ಬ್ಲೂ ಟಿಕ್ ಪರಿಶೀಲಿಸಿದ Twitter ಖಾತೆಗಳಿಗೆ ತಿಂಗಳಿಗೆ 662 ರೂ. ಶುಲ್ಕ: ಎಲಾನ್ ಮಸ್ಕ್ ಘೋಷಣೆ
ಜನರಿಗೆ ಅಧಿಕಾರ! ತಿಂಗಳಿಗೆ 8 ಡಾಲರ್‌ಗೆ ಬ್ಲೂ ಎಂದು ಟ್ವಿಟ್ಟರ್ ಅಧಿಪತಿ ಅಧಿಕೃತ ಘೋಷಣೆ ಮಾಡಿದ್ದಾರೆ. ಖರೀದಿ ಸಾಮರ್ಥ್ಯದ ಸಮಾನತೆಗೆ ಅನುಗುಣವಾಗಿ ಪ್ರತಿ ದೇಶವು ಬೆಲೆಯನ್ನು ಸರಿಹೊಂದಿಸುತ್ತದೆ ಎಂದೂ ಅವರು ಹೇಳಿದ್ದಾರೆ.
ವಾಷಿಂಗ್ಟನ್ (ನವೆಂಬರ್ 2): ಟ್ವಿಟ್ಟರ್ ಅಧಿಪತಿ ಎಲಾನ್ ಮಸ್ಕ್ ಅವರು ಬ್ಲೂ ಟಿಕ್ ಖಾತೆಗಳಿಗೆ ಚಂದಾದಾರಿಕೆ ಸೇವೆಯ ಶುಲ್ಕವನ್ನು ಘೋಷಿಸಿದ್ದಾರೆ. ಈ ಹಿಂದೆ ವರ್ಷಕ್ಕೆ ಸುಮಾರು 20,000 ರೂ. ವೆಚ್ಚ ಘೋಷಿಸಬಹುದೆಂದು ವರದಿಗಳು ಬಂದಿತ್ತಾದರೂ, ತಿಂಗಳಿಗೆ 8 ಡಾಲರ್ ಅಂದರೆ ಅಂದಾಜು 662 ರೂ. ಮೊತ್ತವನ್ನು ಮಂಗಳವಾರ ಘೋಷಿಸಿದ್ದಾರೆ ಎಲಾನ್ ಮಸ್ಕ್. ಈ ಹಿನ್ನೆಲೆ ಟ್ವಿಟ್ಟರ್‌ನಲ್ಲಿ ಬ್ಲೂಟಿಕ್ ಹೊಂದಿರುವವರು ಇನ್ಮೇಲೆ ಅದನ್ನು ಮುಂದುವರಿಸಲು ತಿಂಗಳಿಗೆ 8 ಡಾಲರ್ ಶುಲ್ಕ ನೀಡಬೇಕಾಗಿದೆ. ಇದು ಬಳಕೆದಾರರಿಗೆ ದೀರ್ಘ ವಿಡಿಯೋ ಮತ್ತು ಆಡಿಯೋವನ್ನು ಪೋಸ್ಟ್ ಮಾಡಲು ಹಾಗೂ "ಸ್ಪ್ಯಾಮ್ ಮತ್ತು ಸ್ಕ್ಯಾಮ್’’ ವಿರುದ್ಧ ಹೋರಾಡಲು ಅನುವು ಮಾಡಿಕೊಡುತ್ತದೆ.
ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಎಲಾನ್ ಮಸ್ಕ್, "ನೀಲಿ ಚೆಕ್‌ಮಾರ್ಕ್ ಹೊಂದಿರುವವರು ಅಥವಾ ಹೊಂದಿರದಿರುವ ಟ್ವಿಟ್ಟರ್‌ನ ಪ್ರಸ್ತುತ ಪ್ರಭುಗಳು ಮತ್ತು ಬಡವರ ವ್ಯವಸ್ಥೆಯು ಬುಲ್‌ಶಿಟ್ ಆಗಿದೆ" ಎಂದು ಎಲಾನ್ ಮಸ್ಕ್ ಪ್ರತಿಪಾದಿಸಿದ್ದಾರೆ. ಹಾಗೂ, "ಜನರಿಗೆ ಅಧಿಕಾರ! ತಿಂಗಳಿಗೆ 8 ಡಾಲರ್‌ಗೆ ಬ್ಲೂ (ಟಿಕ್)’’ ಎಂದೂ ಘೋಷಣೆ ಮಾಡಿದ್ದಾರೆ. ಹಾಗೂ, ಖರೀದಿ ಸಾಮರ್ಥ್ಯದ ಸಮಾನತೆಗೆ ಅನುಗುಣವಾಗಿ ಪ್ರತಿ ದೇಶವು ಬೆಲೆಯನ್ನು ಸರಿಹೊಂದಿಸುತ್ತದೆ ಎಂದೂ ಎಲಾನ್ ಮಸ್ಕ್ ಹೇಳಿದರು.
ಇದನ್ನು ಓದಿ: Twitter ಬ್ಲೂಟಿಕ್‌ಗೆ ವಾರ್ಷಿಕ 20,000 ಶುಲ್ಕಕ್ಕೆ ಎಲಾನ್ ಮಸ್ಕ್ ಚಿಂತನೆ: ರಾಮಕೃಷ್ಣನ್‌ಗೆ ಸರಿಪಡಿಸುವ ಹೊಣೆ
ಪಾವತಿಸಿದ ಬ್ಲೂ ಟಿಕ್ ಖಾತೆಗಳು "ಅರ್ಧದಷ್ಟು ಜಾಹೀರಾತುಗಳು’’ ಕಡಿಮೆ ವೀಕ್ಷಿಸಬಹುದು ಮತ್ತು "ರಿಪ್ಲೈ, ಉಲ್ಲೇಖಗಳು ಮತ್ತು ಸರ್ಚ್ ಮಾಡಿದರೆ ಆದ್ಯತೆ ಪಡೆಯುತ್ತವೆ" ಎಂದು ಎಲಾನ್ ಮಸ್ಕ್ ಹೇಳಿದರು. ಪ್ರಸ್ತುತ, ಬಳಕೆದಾರರ ದೃಢೀಕರಣವನ್ನು ಪರಿಶೀಲಿಸುವ ಟ್ವಿಟ್ಟರ್ ಖಾತೆಗಳಿಗೆ ಬ್ಲೂ ಟಿಕ್ ಮಾರ್ಕ್ ಹೆಚ್ಚಿನ ದೇಶಗಳಲ್ಲಿ ಉಚಿತವಾಗಿದೆ.
ಎಲಾನ್ ಮಸ್ಕ್ ಅವರು 44 ಬಿಲಿಯನ್ ಡಾಲರ್ ಹಣವನ್ನು ನೀಡಿ ಟ್ವಿಟ್ಟರ್ ಕಂಪನಿಯನ್ನು ಖರೀದಿ ಮಾಡಿದ್ದಾರೆ. ಈ ಹಿನ್ನೆಲೆ, ಟ್ವಿಟ್ಟರ್‌ನ ಆದಾಯವನ್ನು ಹೆಚ್ಚಿಸಲು ಬ್ಲೂ ಟಿಕ್ ಪರಿಶೀಲನೆಗಾಗಿ 19.99 ಡಾಲರ್ ನಷ್ಟು ಶುಲ್ಕ ವಿಧಿಸಲು ಯೋಜಿಸುತ್ತಿದೆ ಎಂದು ಮಾಧ್ಯಮ ವರದಿಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. "ನಾವು ಹೇಗಾದರೂ ಬಿಲ್‌ಗಳನ್ನು ಪಾವತಿಸಬೇಕಾಗಿದೆ! ಟ್ವಿಟ್ಟರ್ ಸಂಪೂರ್ಣವಾಗಿ ಜಾಹೀರಾತುದಾರರ ಮೇಲೆ ಅವಲಂಬಿತವಾಗಿಲ್ಲ. $8 ಹೇಗೆ?" ಎಂದು ಪ್ರಶ್ನೆ ಮಾಡಿದ್ದಾರೆ. ಹಾಗೂ, "ಇದು ಕಾರ್ಯಗತಗೊಳ್ಳುವ ಮೊದಲು ನಾನು ತರ್ಕಬದ್ಧತೆಯನ್ನು ದೀರ್ಘ ರೂಪದಲ್ಲಿ ವಿವರಿಸುತ್ತೇನೆ. ಇದು ಬಾಟ್‌ಗಳು ಮತ್ತು ಟ್ರೋಲ್‌ಗಳನ್ನು ಸೋಲಿಸುವ ಏಕೈಕ ಮಾರ್ಗವಾಗಿದೆ." ಎಂದೂ ಎಲಾನ್ ಮಸ್ಕ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದರು.
ಇದನ್ನೂ ಓದಿ: Twitter ಸ್ಥಾಪಕನಿಂದ ಶೀಘ್ರ ಹೊಸ App ಸ್ಥಾಪನೆ: ಎಲಾನ್ ಮಸ್ಕ್‌ಗೆ ಸಡ್ಡು?
ಈ ಪ್ರತಿಕ್ರಿಯೆ ನೀಡಿದ ಗಂಟೆಗಳ ನಂತರ ಟ್ವಿಟ್ಟರ್ ಅಧಿಪತಿ ಎಲಾನ್ ಮಸ್ಕ್ ಬ್ಲೂ ಟಿಕ್ ಖಾತೆಗಳಿಗೆ ಹೊಸ ಬೆಲೆಯನ್ನು ಘೋಷಿಸಿದ್ದು, ಇದಕ್ಕೆ ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.
ಟ್ವಿಟ್ಟರ್ ಬ್ಲೂಟಿಕ್ ಶುಲ್ಕ: ಖ್ಯಾತ ಲೇಖಕ ಸ್ಟೀಫನ್ ಕಿಂಗ್ ತೀವ್ರ ಆಕ್ರೋಶ
ನ್ಯೂಯಾರ್ಕ್: ಟ್ವಿಟ್ಟರ್‌ನಲ್ಲಿ ಬ್ಲೂಟಿಕ್ ಖಾತೆಗಳಿಗೆ ವಾರ್ಷಿಕ 20000 ರೂ. ಶುಲ್ಕ ವಿಧಿಸುವ ಕಂಪನಿಯ ಪ್ರಸ್ತಾಪವನ್ನು ಅಮೆರಿಕದ ಖ್ಯಾತ ಲೇಖಕ ಸ್ಟೀಫನ್ ಕಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಟೀಫನ್ ಕಿಂಗ್, ‘ನನ್ನ ಖಾತೆಯ ಬ್ಲೂಟಿಕ್ ಉಳಿಸಲು ಟ್ವಿಟ್ಟರ್ ಕಂಪನಿಯೇ ನನಗೆ ತಿಂಗಳಿಗೆ 20 ಡಾಲರ್ ಪಾವತಿಸಬೇಕು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಎಲಾನ್ ಮಸ್ಕ್, ಟ್ವಿಟ್ಟರ್ ಸಂಪೂರ್ಣವಾಗಿ ಜಾಹಿರಾತುಗಳ ಮೇಲೆ ಅವಲಂಬಿತವಾಗಿಲ್ಲ. ನಾವು ಬಿಲ್‌ಗಳನ್ನು ಪಾವತಿಸಬೇಕಾಗುತ್ತದೆ. 8 ಡಾಲರ್‌ಗೆ ಏರಿಸಬಹುದೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Elon Musk: ಟ್ವಿಟರ್‌ಗೆ ಎಲಾನ್ ಮಸ್ಕ್ ಬಾಸ್: ಪರಾಗ್ ಅಗರವಾಲ್ ಸೇರಿ ಹಲವು ಉನ್ನತ ಅಧಿಕಾರಿಗಳು ವಜಾ?