Asianet Suvarna News Asianet Suvarna News

ಬುರಾರಿ ಸೂಸೈಡ್ ಕೇಸ್‌ನಲ್ಲಿದೆ ಮ್ಯಾನೇಜ್‌ಮೆಂಟ್ ಸ್ಕಿಲ್ ಪಾಠ!

ಬುರಾರಿ ಸಾಮೂಹಿಕ ಆತ್ಮಹತ್ಯೆಯಲ್ಲಿ ಮ್ಯಾನೇಜ್‌ಮೆಂಟ್ ಪಾಠ

ದಂಗು ಬಡಿಸುವ ಅನಿಲ್ ಭಾಟಿಯಾ ಮ್ಯಾನೇಜ್‌ಮೆಂಟ್ ಸ್ಕಿಲ್‌

11 ಜನರನ್ನು ಆತ್ಮಹತ್ಯೆಗೆ ಒಪ್ಪಿಸಿದ ಅನಿಲ್ ನಿರ್ವಹಣಾ ಕೌಶಲ್ಯ

ಅನಿಲ್ ಆತ್ಮಹತ್ಯೆ ಯೋಜನೆ ನಿರ್ವಹಣೆ ಮಾಡಿದ ಬಗೆ ಎಂತದ್ದು?

 

Burai Mass Sucide: There is a Management to study for
Author
Bengaluru, First Published Jul 11, 2018, 3:50 PM IST

ಬೆಂಗಳೂರು(ಜು.11): ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ರಾಷ್ಟ್ರ ರಾಜಧಾನಿ ನವದೆಹಲಿಯ ಸಾಮೂಹಿಕ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಕೆದಕಿದಷ್ಟೂ ಮಾಹಿತಿ ಸಿಗುತ್ತಿವೆ. ಅದರಲ್ಲೂ ಇಡೀ ಕುಟುಂಬ ಧಾರ್ಮಿಕ ಆಚರಣೆಗಾಗಿ ಆತ್ಮಹತ್ಯೆಗೆ ಶರಣಾಗಿದೆ ಎಂಬುದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಮಾರು 200 ಜನರನ್ನು ವಿಚಾರಣೆಗೆ ಗುರಿಪಡಿಸಿರುವ ಪೊಲೀಸರು, ಸಾವಿಗೆ ನಿಜವಾದ ಕಾರಣ ಏನು ಎಂಬುದನ್ನು ತಿಳಿಯಲು ಹೆಣಗುತ್ತಿದ್ದಾರೆ. ಭಾಟಿಯಾ ಕುಟುಂಬ ಆತ್ಮಹತ್ಯೆ ಮಾಡಿಕೊಂಡ ರೀತಿ, ಆತ್ಮಹತ್ಯೆಗೆ ಅವರು ನಡೆಸಿದ ಸಿದ್ಧತೆ ಇವೆಲ್ಲವೂ ನಿಗೂಢತೆಯಿಂದ ಕೂಡಿವೆ.

ಆದರೆ ಈ ಮಧ್ಯೆ ಗಮನಿಸಬಹುದಾದ ಒಂದು ಅಂಶವೆಂದರೆ ಬುರಾರಿ ಸಾಮೂಹಿಕ ಆತ್ಮಹತ್ಯೆಯಲ್ಲಿ ನಿಜಕ್ಕೂ ಮ್ಯಾನೇಜ್‌ಮೆಂಟ್ ಪ್ರಮುಖ ಕಾರ್ಯ ನಿರ್ವಹಿಸಿದೆ. ಮ್ಯಾನೇಜ್‌ಮೆಂಟ್ ಸ್ಟಡೀಸ್ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಖಂಡಿತ ಈ ಪ್ರಕರಣ ಅಧ್ಯಯನ ವಿಷಯವಾಗಲಿಕ್ಕೆ ಅಡ್ಡಿಯಿಲ್ಲ.

ಅರೆ! ಬುರಾರಿ ಸಾಮೂಹಿಕ ಆತ್ಮಹತ್ಯೆಗೂ ಮ್ಯಾನೇಜ್‌ಮೆಂಟ್ ಸ್ಟಡೀಸ್ ಗೂ ಏನು ಸಂಬಂಧ ಅಂತೀರಾ?. ಎಂಬಿಎ ವಿದ್ಯಾರ್ಥಿಗಳಿಗೆ ಮ್ಯಾನೇಜ್‌ಮೆಂಟ್ ಸ್ಟಡೀಸ್ ಎಂಬ ಅಧ್ಯಯನ ವಿಷಯವೇ ಇರುತ್ತದೆ. ಒಂದು ನಿರ್ದಿಷ್ಟ ಕಾರ್ಯ ಸಾಧನೆಗೆ ಜನರನ್ನು ಅಣಿಗೊಳಿಸುವುದು ಮತ್ತು ಅದಕ್ಕಾಗಿ ಜನರಿಗೆ ಮನವರಿಕೆ ಮಾಡಿಕೊಡುವುದು ಮ್ಯಾನೇಜ್‌ಮೆಂಟ್ ಸ್ಟಡೀಸ್ ನ ವಿಷಯವಸ್ತು.

ದೊಡ್ಡ ದೊಡ್ಡ ಐಟಿ ಕಂಪನಿಗಳಲ್ಲಷ್ಟೇ ಏಕೆ, ಪ್ರತಿಯೊಂದೂ ಕಚೇರಿಯಲ್ಲೂ ಮ್ಯಾನೇಜ್‌ಮೆಂಟ್ ಎಂಬುದು ತುಂಬ ಮುಖ್ಯ ಪಾತ್ರವಹಿಸುತ್ತದೆ. ಇಂದಿನ ಹೈಟೆಕ್ ಸರ್ಕಾರಗಳು ಕೂಡ ಸುಗಮ ಆಡಳಿತಕ್ಕಾಗಿ ಮ್ಯಾನೇಜ್‌ಮೆಂಟ್ ಮೊರೆ ಹೊಗಿವೆ. ಗುರಿ ಸಾಧನೆಗೆ ಜನಸಮೂಹವನ್ನು ಮನವರಿಕೆ ಮಾಡಿಕೊಡುವ ವಿಶಿಷ್ಟ ಕಲೆ ಈ ಮ್ಯಾನೇಜ್‌ಮೆಂಟ್ ಸ್ಟಡೀಸ್ ನಲ್ಲಿದೆ.

ಅದರಂತೆ ಬುರಾರಿ ಸಾಮೂಹಿಕ ಆತ್ಮಹತ್ಯೆಯಲ್ಲೂ ನಾವು ಅದ್ಭುತ ಮ್ಯಾನೇಜ್‌ಮೆಂಟ್ ಕೌಶಲ್ಯವನ್ನು ನಾವು ಕಾಣಬಹುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ದೊರೆತಿರುವ ಮಾಹಿತಿ ಪ್ರಕಾರ ಭಾಟಿಯಾ ಕುಟಂಬದ 11 ಜನರ ಪೈಕಿ ಅನಿಲ್ ಭಾಟಿಯಾ ಈ ಸಾಮೂಹಿಕ ಆತ್ಮಹತ್ಯೆಯ ಮಾಸ್ಟರ್ ಮೈಂಡ್ ಎಂದು ನಂಬಲಾಗಿದೆ.

ಅನಿಲ್ ಗೆ 10 ವರ್ಷಗಳ ಹಿಂದೆಯೇ ಸತ್ತು ಹೋಗಿರುವ ತನ್ನ ತಂದೆಯ ಜೊತ ಸಂಪರ್ಕವಿತ್ತು ಎಂಬುದು ಮನೆಯಲ್ಲಿ ದೊರೆತಿರುವ ಡೈರಿಯಲ್ಲಿ ನಮೂದಾಗಿದೆ. ಅದರಂತೆ ತಂದೆ ತನ್ನ ಕುಟುಂಬದ ಮೋಕ್ಷಕ್ಕಾಗಿ ಸಾಮೂಹಿಕ ಆತ್ಮಹತ್ಯೆಯ ಯೋಜನೆ ತಿಳಿಸಿದ್ದಾಗಿ ಅನಿಲ್ ಆ ಡೈರಿಯಲ್ಲಿ ನಮೂದಿಸಿದ್ದಾನೆ.

ಅಂದರೆ ಮೋಕ್ಷಕ್ಕಾಗಿ ಆತ್ಮಹತ್ಯೆ ಎಂಬುದು ಇಡೀ ಕುಟುಂಬ ಸದಸ್ಯರಲ್ಲಿ ಮೊದಲಿಗೆ ಹೊಳೆದಿದ್ದು ಅನಿಲ್ ಗೆ ಎಂದಾಯಿತು. ಅನಿಲ್ ಈ ವಿಷಯವನ್ನು ತಾಯಿಗೆ ಆ ನಂತರ ಇಡೀ ಕುಟುಂಬಕ್ಕೆ ತಿಳಿಸಿ ಮನವರಿಕೆ ಮಾಡಿ ಕೊಡುವಲ್ಲಿ ಯಶಸ್ವಿಯಾಗಿದ್ದಾನೆ.

ಆತ್ಮಹತ್ಯೆ ಮಾಡಿಕೊಳ್ಳುವಂತೆ ಒಬ್ಬರನ್ನು ಪ್ರೇರೇಪಿಸುವುದಕ್ಕೂ, 11 ಜನರನ್ನು ಪ್ರೇರೆಪಿಸುವುದಕ್ಕೂ ಖಂಡಿತ ವ್ಯತ್ಯಾಸ ಇದೆ. ಆತ್ಮಹತ್ಯೆಯಿಂದ ಮೋಕ್ಷ ಸಿಗುತ್ತದೆ ಎಂದು 11 ಜನರಿಗೆ ಮನವರಿಕೆ ಮಾಡಿಕೊಟ್ಟ ಅನಿಲ್ ಮ್ಯಾನೇಜ್‌ಮೆಂಟ್ ಕೌಶಲ್ಯ ನಿಜಕ್ಕೂ ದಂಗು ಬಡಿಸುವಂತದ್ದು. ಅಷ್ಟೇ ಅಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಬಗೆಯನ್ನು ಅನಿಲ್ ತನ್ನ ಡೈರಿಯಲ್ಲಿ ನಮೂದಿಸಿರುವುದು ಮತ್ತು ಅದರಂತೆಯೇ ಆತ್ಮಹತ್ಯೆ ನಡೆದಿರುವುದು ಆತನ ನಿರ್ವಹಣಾ ಕೌಶಲ್ಯವನ್ನು ಎತ್ತಿ ತೋರಿಸುತ್ತದೆ.

Follow Us:
Download App:
  • android
  • ios