*ಈ ವಾರಾಂತ್ಯದಲ್ಲಿ ಸಾಲು ಸಾಲು ಹಬ್ಬದ ಕಾರಣಕ್ಕೆ ರಜೆ*ಅಂಬೇಡ್ಕರ್ ಜಯಂತಿ, ಗುಡ್ ಫ್ರೈಡೇ ಸೇರಿದಂತೆ ಅನೇಕ ಹಬ್ಬಗಳು*ನಿರಂತರ ರಜೆ ಕಾರಣಕ್ಕೆ ಗ್ರಾಹಕರಿಗೆ ತೊಂದರೆ
ನವದೆಹಲಿ (ಏ.11): ನೀವು ಈ ವಾರದ ಕೊನೆಯಲ್ಲಿ ಬ್ಯಾಂಕಿಗೆ (Bank) ಸಂಬಂಧಿಸಿದ ಯಾವುದೇ ಕೆಲಸಗಳನ್ನಿಟ್ಟುಕೊಂಡಿದ್ರೆ ಅದನ್ನು ಮೊದಲೇ ಮಾಡಿ ಮುಗಿಸೋದು ಅಥವಾ ಮುಂದೂಡುವುದು ಉತ್ತಮ. ಏಕೆಂದ್ರೆ ಈ ವಾರದ ಕೊನೆಯ ನಾಲ್ಕು ದಿನ ದೇಶದ ಕೆಲವು ನಗರಗಳಲ್ಲಿ ಬ್ಯಾಂಕುಗಳಿಗೆ ರಜೆಯಿದೆ.
ಈ ವಾರ ಏಪ್ರಿಲ್ 14ರಿಂದ ಏಪ್ರಿಲ್ 17ರ ತನಕ ಒಟ್ಟು 4 ದಿನಗಳ ಕಾಲ ಬ್ಯಾಂಕುಗಳಿಗೆ ರಜೆಯಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತಿ ತಿಂಗಳು ಬ್ಯಾಂಕುಗಳಿಗೆ ಸಂಬಂಧಿಸಿ ರಜಾಪಟ್ಟಿ (Holiday List) ಬಿಡುಗಡೆ ಮಾಡುತ್ತದೆ. ಆದ್ರೆ ಈ ರಜಾಪಟ್ಟಿಯಲ್ಲಿರೋ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ (States) ಅನ್ವಯಿಸೋದಿಲ್ಲ. ಆಯಾ ರಾಜ್ಯಕ್ಕೆ ಸಂಬಂಧಿಸಿದ ಹಬ್ಬ (Festival) ಹಾಗೂ ಆಚರಣೆಗಳ (Celebratons) ಹಿನ್ನೆಲೆಯಲ್ಲಿ ರಜೆಗಳನ್ನು ನಿಗದಿಪಡಿಸಲಾಗುತ್ತದೆ. ಹೀಗಾಗಿ ಆಯಾ ರಾಜ್ಯಕ್ಕೆ ಸಂಬಂಧಿಸಿದ ರಜೆಗಳನ್ನು (Holidays) ಮಾತ್ರ ಪರಿಗಣಿಸಬೇಕಾಗುತ್ತದೆ. ಸಾರ್ವಜನಿಕ (Pulic) ಹಾಗೂ ಗೆಜೆಟೆಡ್ ರಜೆಗಳು (Gazetted holidays) ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಆದಕಾರಣ ಈ ವಾರ ನಾಲ್ಕು ದಿನಗಳ ಕಾಲ ಬ್ಯಾಂಕ್ ಕಾರ್ಯನಿರ್ವಹಿಸೋದಿಲ್ಲ ಎಂಬ ಮಾಹಿತಿಯನ್ನು ನೀವು ಹೊಂದಿರೋದು ಅಗತ್ಯ. ಇಲ್ಲವಾದ್ರೆ ರಜಾದಿನಗಳಂದು ಬ್ಯಾಂಕಿಗೆ ಭೇಟಿ ನೀಡೋ ಮೂಲಕ ತೊಂದರೆಗೊಳಗಾಗುತ್ತೀರಿ.
Bank Holiday:ಏಪ್ರಿಲ್ ನಲ್ಲಿ 15 ದಿನ ಬ್ಯಾಂಕಿಗೆ ರಜೆ; ಇಲ್ಲಿದೆ ಆರ್ ಬಿಐ ಹಾಲಿಡೇ ಲಿಸ್ಟ್
4 ದಿನ ರಜೆ ಏಕೆ?
ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ, ಸೌರಮಾನ ಯುಗಾದಿ, ಬೈಸಾಶಿ, ವೈಸಾಖಿ ವಿಷು, ಗುಡ್ ಫ್ರೈಡೇ ಮುಂತಾದ ಹಬ್ಬಗಳ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ಏಪ್ರಿಲ್ 14ರಿಂದ ಏಪ್ರಿಲ್ 17ರ ತನಕ ರಜೆಯಿದೆ. ಈ ವಾರ ಯಾವ ಕಾರಣಕ್ಕೆ ಯಾವ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆಗಳಿವೆ ಎಂಬ ಮಾಹಿತಿ ಇಲ್ಲಿದೆ.
ಏಪ್ರಿಲ್ 14- ಗುರುವಾರ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ (Dr.B.R.Ambedkar Jayanthi), ಮಹಾವೀರ ಜಯಂತಿ, ಬೈಸಾಖಿ/ವಿಷು/ತಮಿಳು ಹೊಸ ವರ್ಷ/ಚೀರೋಬಾ/ಬಿಜು/ಬೋಹಾಗ್ ಬಿಹು (ಮೇಘಾಲಯ ಮತ್ತು ಹಿಮಾಚಲ ಪ್ರದೇಶ ಹೊರತುಪಡಿಸಿ ಎಲ್ಲ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ.)
ಏಪ್ರಿಲ್ 15 - ಶುಕ್ರವಾರ ಗುಡ್ ಫ್ರೈಡೇ/ಬಂಗಾಳಿ ಹೊಸ ವರ್ಷ/ಹಿಮಾಚಲ ದಿನ/ವಿಷು/ಬೋಹಾಗ್ ಬಿಹು (ರಾಜಸ್ಥಾನ, ಜಮ್ಮು ಮತ್ತು ಶ್ರೀನಗರ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ)
ಏಪ್ರಿಲ್ 16-ಬೊಹಾಗ್ ಬಿಹು (ಅಸ್ಸಾಂನಲ್ಲಿ ರಜೆ)
ಏಪ್ರಿಲ್ 17: ಭಾನುವಾರ
ಗ್ರಾಹಕರಿಗೆ ತೊಂದರೆ
ಬ್ಯಾಂಕುಗಳಿಗೆ ಈ ರೀತಿ ನಿರಂತರ ರಜೆಗಳು ಬರೋದ್ರಿಂದ ಗ್ರಾಹಕರು (Customers) ಸಾಕಷ್ಟು ಸಮಸ್ಯೆಗಳನ್ನು (Problems) ಎದುರಿಸಬೇಕಾಗುತ್ತದೆ. ಇಂಟರ್ನೆಟ್ ಬ್ಯಾಂಕಿಂಗ್ (Internet banking) ಹಾಗೂ ಎಟಿಎಂ (ATM) ಸೇವೆಗಳಲ್ಲಿ (Services) ಯಾವುದೇ ವ್ಯತ್ಯಯವಾಗದಿದ್ರೂ ಕೆಲವೊಂದು ಕೆಲಸಗಳನ್ನು ಬ್ಯಾಂಕಿಗೇ ಹೋಗಿ ಮಾಡಬೇಕಾದ ಅಗತ್ಯವಿರುತ್ತದೆ. ಅಂಥ ಕೆಲಸಗಳಿಗೆ ತೊಂದರೆಯಾಗುತ್ತದೆ. ಅಲ್ಲದೆ, ಗ್ರಾಮೀಣ ಭಾಗದ ಜನರು ಇಂಟರ್ನೆಟ್ ಸೇವೆಗಳನ್ನು ಬಳಸೋದು ಕಡಿಮೆ. ಅವರು ಪ್ರತಿ ಕೆಲಸವನ್ನು ಬ್ಯಾಂಕಿಗೆ ತೆರಳಿಯೇ ಮಾಡುತ್ತಾರೆ. ಅಂಥವರು ಕೂಡ ಈ ರೀತಿ ಸಾಲು ರಜೆಗಳ ಕಾರಣಕ್ಕೆ ತೊಂದರೆಗೊಳಗಾಗುತ್ತಾರೆ. ಆದ್ರೆ ಕರ್ನಾಟಕದಲ್ಲಿ ಗುರುವಾರ, ಶುಕ್ರವಾರ ಮಾತ್ರ ಬ್ಯಾಂಕುಗಳಿಗೆ ರಜೆಯಿರುತ್ತದೆ.ಶನಿವಾರ ರಜೆಯಿಲ್ಲ.ಭಾನುವಾರ ಮಾತ್ರ ಎಂದಿನಂತೆ ವಾರದ ರಜೆಯಿರುತ್ತದೆ.
ಆರ್ ಬಿಐ (RBI) ರಜಾದಿನಗಳನ್ನು ಮೂರು ವರ್ಗಗಳನ್ನಾಗಿ ವಿಂಗಡಿಸಿದೆ.1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್ ಕ್ಲೋಸಿಂಗ್ ರಜೆಗಳು. ಏಪ್ರಿಲ್ ನಲ್ಲಿ ವಾರದ ಹಾಗೂ ಹಬ್ಬಗಳ ರಜೆಗಳನ್ನು ಸೇರಿಸಿದ್ರೆ ಒಟ್ಟು 15 ದಿನಗಳ ಕಾಲ ಬ್ಯಾಂಕುಗಳು ಕಾರ್ಯನಿರ್ವಹಿಸೋದಿಲ್ಲ.
