Asianet Suvarna News Asianet Suvarna News

BSNL 4G Service: 'ಕೆಲವೇ ವಾರದಲ್ಲಿ ಬಿಎಸ್‌ಎನ್‌ಎಲ್‌ 4ಜಿ ಸೇವೆ ಆರಂಭ'

*    2343 ಟವರ್‌ಗಳು 4ಜಿಗೆ ಉನ್ನತೀಕರಣ
*   ಭಾರತದ ಸೆಮಿ ಕಂಡಕ್ಟರ್‌ ಉದ್ಯಮದ ಕಡೆ ಜಗತ್ತೇ ತಿರುಗಿ ನೋಡುವ ಕಾಲ ಬಂದಿದೆ
*  340 ಕೋಟಿ ರು. ಹೂಡಿಕೆ ಘೋಷಣೆ

BSNL 4G Service Will Be Launch Soon in India Says Union Minister Ashwini Vaishnaw grg
Author
Bengaluru, First Published Apr 30, 2022, 9:24 AM IST

ಬೆಂಗಳೂರು(ಏ.30):  ದೇಶದಲ್ಲಿ(India) ಇನ್ನು ಕೆಲವೇ ವಾರಗಳಲ್ಲಿ ಸ್ವದೇಶಿ 4ಜಿ ನೆಟ್‌ವರ್ಕ್(4G Nsetwork) ಸೇವೆ ಬಿಎಸ್‌ಎನ್‌ಎಲ್‌ ಮೂಲಕ ಆರಂಭವಾಗಲಿದೆ. ಇದಕ್ಕಾಗಿ ದೇಶಾದ್ಯಂತ 2343 ಟವರ್‌ಗಳಿಗೆ (ಸೈಟ್ಸ್‌) ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌, ಮಾಹಿತಿ ತಂತ್ರಜ್ಞಾನ ಮತ್ತು ಸಂಹವನ ಸಚಿವ ಅಶ್ವಿನಿ ವೈಷ್ಣವ್‌(Ashwini Vaishnaw) ತಿಳಿಸಿದ್ದಾರೆ.

ದೇಶದ ಅರೆ ವಾಹಕ ಉದ್ಯಮ ವಲಯ ಉತ್ತೇಜಿಸುವ ದೃಷ್ಟಿಯಿಂದ ಬೆಂಗಳೂರಿನಲ್ಲಿ(Bengaluru) ಆಯೋಜಿಸಿರುವ ದೇಶದ ಮೊದಲ ‘ಸೆಮಿಕಾನ್‌ ಇಂಡಿಯಾ 2022’ (Semicon India 2022) ಸಮ್ಮೇಳನದಲ್ಲಿ ಪಾಲ್ಗೊಂಡ ಬಳಿಕ ನಡೆದ ಸಂವಾದದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಭಾರತೀಯ ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳಿಂದಲೇ(Indian Engineers and Scientists) ಅಭಿವೃದ್ಧಿಪಡಿಸಲಾಗಿರುವ ದೇಶೀಯ 4ಜಿ ನೆಟ್‌ವರ್ಕ್ ಸೇವೆ ಇನ್ನು ಕೆಲವೇ ವಾರಗಳಲ್ಲಿ ಆರಂಭವಾಗಲಿದೆ. ಬಿಎಸ್‌ಎನ್‌ಎಲ್‌(BSNL) ಮೂಲಕ ದೇಶದ ಜನರಿಗೆ ಈ ಸೇವೆ ಲಭ್ಯವಾಗಲಿದೆ. ಇದಕ್ಕಾಗಿ ವಿವಿಧ ರಾಜ್ಯಗಳಲ್ಲಿ ಮೊದಲ ಹಂತದಲ್ಲಿ 2400 ಕೋಟಿ ರು.ಗೂ ಹೆಚ್ಚು ಮೊತ್ತದಲ್ಲಿ ಒಟ್ಟು 2343 ಟವರ್‌ಗಳನ್ನು 4ಜಿಗೆ ಉನ್ನತೀಕರಿಸಲಾಗುತ್ತಿದೆ. ಇದಕ್ಕೆ ಸ್ಥಳಾವಕಾಶವನ್ನೂ ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದರು.

BSNL Rs 797 Recharge Plan: 395 ದಿನ ವ್ಯಾಲಿಡಿಟಿ, 2GB ಹೈಸ್ಪೀಡ್ ಇಂಟರ್ನೆಟ್!

ಸೆಮಿಕಂಡಕ್ಟರ್‌ ಕ್ಷೇತ್ರದ(Semiconductor Sector) ಬೆಳವಣಿಗೆ ವಿಚಾರದಲ್ಲಿ ಸರ್ಕಾರದ ಗುರಿ ಏನು ಎಂಬ ಪ್ರಶ್ನೆಗೆ, ಭಾರತದ ಸೆಮಿ ಕಂಡಕ್ಟರ್‌ ಉದ್ಯಮದ ಕಡೆ ಜಗತ್ತೇ ತಿರುಗಿ ನೋಡುವ ಕಾಲ ಬಂದಿದೆ. ಭಾರತವನ್ನು ಮುಂದಿನ ಎರಡು ದಶಕದಲ್ಲಿ ಈ ಕ್ಷೇತ್ರದಲ್ಲಿ ಮುಂಚೂಣಿಗೆ ಕೊಂಡೊಯ್ಯುವ ಗುರಿ ಹೊಂದಿದೆ. ಇದರ ಫಲ ಪಡೆಯಲು ತಾಳ್ಮೆ ಬೇಕು. ಹೂಡಿಕೆದಾರರನ್ನು ಮನವೊಲಿಸಿ ಹೆಚ್ಚು ಬಂಡವಾಳ(Investment) ತರಬೇಕು. ನಮ್ಮಲ್ಲಿರುವ ಅರೆ-ಉದ್ಯಮದಾರರನ್ನು ಹೆಚ್ಚಿನ ಉತ್ಪಾದನೆಗೆ ಉತ್ತೇಜಿಸಬೇಕು. ಇದರಿಂದ ಮುಂದಿನ 10 ವರ್ಷಗಳಲ್ಲಿ ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ 110 ಬಿಲಿಯನ್‌ ಡಾಲರ್‌ನಷ್ಟು ಬೇಡಿಕೆ ದೇಶಕ್ಕೆ ಬರುವ ನಿರೀಕ್ಷೆ ಇದೆ. ಈಗ ಈ ಕ್ಷೇತ್ರದ ಉತ್ಪಾದನೆಯಲ್ಲಿ ಭಾರತದ ಪಾಲು ಶೇ.2ರಷ್ಟಿದೆ. ಮುಂದೆ ಇದನ್ನು ಶೇ.10ಕ್ಕೆ ಹೆಚ್ಚಿಸುವುದು ನಮ್ಮ ಗುರಿ. ಇದಕ್ಕಾಗಿ ಮೊದಲ ಹಂತದಲ್ಲಿ 10 ಬಿಲಿಯನ್‌ ಡಾಲರ್‌ ಪ್ಯಾಕೇಜ್‌ ಘೋಷಿಸಲಾಗಿದೆ ಎಂದರು.

ಇದೇ ವೇಳೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌(Rajeev Chandrasekhar), ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ ಭಾರತವು ಚೀನಾದೊಂದಿಗೆ(China) ಸ್ಪರ್ಧೆಯಲ್ಲಿ ಇಲ್ಲ. ಈ ಕ್ಷೇತ್ರದಲ್ಲಿ ಚೀನಾದ ಉತ್ಪಾದನೆಯೂ ಕಡಿಮೆಯೇ ಇದೆ. ಇನ್ನೊಂದು ದಶಕದಲ್ಲಿ ಶೇ.10ರಷ್ಟು ಮಾರುಕಟ್ಟೆಯನ್ನು ಈ ಕ್ಷೇತ್ರದಲ್ಲಿ ನಮ್ಮ ದೇಶ ಹೊಂದಬೇಕೆಂಬುದು ನಮ್ಮ ಗುರಿ ಎಂದರು.

BSNL New Plan: 329 ರೂ. ಭಾರತ ಫೈಬರ್ ಎಂಟ್ರಿ ಮಂತ್ಲಿ ಪ್ಲ್ಯಾನ್, ಇಂಟರ್ನೆಟ್ ವೇಗ ಎಷ್ಟು, ಏನೆಲ್ಲ ಸಿಗುತ್ತೆ?

340 ಕೋಟಿ ರು. ಹೂಡಿಕೆ ಘೋಷಣೆ

ಇದೇ ವೇಳೆ ಭಾರತದ ಸೆಮಿಕಂಡಕ್ಟರ್‌ ಉದ್ಯಮದಲ್ಲಿ ದೇಶ, ವಿದೇಶಗಳ ವಿವಿಧ ಕಂಪನಿಗಳಿಂದ ನೂರಾರು ಕೋಟಿ ರು. ಹೂಡಿಕೆಯ ಘೋಷಣೆ, ಕೆಲ ಸಂಸ್ಥೆಗಳಿಂದ ಹೂಡಿಕೆ ಒಪ್ಪಂದಕ್ಕೆ ಸಮಾವೇಶದಲ್ಲಿ ಅಂಕಿತ ಬಿದ್ದಿತು.
ಸಂವಾದದ ವೇಳೆ ಅಮೆರಿಕದಿಂದ ವರ್ಚುವಲ್‌ ಆಗಿ ಮಾತನಾಡಿದ ಅಪ್ಲೈಡ್ಜ್‌ ಮೆಟೀರಿಯಲ್ಸ್‌ ಉಪಾಧ್ಯಕ್ಷ ಪ್ರಭು ರಾಜ ಅವರು, ಭಾರತದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ತಮ್ಮ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, 6000ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನೂ 340 ಕೋಟಿ ರು.ಗಳನ್ನು ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸಿದರು. ಇದಕ್ಕೆ ಕೇಂದ್ರ ಸಚಿವದ್ವಯರು ಅಭಿನಂದನೆ ಸಲ್ಲಿಸಿದರು.
ಅದೇ ರೀತಿ ಪೋಲೆಂಡ್‌ನ ಅಲ್ಸೇನಾ, ವೆಲ್‌ಕಂ ಇಂಡಿಯಾ ಲಿಮಿಟೆಡ್‌ ವತಿಯಿಂದ ಸೆಮಿಕಂಡಕ್ಟರ್‌ ಕ್ಷೇತ್ರದ ಹೂಡಿಕೆಗೆ ಸಂಬಂಧಿಸಿದಂತೆ ಸಚಿವರ ಸಮ್ಮುಖದಲ್ಲೇ ಒಪ್ಪಂದಗಳು ಏರ್ಪಟ್ಟವು.

ದೇಶದ ಅರೆ ವಾಹಕ ಉದ್ಯಮ ಉತ್ತೇಜಿಸುವ ದೃಷ್ಟಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿರುವ ದೇಶದ ಮೊದಲ ‘ಸೆಮಿಕಾನ್‌ ಇಂಡಿಯಾ 2022’ ಸಮ್ಮೇಳನದಲ್ಲಿ ‘ಸೆಮಿಕಂಡಕ್ಟರ್‌ ಮ್ಯಾನುಫ್ಯಾಕ್ಚರಿಂಗ್‌ ಸಪ್ಲೈ ಚೈನ್‌’ ವರದಿಯನ್ನು ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್‌ ಮತ್ತು ರಾಜೀವ್‌ ಚಂದ್ರಶೇಖರ್‌ ಬಿಡುಗಡೆ ಮಾಡಿದರು.
 

Follow Us:
Download App:
  • android
  • ios