ವಿಲೀನ ವಿರೋಧಿಸಿ ಮಾ.27ರಂದು ಬ್ಯಾಂಕ್ ನೌಕರರ ಮುಷ್ಕರ| ಅತೀ ದೊಡ್ಡ ಬ್ಯಾಂಕ್ ನೌಕರರ ಸಂಘಟನೆಗಳಾದ ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ ಹಾಗೂ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಬಂದ್‌ಗೆ ನಿರ್ಧಾರ
ನವದೆಹಲಿ[ಮಾ.06]: ಸಾರ್ವಜನಿಕ ರಂಗದ ಪ್ರಮುಖ 10 ಬ್ಯಾಂಕ್‌ಗಳನ್ನು ವಿಲೀನಗೊಳಿಸಿ 4 ಬ್ಯಾಂಕ್‌ಗಳನ್ನಾಗಿ ಪರಿವರ್ತಿಸುವ ಸರ್ಕಾರದ ನಡೆಯನ್ನು ವಿರೋಧಿಸಿ, ಮಾ.27ರಂದು ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಬ್ಯಾಂಕ್ ನೌಕರರ ಸಂಘಟನೆ ಕರೆ ಕೊಟ್ಟಿದೆ. ಬ್ಯಾಂಕ್ ವಿಲೀನ ಮಾಡುವ ಸಂಪುಟ ನಿರ್ಧಾರ ಹೊರಬಿದ್ದ ಮರುದಿನವೇ ನೌಕರರ ಸಂಘಟನೆ ಈ ಕರೆ ಕೊಟ್ಟಿದೆ.
ಅತೀ ದೊಡ್ಡ ಬ್ಯಾಂಕ್ ನೌಕರರ ಸಂಘಟನೆಗಳಾದ ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ ಹಾಗೂ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಬಂದ್‌ಗೆ ನಿರ್ಧರಿಸಿದ್ದು ಹಾಗಾಗಿ ಬಂದ್ ಯಶಸ್ವಿಯಾಗುವ ಸಾಧ್ಯತೆ ಇದೆ.
ಈ ಹಿಂದೆ ವೇತನ ಪರಿಷ್ಕಾರ ಮಾತುಕತೆ ಬಿದ್ದು ಹೋದ ಹಿನ್ನೆಲೆ ಮಾರ್ಚ್ 11 ರಿಂದ ಮೂರು ದಿನಗಳ ಬ್ಯಾಂಕ್ ಮುಷ್ಕರಕ್ಕೆ ಸಂಘಟನೆಗಳು ಕರೆ ನೀಡಿದ್ದವು. ಹೀಗಾಗಿ ಮಾಚ್‌ರ್ ತಿಂಗಳಿನಲ್ಲಿ ಸಾಲು ಸಾಲು ಮುಷ್ಕರದಿಂದ ಜನರಿಗೆ ತೊಂದರೆಯಾಗುವುದು ಖಚಿತ.
