Fixed Deposits:ವಿವಿಧ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ ಬಡ್ಡಿದರ ಎಷ್ಟಿದೆ? ಯಾವ ಬ್ಯಾಂಕಿನಲ್ಲಿ FD ಖಾತೆ ತೆರೆಯೋದು ಬೆಸ್ಟ್?

*ಇತ್ತೀಚೆಗೆ ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್ ಬಿಐ, ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕುಗಳು
*ಭಾರತದಲ್ಲಿ ಮಧ್ಯಮ ವರ್ಗದ ಜನರಿಗೆ ಹೂಡಿಕೆಗೆ ಎಫ್ ಡಿ ಅಚ್ಚುಮೆಚ್ಚು
*ಎಫ್ ಡಿಯಲ್ಲಿನ ಹೂಡಿಕೆ ಸುರಕ್ಷಿತ ಹಾಗೂ ಉತ್ತಮ ರಿಟರ್ನ್ಸ್ ನೀಡುತ್ತದೆ

Bank FDs SBI vs HDFC Bank vs ICICI Bank Latest Fixed Deposit Rates Here

Business Desk:ಭಾರತದಲ್ಲಿ ಮಧ್ಯಮ ವರ್ಗದ ಜನರಿಗೆ ಸಣ್ಣ ಹೂಡಿಕೆಗೆ ಸ್ಥಿರ ಠೇವಣಿ (Fixed deposit) ಅಥವಾ ಎಫ್ ಡಿ (FD) ಅತ್ಯಂತ ಜನಪ್ರಿಯ ಮಾಧ್ಯಮವಾಗಿದೆ. ಹೆಚ್ಚಿನ ರಿಸ್ಕ್ ಹೊಂದಿರದ ಅತ್ಯಂತ ಸುರಕ್ಷಿತ ಹಾಗೂ ಉತ್ತಮ ರಿಟರ್ನ್ ನೀಡೋ ಯೋಜನೆಗಳಲ್ಲಿ ಹೂಡಿಕೆ ಮಾಡಬಯಸುವವರಿಗೆ ಅದ್ರಲ್ಲೂ ಹಿರಿಯ ನಾಗರಿಕರಿಗೆ (senior citizens) ಹೂಡಿಕೆಗೆ ಬ್ಯಾಂಕ್ ಎಫ್ ಡಿ (FD) ಅಚ್ಚುಮೆಚ್ಚು. 

ಎಫ್ ಡಿಗಳು ಸ್ಥಿರ ಹಾಗೂ ಖಚಿತ ದರದ ರಿಟರ್ನ್ಸ್ ಒದಗಿಸುತ್ತವೆ. ಇತ್ತೀಚೆಗೆ ಎಚ್ ಡಿಎಫ್ ಸಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಮಹೀಂದ್ರ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಸೇರಿದಂತೆ ಖಾಸಗಿ ಹಾಗೂ ಸಾರ್ವಜನಿಕ ವಲಯದ ಬ್ಯಾಂಕುಗಳು ವಿವಿಧ ಮೊತ್ತದ ಎಫ್ ಡಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿವೆ. ಹಾಗಾದ್ರೆ ವಿವಿಧ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ (FD) ಮೇಲಿನ ಬಡ್ಡಿದರ ಎಷ್ಟಿದೆ? ಇಲ್ಲಿದೆ ಮಾಹಿತಿ.

Interest Rate Hike: ಗೃಹ ಸಾಲದ ಮೇಲಿನ ಬಡ್ಡಿ ದರ ಹೆಚ್ಚಿಸಿದ ಎಚ್ ಡಿಎಫ್ ಸಿ ಬ್ಯಾಂಕ್; ಪರಿಷ್ಕೃತ ದರ ಮೇ 1ರಿಂದಲೇ ಜಾರಿಗೆ

ಪ್ರಮುಖ ಬ್ಯಾಂಕುಗಳ ಇತ್ತೀಚಿಗಿನ FD ಬಡ್ಡಿದರಗಳು ಹೀಗಿವೆ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಎಸ್ ಬಿಐ (SBI) 2022ರ ಮಾರ್ಚ್ 10ರಿಂದ ಹೆಚ್ಚಿಸಿವೆ. 
7 ರಿಂದ 14 ದಿನಗಳು: ಸಾರ್ವಜನಿಕರಿಗೆ ಶೇ.2.90; ಹಿರಿಯ ನಾಗರಿಕರಿಗೆ ಶೇ.3.40
15ರಿಂದ 29 ದಿನಗಳು:  ಸಾರ್ವಜನಿಕರಿಗೆ ಶೇ.2.90; ಹಿರಿಯ ನಾಗರಿಕರಿಗೆ ಶೇ.3.40
30ರಿಂದ  45 ದಿನಗಳು:ಸಾರ್ವಜನಿಕರಿಗೆ ಶೇ.2.90; ಹಿರಿಯ ನಾಗರಿಕರಿಗೆ ಶೇ.3.40
46 ರಿಂದ  60 ದಿನಗಳು: ಸಾರ್ವಜನಿಕರಿಗೆ ಶೇ.3.90; ಹಿರಿಯ ನಾಗರಿಕರಿಗೆ ಶೇ.4.40
61 ರಿಂದ  90 ದಿನಗಳು: ಸಾರ್ವಜನಿಕರಿಗೆ ಶೇ.3.90; ಹಿರಿಯ ನಾಗರಿಕರಿಗೆ ಶೇ.4.40
91 ರಿಂದ  120 ದಿನಗಳು:ಸಾರ್ವಜನಿಕರಿಗೆ ಶೇ.3.90; ಹಿರಿಯ ನಾಗರಿಕರಿಗೆ ಶೇ.4.40
6 ತಿಂಗಳು 1 ದಿನದಿಂದ 9 ತಿಂಗಳು: ಸಾರ್ವಜನಿಕರಿಗೆ ಶೇ.4.40; ಹಿರಿಯ ನಾಗರಿಕರಿಗೆ ಶೇ.4.90
9 ತಿಂಗಳು 1ದಿನದಿಂದ ವರ್ಷಕ್ಕಿಂತ ಕಡಿಮೆ: ಸಾರ್ವಜನಿಕರಿಗೆ ಶೇ.4.40; ಹಿರಿಯ ನಾಗರಿಕರಿಗೆ ಶೇ.4.90
1ರಿಂದ 2 ವರ್ಷಗಳು: ಸಾರ್ವಜನಿಕರಿಗೆ ಶೇ.4.40; ಹಿರಿಯ ನಾಗರಿಕರಿಗೆ ಶೇ.4.90
2 ರಿಂದ 3 ವರ್ಷಗಳು: ಸಾರ್ವಜನಿಕರಿಗೆ ಶೇ.5.20; ಹಿರಿಯ ನಾಗರಿಕರಿಗೆ ಶೇ.5.70
3 ವರ್ಷ 1 ದಿನದಿಂದ 5 ವರ್ಷಗಳು:  ಸಾರ್ವಜನಿಕರಿಗೆ ಶೇ.5.45; ಹಿರಿಯ ನಾಗರಿಕರಿಗೆ ಶೇ.5.95
5 ವರ್ಷ 1 ದಿನದಿಂದ 10 ವರ್ಷಗಳು: ಸಾರ್ವಜನಿಕರಿಗೆ ಶೇ.5.50; ಹಿರಿಯ ನಾಗರಿಕರಿಗೆ ಶೇ.6.30

ಎಚ್ ಡಿಎಫ್ ಸಿ ಬ್ಯಾಂಕ್ (HDFC Bank)
2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗಳ ಮೇಲಿನ ಬಡ್ಡಿದರವನ್ನು ಎಚ್ ಡಿಎಫ್ ಸಿ ಬ್ಯಾಂಕ್ ಏರಿಕೆ ಮಾಡಿದ್ದು, ಇದು ಏಪ್ರಿಲ್ 6ರಿಂದ ಜಾರಿಗೆ ಬರಲಿದೆ.7 ರಿಂದ 14 ದಿನಗಳು: ಸಾರ್ವಜನಿಕರಿಗೆ ಶೇ.2.50 ; ಹಿರಿಯ ನಾಗರಿಕರಿಗೆ ಶೇ.3
15ರಿಂದ 29 ದಿನಗಳು:  ಸಾರ್ವಜನಿಕರಿಗೆ ಶೇ.2.50; ಹಿರಿಯ ನಾಗರಿಕರಿಗೆ ಶೇ.3
30ರಿಂದ  45 ದಿನಗಳು:ಸಾರ್ವಜನಿಕರಿಗೆ ಶೇ.3; ಹಿರಿಯ ನಾಗರಿಕರಿಗೆ ಶೇ.3.50
46 ರಿಂದ  60 ದಿನಗಳು: ಸಾರ್ವಜನಿಕರಿಗೆ ಶೇ.3; ಹಿರಿಯ ನಾಗರಿಕರಿಗೆ ಶೇ.3.50
61 ರಿಂದ  90 ದಿನಗಳು: ಸಾರ್ವಜನಿಕರಿಗೆ ಶೇ.3; ಹಿರಿಯ ನಾಗರಿಕರಿಗೆ ಶೇ.3.50
91 ರಿಂದ  120 ದಿನಗಳು:ಸಾರ್ವಜನಿಕರಿಗೆ ಶೇ.3.50; ಹಿರಿಯ ನಾಗರಿಕರಿಗೆ ಶೇ.4
6 ತಿಂಗಳು 1 ದಿನದಿಂದ 9 ತಿಂಗಳು: ಸಾರ್ವಜನಿಕರಿಗೆ ಶೇ.4.40; ಹಿರಿಯ ನಾಗರಿಕರಿಗೆ ಶೇ.4.90
9 ತಿಂಗಳು 1ದಿನದಿಂದ ವರ್ಷಕ್ಕಿಂತ ಕಡಿಮೆ: ಸಾರ್ವಜನಿಕರಿಗೆ ಶೇ.4.40; ಹಿರಿಯ ನಾಗರಿಕರಿಗೆ ಶೇ.4.90
1ರಿಂದ 2 ವರ್ಷಗಳು: ಸಾರ್ವಜನಿಕರಿಗೆ ಶೇ.5.10; ಹಿರಿಯ ನಾಗರಿಕರಿಗೆ ಶೇ.5.60
2 ರಿಂದ 3 ವರ್ಷಗಳು: ಸಾರ್ವಜನಿಕರಿಗೆ ಶೇ.5.20; ಹಿರಿಯ ನಾಗರಿಕರಿಗೆ ಶೇ.5.70
3 ವರ್ಷ 1 ದಿನದಿಂದ 5 ವರ್ಷಗಳು:  ಸಾರ್ವಜನಿಕರಿಗೆ ಶೇ.5.45; ಹಿರಿಯ ನಾಗರಿಕರಿಗೆ ಶೇ.5.95
5 ವರ್ಷ 1 ದಿನದಿಂದ 10 ವರ್ಷಗಳು: ಸಾರ್ವಜನಿಕರಿಗೆ ಶೇ. 5.60 ; ಹಿರಿಯ ನಾಗರಿಕರಿಗೆ ಶೇ.6.35

ಯೆಸ್ ಬ್ಯಾಂಕ್-ಡಿಎಚ್‌ಎಫ್‌ಎಲ್ ಹಗರಣ: ಮುಂಬೈ, ಪುಣೆಯಲ್ಲಿ ಸಿಬಿಐ ದಾಳಿ

ಐಸಿಐಸಿಐ ಬ್ಯಾಂಕ್ (ICICI Bank)
ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಲು ಬಯಸುವವರು ಐಸಿಐಸಿಐ ಬ್ಯಾಂಕ್ ನಲ್ಲಿ ಎಫ್ ಡಿ ಇಡೋ ಬಗ್ಗೆ ಯೋಚಿಸಬಹುದು. 2 ಕೋಟಿ ರೂ.ಗಿಂತ ಮೇಲ್ಪಟ್ಟ ಹಾಗೂ 5 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಲಾಗಿದ್ದು, ಏಪ್ರಿಲ್ 28ರಿಂದ ಜಾರಿಗೆ ಬಂದಿದೆ.
7 ರಿಂದ 14 ದಿನಗಳು: ಸಾರ್ವಜನಿಕರಿಗೆ ಶೇ.2.50 ; ಹಿರಿಯ ನಾಗರಿಕರಿಗೆ ಶೇ.2.50
15ರಿಂದ 29 ದಿನಗಳು:  ಸಾರ್ವಜನಿಕರಿಗೆ ಶೇ.2.50; ಹಿರಿಯ ನಾಗರಿಕರಿಗೆ ಶೇ.2.50
30ರಿಂದ  45 ದಿನಗಳು:ಸಾರ್ವಜನಿಕರಿಗೆ ಶೇ. 2.75; ಹಿರಿಯ ನಾಗರಿಕರಿಗೆ ಶೇ.2.75
46 ರಿಂದ  60 ದಿನಗಳು: ಸಾರ್ವಜನಿಕರಿಗೆ ಶೇ. 2.75; ಹಿರಿಯ ನಾಗರಿಕರಿಗೆ ಶೇ. 2.75
61 ರಿಂದ  90 ದಿನಗಳು: ಸಾರ್ವಜನಿಕರಿಗೆ ಶೇ.3; ಹಿರಿಯ ನಾಗರಿಕರಿಗೆ ಶೇ.3
91 ರಿಂದ  120 ದಿನಗಳು:ಸಾರ್ವಜನಿಕರಿಗೆ ಶೇ.3.35 ; ಹಿರಿಯ ನಾಗರಿಕರಿಗೆ ಶೇ.3.35
121ರಿಂದ 184 ದಿನಗಳು: ಸಾರ್ವಜನಿಕರಿಗೆ ಶೇ.3.35 ; ಹಿರಿಯ ನಾಗರಿಕರಿಗೆ ಶೇ.3.35
185ರಿಂದ 270 ದಿನಗಳು: ಸಾರ್ವಜನಿಕರಿಗೆ ಶೇ.3.60 ; ಹಿರಿಯ ನಾಗರಿಕರಿಗೆ ಶೇ.3.60
271ದಿನಗಳಿಂದ 1 ವರ್ಷದೊಳಗೆ:  ಸಾರ್ವಜನಿಕರಿಗೆ ಶೇ.3.80 ; ಹಿರಿಯ ನಾಗರಿಕರಿಗೆ ಶೇ.3.80
ಒಂದು ವರ್ಷದಿಂದ 389 ದಿನಗಳು: ಸಾರ್ವಜನಿಕರಿಗೆ ಶೇ.4.35 ; ಹಿರಿಯ ನಾಗರಿಕರಿಗೆ ಶೇ. 4.35
2 ವರ್ಷ 1ದಿನದಿಂದ 3 ವರ್ಷಗಳು: ಸಾರ್ವಜನಿಕರಿಗೆ ಶೇ.4.70 ; ಹಿರಿಯ ನಾಗರಿಕರಿಗೆ ಶೇ.4.70
3 ವರ್ಷ 1 ದಿನದಿಂದ 5 ವರ್ಷಗಳು:  ಸಾರ್ವಜನಿಕರಿಗೆ ಶೇ.4.80; ಹಿರಿಯ ನಾಗರಿಕರಿಗೆ ಶೇ.4.80
5 ವರ್ಷ 1 ದಿನದಿಂದ 10 ವರ್ಷಗಳು: ಸಾರ್ವಜನಿಕರಿಗೆ ಶೇ. 4.80 ; ಹಿರಿಯ ನಾಗರಿಕರಿಗೆ ಶೇ.4.80


 

Latest Videos
Follow Us:
Download App:
  • android
  • ios