ಈ ಭಾನುವಾರ ಬ್ಯಾಂಕಿಗೆ ರಜೆಯಿಲ್ಲ; ಈ ದಿನ ಗ್ರಾಹಕರು ಯಾವೆಲ್ಲ ವಹಿವಾಟು ನಡೆಸಬಹುದು? ಇಲ್ಲಿದೆ ಮಾಹಿತಿ

2023-24ನೇ ಹಣಕಾಸು ಸಾಲಿನ ಕೊನೆಯ ದಿನವಾದ ಮಾ.31ರಂದು ಬ್ಯಾಂಕ್ ತೆರೆದಿರಲಿದೆ. ಈ ದಿನ ಗ್ರಾಹಕರು ಯಾವೆಲ್ಲ ವಹಿವಾಟುಗಳನ್ನು ನಡೆಸಬಹುದು? 

Banks To Remain Open This Weekend List Of Transactions You Can Do On March 30 31 anu

ನವದೆಹಲಿ (ಮಾ.27): 2023-24ನೇ ಹಣಕಾಸು ಸಾಲು ಮಾ.31ಕ್ಕೆ ಅಂತ್ಯವಾಗಲಿದೆ. ಈ ಬಾರಿ ಈ ದಿನ ಭಾನುವಾರ ಬಂದಿದ್ದರೂ ದೇಶಾದ್ಯಂತ ಎಲ್ಲ ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ ಎಂದು ಆರ್ ಬಿಐ ಈಗಾಗಲೇ ಮಾಹಿತಿ ನೀಡಿದೆ. ಮಾ.31 ದೇಶಾದ್ಯಂತ ವಾರ್ಷಿಕ ಲೆಕ್ಕಪತ್ರಗಳ ಕ್ಲೋಸಿಂಗ್‌ ದಿನವಾಗಿರುವ ಕಾರಣ ಆರ್ ಬಿಐ ಈ ನಿರ್ಧಾರ ಕೈಗೊಂಡಿದೆ. ಸರ್ಕಾರಕ್ಕೆ ಕೂಡ ಇದು 2023–2024ನೇ ಹಣಕಾಸು ಸಾಲಿನ ಕೊನೆಯ ದಿನವಾಗಿದೆ. ಹೀಗಾಗಿ ಸರ್ಕಾರದ ಪಾವತಿಗಳು ಹಾಗೂ ಸ್ವೀಕೃತಿಗಳ ಸ್ವೀಕಾರಕ್ಕೆ ಈ ದಿನ ಬ್ಯಾಂಕುಗಳು ಕಾರ್ಯನಿರ್ವಹಿಸುವಂತೆ ಆರ್ ಬಿಐ ಸೂಚಿಸಿದೆ. ಇದರೊಂದಿಗೆ ತೆರಿಗೆದಾರರಿಗೆ ಸೂಕ್ತ ನೆರವು ನೀಡುವ ಉದ್ದೇಶದಿಂದ ಸರ್ಕಾರದ ವಹಿವಾಟುಗಳನ್ನು ನಿರ್ವಹಿಸುವ ಆರ್ ಬಿಐ ಕಚೇರಿಗಳು ಹಾಗೂ ಸರ್ಕಾರದ ಬ್ಯಾಂಕಿಂಗ್ ವಹಿವಾಟುಗಳನ್ನು ನಿರ್ವಹಿಸುವ ಎಲ್ಲ ಆಯ್ದ ಏಜೆನ್ಸಿ ಬ್ಯಾಂಕುಗಳ ಶಾಖೆಗಳು ಮಾ.30 ಹಾಗೂ ಮಾ.31ರಂದು ದೈನಂದಿನ ವ್ಯವಹಾರದ ಸಮಯದಲ್ಲಿ ತೆರೆದಿರಲಿವೆ. 

ಆರ್ ಬಿಐ ಪತ್ರಿಕಾ ಪ್ರಕಟಣೆ ಪ್ರಕಾರ ಎಲೆಕ್ಟ್ರಾನಿಕ್ ವಹಿವಾಟುಗಳನ್ನು ಈ ಎರಡೂ ದಿನ ನಿಗದಿತ ಸಮಯದ ತನಕ ನಡೆಸಬಹುದು. ಹಾಗಾದ್ರೆ ಮಾ.30 ಹಾಗೂ 31ರಂದು ಯಾವೆಲ್ಲ ಹಣಕಾಸು ವಹಿವಾಟುಗಳು ಲಭ್ಯವಿವೆ? ಇಲ್ಲಿದೆ ಮಾಹಿತಿ.
ನಿಫ್ಟ್, ಆರ್ ಟಿಜಿಎಸ್: ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ ಫರ್ (NEFT) ಹಾಗೂ ರಿಯಲ್ ಟೈಮ್ ಗ್ರಾಸ್ ಸೆಟ್ಲಮೆಂಟ್ (RTGS) ವ್ಯವಸ್ಥೆಗಳನ್ನು ಬಳಸಿಕೊಂಡು 2024ರ ಮಾ.31ರಂದು ನಡೆಸಿದ ವಹಿವಾಟುಗಳು ಆ ದಿನ ಮಧ್ಯರಾತ್ರಿ ತನಕ ಮುಂದುವರಿಯಲಿವೆ. 

ಬ್ಯಾಂಕಿನಿಂದ ಸಾಲ ಪಡೆಯುತ್ತಿದ್ದೀರಾ? ಹಾಗಾದ್ರೆ ಈ ಎಲ್ಲ ಶುಲ್ಕಗಳ ಬಗ್ಗೆ ಮಾಹಿತಿ ಇರಲಿ

ಚೆಕ್ ಕ್ಲಿಯರಿಂಗ್: ಸರ್ಕಾರಿ ಖಾತೆಗಳಿಗೆ ಸಂಬಂಧಿಸಿದ ಯಾವುದೇ ಚೆಕ್ ಗಳು ಇದ್ದಾರೆ ಅದನ್ನು ಕ್ಲಿಯರಿಂಗ್ ಗೆ ಕೊಡಬಹುದು. 

ಈ ಕೆಳಗಿನ ಸರ್ಕಾರಿ ವಹಿವಾಟುಗಳು: ಇನ್ನು ಮಾ.31ರಂದು ಈ ಕೆಳಗಿನ ಸರ್ಕಾರಿ ವಹಿವಾಟುಗಳನ್ನು ಬ್ಯಾಂಕುಗಳಲ್ಲಿ ನಡೆಸಬಹುದು. 
*ಕೇಂದ್ರ ಅಥವಾ ರಾಜ್ಯ ಸರ್ಕಾರ ಸ್ವೀಕರಿಸಿದ ಅಥವಾ ವ್ಯಯಿಸಿದ ಹಣ.
*ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಂದ ಪಿಂಚಣಿಗಳ ಪಾವತಿ.
*ವಿಶೇಷ ಠೇವಣಿ ಯೋಜನೆ (ಎಸ್ ಡಿಎಸ್) 1975.
*ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಫ್) ಯೋಜನೆ,  1968.
*ಕಿಸಾನ್ ವಿಕಾಸ್ ಪತ್ರ, 2014 ಹಾಗೂ ಸುಕನ್ಯಾ ಸಮೃದ್ಧಿ ಖಾತೆ
*ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS),2004

ಸೇವಾ ಶುಲ್ಕ ಹೆಸರಿನಲ್ಲಿ ಗ್ರಾಹಕರ ಜೇಬಿಗೆ ಬರೆ, ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿ ಆದಾಯ; ಯಾವ ಸೇವೆಗೆ ಎಷ್ಟು ಶುಲ್ಕ?

ಏಜೆನ್ಸಿ ಕಮೀಷನ್ ಪಡೆಯಲು ಅರ್ಹವಾಗಿರುವ ರಿಸರ್ವ್ ಬ್ಯಾಂಕ್ ನಿರ್ದೇಶಿಸಿರುವ ಯಾವುದೇ ಇತರ ಕೆಲಸ. ರಿಲೀಫ್ ಬಾಂಡ್ಸ್ ಅಥವಾ ಸೇವಿಂಗ್ ಬಾಂಡ್ಸ್ ವಹಿವಾಟುಗಳು ಇತ್ಯಾದಿ. ಇನ್ನು ಏಜೆನ್ಸಿ ಬ್ಆಂಕುಗಳ ಆಯ್ದ ಶಾಖೆಗಳು ಮಾತ್ರ ಮಾ.31ರಂದು ತೆರೆದಿರಲಿವೆ. ಇನ್ನು ಕೇಂದ್ರೀಯ ಬ್ಯಾಂಕ್ ವೆಬ್ ಸೈಟ್ ಅನ್ವಯ ಆರ್ ಬಿಐ ಸರ್ಕಾರದ ಸಾಮಾನ್ಯ ಬ್ಯಾಂಕಿಂಗ್ ಅಗತ್ಯಗಳನ್ನು ತನ್ನ ಸ್ವಂತ ಕಚೇರಿಗಳು ಹಾಗೂ ಕಮರ್ಷಿಯಲ್ ಬ್ಯಾಂಕುಗಳ ಮೂಲಕ ನಡೆಸುತ್ತದೆ. ಇದರಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಎರಡೂ ವಲಯದ ಬ್ಯಾಂಕುಗಳು ಸೇರಿವೆ. 

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ  1934ರ ಸೆಕ್ಷನ್ 45 ಭಾರತದ ವಿವಿಧ ಸ್ಥಳಗಳಲ್ಲಿ ವಾಣಿಜ್ಯ ಬ್ಯಾಂಕುಗಳನ್ನು ಏಜೆಂಟ್ ಗಳಾಗಿ ನೇಮಿಸಲು ಅವಕಾಶ ನೀಡುತ್ತದೆ. ಆರ್ ಬಿಐ ಕೇಂದ್ರೀಯ ಖಾತೆಗಳ ವಿಭಾಗ ನಾಗ್ಪುರದಲ್ಲಿದೆ. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರಾಥಮಿಕ ಖಾತೆಗಳನ್ನು ನಿರ್ವಹಿಸುತ್ತದೆ. ಇದು ದೇಶಾದ್ಯಂತ ಸರ್ಕಾರದ ಪರವಾಗಿ ಆದಾಯ ಸಂಗ್ರಹ ಹಾಗೂ ಪಾವತಿಗಳಿಗೆ ಸೂಕ್ತ ವ್ಯವಸ್ಥೆಯನ್ನು ಹೊಂದಿದೆ. ಇದರ ನೆಟ್ ವರ್ಕ್ ನಲ್ಲಿ ಆರ್ ಬಿಐ ಸರ್ಕಾರದ ಬ್ಯಾಂಕಿಂಗ್ ವಿಭಾಗಗಳು ಸೇರಿವೆ. 

Latest Videos
Follow Us:
Download App:
  • android
  • ios