ಹೊಸ ವರ್ಷದ ಆಫರ್ ಘೋಷಿಸಿದ BNSL, 60 ದಿನ ವ್ಯಾಲಿಟಿಡಿ, 120 ಜಿಬಿ ಡೇಟಾ, ಕಡಿಮೆ ಬೆಲೆ!
ರಿಲಯನ್ಸ್ ಡಿಯೋ, ಭಾರ್ತಿ ಏರ್ಟೆಲ್ ಸೇರಿದಂತೆ ಪ್ರತಿಸ್ಪರ್ಧಿಗಳಿಗೆ ಬಿಎಸ್ಎನ್ಎಲ್ ಮತ್ತೊಂದು ಹೊಡೆತ ನೀಡಿದೆ.ಕೇವಲ 277 ರೂಪಾಯಿಗೆ ಬರೋಬ್ಬರಿ 60 ದಿನ ವ್ಯಾಲಿಟಿಡಿ, ಪ್ರತಿ ದಿನ 2 ಜಿಬಿ ಡೇಟಾ ಸೇರಿದಂತೆ ಹಲವು ಆಫರ್ ನೀಡಿದೆ.
ನವದೆಹಲಿ(ಡಿ.30) ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಇದೀಗ ಹೊಸ ವರ್ಷದ ಆಫರ್ ಘೋಷಿಸಿದೆ. ಈ ಆಫರ್ ಕೆಲವು ದಿನ ಮಾತ್ರ. ಹೊಸ ವರ್ಷದ ಪ್ರಯುಕ್ತ ಬಿಎಸ್ಎನ್ಎಲ್ ಅತೀ ಕಡಿಮೆ ಬೆಲೆಯ ರೀಚಾರ್ಜ್ ಆಫರ್ ಘೋಷಿಸಿದೆ. ಬಿಎಸ್ಎನ್ಎಲ್ ಗ್ರಾಹಕರು ಕೇವಲ 277 ರೂಪಾಯಿ ರೀಚಾರ್ಜ್ ಮಾಡಿದರೆ ಸಾಕು, 60 ದಿನ ಯಾವುದೇ ಚಿಂತೆ ಇಲ್ಲ. ವ್ಯಾಲಿಟಿಡಿ ಮಾತ್ರವಲ್ಲ, ಪ್ರತಿ ದಿನ ಉಚಿತ ಡೇಟಾ ಕೂಡ ಸಿಗಲಿದೆ. ಇದರಿಂದ ಗ್ರಾಹಕರು ಅತೀ ಕಡಿಮೆ ಬೆಲೆಗೆ ಡೇಟಾ ಆನಂದಿಸಲು ಸಾಧ್ಯವಾಗಲಿದೆ.
ಬಿಎಸ್ಎನ್ಎಲ್ 277 ರೂಪಾಯಿ ರೀಚಾರ್ಜ್ ಆಫರ್‌ನ್ನು ಸೀಮಿತ ಅವಧಿಗೆ ಘೋಷಿಸಿದೆ. ಹೊಸ ವರ್ಷದ ಅಂದರೆ ಜನವರಿ 16ರ ವರೆಗೆ ಈ ಆಫರ್ ಚಾಲ್ತಿಯಲ್ಲಿರಲಿದೆ. ಅಷ್ಟರೊಳಗೆ ರೀಚಾರ್ಜ್ ಮಾಡಿಕೊಂಡರೆ ಮುಂದಿನ 60 ದಿನ ಯಾವುದೇ ತಲೆಬಿಸಿ ಇಲ್ಲ. 60 ದಿನದಲ್ಲಿ ಒಟ್ಟು 120 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಇಲ್ಲಿ ಪ್ರತಿ ದಿನ ಇಂತಿಷ್ಟೆ ಡೇಟಾ ಬಳಕೆ ಮಾಡಬೇಕು ಎಂದಿಲ್ಲ. 120 ಜಿಬಿ ಉಚಿತವಾಗಿ ಸಿಗಲಿದೆ. ಇದರ ವ್ಯಾಲಿಟಿಡಿ 60 ದಿನ ಇರಲಿದೆ. ಹೀಗಾಗಿ ಪ್ರತಿ ದಿನ ಎಷ್ಟು ಬೇಕಾದರೂ ಡೇಟಾ ಬಳಕೆ ಮಾಡಬಹುದು. 120 ಜಿಬಿ ಉಚಿತ ಡೇಟಾ ಮುಗಿದರೆ ಬಳಿಕ ಇಂಟರ್ನೆಟ್ ಸ್ಪೀಡ್ 40ಕಿಬಿಪಿಎಸ್‌ಗೆ ಇಳಿಕೆಯಾಗಲಿದೆ. ಪ್ರಮುಖವಾಗಿ ಹೆಚ್ಚು ಡೇಟಾ ಬಳಕೆ ಮಾಡುವ ಗ್ರಾಹಕರಿಗೆ ಇದು ಸೂಕ್ತ ಪ್ಲಾನ್ ಆಗಿದೆ. ಬಜೆಟ್ ಫ್ಲೆಂಡ್ಲಿ ಪ್ಲಾನ್ ಮೂಲಕ ಗರಿಷ್ಠ ಸೇವೆ ಆನಂದಿಸಬಹುದು.
BSNL ಫ್ರೀ ಇಂಟರ್ನೆಟ್ ಆಫರ್: ಡಿಸೆಂಬರ್ 31 ಕೊನೆ ದಿನಾಂಕ
ಜಿಯೋ, ಏರ್ಟೆಲ್, ವೋಡಾಫೋನ್ ಐಡಿಯಾ ಪ್ಲಾನ್‌ಗಳಿಗೆ ಹೋಲಿಸಿದರೆ ಇದು ಅತೀ ಕಡಿಮೆ ಬೆಲೆಯ ಡೇಟಾ ಆಫರ್ ಹಾಗೂ ಗರಿಷ್ಠ ವ್ಯಾಲಿಡಿಟಿ ಆಫರ್ ಪ್ಲಾನ್ ಆಗಿದೆ. ಈ ಪ್ಲಾನ್ ಮೂಲಕ ಹೊಸ ವರ್ಷಕ್ಕೆ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸಲು ಬಿಎಸ್ಎನ್ಎಲ್ ಪ್ಲಾನ್ ಮಾಡಿದೆ. ಬಿಎಸ್ಎನ್ಎಲ್ ಆಫರ್ ಘೋಷಣೆ ಬೆನ್ನಲ್ಲೇ ರಿಲಯನ್ಸ್ ಜಿಯೋ, ಏರ್ಟೆಲ್ ಹಾಗೂ ವೋಡಾಫೋನ್ ಐಡಿಯಾಗೆ ತಲೆನೋವು ಶುರುವಾಗಿದೆ. ಈಗಾಗಲೇ ಗ್ರಾಹಕರು ಪ್ರಮುಖ ನೆಟ್‌ವರ್ಕ್‌ಗಳಿಂದ ಬಿಎಸ್ಎನ್ಎಲ್‌ಗೆ ಪೋರ್ಟ್ ಆಗುತ್ತಿದ್ದಾರೆ. ಇದೀಗ ಹೊಸ ಪ್ಲಾನ್ ಮತ್ತಷ್ಟು ಗ್ರಾಹಕರನ್ನ ಸೆಳೆಯುವ ಸಾಧ್ಯತೆ ಇದೆ ಅನ್ನೋ ಆತಂಕ ಖಾಸಗಿ ಟೆಲಿಕಾಂ ಸಂಸ್ಥೆಗಳಲ್ಲಿ ಶುರುವಾಗಿದೆ.
ಬಿಎಸ್ಎನ್ಎಲ್ ಹೊಸ ಹೊಸ ಆಫರ್ ನೀಡುತ್ತಿದೆ. ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದೆ. ಇತ್ತೀಚೆಗೆ ಟ್ರಾಯ್ ಬಿಡುಗಡೆ ಮಾಡಿದ ಅಂಕಿ ಅಂಶದಲ್ಲಿ ಬಿಎಸ್ಎನ್ಎಲ್ ಗ್ರಾಹಕರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಈ ಪೈಕಿ ಏರ್ಟೆಲ್ ಪ್ರದರ್ಶನ ಸಾಮಾಧಾನ ತರುವಂತಿದ್ದರೆ, ರಿಲಯನ್ಸ್ ಜಿಯೋ ತೀವ್ರ ಆಘಾತ ಎದುರಿಸುತ್ತು. ಜಿಯೋ ಗ್ರಾಹಕರು ಬಿಎಸ್ಎನ್ಎಲ್ ಹಾಗೂ ಇತರ ನೆಟ್‌ವರ್ಕ್‌ಗಳಿಗೆ ಪೋರ್ಟ್ ಆಗುತ್ತಿರುವ ಸರದಿ ಇನ್ನು ನಿಂತಿಲ್ಲ ಅನ್ನೋದು ಇತ್ತೀಚೆಗೆ ಟ್ರಾಯ್ ಬಿಡುಗಡೆ ಮಾಡಿದ ವರದಿಯಲ್ಲಿ ಸ್ಪಷ್ಟವಾಗಿತ್ತು.
VRS 2.0 ಒಪ್ಪಿಗೆ ನೀಡಿದ BSNL ಮಂಡಳಿ: 19 ಸಾವಿರ ಉದ್ಯೋಗಿಗಳು ಔಟ್?