ಬ್ಲಿಂಕಿಟ್ ಡೆಲಿವರಿ ಏಜೆಂಟ್ ಒಬ್ಬರು ಐಷಾರಾಮಿ ಮಹೀಂದ್ರಾ ಥಾರ್ ಗಾಡಿಯಲ್ಲಿ ಬಂದು ಗ್ರಾಹಕರಿಗೆ ಆರ್ಡರ್ ತಲುಪಿಸಿ ಅಚ್ಚರಿ ಮೂಡಿಸಿದ್ದಾರೆ. ಈ ಅನಿರೀಕ್ಷಿತ ಘಟನೆಯನ್ನು ಗ್ರಾಹಕರು ವೀಡಿಯೋ ಮಾಡಿ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ. 

ಸಾಮಾನ್ಯವಾಗಿ ಡೆಲಿವರಿ ಬಾಯ್‌ಗಳೆಂದರೆ ಜೀವನಕ್ಕಾಗಿ ಒಂದು ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುವ ಮಾಧ್ಯಮ ವರ್ಗದ ಜನರು ಎಂಬುದು ಬಹುತೇಕರ ಊಹೆ ಇದರ ಹೊರತಾಗಿ ಮಹಾನಗರಗಳಲ್ಲಿ ಬಹುತೇಕ ಡೆಲಿವರಿ ಏಜೆಂಟ್‌ಗಳಾಗಿ ಕೆಲಸ ಮಾಡುವ ಹುಡುಗರು ಇದರಲ್ಲಿ ಪಾರ್ಟ್‌ಟೈಮ್ ಉದ್ಯೋಗಿಗಳಾಗಿ ಕೆಲಸ ಮಾಡುತ್ತಾರೆ. ಇದರಲ್ಲಿ ಕಾಲೇಜುಗಳಲ್ಲಿ ಓದುತ್ತಿರುವ ಹುಡುಗರು ಬೇರೆ ಬೇರೆ ಕಂಪನಿಗಳಲ್ಲಿ ಒಳ್ಳೆಯ ಉದ್ಯೋಗದಲ್ಲಿ ಕೆಲಸ ಮಾಡುವವರು ಕೂಡ ಈ ಆನ್‌ಲೈನ್ ಡೆಲಿವರಿ ಸಂಸ್ಥೆಗಳಲ್ಲಿ ಡೆಲಿವರಿ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿರುತ್ತಾರೆ. ಇಂತಹವರು ಬಹುತೇರು ಬೈಕ್ ಸ್ಕೂಟರ್‌, ಸ್ಕೂಟಿಗಳಲ್ಲಿ ತಮ್ಮ ಗ್ರಾಹಕರಿಗೆ ವಸ್ತುಗಳನ್ನು ಡೆಲಿವರಿ ನೀಡುತ್ತಾರೆ. ಆದರೆ ಇಲ್ಲೊಂದು ಕಡೆ ಡೆಲಿವರಿ ಏಜೆಂಟ್ ಒಬ್ಬರು ಥಾರ್ ಗಾಡಿಯಲ್ಲಿ ಬಂದು ಡೆಲಿವರಿ ನೀಡಿದ್ದು, ಇದು ಆರ್ಡರ್ ಮಾಡಿದ ಗ್ರಾಹಕರನ್ನು ಅಚ್ಚರಿಗೀಡು ಮಾಡಿದೆ.

ಕಪ್ಪು ಬಣ್ಣದ ಮಹೀಂದ್ರಾ ಥಾರ್ ಗಾಡಿ ಮೋಟಾರ್ ವೆಹಿಕಲ್ ಪ್ರಿಯರಿಗೆ ಬೇರೆಯದ್ದೇ ಒಂದು ವೈಬ್ ನೀಡಿರುವಂತಹ ಗಾಡಿ, ಬಹುತೇಕ ಐಷಾರಾಮಿ ಜೀವನ ಇಷ್ಟಪಡುವವರು ಇದನ್ನು ಖರೀದಿಸುತ್ತಾರೆ. ದುಡ್ಡಿದ್ದವರು ಖರೀದಿಸಿ ಎಂಜಾಯ್ ಮಾಡ್ತಾರೆ. ಇಂತಹ ಲಕ್ಸುರಿ ವಾಹನದಲ್ಲಿ ಬಂದು ಒಬ್ಬರು ಯಾರೋ ಗ್ರಾಹಕರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ವಸ್ತುಗಳನ್ನು ಡೆಲಿವರಿ ನೀಡಿದ್ದು, ಇದನ್ನು ನೋಡಿ ಆರ್ಡರ್‌ ಮಾಡಿದ್ದ ಗ್ರಾಹಕನೇ ಅಚ್ಚರಿಪಟ್ಟಿದ್ದಾರೆ. ಬ್ಲಿಂಕಿಟ್ ಡೆಲಿವರಿ ಏಜೆಂಟ್ ಒಬ್ಬರು ಈ ಥಾರ್ ಗಾಡಿಯಲ್ಲಿ ಬಂದು ಗ್ರಾಹಕನಿಗೆ ಅಚ್ಚರಿ ಮೂಡಿಸಿದ್ದಾರೆ.

divyagroovezz ಎಂಬ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿರುವ ದಿವ್ಯಾ ಶ್ರೀವಾಸ್ತವ್ ಎಂಬುವವರು ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು,

ಇದು ನಿಜನಾ ಥಾರ್ ಗಾಡಿಯಲ್ಲಿ ಬ್ಲಿಂಕಿಟ್ ಡೆಲಿವರಿ ಎಂದು ಅಚ್ಚರಿಯಿಂದ ಪ್ರಶ್ನಿಸಿದ್ದಾರೆ. ಅಲ್ಲದೇ ನೀವು ನಿಮ್ಮ ಡೆಲಿವರಿ ಹುಡುಗರಿಗೆ ನಿಜವಾಗಿಯೂ ಇಷ್ಟೊಂದು ಹಣ ನೀಡುತ್ತಿದ್ದೀರಾ? ಎಂದು ಬ್ಲಿಂಕಿಟ್‌ಗೆ ಟ್ಯಾಗ್ @letsblinkit ಮಾಡಿ ಅವರು ಕೇಳಿದ್ದಾರೆ. ಅಲ್ಲದೇ ಥಾರ್ ಮಹೀಂದ್ರಾಗೂ @mahindrathar ಟ್ಯಾಗ್ ಮಾಡಿದ ಅವರು ನೀವು ಇತ್ತೀಚಿನ ದಿನಗಳಲ್ಲಿ THAR ಗಾಡಿಯನ್ನು ತುಂಬಾ ಕಡಿಮೆ ಬೆಲೆಗೆ ನೀಡುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರು ಮಾತ್ರ ಹಲವು ಕಾಮೆಂಟ್ ಮಾಡಿದ್ದಾರೆ. ಮೇ ಬಿ ಥಾರ್ ಗಾಡಿಯ ಇಎಂಐ ಕಟ್ಟಲು ಬಾಕಿ ಇರಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಡೆಲಿವರಿ ಬಾಯ್ ತನ್ನ ಸ್ನೇಹಿತನ ಜೊತೆ ಬಂದಿರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿ. ಅದು ಆ ಶಾಖೆಯ ಬ್ಲಿಂಕಿಟ್ ಫ್ರಾಂಚೈಸ್ ಪ್ರೋಗ್ರಾಂನ ಮಾಲೀಕರಾಗಿರಬೇಕು. ಅವರು ನಿಮ್ಮ ಸ್ಥಳದ ಬಳಿ ಹೋಗುವವರಾಗಿದ್ದಿರಬಹುದು, ಅಥವಾ ಸವಾರರ ಬೈಕ್‌ನಲ್ಲಿ ಏನಾದರೂ ಸಮಸ್ಯೆ ಇದ್ದಿರಬಹುದು ಎಂದು ಕೆಲವರು ಊಹೆ ಮಾಡಿದ್ದಾರೆ. ಹಾಗೆಯೇ ಕೆಲವರು ಇದನ್ನು ಟೈಮ್‌ಪಾಸ್‌ಗಾಗಿ ಮಾಡುತ್ತಾರೆ ಅವರಿಗೆ ಹಣ ಬೇಕಿರುವುದಿಲ್ಲ, ಹೊಸ ಜನರ ಭೇಟಿಗಾಗಿ ಪರಿಚಯಕ್ಕಾಗಿ ಮಾಡುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಜೋಗುಳ ಹಾಡಿ ಮಲಗಿಸಿದವಳೇ 3 ವರ್ಷದ ಮಗಳ ಉಸಿರು ನಿಲ್ಲಿಸಿದಳು: ಲವ್ವರ್‌ಗಾಗಿ ಕಂದನ ಕೊಲೆ

ಇದನ್ನೂ ಓದಿ: ವೃದ್ಧಾಪ್ಯದಲ್ಲಿ NRIಗಳ ಲವ್‌ ಅಫೇರ್‌: 75ರ ಅಜ್ಜನ ಮದ್ವೆಯಾಗಲು ಭಾರತಕ್ಕೆ ಬಂದು ಶವವಾದ 71ರ ಅಜ್ಜಿ

View post on Instagram