ಬ್ಲಿಂಕಿಟ್‌ನಲ್ಲಿ ಚಿನ್ನದ ನಾಣ್ಯ ಆರ್ಡರ್‌ ಮಾಡಿದ್ದ ವ್ಯಕ್ತಿಗೆ ಮೋಸ!

ಬ್ಲಿಂಕಿಟ್‌ನಲ್ಲಿ 1 ಗ್ರಾಂ ಚಿನ್ನದ ನಾಣ್ಯವನ್ನು ಆರ್ಡರ್‌ ಮಾಡಿದ್ದ ವ್ಯಕ್ತಿಗೆ 0.5 ಗ್ರಾಂ ಚಿನ್ನದ ನಾಣ್ಯವನ್ನು ಕಳುಹಿಸಲಾಗಿದೆ. ಕಂಪನಿಯ ಗಮನಕ್ಕೆ ತರುವ ಹೊತ್ತಿಗೆ ಕಂಪ್ಲೇಂಟ್‌ ವಿಂಡೋವನ್ನು ಕ್ಲೋಸ್‌ ಮಾಡಲಾಗಿತ್ತು.

Blinkit Scam user orders 1 gm gold coin Gets only Half Gram complaint window closes san

ನವದೆಹಲಿ (ಅ.29): ಆನ್‌ಲೈನ್‌ನಲ್ಲಿ 1 ಗ್ರಾಂ ಚಿನ್ನದ ನಾಣ್ಯವನ್ನು ಆರ್ಡರ್‌ ಮಾಡಿದ್ದ ವ್ಯಕ್ತಿಗೆ ಅರ್ಧ ಗ್ರಾಂ ಚಿನ್ನದ ನಾಣ್ಯವನ್ನು ಕಳಿಸಿಕೊಟ್ಟಿರುವ ಘಟನೆ ನಡೆದಿದೆ. ದೆಹಲಿಯ ವ್ಯಕ್ತಿಯೊಬ್ಬ ಕ್ವಿಕ್‌ ಕಾಮರ್ಸ್‌ ಫ್ಲಾಟ್‌ಫಾರ್ಮ್‌ ಬ್ಲಿಂಕಿಟ್‌ನಲ್ಲಿ 1 ಗ್ರಾಂ ಚಿನ್ನದ ನಾಣ್ಯವನ್ನು ಆರ್ಡರ್‌ ಮಾಡಿದ್ದ. ಆದರೆ, ಕಂಪನಿ 0.5 ಗ್ರಾಂ ಚಿನ್ನದ ನಾಣ್ಯವನ್ನು ಕಳಿಸಿಕೊಟ್ಟಿದೆ. ಈ ಬಗ್ಗೆ ಕಂಪನಿಯ ಗಮನಕ್ಕೆ ತರುವ ಹೊತ್ತಿಗಾಗಲೇ ಕಂಪನಿ ಕಂಪ್ಲೇಂಟ್‌ ವಿಂಡೋವನ್ನು ಕ್ಲೋಸ್‌ ಮಾಡಿತ್ತು ಎಂದು ಅಳಲು ತೋಡಿಕೊಂಡಿದ್ದಾನೆ. ಬ್ಲಿಂಕಿಟ್‌ನಿಂದ ಆರ್ಡರ್‌ ತೆಗೆದುಕೊಳ್ಳುವ ವೇಳೆ ನಾನು ಮನೆಯಲ್ಲಿ ಇದ್ದಿರಲಿಲ್ಲ. ನನ್ನ ಸಹೋದರ ಈ ಆರ್ಡರ್‌ಅನ್ನು ಪಡೆದುಕೊಂಡಿದ್ದ ಎಂದು ಹೇಳಿದ್ದಾನೆ.

ಮೋಹಿತ್‌ ಜೈನ್‌ ಹೆಸರಿನ ವ್ಯಕ್ತಿ ತಮ್ಮ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಈ ವಿಚಾರ ಪೋಸ್ಟ್‌ ಮಾಡಿದ್ದಾರೆ. ಮಲಬಾರ್‌ ಗೋಲ್ಡ್‌ & ಡೈಮಂಡ್ಸ್‌ನಿಂದ ಕ್ವಿಕ್‌ ಕಾಮರ್ಸ್‌ ವೇದಿಕೆ ಬ್ಲಿಂಕಿಟ್‌ ಮೂಲಕ 1 ಗ್ರಾಂ ಚಿನ್ನ ಹಾಗೂ 10 ಗ್ರಾಂನ ಬೆಳ್ಳಿ ನಾಣ್ಯವನ್ನು ಆರ್ಡರ್‌ ಮಾಡಿದ್ದಾರೆ. ಆ ಬ್ರ್ಯಾಂಡ್‌ನ 1 ಗ್ರಾಂ ಚಿನ್ನದ ನಾಣ್ಯ ಬೆಲೆ ₹8,249 ಆಗಿದ್ದರೆ 0.5 ಗ್ರಾಂ ನಾಣ್ಯ ₹4,125 ರೂಪಾಯಿ ಆಗಿದೆ. ಕಂಪನಿ ಮಾಡಿದ ತಪ್ಪಿನಿಂದ ವ್ಯಕ್ತಿಗೆ 4124 ರೂಪಾಯಿ ನಷ್ಟವಾಗಿದೆ. ಅವರು ಗ್ರಾಹಕ ಸೇವೆಯೊಂದಿಗೆ ಸಂವಹನ ನಡೆಸುತ್ತಿರುವ ಸ್ಕ್ರೀನ್‌ಶಾಟ್ ದೂರನ್ನು ಪೋಸ್ಟ್‌ ಮಾಡಿದ್ದು, ವಿಂಡೋವನ್ನು ಮುಚ್ಚಲಾಗಿದೆ ಎಂದು ಬೋಟ್‌ನಿಂದ ಉತ್ತರ ಬಂದಿದ್ದನ್ನು ತೋರಿಸಿದೆ.

ಬ್ಲಿಂಕಿಟ್‌ನ ಅಧಿಕೃತ ಹ್ಯಾಂಡಲ್, ಮಲಬಾರ್ ಗೋಲ್ಡ್ & ಡೈಮಂಡ್‌ನ ಹ್ಯಾಂಡಲ್ ಮತ್ತು ಕೆಲವು  ಸುದ್ದಿಸಂಸ್ಥೆಗಳ ಟ್ಯಾಗ್‌ಗಳ ಜೊತೆಗೆ ಝೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ (ಬ್ಲಿಂಕಿಟ್‌ನ ಮಾಲೀಕತ್ವ ಜೊಮಾಟೊ ಬಳಿ ಇದೆ) ಟ್ಯಾಗ್‌ ಮಾಡಿ ಬರೆದುಕೊಂಡಿದ್ದು, 'ಬ್ಲಿಂಕಿಟ್‌ನಿಂದ ನಾನು ಮೋಸಹೋಗಿದ್ದೇನೆ..' ಎಂದು ಬರೆದುಕೊಂಡಿದ್ದಾರೆ.

"ಬ್ಲಿಂಕಿಟ್‌ನ ಕಸ್ಟಮರ್‌ ಸಪೋರ್ಟ್‌ ದಯನೀಯವಾಗಿದೆ. AI ಬಾಟ್‌ಗಳೊಂದಿಗೆ ಚಾಟ್ ಮಾಡಬೇಕಾಗಿರುವುದರಿಂದ ಬ್ಲಿಂಕಿಟ್‌ನಿಂದ ನಾನು ತುಂಬಾ ದುಬಾರಿ ವಸ್ತುವನ್ನು ಆರ್ಡರ್‌ ಮಾಡಿದ್ದು ಇದೇ ಮೊದಲು ಹಾಗೂ ಕೊನೆ' ಎಂದು ಅವರು ಹೇಳಿದ್ದಾರೆ.

ಟಾಟಾ ಟ್ರಸ್ಟ್‌ನಿಂದ ಸ್ಫೂರ್ತಿ ಪಡೆದ ಲೋಧಾ ಫ್ಯಾಮಿಲಿ, 20 ಸಾವಿರ ಕೋಟಿ ದಾನಕ್ಕೆ ನಿರ್ಧಾರ

ಅವರು ಡೆಲಿವರಿ ಏಜೆಂಟ್‌ಗೆ ಕರೆ ಮಾಡಿ "ಅವರೊಂದಿಗೆ ಮಾತನಾಡುವಾಗ ಅಕ್ಷರಶಃ ಅಳುತ್ತಿದ್ದರು" ಎಂದು ಅವರು ಹೇಳಿದರು. ಆದರೆ, ಡೆಲಿವರಿ ಮಾಡುವ ವ್ಯಕ್ತಿ ಈ ವಿಚಾರದಲ್ಲಿ ಅಸಹಾಯಕರಾಗಿದ್ದರು ಎಂದು ಹೇಳಿದ್ದಾರೆ.

MRF ದಾಖಲೆ ಮುರಿದ ಕಂಪನಿ, 4 ತಿಂಗಳ ಹಿಂದೆ 3 ರೂಪಾಯಿ ಇದ್ದ ಸ್ಟಾಕ್‌ನ ಬೆಲೆ ಇಂದು 2.36 ಲಕ್ಷ!

Latest Videos
Follow Us:
Download App:
  • android
  • ios