ರಿಸೈನ್ ಮಾಡಿದ ಉದ್ಯೋಗಿಗಳಿಂದ ಹಾಲು ಬೆರೆಸಿದ ಟೀಗೆ ರೀಫಂಡ್ ಕೇಳಿದ ಬಾಸ್!
ಕಾಲ ಬದಲಾಗ್ತಿದೆ, ಜನರು ಹೆಂಗ್ ಹೆಂಗೋ ಆಡ್ತಿದ್ದಾರೆ. ಅದಕ್ಕೆ ಈ ಘಟನೆ ಕೂಡ ಸಾಕ್ಷ್ಯ. ಕಂಜೂಸ್ ಬಾಸ್ ಒಬ್ಬ ಉದ್ಯೋಗಿಗಳು ಕುಡಿದ ಟೀಗೂ ಹಣ ವಸೂಲಿ ಮಾಡಿದ್ದಾನೆ.
ಪ್ರತಿಯೊಂದು ಕಂಪನಿ ಅದ್ರದ್ದೇ ನಿಯಮಗಳನ್ನು ಹೊಂದಿರುತ್ತೆ. ಬಹುತೇಕ ಕಂಪನಿಗಳಲ್ಲಿ ಉದ್ಯೋಗಿ ಕೆಲಸ ಬಿಡುವ ಮೂರು ತಿಂಗಳ ಮೊದಲೇ ಸೂಚನೆ ನೀಡ್ಬೇಕು. ಉದ್ಯೋಗ ಬಿಡುವ ಸಮಯದಲ್ಲಿ ಆತನ ಐಡಿ ಕಾರ್ಡ್, ಕಂಪನಿ ಲ್ಯಾಪ್ ಟಾಪ್ ಸೇರಿದಂತೆ ಬೇರೆ ಯಾವುದಾದ್ರೂ ಸೌಲಭ್ಯ ನೀಡಿದ್ದಲ್ಲಿ ಅದನ್ನು ವಾಪಸ್ ಪಡೆಯಲಾಗುತ್ತದೆ. ಇದು ಸಾಮಾನ್ಯ ನಿಯಮವಾಗಿದ್ದು ಇದನ್ನು ಉದ್ಯೋಗಿಗಳು ಪಾಲನೆ ಮಾಡ್ತಾರೆ. ಒಂದ್ವೇಳೆ ಯಾವುದೇ ಮಾಹಿತಿ ನೀಡದೆ ವ್ಯಕ್ತಿ ಉದ್ಯೋಗ ತೊರೆದ್ರೆ ಆಗ ಕಂಪನಿ ಆತನ ವಿರುದ್ಧ ಕೋರ್ಟ್ ಗೆ ಹೋಗುವ ಅವಕಾಶವೂ ಇದೆ. ನೀವು ಕೆಲಸ ಬಿಡುವ ಸಮಯದಲ್ಲಿ ನೀವು ಎಷ್ಟು ಆಮ್ಲಜನಕ ತೆಗೆದುಕೊಂಡಿದ್ದೀರಿ, ಎಷ್ಟು ಬಾಟಲಿ ನೀರು ಕುಡಿದಿದ್ದೀರಿ, ಎಷ್ಟು ಟಿಶ್ಯೂ ಬಳಕೆ ಮಾಡಿದ್ದೀರಿ ಲ್ಲವನ್ನೂ ಲೆಕ್ಕ ಹಾಕಿ, ಅದನ್ನೆಲ್ಲ ವಾಪಸ್ ನೀಡೋಕೆ ಹೋಗೋದಿಲ್ಲ. ನಿಮಗಾಗಿ ಕಂಪನಿ ಖರ್ಚು ಮಾಡಿದ ಈ ಸೇವೆಗೆ ಯಾವುದೇ ಕಂಪನಿ ಹಣ ಕೇಳೋದಿಲ್ಲ. ಆದ್ರೆ ಇಲ್ಲೊಬ್ಬ ಬಾಸ್ ಮಾಡಿದ ಕೆಲಸ ಕಂಗಾಲಾಗಿಸಿದೆ. ಯಾಕಪ್ಪ ಕೆಲಸ ಬಿಟ್ವಿ ಎನ್ನುವ ಸ್ಥಿತಿ ನಿರ್ಮಾಣ ಆಗುವಂತೆ ಮಾಡಿದ್ದಾನೆ ಬಾಸ್.
ಸಾಮಾಜಿಕ ಜಾಲತಾಣದಲ್ಲಿ ಕೆಲಸ ಬಿಟ್ಟ ಹುಡುಗಿ ತನ್ನ ಮಾಜಿ ಬಾಸ್ (Boss) ಹಾಕಿದ ರೂಲ್ಸ್ ಗಳನ್ನು ಬರೆದಿದ್ದಾಳೆ. ಅದನ್ನು ಓದಿದ ಜನರು ಇದು ಕಲಿಯುಗ ಸ್ವಾಮಿ. ಇಲ್ಲಿ ಏನು ಬೇಕಾದ್ರೂ ಆಗುತ್ತೆ ಎಂದಿದ್ದಾರೆ. ಕೆಲಸ ಬಿಡ್ತಿದ್ದಂತೆ ಬಾಸ್ ಮಾಡಿದ ಕೆಲಸ ಏನು ಅಂದರಾ? ಇಲ್ಲಿದೆ ವಿವರ.
ಅಣಬೆ ಬಗ್ಗೆ ಪಾಠ ಮಾಡುತ್ತಿದ್ದ ಪ್ರಾಧ್ಯಾಪಕಿಗೆ ಈಗ ಅದೇ ಆದಾಯದ ಮೂಲ;ಅಣಬೆ ಕೃಷಿಯಿಂದ ಲಕ್ಷಾಂತರ ರೂ. ಗಳಿಕೆ
ಯಾರಿಗೂ ಬೇಡ ಸ್ವಾಮಿ ಇಂಥ ಬಾಸ್ : ಈ ಘಟನೆ ನಡೆದಿರೋದು ಚೀನಾದಲ್ಲಿ. ಚೀನಾದ ಅನ್ಹುಯಿ ಪ್ರಾಂತ್ಯ (Anhui Province ) ದಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ ಉದ್ಯೋಗಿ ಸಾಮಾಜಿಕ ಜಾಲತಾಣದಲ್ಲಿ ಬಾಸ್ ಬಗ್ಗೆ ಬರೆದುಕೊಂಡಿದ್ದಾಳೆ. ಆಕೆ ಬಾಸ್, ಕೆಲಸ ತ್ಯಜಿಸಿದ ಆಕೆ ಹಾಗೂ ಆಕೆ ಸಹೋದ್ಯೋಗಿಗೆ ರೀಫಂಡ್ ಕೇಳಿದ್ದಾನೆ. ಅದು ಅವರು ಕುಡಿದ ಟೀಗೆ ರೀಫಂಡ್. ಯಸ್. ಹಾಲು ಹಾಕಿ ಮಾಡಿದ್ದ ಟೀಗೆ ರೀಫಂಡ್ (Refund) ಕೇಳಿದ್ದಾನೆ ಬಾಸ್. ಕೆಲಸ ಬಿಟ್ಟ ಉದ್ಯೋಗಿಗಳು ತಮ್ಮ ಕೆಲಸದ ಅವಧಿಯಲ್ಲಿ ಎಷ್ಟು ಟೀ ಕುಡಿದಿದ್ದಾರೆ, ಅದಕ್ಕೆ ಎಷ್ಟು ಖರ್ಚಾಗಿದೆ ಎಂಬುದನ್ನು ಲೆಕ್ಕ ಹಾಕಿದ್ದಾನೆ. ನಂತ್ರ ಅದನ್ನು ಪಟ್ಟಿ ಮಾಡಿ ಮೇಲ್ ಮಾಡಿದ್ದಾನೆ.
ಇಷ್ಟು ಹಣ ರೀಫಂಡ್ ಮಾಡಿದ ಉದ್ಯೋಗಿಗಳು : ಚೀನಾದಲ್ಲಿ ಒಂದು ಕಪ್ ಟೀ ಬೆಲೆ 90ರಿಂದ ಸುಮಾರು 288 ಯುವಾನ್. ಅಂದ್ರೆ ಭಾರತದ ರೂಪಾಯಿಯಲ್ಲಿ ಸುಮಾರು 1000ದಿಂದ 2900 ರೂಪಾಯಿ ಆಗುತ್ತದೆ. ಈ ದರದ ಆಧಾರದ ಮೇಲೆ ಕಂಪನಿ ಬಾಸ್, ಪ್ರತಿಯೊಬ್ಬ ಕೆಲಸ ಬಿಟ್ಟ ಉದ್ಯೋಗಿ ಟೀ ಸೇವನೆ ಮಾಡಿದ್ದಕ್ಕಾಗಿ 17,000 ರೂಪಾಯಿ ರೀಫಂಡ್ ಮಾಡ್ಬೇಕೆಂದು ಹೇಳಿದ್ದಾನೆ. ಆತ ಹೇಳಿದಂತೆ 17 ಸಾವಿರ ರೂಪಾಯಿಯನ್ನು ಇಬ್ಬರು ಟ್ರಾನ್ಸ್ಫರ್ ಮಾಡಿ ನಂತರ ಕೆಲಸ ಬಿಟ್ಟಿದ್ದಾರೆ.
AJIO ಬಳಕೆದಾರರೇ ಎಚ್ಚರ: ಅಂಬಾನಿ ಕಂಪನಿ ಹೆಸರಲ್ಲಿ ಇದೇನಿದು ದೊಡ್ಡ ಹಗರಣ?
ಇದಕ್ಕೆ ಕಾರಣ ಬಾಸ್ ಗರ್ಲ್ ಫ್ರೆಂಡ್ : ಬಾಸ್ ತನ್ನ ಉದ್ಯೊಗಿಗಳಿಂದ ಹಣ ವಸೂಲಿ ಮಾಡಲು ತನ್ನ ಗರ್ಲ್ ಫ್ರೆಂಡ್ ಕಾರಣ ಎಂದಿದ್ದಾನೆ. ಆತನ ಗರ್ಲ್ ಫ್ರೆಂಡ್, ಹಾಲು ಹಾಕಿ ತಯಾರಿಸಿದ ಟೀಯ ಹಣವನ್ನು ವಾಪಸ್ ನೀಡುವಂತೆ ಕೇಳಿದ್ದಳಂತೆ.
ಚೀನಾದ ಸೋಶಿಯಲ್ ಡ್ರಿಂಕ್ ಟೀ : ಚೀನಾದಲ್ಲಿ ಟೀ ಸೋಶಿಯಲ್ ಡ್ರಿಂಕ್ ಆಗಿದೆ. ಅಲ್ಲಿನ ಜನರ ಕುಡಿತದ ಚಟ ಬಿಡಿಸಲು ಟೀಯನ್ನು ಸೋಶಿಯಲ್ ಡ್ರಿಂಕ್ ಎಂದು ಘೋಷಣೆ ಮಾಡಲಾಗಿದೆ.