ಅತ್ಯಂತ ಶ್ರೀಮಂತ ವ್ಯಕ್ತಿ ಯಾರು? ಮುಕೇಶ್ ಅಂಬಾನಿ, ಅದಾನಿ, ರತನ್ ಟಾಟಾ ಅಲ್ಲ!
ಶ್ರೀಮಂತ ವ್ಯಕ್ತಿಗಳ ಬಗ್ಗೆ ಯೋಚಿಸಿದಾಗ ಅಂಬಾನಿ, ಅದಾನಿ, ರತನ್ ಟಾಟಾ ಹೆಸರುಗಳು ನೆನಪಿಗೆ ಬರುತ್ತವೆ. ಆದರೆ ಇವರೆಲ್ಲರಿಗಿಂತಲೂ ಶ್ರೀಮಂತ ವ್ಯಕ್ತಿ ಒಬ್ಬರಿದ್ದರು. ಅವರು ಯಾರೆಂದು ತಿಳಿದುಕೊಳ್ಳೋಣ.
ಯಾರು ಶ್ರೀಮಂತ?
ಶ್ರೀಮಂತರು ಎಂದಾಗ ನಮಗೆ ಕೇಳಿಬರುವ ಹೆಸರುಗಳು ಮುಖೇಶ್ ಅಂಬಾನಿ, ಅದಾನಿ ಮತ್ತು ರತನ್ ಟಾಟಾ. ಆದರೆ, ಇವರೆಲ್ಲರಿಗಿಂತಲೂ ಶ್ರೀಮಂತ ವ್ಯಕ್ತಿಯೊಬ್ಬರು ಇದ್ದರು. ಅವರ ಹೆಸರು ಮಾನ್ಸಾ ಮೂಸಾ, 14 ನೇ ಶತಮಾನದ ಆಫ್ರಿಕನ್ ಚಕ್ರವರ್ತಿ.
ಮಾನ್ಸಾ ಮೂಸಾ ಸಂಪತ್ತು
ಇದು ಜೆಫ್ ಬೆಜೋಸ್, ಮುಖೇಶ್ ಅಂಬಾನಿ, ಗೌತಮ್ ಅದಾನಿ ಮತ್ತು ರತನ್ ಟಾಟಾ ಮುಂತಾದ ಭಾರತೀಯ ಶತಕೋಟಿ ಡಾಲರ್‌ಗಳ ಸಂಪತ್ತಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ.
ಮಾನ್ಸಾ ಮೂಸಾ ಸಾಮ್ರಾಜ್ಯ
ಮಾನ್ಸಾ ಮೂಸಾ ಅವರ ಅಪಾರ ಸಂಪತ್ತಿಗೆ ಅವರ ಸಾಮ್ರಾಜ್ಯ ಮತ್ತು ಅದರ ವಿಶಾಲ ನೈಸರ್ಗಿಕ ಸಂಪನ್ಮೂಲಗಳೇ ಕಾರಣ ಎಂದು ಇತಿಹಾಸಕಾರರು ಹೇಳುತ್ತಾರೆ.
ಮೆಕ್ಕಾಗೆ ತೀರ್ಥಯಾತ್ರೆ
1324 ರಲ್ಲಿ, ಮಾನ್ಸಾ ಮೂಸಾ ಮೆಕ್ಕಾಗೆ ಪ್ರಸಿದ್ಧ ತೀರ್ಥಯಾತ್ರೆ ಕೈಗೊಂಡಿರುವ ಬಗ್ಗೆ ಉಲ್ಲೇಖವಿದೆ. ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡು ಮೂಸಾ ಧಾರ್ಮಿಕ ಆಚರಣೆಯನ್ನು ಕಟ್ಟ ನಿಟ್ಟಾಗಿ ಪಾಲಿಸಿದ್ದಾರೆ.
ಮಾಲಿ ಸಾಮ್ರಾಜ್ಯ ಚಕ್ರವರ್ತಿಯಾಗಿದ್ದ ಮುಸಾ, ತನ್ನ ಇಡೀ ಸಾಮ್ರಾಜ್ಯಕ್ಕೆ ತೆರಿಗೆ, ಸುಂಕ ಸೇರಿದಂತೆ ಎಲ್ಲವನ್ನೂ ನಿರ್ವಹಿಸುತ್ತಿದ್ದ. ಚಿನ್ನ, ಡೈಮಂಡ್ ಸೇರಿದಂತೆ ಅತ್ಯಮೂಲ್ಯ ಸಂಪನ್ಮೂಲಗಳನ್ನು ರಫ್ತು ಮಾಡುತ್ತಿದ್ದ.