ಬಲಿಷ್ಠ ಬ್ಯಾಂಕಿಂಗ್, ಬಲಿಷ್ಠ ಗ್ರಾಮೀಣ ಭಾರತ!

Banking system to be strengthened in villages
Highlights

ಬಲಿಷ್ಠ ಗ್ರಾಮೀಣ ಭಾರತಕ್ಕೆ ಬಲಿಷ್ಠ ಬ್ಯಾಂಕಿಂಗ್

ಗ್ರಾಮಗಳಲ್ಲಿ ಬಲಗೊಳ್ಳಬೇಕಿದೆ ಬ್ಯಾಂಕಿಂಗ್ ವ್ಯವಸ್ಥೆ

ನಗದು ಇದ್ದರೆ ಮಾತ್ರ ಗ್ರಾಮೀಣ ಭಾರತ ಉಸಿರಾಡೋದು

ಗ್ರಾಮೀಣ ಬ್ಯಾಂಕಿಂಗ್ ವ್ಯವಸ್ಥೆ ಸುಧಾರಣೆಗೆ ಏನೆಲ್ಲಾ ಕ್ರಮ?

ರವಿ ಪೂಜಾರ

ಬೆಂಗಳೂರು(ಜು.20): ಗ್ರಾಮಗಳು ಎಂದರೆ ಒಂದು ಥರದ ಕೀಳರಿಮೆ ಈಗಲೂ ಇದ್ದೇ ಇದೆ. ಮೂಲಭೂತ ಸೌಕರ್ಯಗಳ ಕೊರತೆ ಇದಕ್ಕೆ ಮುಖ್ಯ ಕಾರಣ. ವಿದ್ಯಾಭ್ಯಾಸ ಅಥವಾ ಉದ್ಯೋಗವನ್ನು ಅರಿಸಿ ನಗರಕ್ಕೆ ಬರುವ ಗ್ರಾಮೀಣ ಭಾಗದ ವಿದ್ಯಾವಂತರು ಮರುಳಿ ಗೂಡು ಸೇರುವುದಕ್ಕೆ ಇಷ್ಟ ಪಡುವುದಿಲ್ಲ.

ಹೀಗಾಗಿ ಗ್ರಾಮೀಣ ಪ್ರದೇಶಗಳು ಸುಧಾರಣೆ ಕಾಣುತ್ತಿಲ್ಲ. ನಗರ ಪ್ರದೇಶದಲ್ಲಿ ಸಾರ್ವಜನಿಕರ ನಿತ್ಯದ ಅವಶ್ಯಕತೆಗಳು ಕೂಗಳತೆಯ ದೂರದಲ್ಲೇ
ದೊರೆಯುತ್ತಿವೆ. ಇತ್ತೀಚೆಗಂತೂ ಮನೆ ಬಾಗಿಲಿಗೆ ಬರುತ್ತಿವೆ. ಗ್ರಾಮೀಣ ಪ್ರದೇಶಗಳು ಇದಕ್ಕೆ ತದ್ವಿರುದ್ಧ. ಇಲ್ಲಿ ಹುಡುಕಿಕೊಂಡು ಹೋದರು ಕೆಲವೊಂದು ಸೌಲಭ್ಯಗಳು ಅವಶ್ಯಕತೆಗೆ ತಕ್ಕಂತೆ ದೊರೆಯುವುದು ತುಸು ಕಷ್ಟವೇ. 

ಅಂಥವುಗಳ ಸಾಲಿಗೆ ಬ್ಯಾಂಕಿಂಗ್ ಸೌಲಭ್ಯಗಳು ಸೇರಿಕೊಂಡಿವೆ. ನಗರಗಳು ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಜೀವನದ ಒಂದು ಭಾಗವಾಗಿ ಮಾಡಿಕೊಂಡಿವೆ. ಹೆಚ್ಚಾನುಹೆಚ್ಚು ಸರಕು ಅಥವಾ ಸೇವೆಯನ್ನು ಪಡೆದುಕೊಂಡಾಗ ಚೆಕ್, ಕಾರ್ಡ್‌ಗಳ ಮೂಲಕವೇ ಹಣ ಸಂದಾಯ ಮಾಡುತ್ತೇವೆ.

ಇತ್ತೀಚಗೆ ಕೆಲವು ಮೊಬೈಲ್ ವ್ಯಾಲೆಟ್‌ಗಳ ಸೇವೆ ಹೆಚ್ಚಾಗಿರುವುದರಿಂದ ಕಿರಾಣಿ ಅಂಗಡಿ ಮತ್ತು ತರಕಾರಿಗಳನ್ನು ಕೊಳ್ಳುವುದಕ್ಕೂ ನಗದು ಬೇಕಾಗಿಲ್ಲ. ಮೊಬೈಲ್ ವ್ಯಾಲೆಟ್‌ಗಳ ಮೂಲಕ ಹಣ ಸಂದಾಯ ಮಾಡಲಾಗುತ್ತಿದೆ. ನೋಟುಗಳು ರದಾಟಛಿದ ನಂತರವಂತೂ ಇಂಟರ್ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ನಗರ ಪ್ರದೇಶದಲ್ಲಿ ಇನ್ನುಷ್ಟು ವೇಗ ಪಡೆದುಕೊಂಡಿದೆ.

ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಹೀಗಿಲ್ಲ. ಇಲ್ಲಿನ ಪ್ರತಿಯೊಂದು ಸೇವೆ ಅಥವಾ ಸರಕಿಗೆ ನಗದು ಇದ್ದರೆ ಮಾತ್ರ ವ್ಯವಹಾರ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಇಂಟರ್ನೆಟ್ ಅಥವಾ ಮೊಬೈಲ್ ಬ್ಯಾಂಕಿಂಗ್, ಕಾರ್ಡ್‌ಗಳು, ಮೊಬೈಲ್ ವ್ಯಾಲೆಟ್‌ಗಳು ಕನಿಷ್ಠ ಚೆಕ್‌ಗಳ ವ್ಯವಹಾರ ಮಾಡುವುದು ತೀರಾ ಕಷ್ಟವಾಗಿದೆ.

ಆದ್ದರಿಂದ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಕ್ಯಾಷ್ ಇಲ್ಲದೆ ಹೋದರೆ ಜೀವನ ದುಸ್ತರವಾಗುತ್ತದೆ. ಸರ್ಕಾರಗಳು ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗೆ ಹಣ ಸಂದಾಯ ಮಾಡುತ್ತಿವೆ. ವೃದ್ಧಾಪ್ಯ ವೇತನಗಳು, ಮನೆಗಳನ್ನು ಕಟ್ಟುವುದಕ್ಕೆ ಧನಸಹಾಯ, ಸಾಲಗಳು, ವಿದ್ಯಾರ್ಥಿ ವೇತನಗಳು ಹೀಗೆ ಎಲ್ಲವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿವೆ. 

ಈ ವಿಧಾನದಲ್ಲಿ ಗ್ರಾಹಕರು ಹಣ ಪಡೆದುಕೊಳ್ಳಬೇಕಾದರೆ ಬ್ಯಾಂಕ್‌ನಲ್ಲಿ ಸರದಿ ಸಾಲಿನಲ್ಲಿ ನಿಲ್ಲಬೇಕು ಅಥವಾ ಎಟಿಎಂ ಬಾಗಿಲು ತಳ್ಳಬೇಕು. ಆದ್ದರಿಂದ ಬ್ಯಾಂಕಿಂಗ್ ಸೌಲಭ್ಯಗಳ ಕೆಲವು ತೊಂದರೆಗಳಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕರು ಮತ್ತು ಫಲಾನುಭವಿಗಳು ತೊಂದರೆ
ಅನುಭವಿಸುತ್ತಿರುವುದು ಸುಳ್ಳಲ್ಲ. 

ದೇಶದ ಬಹುಸಂಖ್ಯಾತ ಗ್ರಾಮಗಳಲ್ಲಿ ಬ್ಯಾಂಕ್ ಶಾಖೆಗಳೇ ಇಲ್ಲ. ಅನೇಕ ಗ್ರಾಮಗಳಲ್ಲಿ ಎಟಿಎಂಗಳಿದ್ದರೂ ಅವುಗಳೂ ನಿಷ್ಕ್ರಿಯವಾಗಿ ಇರುವುದೇ ಹೆಚ್ಚು. ಹೀಗಾಗಿ ಗ್ರಾಮೀಣ ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಹಣ ಸಿಗದೇ ಇದ್ದಾಗ ಕೆಲಸಗಳು ವಿಳಂಬವಾಗುತ್ತವೆ.

ಮೊದಲು ಸರ್ಕಾದ ಯೋಜನೆಗಳ ಫಲಾನುಭವಿಗಳಿಗೆ ಮತ್ತು ವೃದಾಟಛಿಪ್ಯ ವೇತನಗಳು ನೇರವಾಗಿ ಫಲಾನುಭವಿಗಳ ಕೈ ಸೇರುತ್ತಿತ್ತು. ಮನಿ ಆರ್ಡರ್ ಮೂಲಕವೂ ಮನೆಗೇ ಬರುತ್ತಿತ್ತು. ಆದರೆ ಈಗ ಸರ್ಕಾರಗಳು ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯ ಮಾಡುತ್ತವೆ. ಇದರಿಂದ ಸೌಲಭ್ಯಗಳ ದುರುಪಯೋಗ ನಿಯಂತ್ರಣಕ್ಕೊಳಪಟ್ಟಿತು ಮತ್ತು ಪ್ರತಿಯೊಬ್ಬರು ಬ್ಯಾಂಕಿಂಕ್ ವ್ಯಾಪ್ತಿಗೆ ಬಂದರಾದರೂ, ಬ್ಯಾಂಕಿಂಗ್ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ.

ಮುಖ್ಯವಾಗಿ ಎಟಿಎಂಗಳು. ಇದಕ್ಕೆ ಬ್ಯಾಂಕ್‌ಗಳನ್ನೇ ನೇರ ಹೊಣೆ ಮಾಡುವುದೂ ತಪ್ಪಾಗುತ್ತದೆ. ಅಂತರ್ಜಾಲ, ವಿದ್ಯುತ್ ಸಮರ್ಪಕವಾಗಿರಬೇಕು. ಜನರಿಗೆ ಅಗತ್ಯ ಇದ್ದಾಗ ಹಣ ಸಿಗದೇ ಇದ್ದರೆ, ಒಳಿತು ಕೆಡಕುಗಳನ್ನು ತಾಳೆ ಹಾಕುವ ತಾಳ್ಮೆ ಇರುವುದಿಲ್ಲ. ಆಗ ಸರ್ಕಾರಗಳು ಮತ್ತು ಸರ್ಕಾರ ನಡೆಸುತ್ತಿರುವ ರಾಜಕಾರಣಿಗಳು ಅಪಾರ್ಥಕ್ಕಿಡಾಗುವುದರಲ್ಲಿ ಅನುಮಾನವೇ ಇಲ್ಲ.

ಪ್ರತಿಯೊಬ್ಬ ಸಾರ್ವಜನಿಕ ತನ್ನ ಬ್ಯಾಂಕಿಂಗ್ ವ್ಯವಹಾರಗಳಿಗೆ ಗರಿಷ್ಟ ೪ ಕಿಮಿ. ದಾಟಿ ಹೋಗುವಂತಿಲ್ಲ ಎಂದು ಆರ್‌ಬಿಐ ನಿಯಮ ಮಾಡಿದೆ. ಆದ್ದರಿಂದಲೇ ಅಷ್ಟೇ ಅಂತರದಲ್ಲಿ ಒಂದು ಬ್ಯಾಂಕ್ ಶಾಖೆ ದೊರೆಯುವಂತೆಯೂ ಅದು ಮಾಡಿದೆ. ಬ್ಯಾಂಕಿನಲ್ಲಿ ಖಾತೆ ತೆರದ ತಕ್ಷಣ ಗ್ರಾಹಕರಿಗೆ ಎಟಿಎಂ ಕಾಡ್ ಬರುತ್ತದೆ.

ಕಾರ್ಡ್ ಬಂದಾಕ್ಷಣ ಎಲ್ಲವೂ ಸರಿಯಾಗುವುದಿಲ್ಲ. ಬದಲಾಗಿ ಎಟಿಎಂ ಮಷಿನ್‌ಗಳು ಸೂಕ್ತವಾಗಿ ಕೆಲಸ ಮಾಡಬೇಕು. ಸಾರ್ವಜನಿಕರಿಗೆ ಅವಶ್ಯಕತೆಗೆ ತಕ್ಕಹಾಗೆ ಹಣ ದೊರೆಯದೇ ಇದ್ದಾಗ, ಸರ್ಕಾರವೂ ಸೇರಿದಂತೆ ಬ್ಯಾಂಕ್‌ಗಳ ಮೇಲೆ ಅಪನಂಬಿಕೆ ಉಂಟಾಗುತ್ತದೆ. ಇಂಥ ಪರಿಸ್ಥಿತಿ ಬಂದಾಗ ಸಾರ್ವಜನಿಕರು ಬ್ಯಾಂಕ್‌ಗಳಿಂದ ದೂರ ಉಳಿಯುತ್ತಾರೆ. 

ಇನ್ನು ಕೆಲವೊಮ್ಮೆ ಖಾತೆ ನಿರ್ವಹಣೆಗೆ ಬೇಕಾದ ಕನಿಷ್ಠ ಮೊತ್ತವು ಅವರ ಖಾತೆಯಲ್ಲಿ ಇರುವುದಿಲ್ಲ. ಇದರ ಅರಿವು ಬ್ಯಾಂಕ್‌ಗಳಿಗೆ ಇದೆ. ಆದ್ದರಿಂದಲೇ ಬ್ಯಾಂಕ್‌ಗಳು ಗ್ರಾಮೀಣ ಭಾಗದಲ್ಲಿ ಶಾಖೆಗಳನ್ನು ತೆರೆಯುವುದಕ್ಕೂ ಮುಂದಾಗಿರುವುದು ಶ್ಲಾಘನೀಯ. ಆದರೆ ಈ ಸೇವೆ ಇನ್ನಷ್ಟು ಬಲಿಷ್ಠಗೊಳ್ಳಬೇಕಿದೆ.

loader