ಕೆನರಾ ಹಾಗೂ ಆಕ್ಸಿಸ್‌ ಬ್ಯಾಂಕ್‌ನವರು ಆರ್‌ಬಿಐಗೆ (ರಿಸವ್‌ರ್‍ ಬ್ಯಾಂಕ್‌ ಆಫ್‌ ಇಂಡಿಯಾ) ಮಹಾ ಮೋಸ ಮಾಡಿದ್ದಾರೆ. ಅಷ್ಟಕ್ಕೂ ಏನದು ಮೋಸ? ಇಲ್ಲಿದೆ ವಿವರ.

ಬೆಂಗಳೂರು, [ಅ.23]: ಕೆನರಾ ಹಾಗೂ ಆಕ್ಸಿಸ್‌ ಬ್ಯಾಂಕ್‌ನವರು ಆರ್‌ಬಿಐಗೆ (ರಿಸವ್‌ರ್‍ ಬ್ಯಾಂಕ್‌ ಆಫ್‌ ಇಂಡಿಯಾ) ಜಮೆ ಮಾಡಿದ್ದ ಹಣದ ಪೈಕಿ .6.12 ಲಕ್ಷ ಮೌಲ್ಯದ ಖೋಟಾ ನೋಟು ಇರುವುದು ಕಂಡುಬಂದಿದೆ.

ಈ ಸಂಬಂಧ ಬೆಂಗಳೂರಿನ ಆರ್‌ಬಿಐ ಅಧಿಕಾರಿಗಳು ಹಲಸೂರು ಗೇಟ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೆನರಾ ಬ್ಯಾಂಕ್‌ ಜ.1ರಿಂದ ಮಾರ್ಚ್ 31ರ ಅವಧಿಯಲ್ಲಿ ಆರ್‌ಬಿಐಗೆ ಹಣ ಜಮೆ ಮಾಡಿದ್ದರು. ಅದೇ ಹಣದಲ್ಲೇ 5.93 ಲಕ್ಷ ರು. ಮೌಲ್ಯದ ಖೋಟು ನೋಟು ಪತ್ತೆಯಾಗಿದೆ. 

100 ಮುಖಬೆಲೆಯ 39, 500 ಮುಖಬೆಲೆಯ 533, ಸಾವಿರ ಮುಖಬೆಲೆಯ 323 ಖೋಟು ನೋಟುಗಳು ದೊರಕಿವೆ. ಪ್ರತಿ ನೋಟುಗಳನ್ನು ಪರಿಶೀಲಿಸಿ ಪಡೆದುಕೊಳ್ಳುವುದು ಬ್ಯಾಂಕ್‌ನವರ ಜವಾಬ್ದಾರಿ. 

ಆದರೆ ಬ್ಯಾಂಕ್‌ನವರು ನಿರ್ಲಕ್ಷ್ಯವಹಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇನ್ನು ಆಕ್ಸಿಸ್‌ ಬ್ಯಾಂಕ್‌ ಹಾಗೂ 6 ಕರೆನ್ಸಿ ಚಸ್ಟ್‌ನವರು ಜಮೆ ಮಾಡಿದ್ದ ಹಣದಲ್ಲೇ ಖೋಟಾ ನೋಟು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.