ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೊಂದು ಗರಿ/  ಮಾರ್ಚ್ 25 ರಿಂದ ಎರಡೂ ರನ್‌ವೇ ಬಳಕೆಗೆ  ಮುಕ್ತ/ ಮತ್ತಷ್ಟು ಸರಳ/  ಒತ್ತಡ ಕಡಿಮೆಯಾಗಲಿದೆ

ಬೆಂಗಳೂರು( ಮಾ 23) ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೊಂದು ಗರಿ ಸಿಗಲಿದೆ. ದಕ್ಷಿಣ ಭಾರತದಲ್ಲೇ ಎರಡು ರನ್‌ವೇಗಳಿರುವ ಮೊದಲ ವಿಮಾನ ನಿಲ್ದಾಣ ಎನ್ನುವ ಖ್ಯಾತಿಗೆ ನಿಲ್ದಾಣ ಪಾತ್ರವಾಗಲಿದೆ. ಮಾರ್ಚ್ 25 ರಿಂದ ಎರಡೂ ರನ್‌ವೇ ಬಳಕೆಗೆ ಲಭ್ಯವಾಗಲಿದೆ. 

ಕಾಮಗಾರಿ ಪ್ರಗತಿಯಲ್ಲಿದ್ದು ಎಲ್ಲವೂ ಅಂತಿಮ ಹಂತಕ್ಕೆ ಬಂದಿದೆ. ಹೊಸ ರೂಟ್ ಗಳನ್ನು ಪರಿಚಯಿಸಲಾಗುವುದು ಎಂದು ವಿಮಾನ ನಿಲ್ದಾಣ ಹೇಳಿದೆ. ಸುರಕ್ಷತಾ ಕ್ರಮಗಳಿಗೆ ಒಪ್ಪಿಗೆ ಸಿಗುವುದು ಬಾಕಿ ಇದೆ.

ವಿಮಾನ ನಿಲ್ದಾಣಕ್ಕೆ ಮೆಜೆಸ್ಟಿಕ್ ನಿಂದ ರೈಲು..ಲಾಭಗಳು ಹಲವಾರು

ದಕ್ಷಿಣ ಭಾರತದ ಮಟ್ಟಿಗೆ ದೇವನಹಳ್ಳಿ ವಿಮಾನ ನಿಲ್ದಾಣ ಸುರಕ್ಷಿತ ಮತ್ತು ಭದ್ರ ಎಂಬುದನ್ನು ಈಗಾಗಲೇ ಸಾಬೀತು ಮಾಡಿದೆ.ಒಟ್ಟಿನಲ್ಲಿ ವಿಮಾನ ಪ್ರಯಾಣ ಮತ್ತಷ್ಟು ಸಲೀಸಾಗಲಿದ್ದು ಒತ್ತಡ ಕಡಿಮೆಯಾಗಲಿದೆ. 

ವಿಮಾನ ನಿಲ್ದಾಣ ಪ್ರದೇಶದಲ್ಲಿ ಹವಾಮಾನ ಸ್ಥಿತಿ ಅಧ್ಯಯನ ನಡೆಸಲು ಜವಾಹರ್‌ಲಾಲ್‌ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ ಜತೆಗೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ 2019ರಲ್ಲಿ ಒಪ್ಪಂದ ಮಾಡಿಕೊಂಡಿತ್ತು.