ವಿಶ್ವದ ಮೂರನೇ ಅತೀ ಹೆಚ್ಚು ಬಿಲೇನಿಯರ್ ಹೊಂದಿದ ದೇಶ ಭಾರತ 3ನೇ ಸ್ಥಾನದಲ್ಲಿರುವ ಬೆಂಗಳೂರಿನಲ್ಲಿ ಶ್ರೀಮಂತರು ತುಂಬಿದ್ದಾರೆ  ಭಾರತದ ಯಾವ ನಗರದಲ್ಲಿ ಅತೀ ಹೆ್ಚ್ಚು ಶ್ರೀಮಂತರಿದ್ದಾರೆ?

ಬೆಂಗಳೂರು(ಮಾ.02): ಕೊರೋನಾ ವೈರಸ್(Coronavirus) ಹೊಡೆತ, ಲಾಕ್‌ಡೌನ್ ಸಂಕಷ್ಟ ಸೇರಿ ಹಲವು ಕಾರಣಗಳಿಂದ ವಿಶ್ವದಲ್ಲೇ ಆದಾಯ ಕೊರತೆ,ಆರ್ಥಿಕ ಹಿಂಜರಿತಗಳು ಸಂಭವಿಸಿದೆ. ಬಡವರು ಮತ್ತಷ್ಟು ಬಡವರಾಗಿದ್ದಾರೆ. ಆದರೆ ಈ ಕೋವಿಡ್ ಅವಧಿಯಲ್ಲಿ ಭಾರತದಲ್ಲಿ ಶ್ರೀಮಂತರ(Rich) ಆದಾಯಕ್ಕೇನು ಕೊರತೆಯಾಗಿಲ್ಲ. ಕಾರಣ ಇತ್ತೀಚೆಗೆ ಬಿಡುಗಡೆಯಾದ ನೈಟ್ ಫ್ರಾಂಕ್ ವೆಲ್ತ್ ವರದಿಯಲ್ಲಿ ಅತೀ ಹೆಚ್ಚು ಬಿಲೇನಿಯರ್ ಹೊಂದಿದ ರಾಷ್ಟ್ರಗಳ ಪೈಕಿ ಭಾರತ(India) ಮೂರನೇ ಸ್ಥಾನದಲ್ಲಿದೆ. ಇಷ್ಟೇ ಅಲ್ಲ ಬೆಂಗಳೂರು(Bengaluru) ದೇಶದಲ್ಲಿ 3ನೇ ಅತೀ ಹೆಚ್ಚು ಶ್ರೀಮಂತರನ್ನು ಹೊಂದಿದ ನಗರವಾಗಿ ಹೊರಹೊಮ್ಮಿದೆ.

ಭಾರತದಲ್ಲಿ 2020-21ರ ಸಾಲಿನಲ್ಲಿ ಭಾರತದಲ್ಲಿ ಬಿಲೇನಿಯರ್‌ಗಳ ಸಂಖ್ಯೆಯಲ್ಲಿ ಶೇಕಡಾ 24 ರಷ್ಟು ಏರಿಕೆಯಾಗಿದೆ. ಇಷ್ಟೇ ಅಲ್ಲ ಅತೀ ಹೆಚ್ಚು ಅಲ್ಟ್ರಾ ರಿಚ್(ಅತ್ಯಂತ ಶ್ರೀಮಂತ)ಹೊಂದಿದವರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಅಲ್ಟ್ರಾ ರಿಚ್(ಶ್ರೀಮಂತರ) ಆದಾಯ ಹೊಂದಿರುವ ಸಂಖ್ಯೆ 352. ಇನ್ನು ಮೊದಲ ಸ್ಥಾನವನ್ನು ಮುಂಬೈ ಪಡೆದುಕೊಂಡಿದೆ. ಮುಂಬೈನಲ್ಲಿ 467 ಮಂದಿ ಅತ್ಯಂತ ಶ್ರೀಮಂತರನ್ನು ಹೊಂದಿದೆ.

30 ಮಿಲಿಯನ್ ಅಮೆರಿಕನ್ ಡಾಲರ್ ಆದಾಯ ಹೊಂದಿದವರನ್ನು ಅಲ್ಟ್ರಾ ರಿಚ್(ಅತ್ಯಂತ ಶ್ರೀಮಂತ) ಎಂದು ವಿಂಗಡಿಸಿದರೆ, ಇನ್ನು 1 ಮಿಲಿಯನ್ ಅಮರಿಕನ್ ಡಾಲರ್ ಆದಾಯ ಹೊಂದಿದವರನ್ನು ಶ್ರೀಮಂತ ಎಂದು ವಿಂಗಡಿಸಲಾಗಿದೆ. 

World Richest ಎಲಾನ್ ಮಸ್ಕ್ ಹಿಂದಿಕ್ಕಿ ವಿಶ್ವದ ಶ್ರೀಮಂತನಾದ ಯೂಟ್ಯೂಬರ್, ಆದರೆ 7 ನಿಮಿಷ ಮಾತ್ರ!

ಭಾರತದಲ್ಲಿ ಅತೀ ಹೆಚ್ಚು ಅತ್ಯಂತ ಶ್ರೀಮಂತರ ಹೊಂದಿದ ನಗರ ಹಾಗೂ ಸಂಖ್ಯೆ
ಮುಂಬೈ: 467
ಹೈದರಾಬಾದ್: 410
ಬೆಂಗಳೂರು: 352
ದೆಹಲಿ: 315
ಚೆನ್ನೈ: 264

ಫೇಸ್‌ಬುಕ್‌ ಒಡೆಯನಿಗಿಂತ ಈಗ ಅದಾನಿ, ಅಂಬಾನಿ ಶ್ರೀಮಂತರು
ಜಗತ್ತಿನ ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಬಳಕೆದಾರರ ಸಂಖ್ಯೆ ತಗ್ಗಿದ ಹಿನ್ನೆಲೆಯಲ್ಲಿ ಅದರ ಮಾತೃಸಂಸ್ಥೆ ಮೆಟಾ ಕಂಪನಿಯ ಷೇರುಗಳು ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿವೆ. ಇದರ ಪರಿಣಾಮವಾಗಿ ಆ ಕಂಪನಿಯ ಒಡೆಯ ಮಾರ್ಕ್ ಜುಕರ್‌ಬರ್ಗ್‌ ಸಂಪತ್ತಿನ ಮೌಲ್ಯವೂ ಇಳಿಕೆಯಾಗಿದೆ. ಸಿರಿವಂತಿಕೆಯಲ್ಲಿ ಭಾರತದ ಉದ್ಯಮಿಗಳಾದ ಮುಕೇಶ್‌ ಅಂಬಾನಿ ಹಾಗೂ ಗೌತಮ್‌ ಅದಾನಿ ಅವರಿಗಿಂತಲೂ ಈಗ ಜುಕರ್‌ಬರ್ಗ್‌ ಹಿಂದೆ ಬಿದ್ದಿದ್ದಾರೆ.

ಕೊರೋನಾ ಕಾಲದಲ್ಲಿ 10 ಪಟ್ಟು ಹೆಚ್ಚಾಯ್ತು ಅದಾನಿ ಆಸ್ತಿ, ಎಲಾನ್ ಮಸ್ಕ್‌ಗೇ ಟಕ್ಕರ್!

ಮೆಟಾ ಕಂಪನಿಯ ಷೇರುಗಳು ಒಂದೇ ದಿನ ಶೇ.26ರಷ್ಟುಕುಸಿತ ಕಂಡಿದ್ದರಿಂದ ಷೇರು ಮೌಲ್ಯ 15 ಲಕ್ಷ ಕೋಟಿ ರು.ನಷ್ಟುಇಳಿಕೆಯಾಗಿದೆ. ಮೆಟಾ ಕಂಪನಿಯಲ್ಲಿ ಜುಕರ್‌ಬರ್ಗ್‌ ಶೇ.12.8ರಷ್ಟುಪಾಲು ಹೊಂದಿದ್ದಾರೆ. ಷೇರು ಬೆಲೆ ಕುಸಿತದಿಂದ ಅವರ ಸಂಪತ್ತು ಒಂದೇ ದಿನದಲ್ಲಿ 2 ಲಕ್ಷ ಕೋಟಿ ರು.ನಷ್ಟುಕರಗಿದೆ. ಇದರಿಂದಾಗಿ ಫೋಬ್ಸ್‌ರ್‍ ಕಂಪನಿಯ ಕ್ಷಣಕ್ಷಣದ ಶ್ರೀಮಂತರ ಪಟ್ಟಿಯಲ್ಲಿ ಜುಕರ್‌ಬರ್ಗ್‌ 12ನೇ ಸ್ಥಾನಕ್ಕೆ ಜಾರಿದ್ದಾರೆ. ಅದಾನಿ ಸಮೂಹದ ಗೌತಮ್‌ ಅದಾನಿ ಅವರು 10ನೇ ಸ್ಥಾನಕ್ಕೆ ಜಿಗಿದಿದ್ದರೆ, ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಕೇಶ್‌ ಅಂಬಾನಿ ಅವರು 11 ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.

ಟಾಪ್‌ 5 ಶ್ರೀಮಂತ ಉದ್ಯಮಿಗಳು ಹಾಗೂ ಮೌಲ್ಯ
ಗೌತಂ ಅದಾನಿ 6.6 ಲಕ್ಷ ಕೋಟಿ
ಮುಕೇಶ್‌ ಅಂಬಾನಿ 6.5 ಲಕ್ಷ ಕೋಟಿ
ಅಜೀಂ ಪ್ರೇಮ್‌ ಜೀ 56,000 ಕೋಟಿ
ಶಿವ ನಾಡರ್‌ 26,000 ಕೋಟಿ

ವಿಶ್ವದ ಶ್ರೀಮಂತ ಉದ್ಯಮಿಗಳು
ಶ್ರೀಮಂತ ಪಟ್ಟಿಆಸ್ತಿ ಮೌಲ್ಯ
ಎಲಾನ್‌ ಮಸ್ಕ್‌ 17.5 ಲಕ್ಷ ಕೋಟಿ ರು.
ಜೆಫ್‌ ಬಿಜೋಸ್‌ 13.6 ಲಕ್ಷ ಕೋಟಿ ರು.
ಬರ್ನಾರ್ಡ್‌ ಅರ್ನಾಲ್ಟ್‌ 12.5 ಲಕ್ಷ ಕೋಟಿ ರು.
ಬಿಲ್‌ ಗೇಟ್ಸ್‌ 9.6 ಲಕ್ಷ ಕೋಟಿ ರು.
ಲ್ಯಾರಿ ಪೇಜ್‌ 9.2 ಲಕ್ಷ ಕೋಟಿ ರು.