ನವದೆಹಲಿ[ಜ.04]: ಒಂದು ವೇಳೆ ನೀವು ಉದ್ಯೋಗಿಗಳಾಗಿದ್ದು, ಬ್ಯಾಂಕ್ ಕೆಲಸ ಕಾರ್ಯಗಳನ್ನು ಶನಿವಾರಕ್ಕೆಂದೇ ಮೀಸಲಿಡುತ್ತೀರೆಂದಾದರೆ, ಕೆಲಸ ಮುಗಿಸಲು ನಿಮ್ಮ ಬಳಿ ಕೇವಲ ಈ ಶನಿವಾರ[5ಜನವರಿ]ಯಷ್ಟೇ ಉಳಿದುಕೊಂಡಿದೆ. ಯಾಕೆಂದರೆ ಮುಂದಿನ ಶನಿವಾರದಿಂದ 3 ದಿನಗಳವರೆಗೆ ಬ್ಯಾಂಕ್ ಗಳು ತೆರೆಯುವುದಿಲ್ಲ.

ಯಾವೆಲ್ಲ ದಿನ ಬ್ಯಾಂಕ್ ಗಳು ಬಂದ್?

ಮುಂದಿನ ವಾರ ಬ್ಯಾಂಕ್ ಗಳಿಗೆ ದಿನಾಂಕ 12 ರಿಂದ 14 ಜನವರಿವರೆಗೆ ರಜೆ ಇದೆ. 12 ಜನವರಿ ಎರಡನೇ ಶಬನಿವಾರ ಆಗಿದ್ದರೆ, 13 ಜನವರಿಯಂದು ಭಾನುವಾರದ ರಜೆ ಇದೆ. ಇನ್ನು ಜನವರಿ 14[ಸೋಮವಾರ] ಮಕರ ಸಂಕ್ರಾಂತಿ/ಪೊಂಗಲ್ ಆಗಿರುವುದರಿಂದ ಬ್ಯಾಂಕ್ ಗಳಿಗೆ ರಜೆ ಇರಲಿದೆ.

ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡರೆ ನೀವು ಕ್ಯಾಷ್ ಸಮಸ್ಯೆಯಿಂದ ಪಾರಾಗಬಹುದಾಗಿದೆ.