BSNL 90-day plan: ಬಿಎಸ್‌ಎನ್‌ಎಲ್ 4G ನೆಟ್‌ವರ್ಕ್ ವಿಸ್ತರಣೆಯೊಂದಿಗೆ ಕಡಿಮೆ ಬೆಲೆಯ ಪ್ಲಾನ್‌ಗಳನ್ನು ಪರಿಚಯಿಸುತ್ತಿದೆ. 90 ದಿನಗಳ ವ್ಯಾಲಿಡಿಟಿ ಹೊಂದಿರುವ ಹೊಸ ಪ್ರಿಪೇಯ್ಡ್ ಪ್ಲಾನ್ ಜಿಯೋ ಮತ್ತು ಏರ್‌ಟೆಲ್‌ಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.

ನವದೆಹಲಿ: ಭಾರತ ಸಂಚಾರ ನಿಗಮ ಲಿಮಿಟೆಡ್ ದೇಶದ ಎಲ್ಲಾ ಭಾಗದಲ್ಲಿಯೂ 4G ನೆಟ್‌ವರ್ಕ್ ಅಳವಡಿಕೆ ಜೊತೆಯಲ್ಲಿಯೇ ತೀವ್ರ ಸ್ಪರ್ಧೆ ನೀಡುತ್ತಿರುವ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ಗೆ ಟಕ್ಕರ್ ಕೊಡುತ್ತಿದೆ. ಬಜೆಟ್ ಫ್ರಂಡ್ಲಿ ರೀಚಾರ್ಜ್‌ಗಳಿಂದಲೇ ಬಿಎಸ್‌ಎನ್‌ಎಲ್ ಬಳಕೆದಾರರನ್ನು ಸೆಳೆಯತ್ತಿದೆ. 2024ರ ಬೆಲೆ ಏರಿಕೆ ನಂತರ ಬಹುತೇಕ ಗ್ರಾಹಕರು ತಮ್ಮ ಸೆಕೆಂಡರಿ ಸಿಮ್‌ ಸಂಖ್ಯೆಯನ್ನು ಎಂಎನ್‌ಪಿ ಮೂಲಕ ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಮಾಡಿಕೊಂಡಿದ್ದಾರೆ. ಇದೀಗ ಬಿಎಸ್‌ಎನ್‌ಎಲ್ ಅತಿ ಕಡಿಮೆ ಬೆಲೆಗೆ 90 ದಿನದ ಪ್ರಿಪೇಯ್ಡ್ ಪ್ಲಾನ್ ಘೋಷಣೆ ಮಾಡಿದೆ. ಈ ಹೊಸ ಪ್ಲಾನ್ ಏರ್‌ಟೆಲ್‌ ಮತ್ತು ರಿಲಯನ್ಸ್ ಜಿಯೋಗೆ ಹಲವು ಸಮಸ್ಯೆಗಳನ್ನು ತಂದೊಡ್ಡಬಹುದು ಎಂದು ಅಂದಾಜಿಸಲಾಗುತ್ತಿದೆ. 

ಖಾಸಗಿ ಟೆಲಿಕಾಂ ಕಂಪನಿಗಳಾಗಿರುವ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಬೆಲೆ ಏರಿಕೆ ಮಾಡಿಕೊಂಡ ನಂತರ ಲಕ್ಷಾಂತರ ಗ್ರಾಹಕರನ್ನು ಕಳೆದುಕೊಂಡಿವೆ. ಈ ಎಲ್ಲಾ ಗ್ರಾಹರು ಬಿಎಸ್ಎನ್‌ಎಲ್‌ನತ್ತ ಮುಖ ಮಾಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಬಿಎಸ್‌ಎನ್‌ಎಲ್ ಕಡಿಮೆ ಬೆಲೆಗೆ 365 ದಿನ ವ್ಯಾಲಿಡಿಟಿಯ ಪ್ಲಾನ್ ಬಿಡುಗಡೆ ಮಾಡಿತ್ತು. ಇದೀಗ ಕಡಿಮೆ ಬೆಲೆಗೆ 90 ದಿನ ವ್ಯಾಲಿಡಿಟಿಯ ಪ್ಲಾನ್ ಘೋಷಣೆ ಮಾಡಿದೆ. ಈ 90 ದಿನ ವ್ಯಾಲಿಡಿಟಿ ಪ್ಲಾನ್ ಬೆಲೆ ಎಷ್ಟು? ಈ ಯೋಜನೆಯಲ್ಲಿ ಗ್ರಾಹಕರಿಗೆ ಸಿಗುವ ಹೆಚ್ಚುವರಿ ಬೆನೆಫಿಟ್‌ ಏನು ಎಂದು ಈ ಲೇಖನದಲ್ಲಿ ನೋಡೋಣ.

90 ದಿನ ವ್ಯಾಲಿಡಿಟಿ ಪ್ಲಾನ್ 
ಬಿಎಸ್‌ಎನ್‌ಎಲ್ ನೀಡುತ್ತಿರುವ 90 ದಿನ ವ್ಯಾಲಿಡಿಟಿ ಪ್ಲಾನ್ ಬೆಲೆ 411 ರೂಪಾಯಿ ಆಗಿದೆ. ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ಪ್ರತಿದಿನ ಹೈಸ್ಪೀಡ್ 2GB ಡೇಟಾ ಸಿಗಲಿದೆ. ಬೇರಾವ ಟೆಲಿಕಾಂ ಕಂಪನಿಗಳು ಈ ರೀತಿಯ ದೀರ್ಘಾವಧಿಯ ಬಜೆಟ್‌ ಫ್ರೆಂಡ್ಲಿ ಪ್ಲಾನ್ ನೀಡಿಲ್ಲ. ಇದೊಂದು ಡೇಟಾ ವೋಚರ್ ಪ್ಲಾನ್ ಆಗಿದ್ದು, ಇದರಲ್ಲಿ ಅನ್‌ಲಿಮಿಟೆಡ್ ಕಾಲಿಂಗ್ ಆಯ್ಕೆಯನ್ನು ಗ್ರಾಹಕರಿಗೆ ಸಿಗಲ್ಲ. ನಿಮಗೆ ಡೇಟಾ ಜೊತೆಯಲ್ಲಿ ಅನ್‌ಲಿಮಿಟೆಡ್ ಕಾಲಿಂಗ್ ಬೇಕಾದ್ರೆ ಇನ್ನೊಂದು ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬೇಕಾಗುತ್ತದೆ. 411 ರೂಪಾಯಿ ಪ್ಲಾನ್‌ನಲ್ಲಿ ಗ್ರಾಹಕರಿಗೆ 180GB ಡೇಟಾ ಸಿಗುತ್ತದೆ. ಕಾಲಿಂಗ್‌ಗಾಗಿ ಕಡಿಮೆ ಬೆಲೆಯ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡು, ರೀಚಾರ್ಜ್‌ಗಾಗಿ ಈ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: 2007ರ ನಂತರ ಮೊದಲ ಬಾರಿಗೆ ಲಾಭ ಗಳಿಸಿದ ಬಿಎಸ್ಎನ್‌ಎಲ್; ಇದಕ್ಕೆಲ್ಲಾ ಕಾರಣ ಜಿಯೋ ಅಂದ್ರು ನೆಟ್ಟಿಗರು

365 ದಿನ ವ್ಯಾಲಿಡಿಟಿ ಪ್ಲಾನ್
ಇತ್ತೀಚೆಗಷ್ಟೇ ಬಿಎಸ್‌ಎನ್‌ಎಲ್ 365 ದಿನದ ಪ್ಲಾನ್ ಬಿಡುಗಡೆ ಮಾಡಿತ್ತು. ಗ್ರಾಹಕರು 1,515 ರೂಪಾಯಿ ರೀಚಾರ್ಜ್ ಮಾಡಿಸಿಕೊಂಡರೆ ಒಂದು ವರ್ಷ ಯಾವುದೇ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳುವ ಅವಶ್ಯಕತೆ ಇರಲ್ಲ. ಅನ್‌ಲಿಮಿಟೆಡ್ ಕಾಲಿಂಗ್ ಈ ಪ್ಲಾನ್ ಒಳಗೊಂಡಿತ್ತು. ಪ್ರತಿದಿನ ಉಚಿತವಾಗಿ 100 ಎಸ್‌ಎಂಎಸ್ ಮತ್ತು ಹೈಸ್ಪೀಡ್ 2GB ಡೇಟಾ ಸಿಗಲಿದೆ.

277 ರೂಪಾಯಿಗೆ 120GB ಡೇಟಾ
ಬಿಎಸ್‌ಎನ್‌ಎಲ್ ಮತ್ತೊಂದು ಯೋಜನೆಯ ಬೆಲೆ 277 ರೂ. ಈ ಯೋಜನೆಯ ಪ್ರಕಾರ ನಿಮಗೆ ಒಟ್ಟು 120GB ಡೇಟಾ ಸಿಗುತ್ತದೆ. ಈ ಯೋಜನೆಯ ವ್ಯಾಲಿಡಿಟಿ 60 ದಿನಗಳು. ಈ ಲೆಕ್ಕಾಚಾರದ ಪ್ರಕಾರ, ನಿಮಗೆ ಪ್ರತಿದಿನ 2GB ಡೇಟಾ ಸಿಗುತ್ತದೆ. 60 ದಿನಗಳಲ್ಲಿ ಈ ಯೋಜನೆಯ ಬೆಲೆಯನ್ನು ಲೆಕ್ಕ ಹಾಕಿದರೆ, ನೀವು ಪ್ರತಿದಿನ 5 ರೂಪಾಯಿ ವೆಚ್ಚದಲ್ಲಿ 2GB ಡೇಟಾವನ್ನು ಪಡೆಯಬಹುದು.

ಇದನ್ನೂ ಓದಿ: ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಜಾಕ್‌ಪಾಟ್; ಜಸ್ಟ್ 5 ರೂಪಾಯಿಯಲ್ಲಿ ಅಧಿಕ ಡೇಟಾ

Scroll to load tweet…