*ಮೇ ತಿಂಗಳ ರಜಾಪಟ್ಟಿ ಪ್ರಕಟಿಸಿದ ಆರ್ ಬಿಐ*ಮೇ ಮೊದಲ ಮೂರು ದಿನ ಬ್ಯಾಂಕಿಗೆ ರಜೆ*ಆರ್ ಬಿಐ ರಜಾಪಟ್ಟಿಯಲ್ಲಿರುವ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ.
ನವದೆಹಲಿ (ಏ.28): ಮೇ ತಿಂಗಳ ಆರಂಭಕ್ಕೆ ಇನ್ನೆರಡು ದಿನಗಳಷ್ಟೇ ಬಾಕಿ ಉಳಿದಿವೆ. ಹೀಗಾಗಿ ಮತ್ತೊಂದು ಹೊಸ ತಿಂಗಳಿಗೆ ಕಾಲಿಡುವ ಮುನ್ನ ಆ ಮಾಸಿಕದಲ್ಲಿ ಮಾಡಿ ಮುಗಿಸಬೇಕಿರುವ ಕೆಲಸಗಳ ಪಟ್ಟಿಯನ್ನು ಈಗಲೇ ಮಾಡೋದು ಉತ್ತಮ. ಅದರಲ್ಲೂ ಬ್ಯಾಂಕಿಗೆ (Bank) ಸಂಬಂಧಿಸಿದ ಕೆಲಸಗಳೇನಾದ್ರೂ ಇದ್ರೆ ಮೇ ತಿಂಗಳ ರಜಾಪಟ್ಟಿಯನ್ನೊಮ್ಮೆ ಗಮನಿಸಿ ಪ್ಲ್ಯಾನ್ ಮಾಡೋದು ಒಳ್ಳೆಯದು. ಭಾರತೀಯ ರಿಸರ್ವ್ ಬ್ಯಾಂಕ್ (RBI) ಮೇ ತಿಂಗಳ ರಜಾ ಪಟ್ಟಿಯನ್ನು (Holiday list) ಬಿಡುಗಡೆ ಮಾಡಿದೆ. ಅದರ ಪ್ರಕಾರ ವಾರದ ಹಾಗೂ ವಿಶೇಷ ದಿನಗಳ ರಜೆಗಳನ್ನು ಸೇರಿಸಿದ್ರೆ ಮೇನಲ್ಲಿ ಒಟ್ಟು 11 ದಿನಗಳ ಕಾಲ ಬ್ಯಾಂಕುಗಳು ಕಾರ್ಯನಿರ್ವಹಿಸೋದಿಲ್ಲ.
ಆರ್ ಬಿಐ (RBI) ಪ್ರತಿ ತಿಂಗಳು ಬ್ಯಾಂಕುಗಳಿಗೆ ಸಂಬಂಧಿಸಿ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಆದ್ರೆ ಈ ರಜಾಪಟ್ಟಿಯಲ್ಲಿರೋ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ (States)ಅನ್ವಯಿಸೋದಿಲ್ಲ. ಆಯಾ ರಾಜ್ಯಕ್ಕೆ ಸಂಬಂಧಿಸಿದ ಹಬ್ಬ (Festival) ಹಾಗೂ ಆಚರಣೆಗಳ (Celebratons) ಹಿನ್ನೆಲೆಯಲ್ಲಿ ರಜೆಗಳನ್ನು ನಿಗದಿಪಡಿಸಲಾಗುತ್ತದೆ. ಹೀಗಾಗಿ ಆಯಾ ರಾಜ್ಯಕ್ಕೆ ಸಂಬಂಧಿಸಿದ ರಜೆಗಳನ್ನು (Holidays) ಮಾತ್ರ ಪರಿಗಣಿಸಬೇಕಾಗುತ್ತದೆ. ಸಾರ್ವಜನಿಕ (Pulic) ಹಾಗೂ ಗೆಜೆಟೆಡ್ ರಜೆಗಳು (Gazetted holidays) ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಭಾನುವಾರ (Sunday)ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ (Saturday) ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ.
ಬ್ಯಾಂಕ್ ರಜೆಗಳನ್ನು ಆರ್ ಬಿಐ (RBI) ಮೂರು ವರ್ಗಗಳನ್ನಾಗಿ ವಿಂಗಡಿಸಿದೆ. 1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್ ಕ್ಲೋಸಿಂಗ್ ರಜೆಗಳು. ಆರ್ ಬಿಐ ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕುಗಳು, ಕೋಆಪರೇಟಿವ್ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ ಅನ್ವಯಿಸಲಿವೆ.
LIC IPO:ಮೇ 4-9ರ ತನಕ ಎಲ್ಐಸಿ ಐಪಿಒ; ಪ್ರತಿ ಷೇರಿನ ಬೆಲೆ ಎಷ್ಟು ಗೊತ್ತಾ? ಪಾಲಿಸಿದಾರರಿಗೆ ಡಿಸ್ಕೌಂಟ್ ಆಫರ್!
ಕೆಲವು ರಜೆಗಳು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿದ್ದು, ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಇನ್ನು ಉಳಿದವು ದೇಶಾದ್ಯಂತವಿರುವ ಬ್ಯಾಂಕುಗಳಿಗೆ ಅನ್ವಯಿಸುತ್ತವೆ. ಮೇನಲ್ಲಿ ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರಗಳ ಜೊತೆಗೆ ಹಬ್ಬಗಳ ಕಾರಣಕ್ಕೆ 4 ದಿನಗಳ ರಜೆಗಳನ್ನು ಸೇರಿಸಿದ್ರೆ ಒಟ್ಟು 11 ದಿನಗಳ ಕಾಲ ರಜೆಯಿದೆ. ಇನ್ನು ಮೇ ಮೊದಲ ವಾರ ಅಂದ್ರೆ ಮೇ 1 ರಿಂದ 3ರ ತನಕ ಸತತ 3 ದಿನಗಳ ಕಾಲ ಬ್ಯಾಂಕಿಗೆ ರಜೆಯಿದೆ.
ಮೇ ತಿಂಗಳ ರಜಾಪಟ್ಟಿ ಹೀಗಿದೆ
ಮೇ 1: ಭಾನುವಾರ
ಮೇ 2: ರಂಜಾನ್ -ಈದ್ (ಈದ್- ಉಲ್- ಫಿತರ್). ಕೇರಳದ ಕೊಚ್ಚಿ, ತಿರುವನಂತಪುರಂನಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ.
ಮೇ 3: ಭಗವನ್ ಶ್ರೀ ಪರಶುರಾಮ್ ಜಯಂತಿ/ರಂಜಾನ್ -ಈದ್ (ಈದ್- ಉಲ್- ಫಿತರ್)/ಬಸವ ಜಯಂತಿ/ಅಕ್ಷಯ ತೃತೀಯ. ಕೊಚ್ಚಿ ಹಾಗೂ ತಿರುವನಂತಪುರಂ ಹೊರತುಪಡಿಸಿ ದೇಶಾದ್ಯಂತ ಬ್ಯಾಂಕುಗಳಿಗೆ ರಜೆ.
ಮೇ 8: ಭಾನುವಾರ
ಮೇ 9: ರವೀಂದ್ರ ನಾಥ್ ಟ್ಯಾಗೋರ್ ಜನ್ಮದಿನ. ಪಶ್ಚಿಮ ಬಂಗಾಳದಲ್ಲಿ ರಜೆ.
ಮೇ 14: ಎರಡನೇ ಶನಿವಾರ
Elon Musk Twitter ಟ್ವಿಟರ್‌ಗೆ ಎಲಾನ್ ಮಸ್ಕ್ ಬಾಸ್, 5 ಬದಲಾವಣೆ ಸಾಧ್ಯತೆ!
ಮೇ 15: ಭಾನುವಾರ
ಮೇ 16: ಬುದ್ಧ ಪೂರ್ಣಿಮಾ. ತ್ರಿಪುರ, ಬೇಲಾಪುರ್, ಮಧ್ಯ ಪ್ರದೇಶ, ಪಂಜಾಬ್, ಹರಿಯಾಣ, ಉತ್ತರಾಖಂಡ, ಜಮ್ಮು, ಉತ್ತರಪ್ರದೇಶ, ಮಹಾರಾಷ್ಟ್ರ, ನವದೆಹಲಿ, ಛತ್ತೀಸ್ ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ ಹಾಗೂ ಶ್ರೀನಗರದಲ್ಲಿ ಬ್ಯಾಂಕುಗಳಿಗೆ ರಜೆ.
ಮೇ 22: ಭಾನುವಾರ
ಮೇ 28: ನಾಲ್ಕನೇ ಶನಿವಾರ
ಮೇ 29: ಭಾನುವಾರ
