Asianet Suvarna News Asianet Suvarna News

ಏ.1ರಿಂದ ಹಾಲ್‌ಮಾರ್ಕ್ ಇಲ್ಲದ ಚಿನ್ನ ಮಾರಾಟ ನಿಷೇಧ

ಆರು ಅಂಕಿಗಳ ಕೋಡ್‌ ಇಲ್ಲದೆ ಹಾಲ್‌ಮಾರ್ಕ್ ಮಾಡದ ಚಿನ್ನಾಭರಣ ಮತ್ತು ಚಿನ್ನದ ಕಲಾಕೃತಿಗಳ ಮಾರಾಟವನ್ನು ಏ.1ರಿಂದ ನಿಷೇಧಿಸಲಾಗಿದೆ.

Ban on sale of gold without hallmark from april 1st akb
Author
First Published Mar 4, 2023, 8:14 AM IST

ನವದೆಹಲಿ: ಆರು ಅಂಕಿಗಳ ಕೋಡ್‌ ಇಲ್ಲದೆ ಹಾಲ್‌ಮಾರ್ಕ್ ಮಾಡದ ಚಿನ್ನಾಭರಣ ಮತ್ತು ಚಿನ್ನದ ಕಲಾಕೃತಿಗಳ ಮಾರಾಟವನ್ನು ಏ.1ರಿಂದ ನಿಷೇಧಿಸಲಾಗಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್‌ ಗೋಯಲ್‌ ಅವರು ಶುಕ್ರವಾರ ಬ್ಯೂರೋ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್ಸ್ (ಬಿಐಎಸ್‌) ಕುರಿತ ಸಭೆ ನಡೆಸಿದ್ದು, ಇಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಬಿಐಎಸ್‌ ಪದ್ಧತಿಯನ್ನು ಉತ್ತೇಜಿಸಲು ಬಿಐಎಸ್‌ ಸರ್ಟಿಫಿಕೇಟ್‌ಗೆ (BIS certificate) ಶುಲ್ಕದ ಮೇಲೆ ಶೇ.80ರಷ್ಟು ರಿಯಾಯ್ತಿ ನೀಡಲು ನಿರ್ಧರಿ ಸಲಾಗಿದೆ. ಚಿನ್ನದ ಹಾಲ್‌ಮಾರ್ಕಿಂಗ್‌ ಅಮೂಲ್ಯವಾದ ಲೋಹದ ಶುದ್ಧತೆಯ ಪ್ರಮಾಣೀಕರಣವಾಗಿದೆ. ಇದು ಜೂ. 16, 2021 ರವರೆಗೆ ಸ್ವಯಂಪ್ರೇರಿತವಾಗಿತ್ತು. ಅದರ ನಂತರ, ಹಂತ ಹಂತವಾಗಿ ಹಾಲ್‌ಮಾರ್ಕಿಂಗ್‌ ಜಾರಿಗೆ ಸರ್ಕಾರ ನಿರ್ಧರಿಸಿತ್ತು. ಮೊದಲ ಹಂತದಲ್ಲಿ 256 ಜಿಲ್ಲೆಗಳಲ್ಲಿ ಕಡ್ಡಾಯಗೊಳಿಸಲಾಗಿತ್ತು. 2ನೇ ಹಂತದಲ್ಲಿ 32 ಜಿಲ್ಲೆಗಳನ್ನು ಸೇರಿಸಲಾಗಿದ್ದು, ಒಟ್ಟು ಸಂಖ್ಯೆ 288ಕ್ಕೆ ಏರಿಕೆಯಾಗಿದೆ. ಇನ್ನೂ 51 ಜಿಲ್ಲೆಗಳು ಸೇರ್ಪಡೆಯಾಗುತ್ತಿವೆ. ಏ.1ರಿಂದ ಬಿಐಎಸ್‌ ಇರುವ ಆಭರಣ ಮಾರಾಟ ಮಾತ್ರ ಅನುಮತಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

Follow Us:
Download App:
  • android
  • ios