Billionaire Businessman : 1200 ಸಿಬ್ಬಂದಿಯನ್ನು ಕುಟುಂಬ ಸಮೇತ ಪ್ರವಾಸಕ್ಕೆ ಕಳುಹಿಸಿದ ಬ್ಯುಸಿನೆಸ್ಮೆನ್‌ಗೆ ಶ್ಲಾಘನೆ

ಈಗಿನ ದಿನಗಳಲ್ಲಿ ಉದ್ಯೋಗಿಗಳನ್ನು ಕುಟುಂಬಸ್ಥರಂತೆ ನೋಡುವ ಜನರು ಕಡಿಮೆ. ಸಿಬ್ಬಂದಿ ದುಡಿದಷ್ಟು ಸಾಲೋದಿಲ್ಲ ಎನ್ನುವ ಬಾಸ್ ಗಳ ಸಂಖ್ಯೆ ಹೆಚ್ಚಿದೆ. ಆದ್ರೆ ಕೆಲವರು ತಮ್ಮ ವಿಭಿನ್ನ ಕೆಲಸದಿಂದ ಸಿಬ್ಬಂದಿ ಮಾತ್ರವಲ್ಲ ಹೊರಗಿನವರ ಮನಸ್ಸು ಗೆಲ್ಲುತ್ತಾರೆ.
 

Billionaire Businessman Sends Employees To Disneyland Tokyo Trip With Family roo

ಕೈತುಂಬ ಹಣ ಇದ್ರೂ ಕೈ ಬಿಚ್ಚಿ ಖರ್ಚು ಮಾಡೋರು ಕಡಿಮೆ. ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡುವ ಜನರು ತಮ್ಮ ಸಿಬ್ಬಂದಿಗೆ ವರ್ಷದಲ್ಲಿ ಒಮ್ಮೆ ಬೋನಸ್ ನೀಡಲು ಅಳ್ತಾರೆ. ದೀಪಾವಳಿ ಅಥವಾ ಬೇರೆ ಹಬ್ಬದ ಸಂದರ್ಭದಲ್ಲಿ ಸಿಬ್ಬಂದಿಗೆ ಉಡುಗೊರೆ ನೀಡೋದಿರಲಿ ಸಿಹಿ ಕೂಡ ನೀಡಲು ಹಿಂದೇಟು ಹಾಕ್ತಾರೆ. ಹಾಗಂತ ಎಲ್ಲ ಕೋಟ್ಯಾಧಿಪತಿಗಳು ಹಾಗಲ್ಲ. ಕೆಲವರು ತಮ್ಮ ಜೊತೆ ತಮ್ಮ ಸಿಬ್ಬಂದಿ ಮಾತ್ರವಲ್ಲ ಅವರ ಕುಟುಂಬದ ಯೋಗಕ್ಷೇಮವನ್ನೂ ನೋಡಿಕೊಳ್ತಾರೆ. ಕಂಪನಿ ಲಾಭಪಡೆದಾಗ ಸಿಬ್ಬಂದಿಗೆ ಉಡುಗೊರೆ ನೀಡಿ, ಅವರನ್ನು ಪ್ರವಾಸಕ್ಕೆ ಕಳುಹಿಸಿ ಇಲ್ಲವೆ ತುರ್ತು ಪರಿಸ್ಥಿತಿಯಲ್ಲಿ ಅವರ ಕುಟುಂಬಕ್ಕೆ ಸಹಾಯ ಮಾಡುವ ಕೋಟ್ಯಾಧಿಪತಿಗಳಿದ್ದಾರೆ. 

ಪ್ರತಿಯೊಂದು ಕಂಪನಿ (Company) ಬೆಳವಣಿಗೆಯಲ್ಲಿ ಸಿಬ್ಬಂದಿ ಪಾತ್ರ ದೊಡ್ಡದು. ಸಿಬ್ಬಂದಿ ಖುಷಿಯಾಗಿದ್ದರೆ ಕಂಪನಿ ಕೆಲಸ ಯಾವುದೇ ಒತ್ತಡವಿಲ್ಲದೆ ನಡೆಯುತ್ತದೆ. ಕಂಪನಿ ಲಾಭದ ಮೇಲೆ ಲಾಭ (profit) ಮಾಡುತ್ತದೆ. ಇದನ್ನು ಅಮೆರಿಕಾದ ಬಿಲಿಯನೇರ್ ಉದ್ಯಮಿಯೊಬ್ಬರು ಚೆನ್ನಾಗಿ ಅರಿತಂತಿದೆ. ಅವರು ತಮ್ಮ ಉದ್ಯೋಗಿಗಳಿಗೆ ಭರ್ಜರಿ ಉಡುಗೊರೆ ನೀಡುವ ಮೂಲಕ ಅವರನ್ನು ಸಂತೋಷಗೊಳಿಸುತ್ತಾರೆ. ಪ್ರತಿ ವರ್ಷ ತಮ್ಮ ಕಂಪನಿ ವಾರ್ಷಿಕೋತ್ಸವ, ಉದ್ಯೋಗಿಗಳ ಉಡುಗೊರೆ ಹೆಸರಿನಲ್ಲಿ  ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ.

ಬೆಂಗಳೂರಿನ ಸಂಸ್ಥೆಗೆ 225 ಕೋಟಿ ರೂ ದಾನ ಮಾಡಿದ ಸೇನಾಪತಿ, ಇವರ ಒಟ್ಟು ಆದಾಯವೆಷ್ಟು?

ಯಾರು ಈ ಕೋಟ್ಯಾಧಿಪತಿ (Billionaire) ? : ಈ ಕೋಟ್ಯಾಧಿಪತಿ ಹೆಸರು ಕೆನ್ನೆತ್ ಸಿ ಗ್ರಿಫಿನ್. ಬಹುರಾಷ್ಟ್ರೀಯ ಕಂಪನಿ ಸಿಟಾಡೆಲ್ ಎಲ್ ಎಲ್ ಸಿನ ಸಿಇಓ (CEO) ಮತ್ತು ಸಿಟಾಡೆಲ್ ಸೆಕ್ಯುರಿಟೀಸ್ ಸಂಸ್ಥಾಪಕ. ಕೆನ್ನೆತ್ ಸಿ ತನ್ನ ಸಾವಿರದ ಎರಡು ನೂರು ಸಿಬ್ಬಂದಿಯನ್ನು ಅವರ ಕುಟುಂಬ ಸಮೇತ ಪ್ರವಾಸಕ್ಕೆ ಕಳುಹಿಸಿದ್ದಾರೆ. ಹೌದು, ಕೆನ್ನೆತ್ ಸಿ ತಮ್ಮ 1200 ಸಿಬ್ಬಂದಿಯನ್ನು ಡಿಸ್ನಿಲ್ಯಾಂಡ್ ಟೋಕಿಯೋಗೆ ಪ್ರವಾಸಕ್ಕೆ ಕಳುಹಿಸಿದ್ದಾರೆ. ಸಿಟಾಡೆಲ್‌ನ 30 ನೇ ಮತ್ತು ಸಿಟಾಡೆಲ್ ಸೆಕ್ಯುರಿಟೀಸ್‌ನ 20 ನೇ ವಾರ್ಷಿಕೋತ್ಸವದ ಮೊದಲು ಸಿಬ್ಬಂದಿಗೆ ಕೆನ್ನೆತ್ ಈ ಉಡುಗೊರೆ ನೀಡಿದ್ದಾರೆ. 

ಜೀವನ ಪ್ರಮಾಣ ಪತ್ರ ಸಲ್ಲಿಕೆ ಸೇರಿದಂತೆ ಈ 4 ಹಣಕಾಸು ಕೆಲಸಗಳಿಗೆ ನವೆಂಬರ್ ತಿಂಗಳಲ್ಲಿ ಅಂತಿಮ ಗಡುವು

ಬಿಗ್ ಥಂಡರ್ ಮೌಂಟೇನ್, ಪೈರೇಟ್ಸ್ ಆಫ್ ದಿ ಕೆರಿಬಿಯನ್ ಮತ್ತು ಡಿಸ್ನಿ ವರ್ಲ್ಡ್‌ನಲ್ಲಿರುವ ಸ್ಪೇಸ್ ಮೌಂಟೇನ್ ಸೇರಿದಂತೆ ಪ್ರಮುಖ ಪ್ರದೇಶಗಳು ಮತ್ತು ಇತರ ವಿಶೇಷ ಸ್ಥಳಗಳನ್ನು ವೀಕ್ಷಣೆ ಮಾಡಲು ನೌಕರರು ಸಾಲಿನಲ್ಲಿ ಕಾಯುವುದನ್ನು ತಪ್ಪಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಗ್ರಿಫಿನ್ ತನ್ನ ಉದ್ಯೋಗಿಗಳಿಗೆ ಪಾಸ್‌ಗಳನ್ನು ನೀಡಿದ್ದಾರೆ.  ಜಪಾನೀಸ್ ಡಿಸ್ನಿಲ್ಯಾಂಡ್‌ನ ಒಂದು ದಿನದ ಪಾಸ್‌ನ ಬೆಲೆ  52.75 ಡಾಲರ್ ಅಂದ್ರೆ ಸುಮಾರು 4,392 ರೂಪಾಯಿಯಿಂದ 72.78 ಡಾಲರ್ ಅಂದ್ರೆ 6,059 ರೂಪಾಯಿವರೆಗೆ ಇರುತ್ತದೆ. ಗ್ರಿಫಿನ್  ಒಂದು ದಿನ ನಡೆಯುವ ಕಾರ್ಯಕ್ರಮಕ್ಕೆ  87,336 ಡಾಲರ್ ಅಂದ್ರೆ ಸುಮಾರು 72,71,966 ರೂಪಾಯಿ ಖರ್ಚು ಮಾಡುವ ಸಾಧ್ಯತೆಯಿದೆ. ಆದ್ರೆ ಇದರಲ್ಲಿ 1200 ವಯಸ್ಕರ ಪಾಸ್ ಸೇರಿಲ್ಲ. 

ಕಂಪನಿ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಗ್ರಿಫಿನ್ ನಿರ್ಧರಿಸಿದ್ದಾರೆ. ಅದಕ್ಕಾಗಿ ತಯಾರಿ ನಡೆದಿದೆ. ಗ್ರಿಫಿನ್ ಅವರು ಕ್ಯಾಲ್ವಿನ್ ಹ್ಯಾರಿಸ್ (ಸ್ಕಾಟಿಷ್ DJ) ಮತ್ತು ಮರೂನ್ 5 (ಪಾಪ್ ಬ್ಯಾಂಡ್) ಅವರನ್ನು ವಾರ್ಷಿಕೋತ್ಸವದ ಆಚರಣೆಗೆ ಆಹ್ವಾನಿಸಿದ್ದಾರೆ.   ವಾರ್ಷಿಕೋತ್ಸವದ ಕಾರ್ಯಕ್ರಮ, ಪ್ರಯಾಣ, ಹೋಟೆಲ್, ಆಹಾರ, ಪಾರ್ಕ್ ಟಿಕೆಟ್‌, ಮನರಂಜನೆ ಮತ್ತು ಮಕ್ಕಳ ಆರೈಕೆ ಸೇರಿದಂತೆ ಎಲ್ಲ ಖರ್ಚುಗಳನ್ನು ಕಂಪನಿ ಭರಿಸಲಿದೆ. 

ಹಿಂದಿನ ವರ್ಷ ಡಿಸೆಂಬರ್ ನಲ್ಲೂ ಗ್ರಿಫಿನ್ ಕಂಪನಿ ಇದೇ ರೀತಿ ಹಬ್ಬವನ್ನು ಆಚರಿಸಿತ್ತು. ಅಮೆರಿಕ ಮತ್ತು ಯುರೋಪ್‌ ನಲ್ಲಿರುವ ತನ್ನ ಸಹೋದ್ಯೋಗಿಗಳನ್ನು ಅವರ ಕುಟುಂಬಗಳೊಂದಿಗೆ ಫ್ಲೋರಿಡಾದ ಒರ್ಲ್ಯಾಂಡೊದಲ್ಲಿರುವ ಡಿಸ್ನಿ ವರ್ಲ್ಡ್‌ಗೆ ಗ್ರಿಫಿನ್ ಕರೆದೊಯ್ದಿದ್ದರು. 

Latest Videos
Follow Us:
Download App:
  • android
  • ios