ಶ್ರೀಮಂತ ವ್ಯಕ್ತಿಗೆ ಪತ್ನಿ ಇಟ್ಟ ವಿಚ್ಚೇದನ ಮೊತ್ತದ ಬೇಡಿಕೆ ಕೇಳಿ ಕಂಗಾಲಾದ್ರು ಜನ!

ಶ್ರೀಮಂತ ವ್ಯಕ್ತಿಗಳ ವಿಚ್ಛೇದನ ಕೂಡ ಸುದ್ದಿಯಾಗುತ್ತೆ. ಅದಕ್ಕೆ ಕಾರಣ ಅವರು ನೀಡುವ ಪರಿಹಾರ ಹಣ. ಜನರು ದೊಡ್ಡ ಮೊತ್ತವನ್ನು ನಿರೀಕ್ಷೆ ಮಾಡಿರ್ತಾರೆ. ಆದ್ರೆ ಅದು ಅನೇಕ ಬಾರಿ ಉಲ್ಟಾ ಆಗೋದಿದೆ. 
 

Billionaires Wife Took Divorce Asked For So Much Money roo

ಶ್ರೀಮಂತರ ಮನೆ ಮದುವೆ, ಪಾರ್ಟಿ, ವಿಚ್ಛೇದನ ಎಲ್ಲವೂ ಶ್ರೀಮಂತವಾಗೇ ಇರುತ್ತೆ. ಮದುವೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ಜನರು ವಿಚ್ಛೇದನದ ಸಂದರ್ಭದಲ್ಲೂ ಹಿಂದೆ ಬೀಳೋದಿಲ್ಲ. ವಿಚ್ಛೇದಿತ ಪತ್ನಿ, ಪತಿಯಿಂದ ಕೋಟಿ ಕೋಟಿ ಹಣವನ್ನು ಪರಿಹಾರದ ರೂಪದಲ್ಲಿ ಪಡೆಯುತ್ತಾಳೆ. ಅತ್ಯಂತ ದುಬಾರಿ ವಿಚ್ಛೇದನ ಎಂಬ ಪಟ್ಟಿಯಲ್ಲಿ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಮತ್ತು ಅವರ ಮಾಜಿ ಪತ್ನಿ ಮೆಕೆಂಜಿ ಸೇರಿದ್ದಾರೆ. ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್, ತಮ್ಮ ಪತ್ನಿ ಮೆಕೆಂಜಿಗೆ ಪರಿಹಾರವಾಗಿ 2.75 ಲಕ್ಷ ಕೋಟಿ ರೂಪಾಯಿಯನ್ನು ನೀಡಿದ್ದರು. ಈ ಮೂಲಕ ಇದು ವಿಶ್ವದ ಅತ್ಯಂತ ದುಬಾರಿ ವಿಚ್ಛೇದನ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಜೆಫ್ ಬೆಜೋಸ್ ಮಾತ್ರವಲ್ಲದೆ ಬಿಲ್ ಗೇಟ್ಸ್, ಎಲಾನ್ ಮಸ್ಕ್ ಸೇರಿದಂತೆ ಅನೇಕ ಶ್ರೀಮಂತರು ಈಗಾಗಲೇ ವಿಚ್ಛೇದನ ಪಡೆದಿದ್ದು, ಪರಿಹಾರದ ರೂಪದಲ್ಲಿ ದೊಡ್ಡ ಮೊತ್ತವನ್ನು ನೀಡಿದ್ದಾರೆ. 

ಸೆಲೆಬ್ರಿಟಿಗಳು, ಉದ್ಯಮಿಗಳು, ಶ್ರೀಮಂತರ ಪಟ್ಟಿಯಲ್ಲಿ ಹೆಸರು ಪಡೆದ ವ್ಯಕ್ತಿಗಳು ವಿಚ್ಛೇದನ (Divorce) ಪಡೆಯುತ್ತಿದ್ದಾರೆ ಎಂದಾಗ ಎಲ್ಲರ ಗಮನ ಸೆಳೆಯೋದು ವಿಚ್ಛೇದನದ ಹಣ. ಸ್ಕಾಟ್ಲೆಂಡ್‌ (Scotland) ಶ್ರೀಮಂತ ವ್ಯಕ್ತಿ ವಿಚ್ಛೇದನ ಕೂಡ ಇದೇ ವಿಷ್ಯಕ್ಕೆ ಸುದ್ದಿಯಾಗಿದೆ. ಅವರ ಪತ್ನಿ ಕೇಳಿದ್ದ ಪರಿಹಾರ ಧನ ಎಲ್ಲರನ್ನು ಅಚ್ಚರಿಗೊಳಿಸಿದೆ. 

GOOD HABITS : ದಿನದ ಆರಂಭವನ್ನು ಹೀಗೆ ಶುರು ಮಾಡ್ತಾರೆ ಗೂಗಲ್ ಸಿಇಒ!

ನಾವು ಹೇಳ್ತಿರೋದು ಕಿಲ್ಮಾರ್ನಾಕ್ ಎಫ್ಸಿ ವ್ಯವಸ್ಥಾಪಕ ನಿರ್ದೇಶಕಿ ಫಿಲ್ಲಿಸ್ ಮೆಕ್ಲೀಶ್ ಬಗ್ಗೆ. ಅವರು ಅವರ ಪತಿ ಅಲನ್ ಮೆಕ್ಲೀಶ್ ಗೆ ವಿಚ್ಛೇದನ ನೀಡಿದ್ದಾರೆ. ಅವರ ವಿಚ್ಛೇದನದ ಸುದ್ದಿ ಹೊರ ಬರ್ತಿದ್ದಂತೆ ಎಲ್ಲರೂ ಕುತೂಹಲಗೊಂಡಿದ್ದರು. ಫಿಲ್ಲಿಸ್ ಮಕ್ಲೀಶ್ ಎಷ್ಟು ಪರಿಹಾರ ಕೇಳ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಆದ್ರೆ ಫಿಲ್ಲಿಸ್ ಮಕ್ಲೀಶ್ ಈ ವಿಷ್ಯದಲ್ಲಿ ಎಲ್ಲರನ್ನೂ ಆಘಾತಗೊಳಿಸಿದ್ರು.  

ಫಿಲ್ಲಿಸ್ ಮೆಕ್ಲೀಶ್ ಮತ್ತು ಅಲನ್ ಮೆಕ್ಲೀಶ್ ಮೊದಲ ಭೇಟಿ 2008 ರಲ್ಲಿ ಆಗಿತ್ತು. ಇಬ್ಬರೂ 2013 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2019 ರಲ್ಲಿ ಇಬ್ಬರೂ ಬೇರೆಯಾಗಿದ್ದರು. ಇಬ್ಬರಿಗೂ ಮೂವರು ಮಕ್ಕಳಿದ್ದಾರೆ. ಇಬ್ಬರ ಬಳಿಯೂ ಅಪಾರ ಸಂಪತ್ತು ಇದೆ. ಇಬ್ಬರ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಈ ಸಮಯದಲ್ಲಿ ಫಿಲ್ಲಿಸ್ ಮೆಕ್‌ಲೀಶ್ 16.5 ಮಿಲಿಯನ್ ಪೌಂಡ್‌ ಅಂದರೆ ಸರಿಸುಮಾರು 1.72 ಬಿಲಿಯನ್ ರೂಪಾಯಿ ಅಲೆನ್‌ನಿಂದ ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದ್ರೆ ಅವರು ಪಡೆದಿದ್ದು ಕೇವಲ 125,000 ಪೌಂಡ್‌ ಅಂದರೆ 1.3 ಕೋಟಿ ರೂಪಾಯಿ ಮಾತ್ರ.

ಕೋರ್ಟಿಗೆ ಹೋಗಿದ್ದ ವಿಚ್ಛೇದನ ಪ್ರಕರಣವನ್ನು ಹೊರಗೆ ಬಗೆಹರಿಸಿಕೊಳ್ಳೋದಾಗಿ ದಂಪತಿ ಹೇಳಿದ್ದರು. ಪರಿಹಾರದ ಬಗ್ಗೆ ಚರ್ಚೆ ನಡೆಸಿ ಒಂದು ನಿರ್ಧಾರಕ್ಕೆ ಬಂದ ಮೇಲೆ ಅವರ ನಿರ್ಧಾರ ಕೇಳಿ ಎಲ್ಲರೂ ದಂಗಾಗಿದ್ದರು. ಎಡಿನ್‌ಬರ್ಗ್ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು, ಇದೇ ಅಂತಿಮ ನಿರ್ಧಾರವೇ ಎಂದು ಪ್ರಶ್ನೆ ಕೂಡ ಮಾಡಿದ್ದರು. ಇದಕ್ಕೆ ದಂಪತಿ ಹೌದು ಎಂದು ಉತ್ತರ ನೀಡಿದ್ದರು. ಈಗ ಅಲನ್ ಮೆಕ್ಲೀಶ್ ಕಂಪನಿ ಎಷ್ಟೇ ಅಭಿವೃದ್ಧಿ ಕಂಡಿರಲಿ, ಕಂಪನಿ ಇಷ್ಟು ಎತ್ತರಕ್ಕೆ ಬೆಳೆಯಲು ನನ್ನ ಸಹಕಾರ ಎಷ್ಟೇ ಇರಲಿ ನಾನು ಈ ಪರಿಹಾರ ಮೊತ್ತಕ್ಕೆ ಬದ್ಧನಾಗಿದ್ದು, ನನಗೆ ಇದ್ರಿಂದ ತೃಪ್ತಿಯಿದೆ ಎಂದು ಫಿಲ್ಲಿಸ್ ಮೆಕ್ಲೀಶ್ ಹೇಳಿದ್ದರು. 

ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಜಗಳವಾಡಿದಾಗ ಮೊದಲು ಸಾರಿ ಕೇಳುವುದ್ಯಾರು?

ಅಮ್ಮನ ಸಹಾಯದಿಂದ ಉದ್ಯೋಗ (Employment) ಶುರು ಮಾಡಿದ್ದ ಅಲನ್  : ಅಲನ್ ಈಗ ಉನ್ನತ ಮಟ್ಟಕ್ಕೇರಿದ್ದಾರೆ. ಅನೇಕ ಕಂಪನಿಗಳಲ್ಲಿ ಹೂಡಿಕೆ (Investment) ಮಾಡಿದ್ದಾರೆ. ಆದ್ರೆ ಆರಂಭದಲ್ಲಿ ತಾಯಿಯಿಂದ 300 ಪೌಂಡ್‌ ಪಡೆದು ಟ್ರೀ ಸರ್ಜರಿ ಕಂಪನಿ QTS ಪ್ರಾರಂಭಿಸಿದ್ದರು. ಕೆಲವೇ ವರ್ಷಗಳಲ್ಲಿ ಕಂಪನಿ ಬಿಲಿಯನ್ ಡಾಲರ್ ಸಾಮ್ರಾಜ್ಯವಾಗಿದೆ. 

Latest Videos
Follow Us:
Download App:
  • android
  • ios