ಐಷಾರಾಮಿ ಫ್ಯಾಶನ್ ಬ್ರ್ಯಾಂಡ್, ಅಮೆರಿಕಾದ ಆನ್‌ಲೈನ್‌ ಮಾರುಕಟ್ಟೆ Balenciaga ಈಗ ಹೊಸತೊಂದು ಅತ್ಯಂತ ದುಬಾರಿ ವಸ್ತುವಿನೊಂದಿಗೆ ಮುನ್ನೆಲೆಗೆ ಬಂದಿದೆ. 

ಐಷಾರಾಮಿ ಫ್ಯಾಶನ್ ಬ್ರ್ಯಾಂಡ್, ಅಮೆರಿಕಾದ ಆನ್‌ಲೈನ್‌ ಮಾರುಕಟ್ಟೆ Balenciaga ಈಗ ಹೊಸತೊಂದು ಅತ್ಯಂತ ದುಬಾರಿ ವಸ್ತುವಿನೊಂದಿಗೆ ಮುನ್ನೆಲೆಗೆ ಬಂದಿದೆ. ಕೆಲ ದಿನಗಳ ಹಿಂದೆ ನೋಡಲು ಕಿತ್ತೋಗಿರುವ ರೀತಿ ಕಾಣಿಸುತ್ತಿದ್ದ ಶೂಗಳಿಗೆ ದುಬಾರಿ ಮೊತ್ತದ ಬೆಲೆ ತೋರಿಸುವ ಮೂಲಕ ಐಷಾರಾಮಿ ಫ್ಯಾಶನ್ ಬ್ರ್ಯಾಂಡ್ ಬಾಲೆನ್ಸಿಯಗ ಆನ್‌ಲೈನ್‌ನಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಅದೇ ರೀತಿ ಈಗ ನೋಡಲು ಶೂ ಲೇಸ್‌ನಂತಿರುವ ದುಬಾರಿ ಬೆಲೆಯ ಕಿವಿಯೋಲೆ (ಹ್ಯಾಂಗಿಂಗ್ಸ್) ಯೊಂದಿಗೆ ಬಾಲೆನ್ಸಿಯಗ ಮತ್ತೆ ಆನ್‌ಲೈನ್‌ನಲ್ಲಿ ಸುದ್ದಿಯಲ್ಲಿದೆ. 

ಶೂಲೇಸ್‌ನಂತೆ ಕಾಣುವ ಈ ಬಾಲೆನ್ಸಿಯಗ ಬ್ರಾಂಡ್‌ನ ಕಿವಿಯೋಲೆಯ ದರ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ. ಇಷ್ಟೊಂದು ರೇಟ್ ಕೊಟ್ಟು ಶೂ ಲೇಸ್ ಯಾಕೆ ಹಾಕೊಳ್ಲಿ. ಬಂಗಾರದ್ದೇ ಓಲೆ ಮಾಡ್ಸಿಕೊಳ್ಳೋಣ ಅಂತ ಹೇಳುವುದಂತು ನಿಜ. ಯಾಕೆಂದರೆ ಇವುಗಳ ಬೆಲೆ ಬರೋಬರಿ 216 ಡಾಲರ್ ಅಂದರೆ ಭಾರತದ 17,232 ರೂಪಾಯಿಗಳು. 

View post on Instagram

ಬಾಲೆನ್ಸಿಯಾಗ ಶೂಲೇಸ್‌ಗಳಂತೆ ಕಾಣುವ ಕಿವಿಯೋಲೆ ಉತ್ಪನ್ನವು ಕೊಕ್ಕೆ ಹೊಂದಿದ್ದು, ನೇತಾಡುವ ನಿಜವಾದ ಶೂಲೇಸ್‌ಗಳನ್ನು ಹೊಂದಿದೆ. ಈ ಈ ಜೋಡಿ ಕಿವಿಯೋಲೆಗಳ ಬೆಲೆ 216 ಅಮೆರಿಕನ್ ಡಾಲರ್‌, ಅಂದರೆ ಸರಿ ಸುಮಾರು 17,232 ರೂಪಾಯಿ. ಇದರ ಫೋಟೋವನ್ನು ಹೈಸ್ನೋಬಿಟಿ ತನ್ನ Instagram ಖಾತೆಯಲ್ಲಿ ಹಂಚಿಕೊಂಡಿದ್ದು, ಅದು ಸ್ಪಷ್ಟವಾಗಿ ವೈರಲ್ ಆಗಿದೆ. ಹೈಸ್ನೋಬಿಟಿಯು ಜಾಗತಿಕ ಫ್ಯಾಷನ್ ಮತ್ತು ಲೈಫ್‌ಸ್ಟೈಲ್‌ ಮೀಡಿಯಾ ಬ್ರ್ಯಾಂಡ್ ಆಗಿದ್ದು, ಇದನ್ನು 2005 ರಲ್ಲಿ ಡೇವಿಡ್ ಫಿಶರ್ ಸ್ಥಾಪಿಸಿದರು. ಇದನ್ನು ಜರ್ಮನ್ ಇ-ಕಾಮರ್ಸ್ ದೈತ್ಯ ಝಲ್ಯಾಂಡೊ 2022 ರಲ್ಲಿ ಖರೀದಿಸಿದರು. ಹೈಸ್ನೋಬಿಟಿಯು ಬರ್ಲಿನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಆಮ್‌ಸ್ಟರ್‌ಡ್ಯಾಮ್, ಲಂಡನ್, ಮಿಲನ್, ನ್ಯೂಯಾರ್ಕ್, ಲಾಸ್ ಏಂಜಲೀಸ್ ಮತ್ತು ಸಿಡ್ನಿಯಲ್ಲಿ ಕಚೇರಿಗಳನ್ನು ಹೊಂದಿದೆ. ಇನ್ನು ಬ್ಯಾಲೇನ್ಸಿಯಾಗ ಈ ರೀತಿ ಅಸಂಬದ್ಧವಾಗಿ ಕೆಲ ವಸ್ತುಗಳಿಗೆ ದುಬಾರಿ ಬೆಲೆ ಘೋಷಿಸುತ್ತಿರುವುದಕ್ಕೆ ನೆಟ್ಟಿಗರು ಈ ಫ್ಯಾಷನ್‌ ಬ್ರಾಂಡ್‌ನ್ನು ಫುಲ್ ಟ್ರೋಲ್ ಮಾಡ್ತಿದ್ದಾರೆ. 

ಅಬ್ಬಬ್ಬಾ..ಕಸ ಎಸೆಯೋ ಬ್ಯಾಗ್ ಇಷ್ಟೊಂದು ಕಾಸ್ಟ್ಲೀನಾ?

ಬಾಲೆನ್ಸಿಯಗ ಉನ್ನತ-ಮಟ್ಟದ ಐಷಾರಾಮಿ ಬ್ರ್ಯಾಂಡ್‌ಗಳ ಕೆಲವು ವಿಲಕ್ಷಣ ಕ್ರಿಯೇಷನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಈಗಾಗಲೇ (ಅಪ)ಖ್ಯಾತಿ ಗಳಿಸಿದೆ. ಅವರ ಕೆಲ ಉತ್ಪನ್ನಗಳು ಜನಸಾಮಾನ್ಯರನ್ನು ಮೆಚ್ಚಿಸುವ ಬದಲು ದಿಗ್ಭ್ರಮೆಗೊಳಿಸುತ್ತವೆ. ಈಗ ಶೂಲೇಸ್‌ಗಳನ್ನು ಹೋಲುವ ಕಿವಿಯೋಲೆಗಳನ್ನು ತಯಾರಿಸುವ ಮೂಲಕ ಸುದ್ದಿಯಾಗಿದೆ. ಕೆಲದಿನಗಳ ಹಿಂದೆ USD 1,790 ಬೆಲೆಗೆ ಕಸ ಎಸೆಯುವ ಚೀಲ ಹೊರತರುವ ಮೂಲಕ ಸಾಕಷ್ಟು ಸುದ್ದಿಯಾಗಿತ್ತು. ಈ ಕಸದ ಚೀಲದ ಅಂದಾಜು ಬೆಲೆ 1,42,569 ರೂಪಾಯಿಯಾಗಿತ್ತು. ಕಪ್ಪು, ಬಿಳಿ, ಕೆಂಪು, ನೀಲಿ ಮತ್ತು ಹಳದಿ ಎಂಬ ಐದು ಬಣ್ಣಗಳಲ್ಲಿ ಈ ಬ್ಯಾಗ್ ಲಭ್ಯವಿತ್ತು. 

ಈ ಬ್ಯಾಗ್ ಬಿಡುಗಡೆಯಾದ ನಂತರ, ಅನೇಕ ಟ್ವಿಟರ್ ಬಳಕೆದಾರರು ವಿವಿಧ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ (Social media) ಕಸದ ಚೀಲಗಳ ಬಗ್ಗೆ ಚರ್ಚೆಯಾಗಿತ್ತು. ಈ ಚೀಲವು ಕರುವಿನ ಚರ್ಮದಿಂದ ಮಾಡಲ್ಪಟ್ಟಿತ್ತು. ಮಾರ್ಚ್‌ನಲ್ಲಿ ಪ್ಯಾರಿಸ್‌ನಲ್ಲಿ 2022 ರ ರೆಡಿ-ಟು-ವೇರ್ ಸಂಗ್ರಹಣೆಯಲ್ಲಿ ಬ್ಯಾಗ್ ಕಾಣಿಸಿಕೊಂಡಿತ್ತು. 

ಈ ಕಿತ್ತೋಗಿರೋ ಶೂಗಳ ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ