Asianet Suvarna News Asianet Suvarna News

ಬಾಳೆಹಣ್ಣಿನ ಬೆಲೆ ದಿಢೀರನೇ ದುಪ್ಪಟ್ಟು: ಶ್ರಾವಣ ಮಾಸದಲ್ಲಿ 100 ರೂ. ಗಡಿ ದಾಟಿದ ಏಲಕ್ಕಿಬಾಳೆ

ರಾಜ್ಯದಲ್ಲಿ ಕಳೆದ ಎರಡು ತಿಂಗಳಿಂದ ದುಬಾರಿ ಬೆಲೆಗೆ ಮಾರಾಟವಾಗುತ್ತಿದ್ದ ಟೊಮೆಟೊ ಈಗ ಇಳಿಕೆಯಾಗಿದ್ದು, ಈಗ ಬಾಳೆಹಣ್ಣಿನ ದರದಲ್ಲಿ ದುಪ್ಪಟ್ಟು (100 ರೂ.ಕೆಜಿ.) ಮಾರಾಟ ಆಗುತ್ತಿದೆ.

Bengaluru Banana price doubles suddenly Cardamom Banana Rs 100 rate in Shravana month sat
Author
First Published Aug 16, 2023, 8:18 PM IST | Last Updated Aug 16, 2023, 8:19 PM IST

ಬೆಂಗಳೂರು (ಆ.16): ರಾಜ್ಯದಲ್ಲಿ ಕಳೆದ ಎರಡು ತಿಂಗಳಿಂದ ದುಬಾರಿ ಬೆಲೆಯಲ್ಲಿ (ಪ್ರತಿ ಕೆ.ಜಿ ಟೊಮೆಟೊಗೆ 100 ರೂ.ಗಿಂತ ಅಧಿಕ) ಮಾರಾಟವಾಗುತ್ತಿದ್ದ ಟೊಮೆಟೊ ಬೆಲೆ ಈಗ ಇಳಿಕೆಯಾಗಿದೆ. ಆದರೆ, ಈಗ ಬಾಳೆಹಣ್ಣಿನ ಬೆಲೆ 60 ರೂ.ಗಳಿಂದ ದುಪ್ಪಟ್ಟಾಗಿದ್ದು, 120 ರೂ.ಗೆ ಏರಿಕೆಯಾಗಿದೆ.

ಹೌದು, ಇಷ್ಟು ದಿನ ಇಡೀ ದೇಶಾದ್ಯಂತ ಟೊಮೆಟೋ ಬೆಲೆಯಲ್ಲಿ ಭಾರಿ ಪ್ರಮಾಣದ ಏರಿಕೆ ಆಗಿತ್ತು. ಈಗ ಟೊಮೆಟೊ ಬೆಲೆಯಲ್ಲಿ ಇಳಿಕೆ ಕಾಣುತ್ತಿದೆ. ಆದರೆ, ಈಗ ಈರುಳ್ಳಿ ದರದಲ್ಲಿ ಹೆಚ್ಚಳವಾಗುತ್ತಿದೆ. ಅದರ ಜೊತೆಗೂ ಬಾಳೆಹಣ್ಣು ಬೆಲೆಯಲ್ಲಿ ದಿಢೀರನೆ ದುಪ್ಪಟ್ಟು ಬೆಲೆ ಏರಿಕೆ ಆಗಿದೆ, ಕಳೆದ ವಾರವಷ್ಟೇ ಕೇವಲ 60 ರೂ.ಗೆ ಕೆ.ಜಿ. ಮಾರಾಟವಾಗುತ್ತಿದ್ದ ಏಲಕ್ಕಿ ಬಾಳೆಹಣ್ಣು ಈಗ 100 ರೂ.ನಿಂದ 120 ರೂ.ಗೆ ಮಾರಾಟ ಆಗುತ್ತಿದೆ. ಇದರಿಂದ ಗ್ರಾಹಕರ ಜೇಬಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ಉಂಟಾಗುತ್ತಿದೆ. ಇನ್ನು ಶ್ರಾವಣ ಮಾಸದ ಅವಧಿಯಲ್ಲಿ ಬಾಳೆಹಣ್ಣಿನ ಬೆಲೆ ಇಳಿಕೆ ಆಗುವುದಿಲ್ಲ ಎಂಬ ಸೂಚನೆಯೂ ಸಿಕ್ಕಿದೆ.

ದಲಿತ ವಿರೋಧಿ ಹೇಳಿಕೆ: ನಟ ಉಪೇಂದ್ರ ವಿರುದ್ಧ ಎಫ್‌ಐಆರ್‌: ಸಚಿವ ಮಲ್ಲಿಕಾರ್ಜುನ ವಿರುದ್ಧ ಕೇವಲ ಎನ್‌ಸಿಆರ್

ಮುಂಗಾರು ಮಳೆ ಕೊರತೆಯಿಂದ ಇಳುವರಿ ಕಡಿಮೆ:  ರಾಜ್ಯದಲ್ಲಿ ಅಧಿಕ ಮಾಸ ಮುಗಿದು ಶ್ರಾವಣ ಶುರುವಾಗ್ತಿದ್ದಂತೆ ಬಾಳೆಹಣ್ಣಿನ ದರ ಗಗನಕ್ಕೇರಿದೆ. ಅದಕ್ಕೂ ಮುಖ್ಯವಾಗಿ ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಬಾಳೆಹಣ್ಣಿನ ಇಳುವರಿ ತುಂಬಾ ಕಡಿಮೆ ಆಗಿದೆ. ಆದ್ದರಿಂದ, ಏಕಾಏಕಿ ಏಲಕ್ಕಿ ಬಾಳೆಹಣ್ಣಿನ ದರ ಕೆಜಿಗೆ 100ರಿಂದ 120ರೂ. ಏರಿಕೆಯಾಗಿದೆ. ಹೀಗಾಗಿ, ನಗರಕ್ಕೆ ತಮಿಳುನಾಡು, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಕಡೆಯಿಂದ ಬಾಳೆಹಣ್ಣುಗಳನ್ನು ಬೆಂಗಳೂರು ಸೇರಿ ರಾಜ್ಯಾದ್ಯಂತ ಮಾರುಕಟ್ಟೆಗೆ ಆಮದು ಮಾಡಿಕೊಳ್ಳಲಾಗುತ್ತಿದೆ. ಕಳೆದ ಒಂದು ವಾರದಿಂದ ಬೇಡಿಕೆಗೆ ತಕ್ಕಷ್ಟು ಬಾಳೆಹಣ್ಣು ಪೂರೈಕೆಯಾಗುತ್ತಿತ್ತು. ಆದರೆ, ಈಗ ಬಾಳೆಹಣ್ಣಿನ ಪೂರೈಕೆ ಕೊರತೆ ಆಗಿರುವ ಹಿನ್ನೆಲೆಯಲ್ಲಿ ಏಕಾಏಕಿ ಹಣ್ಣಿನ ದರ ಶತಕ ದಾಟಿದೆ. 

ಒಂದು ತಿಂಗಳು ಕಡಿಮೆಯಾಗೊಲ್ಲ: ಇನ್ನು ರಾಜ್ಯದಲ್ಲಿ ಈಗತಾನೇ ಶ್ರಾವಣ ಮಾಸ ಆರಂಭವಾಗಿದ್ದು, ಪ್ರತಿ ಸೋಮವಾರ, ಶನವಾರ, ಮಂಗಳವಾರ ಮತ್ತು ಶುಕ್ರವಾಗ ವಿವಿಧ ದೇವರ ಆರಾಧನೆಗಳನ್ನು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಳೆಹಣ್ಣಿಗೂ ಭಾರಿ ಬೇಡಿಕೆ ಉಂಟಾಗಲಿದೆ. ಮತ್ತೊಂದೆಡೆ ಸಾಲು ಸಾಲು ಹಬ್ಬಗಳು ಕೂಡ ಬರುವ ಹಿನ್ನಲೆಯಲ್ಲಿ ಬಾಳೆಹಣ್ಣಿನ ದರ ಮತ್ತಷ್ಟ ಏರಿಕೆಯಾಗುವ ಸಾಧ್ಯತೆ ಇದೆಯೇ ಹೊರತು, ಇಳಿಕೆ ಆಗುವ ಮುನ್ಸೂಚನೆ ಕಂಡುಬರುತ್ತಿಲ್ಲ. ಹೀಗಾಗಿ, ದುಬಾರಿ ದರದ ಹಿನ್ನೆಲೆಯಲಗಲಿ ವ್ಯಾಪಾರಿಗಳು ವ್ಯಾಪಾರವಿಲ್ಲದೆ ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಮಶಾನದಲ್ಲಿ ಪಿಶಾಚಿ ಕುಣಿದಂತಾಗ್ತಿದೆ: ಕಾಂಗ್ರೆಸ್‌ ಸರ್ಕಾರದ ಬಗ್ಗೆ ಭವಿಷ್ಯ ನುಡಿದ ಕೋಡಿಶ್ರೀ

ಮಧ್ಯವರ್ತಿಗಳು, ವ್ಯಾಪಾರಿಗಳೇ ಕಾರಣ? ಕೊಡಗು, ಮೈಸೂರು, ಹಾಸನ ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಾಕಷ್ಟು ಮಂದಿ ಬಾಳೆ ಬೆಳೆಯುತ್ತಿದ್ದಾರೆ. ಆದರೆ ರೈತರು ನೇರವಾಗಿ ಮಾರುಕಟ್ಟೆಗೆ ಹಣ್ಣುಗಳನ್ನು ಪೂರೈಸಲು ಆಗುತ್ತಿಲ್ಲ. ಆದರೆ, ಶ್ರಾವಣ ಮಾಸದಲ್ಲಿ ಜನರು ಎಷ್ಟೇ ದುಬಾರಿ ಇದ್ದರೂ ಬಾಳೆಹಣ್ಣು ಖರೀದಿ ಮಾಡುತ್ತಾರೆಂಬ ದೃಷ್ಟಿಯಿಂದ ವ್ಯಾಪಾರಿಗಳೇ ಬೆಲೆ ಏರಿಕೆ ಮಾಡಿದ್ದಾರೆ ಎಂದು ರೈತರು ಹೇಳಿದ್ದಾರೆ. ರೈತರು ಬೆಳೆದ ಬಾಳೆಹಣ್ಣನ್ನು ನಗರಕ್ಕೆ ಸಾಗಣೆ ಮಾಡಲು ಕಷ್ಟವಾಗುತ್ತದೆ. ಆದ್ದರಿಂದದ ಸಾಗಣೆದಾರರಿಗೆ ಪ್ರತಿ ಕೆ.ಜಿ. ಬಾಳೆಹಣ್ಣಿಗೆ 25 ರೂಪಾಯಿಗೆ ನೀಡುತ್ತೇವೆ. ಇಲ್ಲಿಂದ ತೆಗೆದುಕೊಂಡು ಹೋದ ಬಾಳೆಹಣ್ಣನ್ನು ದುಬಾರಿ ಬೆಲೆಗೆ ಮಾರುತ್ತಿದ್ದಾರೆ. ಕಷ್ಟಪಟ್ಟು ಹಣ್ಣು ಬೆಳೆದ ರೈತನಿಗೆ ಶೇ.30 ಲಾಭವೂ ಸಿಗುವುದಿಲ್ಲ. 

Latest Videos
Follow Us:
Download App:
  • android
  • ios