗಳು ಇನ್ನು ಮುಂದೆ, ಲೆಕ್ಕ ಪರಿಶೋಧಕರಿಂದ (ಚಾರ್ಟೆಡ್‌ ಅಕೌಂಟೆಂಟ್‌) ಕಡ್ಡಾಯ ಲೆಕ್ಕ ಪರಿಶೋಧನೆ ವರದಿ ಸಲ್ಲಿಸುವ ಬದಲು ಸ್ವಯಂ ಪ್ರಮಾಣಪತ್ರ ಒದಗಿಸಿದರೆ ಸಾಕು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಪ್ರಕಟಿಸಿದೆ.

ಇದು ಸಣ್ಣ ಉದ್ಯಮಿಗಳಿಗೆ ಭಾರೀ ಪ್ರಮಾಣದಲ್ಲಿ ನೆರವಾಗಲಿದೆ ಎಂದು ಹೇಳಲಾಗಿದೆ.

ಹಾಲಿ ಇರುವ ನಿಯಮಗಳ ಪ್ರಕಾರ ವಾರ್ಷಿಕ 2 ಕೋಟಿ ರು.ವರೆಗೆ ವಹಿವಾಟು ನಡೆಸುವವರು ವಾರ್ಷಿಕ ಜಿಎಸ್‌ಟಿಆರ್‌-9/9ಎ ಸಲ್ಲಿಸುವುದು ಕಡ್ಡಾಯ.

ಇನ್ನು 5 ಕೋಟಿ ರು.ಗಿಂತ ಮೇಲ್ಪಟ್ಟವಹಿವಾಟು ನಡೆಸುವವರು ಜಿಎಸ್‌ಟಿಆರ್‌-9ಸಿ ಸಲ್ಲಿಸಬೇಕು. ಮತ್ತು ಈ ಲೆಕ್ಕಾಚಾರವನ್ನು ಲೆಕ್ಕ ಪರಿಶೋಧಕರಿಂದ ಪರಿಶೋಧನೆಗೆ ಒಳಪಡಿಸಿರಬೇಕಿತ್ತು. ಇದೀಗ ಈ ನಿಯಮವನ್ನು ಸರಳೀಕರಿಸಲಾಗಿದೆ.

Follow Us:
Download App:
  • android
  • ios