ಅಕ್ಟೋಬರ್ ನಲ್ಲಿ 21 ದಿನ ಬ್ಯಾಂಕ್ ಕ್ಲೋಸ್; ಆರ್ ಬಿಐ ರಜಾ ಕ್ಯಾಲೆಂಡರ್ ಹೀಗಿದೆ ನೋಡಿ
ಪ್ರತಿ ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಆ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿಯನ್ನು ಆರ್ ಬಿಐ ಬಿಡುಗಡೆ ಮಾಡುತ್ತದೆ. ಅದರಂತೆ ಅಕ್ಟೋಬರ್ ತಿಂಗಳ ರಜಾಪಟ್ಟಿ ಬಿಡುಗಡೆಯಾಗಿದ್ದು, ಬರೋಬರಿ 21 ದಿನಗಳ ಕಾಲ ಬ್ಯಾಂಕುಗಳಿಗೆ ರಜೆ ಇರಲಿದೆ.
ನವದೆಹಲಿ (ಸೆ.26): ಅಕ್ಟೋಬರ್ ತಿಂಗಳು ಹತ್ತಿರ ಬರುತ್ತಿದೆ. ಅಕ್ಟೋಬರ್ ಅಂದ್ರೆ ಸಾಲು ಸಾಲು ಹಬ್ಬಗಳ ತಿಂಗಳು. ನವರಾತ್ರಿ, ಗಾಂಧಿ ಜಯಂತಿ, ದಸರಾ, ದೀಪಾವಳಿ ಈ ತಿಂಗಳಲ್ಲೇ ಬಂದಿರುವ ಕಾರಣ ಈ ಬಾರಿ ರಜೆಗಳು ಜಾಸ್ತಿ. ಅದ್ರಲ್ಲೂ ಅಕ್ಟೋಬರ್ ನಲ್ಲಿ ಬ್ಯಾಂಕ್ ಗಳು ಬರೋಬರಿ 21 ದಿನ ಮುಚ್ಚಿರಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬಿಡುಗಡೆಗೊಳಿಸಿರುವ ರಜಾಪಟ್ಟಿ ತಿಳಿಸಿದೆ. ಬ್ಯಾಂಕುಗಳ ರಜೆಗಳಿಗೆ ಸಂಬಂಧಿಸಿ ಆರ್ ಬಿಐ ಪ್ರತಿ ತಿಂಗಳು ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಬ್ಯಾಂಕಿಗೆ ರಜೆಯಿರುವ ದಿನ ಆನ್ ಲೈನ್ ವಹಿವಾಟಿಗೆ ಹಾಗೂ ಎಟಿಎಂ ವ್ಯವಹಾರಗಳಿಗೆ ಯಾವುದೇ ತೊಂದರೆ ಇರೋದಿಲ್ಲ. ಆದ್ರೆ ಬ್ಯಾಂಕಿಗೆ ಹೋಗಿ ಮಾಡುವ ಯಾವುದಾದ್ರೂ ಕೆಲಸವಿದ್ರೆ ಮಾತ್ರ ರಜಾಪಟ್ಟಿ ಗಮನಿಸಿ ಹೋಗೋದು ಉತ್ತಮ. ಇನ್ನು ಆರ್ ಬಿಐ ರಜಾಪಟ್ಟಿಯಲ್ಲಿರುವ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ. ಆಯಾ ಪ್ರಾದೇಶಿಕ ಆಚರಣೆ ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಆದರೆ, ಸಾರ್ವಜನಿಕ (Pulic) ಹಾಗೂ ಗೆಜೆಟೆಡ್ ರಜೆಗಳು (Gazetted holidays) ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಭಾನುವಾರ (Sunday) ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ (Saturday) ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ. ಹೀಗಾಗಿ ಬ್ಯಾಂಕ್ ಗೆ ಭೇಟಿ ನೀಡಬೇಕಾದ ಅಗತ್ಯವಿದ್ದಾಗ ಆ ತಿಂಗಳ ರಜೆಪಟ್ಟಿ ನೋಡಿಕೊಂಡು ಹೋಗೋದು ಉತ್ತಮ. ಇದ್ರಿಂದ ಸಮಯ ಹಾಗೂ ಶ್ರಮ ಎರಡೂ ಉಳಿತಾಯವಾಗುತ್ತದೆ.
ಬ್ಯಾಂಕ್ (Bank) ರಜೆಗಳನ್ನು (Holidays) ಆರ್ ಬಿಐ (RBI) ಮೂರು ವರ್ಗಗಳನ್ನಾಗಿ ವಿಂಗಡಿಸಿದೆ. 1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್ ಕ್ಲೋಸಿಂಗ್ ರಜೆಗಳು. ಆರ್ ಬಿಐ (RBI) ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕುಗಳು, ಕೋಆಪರೇಟಿವ್ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ ಅನ್ವಯಿಸಲಿವೆ.
ರೈತರಿಗೆ ಗುಡ್ ನ್ಯೂಸ್, ಪಿಎಂ ಕಿಸಾನ್ ಯೋಜನೆ 12ನೇ ಕಂತಿನ ಹಣ ಈ ತಿಂಗಳು ಖಾತೆಗೆ ಬರುವ ನಿರೀಕ್ಷೆ
ಅಕ್ಟೋಬರ್ ತಿಂಗಳ ರಜಾಪಟ್ಟಿ ಇಲ್ಲಿದೆ:
ಅಕ್ಟೋಬರ್ 1: ಬ್ಯಾಂಕ್ ಗಳ ಅರ್ಧ ವಾರ್ಷಿಕ ಕ್ಲೋಸಿಂಗ್ (ಗ್ಯಾಂಗ್ಟಾಕ್)
ಅಕ್ಟೋಬರ್ 2: ಭಾನುವಾರ, ಗಾಂಧಿ ಜಯಂತಿ
ಅಕ್ಟೋಬರ್ 3: ದುರ್ಗಾ ಪೂಜಾ, ಮಹಾ ಅಷ್ಟಮಿ (ಅಗರ್ತಾಲ, ಭುವನೇಶ್ವರ್, ಗುವಹಟಿ, ಇಂಫಾಲ್, ಕೋಲ್ಕತ್ತ, ಪಟ್ನಾ ಹಾಗೂ ರಾಂಚಿ)
ಅಕ್ಟೋಬರ್ 4: ದುರ್ಗಾ ಪೂಜಾ/ ದಸರಾ/ಮಹಾನವಮಿ/ಆಯುಧ ಪೂಜೆ ( ಅಗರ್ತಾಲ, ಬೆಂಗಳೂರು, ಭುವನೇಶ್ವರ್, ಚೆನ್ನೈ, ಗ್ಯಾಂಗ್ಟಾಕ್, ಗುವಹಟಿ, ಕಾನ್ಪುರ, ಕೊಚ್ಚಿ, ಕೋಲ್ಕತ್ತ, ಲಖನೌ, ಪಟ್ನಾ, ರಾಂಚಿ, ಶಿಲ್ಲಾಂಗ್ ಹಾಗೂ ತಿರುವನಂತಪುರಂ)
ಅಕ್ಟೋಬರ್ 5: ದುರ್ಗಾ ಪೂಜಾ/ ದಸರಾ (ವಿಜಯ ದಶಮಿ)
ಅಕ್ಟೋಬರ್ 6: ದುರ್ಗಾ ಪೂಜಾ /ದಶೈನ್ ( ಗ್ಯಾಂಗ್ಟಾಕ್)
ಅಕ್ಟೋಬರ್ 7: ದುರ್ಗಾ ಪೂಜಾ /ದಶೈನ್ ( ಗ್ಯಾಂಗ್ಟಾಕ್)
ಅಕ್ಟೋಬರ್ 8: ಎರಡನೇ ಶನಿವಾರ
ಅಕ್ಟೋಬರ್ 9: ಭಾನುವಾರ
ಅಕ್ಟೋಬರ್ 13: ಕರ್ವ ಚೌತ್ (ಶಿಮ್ಲಾ)
ಅಕ್ಟೋಬರ್ 14: ಈದ್ -ಐ-ಮಿಲಾದ್ -ಉಲ್-ನಬಿ (ಜಮ್ಮು ಮತ್ತು ಕಾಶ್ಮೀರ)
US Recession ಭೀತಿ: 80 ಡಾಲರ್‌ಗಿಂತ ಕಡಿಮೆಗೆ ಕುಸಿದ Crude Oil; ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಯಾವಾಗ..?
ಅಕ್ಟೋಬರ್ 16: ಭಾನುವಾರ
ಅಕ್ಟೋಬರ್ 18: ಕಟಿ ಬಿಹು (ಗುವಹಟಿ)
ಅಕ್ಟೋಬರ್ 22: ನಾಲ್ಕನೇ ಶನಿವಾರ
ಅಕ್ಟೋಬರ್ 23:ಭಾನುವಾರ
ಅಕ್ಟೋಬರ್ 24: ಕಾಳಿ ಪೂಜೆ/ ದೀಪಾವಳಿ/ದಿವಾಳಿ/ನರಕ ಚತುರ್ಥಿ (ಅಗರ್ತಾಲ, ಅಹ್ಮದಾಬಾದ್, ಐಜ್ವಾಲ್, ಬೆಲ್ಪುರ್, ಬೆಂಗಳೂರು, ಭೂಪಾಲ್, ಭುವನೇಶ್ವರ್, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಗುವಹಟಿ, ಜೈಪುರ್, ಜಮ್ಮು, ಕಾನ್ಪುರ್, ಕೊಚ್ಚಿ, ಕೋಲ್ಕತ್ತ, ಲಖನೌ, ಮುಂಬೈ, ನಾಗ್ಪುರ್, ನವದೆಹಲಿ, ಪಣಜಿ, ಪಟ್ನಾ, ರಾಯ್ಪುರ, ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರ ಹಾಗೂ ತಿರುವನಂತಪುರಂ)
ಅಕ್ಟೋಬರ್ 25: ಲಕ್ಷ್ಮೀ ಪೂಜೆ, ದೀಪಾವಳಿ/ ಗೋವರ್ಧನ ಪೂಜೆ (ಗ್ಯಾಂಗ್ಟಾಕ್, ಹೈದರಾಬಾದ್, ಇಂಫಾಲ್ ಹಾಗೂ ಜೈಪುರ)
ಅಕ್ಟೋಬರ್ 26: ಗೋವರ್ಧನ ಪೂಜೆ/ ವಿಕ್ರಂ ಸಂವಂತ್ ಹೊಸ ವರ್ಷ ದಿನ/ಭಾಯಿ ಬೀಜಿ/ಭಾಯಿ ದಜ್/ದಿವಾಳಿ (ಬಲಿ ಪ್ರತಿಪದ/ಲಕ್ಷ್ಮೀ ಪೂಜೆ (ಅಹ್ಮದಾಬಾದ್, ಬೆಲ್ಪುರ್, ಬೆಂಗಳೂರು, ಡೆಹ್ರಾಡೂನ್, ಗ್ಯಾಂಗ್ಟಾಕ್, ಜಮ್ಮು, ಕಾನ್ಪುರ, ಲಖನೌ, ಮುಂಬೈ, ನಾಗ್ಪುರ, ಶಿಮ್ಲಾ ಹಾಗೂ ಶ್ರೀನಗರ)
ಅಕ್ಟೋಬರ್ 27: ಭೈದೂಜಿ/ಚಿತ್ರಗುಪ್ತ ಜಯಂತಿ/ ಲಕ್ಷ್ಮೀ ಪೂಜೆ /ದೀಪಾವಳಿ (ಗ್ಯಾಂಗ್ಟಾಕ್, ಇಂಫಾಲ್, ಕಾನ್ಪುರ ಹಾಗೂ ಲಖನೌ)
ಅಕ್ಟೋಬರ್ 30: ಭಾನುವಾರ
ಅಕ್ಟೋಬರ್ 31: ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಜನ್ಮದಿನ /ಸೂರ್ಯ ಪಶ್ಟಿ ದಲಾ ಛತ್ತ / ಛತ್ತ ಪೂಜೆ (ಅಹ್ಮದಾಬಾದ್, ಪಟ್ನಾ ಹಾಗೂ ರಾಂಚಿ)