ಅತೀ ಕಡಿಮೆ ಬೆಲೆಯಲ್ಲಿ ಬಿಎಸ್ಎನ್ಎಲ್ ಹೋಳಿ ಹಬ್ಬದ ಆಫರ್ ನೀಡಿದೆ. ಪ್ರತಿ ದಿನ 2ಜಿಬಿ ಹೈಸ್ಪೀಡ್ ಡೇಟಾ, ಅನ್‌ಲಿಮಿಟೆಡ್ ಕಾಲ್ ಸೇರಿದಂತೆ ಹಲವು ಉಚಿತ ಸೌಲಭ್ಯಗಳ ಆಫರ್ ನೀಡಲಾಗಿದೆ. ವಿಶೇಷ ಅಂದರೆ ಇದರ ವ್ಯಾಲಿಟಿಡಿ ಬರೋಬ್ಬರಿ 14 ತಿಂಗಳು.
ನವದೆಹಲಿ(ಮಾ.03) ಹೋಳಿ ಹಬ್ಬ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಬಿಎಸ್ಎನ್ಎಲ್ ಭರ್ಜರಿ ಆಫರ್ ಘೋಷಿಸಿದೆ. ಈ ಬಾರಿ ಜಿಯೋ, ಏರ್ಟೆಲ್, ವಿಐ ಪ್ರತಿಸ್ಪರ್ಧಿಗಳಿಗೆ ನಡುಕು ಹುಟ್ಟಸುವ ಆಫರ್ ಘೋಷಿಸಿದೆ. ಈ ಬಾರಿ ಬಿಎಸ್ಎನ್ಎಲ್ ಘೋಷಿಸಿರುವುದು ಅತೀ ಕಡಿಮೆ ಬೆಲೆಯ ಮೇಘಾ ಆಫರ್. ಕಾರಣ ಇದರ ವ್ಯಾಲಿಟಿಡಿ ಬರೋಬ್ಬರಿ 425 ದಿನ. ಅಂದರೆ 14 ತಿಂಗಳು. ಪ್ರತಿ ದಿನ 2 ಜಿಬಿ ಉಚಿತ ಹೈಸ್ಪೀಡ್ ಡೇಟಾ, ಪ್ರತಿ ದಿನ ಅನ್‌ಲಿಮಿಟೆಡ್ ಕಾಲ್ ಹಾಗೂ ಪ್ರತಿ ದಿನ 100 ಎಸ್ಎಂಎಸ್ ಉಚಿತವಾಗಿ ಸಿಗಲಿದೆ. ಇದು ಬಿಎಸ್ಎನ್ಎಲ್ ಗ್ರಾಹಕರಿಗೆ ಘೋಷಿಸಿದ ವಿಶೇಷ ಹೋಳಿ ಆಫರ್.
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ಪೈಪೋಟಿ ನಡೆಯುತ್ತಿದೆ. ಇತ್ತೀಚೆಗೆ ಜಿಯೋ, ಏರ್ಟೆಲ್, ವಿಐ ಬೆಲೆ ಏರಿಕೆಯಿಂದ ಹಲವು ಗ್ರಾಹಕರು ಬಿಎಸ್ಎನ್ಎಲ್‌ಗೆ ಪೋರ್ಟ್ ಆಗಿದ್ದರು. ಪ್ರತಿ ತಿಂಗಳು ಬಿಎಸ್ಎನ್ಎಲ್ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತ ಬಿಎಸ್ಎನ್ಎಲ್ ಕೂಡ ಹಲವು ಆಫರ್ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಪ್ರಯತ್ನದಲ್ಲಿದೆ. ಇದೀಗ ಹೋಳಿ ಹಬ್ಬದ ಪ್ರಯುಕ್ತ ಬಿಎಸ್ಎನ್ಎಲ್ 425 ದಿನದ ಆಫರ್ ಘೋಷಿಸಿದೆ.
ನಿಮ್ಮ ಏರಿಯಾದಲ್ಲಿ BNSL 4ಜಿ ನೆಟ್‌ವರ್ಕ್ ಇದೆಯಾ? ಮೊಬೈಲ್‌ನಲ್ಲೇ ಚೆಕ್ ಮಾಡಿ
ಈ ಆಫರ್‌ನ ಮತ್ತೊಂದು ವಿಶೇಷತೆ ಎಂದರೆ ಅನ್‌ಲಿಮಿಟೆಡ್ ಕಾಲ್ ಜೊತೆಗೆ ನ್ಯಾಷನಲ್ ರೋಮಿಂಗ್ ಕೂಡ ಉಚಿತವಾಗಿದೆ. ದೆಹಲಿ ಹಾಗೂ ಮುಂಬೈನಲ್ಲಿ MTNL ಕರೆ ಕಾಂಪ್ಲಿಮೆಂಟರಿಯಾಗಿ ನೀಡಲಾಗಿದೆ. ಈ ಆಫರ್ ಆ್ಯಕ್ಟಿವೇಟ್ ಮಾಡಲು ರೀಚಾರ್ಚ್ ಬೆಲೆ 2399 ರೂಪಾಯಿ. ಇಷ್ಟೊಂದಾ ಎಂದು ಹೌಹಾರುವ ಅಗತ್ಯವಿಲ್ಲ. ಕಾರಣ ಪ್ರತಿ ದಿನ 5.6 ರೂಪಾಯಿಂತೆ ಮಾತ್ರ ಖರ್ಚಾಗಲಿದೆ. ಈ ರೀಚಾರ್ಜ್ ಮಾಡಿದರೆ ತಿಂಗಳಿಗೆ ನೀವು 165 ರಿಂದ 170 ರೂಪಾಯಿ ಪಾವತಿಸದಂತೆ. 170 ರೂಪಾಯಿಯಲ್ಲಿ ಯಾವ ಟೆಲಿಕಾಂ ಕಂಪನಿ ಕೂಡ ಪ್ರತಿ ದಿನ 2ಜಿಬಿ ಡೇಟಾ , ಅನ್‌ಲಿಮಿಟೆಡ್ ಕಾಲ್ ಹಾಗೂ ಎಸ್ಎಂಸ್ ಸರ್ವೀಸ್ ನೀಡುತ್ತಿಲ್ಲ.
ಇದೀಗ ಜನರು ಹೋಳಿ ಹಬ್ಬದ ಆಫರ್ ರೀಚಾರ್ಜ್ ಮಾಡಲು ಮುಂದಾಗುತ್ತಿದ್ದಾರೆ. ಒಮ್ಮೆ ರೀಚಾರ್ಜ್ ಮಾಡಿದರೆ ಒಂದು ವರ್ಷವಲ್ಲ, ಒಂದು ವರ್ಷ 2 ತಿಂಗಳು ಯಾವುದೇ ತಲೆನೋವಿಲ್ಲ. ಆರಂಭಿಕ ಮೊತ್ತ ಕೊಂಚ ದುಬಾರಿ ಏನಿಸಬಹುದು. ಆದರೆ ಸುದೀರ್ಘ ದಿನಗಳ ಕಾಲ ಯಾವುದೇ ನಿಶ್ಚಂತೆ ಇಲ್ಲದೆ ಸೇವೆ ಬಳಕೆ ಮಾಡಬಹುದು.
ಬಿಎಸ್ಎನ್ಎಲ್ ಭಾರತದಲ್ಲಿ ಸೇವೆಯ ವರ್ಧಿಸುತ್ತಿದೆ. ದೇಶಾದ್ಯಂತ ಟವರ್ ಸ್ಥಾಪಿಸುತ್ತಿದೆ. ಅದರಲ್ಲೂ ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ 3,000ಕ್ಕೂ ಹೆಚ್ಚು ಟವರ್ ಸ್ಥಾಪಿಸಲಾಗುತ್ತಿದೆ. ಬಿಎಸ್ಎನ್ಎಲ್ 4ಜಿ ಸರ್ವೀಸ್ ಆರಂಭಗೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಬಿಎಸ್ಎನ್ಎಲ್ ಸೇವೆ ಲಭ್ಯವಾಗುತ್ತಿದೆ. ವಿಶೇಷ ಅಂದರೆ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹಾಗೂ ಬಿಎಸ್ಎನ್ಎಲ್ ತೆಗೆದುಕೊಂಡಿರುವ ಹಲವು ಪರಿಣಾಮಕಾರಿ ಬದಲಾವಣೆಗಳಿಂದ ಇದೀಗ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಲಾಭದಲ್ಲಿದೆ. ಇತ್ತೀಚೆಗೆ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಕುರಿತು ಮಹತ್ವದ ಘೋಷಣೆ ಮಾಡಿದ್ದರು. ದಶಕಗಳ ಬಳಿಕ ಬಿಎಸ್ಎನ್ಎಲ್ ಲಾಭದಲ್ಲಿದೆ.
147 ರೂಗೆ 30 ದಿನ ಅನ್‌ಲಿಮಿಟೆಡ್ ಕಾಲ್ ಸೇರಿ ಹಲವು ಆಫರ್, BSNL ಹೊಸ ಪ್ಲಾನ್ ಲಾಂಚ್
