ಬಜಾಜ್ ಫೈನಾನ್ಸ್ ಮಹತ್ವದ ಮೈಲಿಗಲ್ಲು, 50,000 ಕೋಟಿ ರೂ ಗಡಿ ದಾಟಿದ ಫಿಕ್ಸೆಡ್ ಡೆಪಾಸಿಟ್!
ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ 50,000 ಕೋಟಿ ದಾಟಿದೆ. ಜೂನ್ 30, 2023ರಕ್ಕೆ ಅನ್ವಯಿಸುವಂತೆ ಠೇವಣಿ ಬಜಾಜ್ ಫೈನಾನ್ಸ್‌ನ ಏಕೀಕೃತ ಶೇಕಡಾ 21 ರಷ್ಟಿದೆ. ಇನ್ನು ಸಾಲ ಶೇಕಡಾ 28 ರಷ್ಟಿದೆ.

ಹೈದರಾಬಾದ್(ಆ.19) ಭಾರತದ ಪ್ರಮುಖ ಹಣಕಾಸು ಕಂಪನಿಗಳಲ್ಲಿ ಬಜಾಜ್ ಫಿನಾನ್ಸ್ ಅಗ್ರಸ್ಥಾನದಲ್ಲಿದೆ. ವೈವಿಧ್ಯಮಯ ಬ್ಯಾಂಕಿಂಗೇತರ ಹಣಕಾಸು ಕಂಪನಿ ಬಜಾಜ್ ಫೈನಾನ್ಸ್ ಇದೀಗ ಮಹತ್ವದ ಮೈಲಿಗಲ್ಲು ದಾಟಿದೆ. ಸ್ಥಿರ ಠೇವಣಿಯಲ್ಲಿ ಬಜಾಜ್ ಫಿನಾನ್ಸ್ 50,000 ಕೋಟಿ ರೂ ಗಡಿ ದಾಟಿದೆ. ಬಜಾಜ್ ಫಿನಾನ್ಸ್ 5 ಲಕ್ಷ ಠೇವಣಿದಾರರನ್ನು ಹೊಂದಿದ್ದರೆ, ಪ್ರತಿ ಠೇವಣಿದಾರರು 2.87ರಷ್ಟು ಠೇವಣಿ ಇರಿಸಿದ್ದಾರೆ. ಈ ಮೂಲಕ ಒಟ್ಟು 1.4 ಮಿಲಿಯನ್ ಠೇವಣಿ ಹೊಂದಿದ್ದಾರೆ.
ಬಜಾಜ್ ಫಿನಾನ್ಸ್ CRISIL, ICRA, CARE ಮತ್ತು ಇಂಡಿಯಾ ರೇಟಿಂಗ್‌ಗಳಿಂದ ಅತೀ ಹೆಚ್ಚಿನ ಅವಧಿಯ ಸಾಲದ AAA/Stableನ ಅತ್ಯಧಿಕ ಕ್ರೆಡಿಟ್ ರೇಟಿಂಗ್ ಹೊಂದಿದೆ. ಇನ್ನು ಅಲ್ಪಾವಧಿಯ ಸಾಲದ ಯೋಜನೆಗಾಗಿ A1+ ಮತ್ತು AAA (ಸ್ಥಿರ) CRISIL ಮತ್ತು ICRA ಸ್ಥಿರ ಠೇವಣಿ ಕಾರ್ಯಕ್ರಮ ಹೊಂದಿದೆ.
ಬಜಾಜ್ ಫಿನಾನ್ಸ್ ಆಕರ್ಷಕ ಬಡ್ಡಿದರದಲ್ಲಿ ದೀರ್ಘಾವದಿಯ ಉಳಿತಾಯ ಪರಿಹಾರ ನೀಡುವತ್ತ ಗಮನಹರಿಸಿದ್ದೇವೆ. ಸ್ಥಿರ ಠೇವಣಿ ಪೋರ್ಟ್ ಪೋಲಿಯೋದ ತ್ವರಿತ ಬೆಳವಣಿಗೆಯು ಎರಡು ಪಟ್ಟು ಹೆಚ್ಚಾಗಿದೆ. ಕಳೆದ 2 ವರ್ಷದಲ್ಲಿ ಬಜಾಜ್ ಫಿನ್‌ಸರ್ವ್ ಬ್ರ್ಯಾಂಡ್‌ನಲ್ಲಿನ ಗ್ರಾಹಕ ನಂಬಿಕೆಯನ್ನು ಪ್ರತಿಪಾದಿಸುತ್ತದೆ. ಇದರ ಜೊತೆಗೆ ಫಿಕ್ಸೆಡ್ ಡೆಪಾಸಿಟ್ ದೇಶಾದ್ಯಂತ ಡಿಜಿಟಲ್ ಬುಕಿಂಗ್ ಮಾಡುವ ಸುಲಭ ವಿಧಾನದಲ್ಲಿ ಮಾಡಬಹುದಾಗಿದೆ ಎಂದು ಬಜಾಜ್ ಫಿನಾನ್ಸ್ ಫಿಕ್ಸೆಡ್ ಠೇವಣಿ ಮತ್ತೂ ಹೂಡಿಕೆ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸಚಿನ್ ಸಿಕ್ಕಾ ಹೇಳಿದ್ದಾರೆ.
ಬಜಾಜ್ ಫಿನಾನ್ಸ್ ಗ್ರಾಹಕರಿಗೆ ಹಲವು ಕೊಡುಗೆ ನೀಡುತ್ತಿದೆ. ಹಿರಿಯ ನಾಗರಿಕರಿಗೆ ಶೇಕಡಾ 8.60, ಇತರರಿಗೆ ಶೇಕಡಾ 8.35 ರಷ್ಟು ಫಿಕ್ಸೆಡ್ ಡೆಪಾಸಿಟ್ ಮೇಲೆ ಹೆಚ್ಚಿನ ಬಡ್ಡಿದರದಲ್ಲಿ ಕೊಡುಗೆ ನೀಡುತ್ತಿದೆ. ಇದು 44 ತಿಂಗಳ ಅವಧಿಗೆ ಇರಲಿದೆ. ಕಳೆದ 10 ವರ್ಷದಲ್ಲಿ ಬಜಾಜ್ ಫಿನಾನ್ಸ್ CAGRನಲ್ಲಿ ಶೇಕಡಾ 60 ರಷ್ಟು ಠೇವಣಿ ಹಾಗೂ CAGRನಲ್ಲಿ ಶೇಕಡಾ 49 ರಷ್ಟು ಠೇವಣಿದಾರರ ಸಂಖ್ಯೆ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.
ಬಜಾಜ್ ಫಿನಾನ್ಸ್ ಗ್ರಾಹಕರಿಗೆ ಹೊರೆಯಾಗದ ರೀತಿಯಲ್ಲಿ ಬಡ್ಡಿದರ ನಿಗದಿಪಡಿಸಿದೆ. ಕಂಪನಿ 12 ತಿಂಗಳ ಅವಧಿಗೆ ಶೇಕಡಾ 7.40 ರಷ್ಟು ಹಾಗೂ ಶೇಕಡಾ 24 ತಿಂಗಳಿಗೆ ಶೇಕಡಾ 7.55ರಷ್ಟು ಬಡ್ಡಿದರ ನೀಡುತ್ತಿದೆ. ಇನ್ನು 36 ರಿಂದ 60 ತಿಂಗಳವರೆಗೆ ಶೇಕಡಾ 8.05 ರಷ್ಟು ಬಡ್ಡಿದರದಲ್ಲಿದೆ. ಇನ್ನು ಹಿರಿಯ ನಾಗರಿಕರಿಗೆ ಇದೇ ದರದಲ್ಲಿ ಶೇಕಡಾ 0.25 ಹೆಚ್ಚುವರಿಯಾಗಿ ನೀಡಲಾಗುತ್ತದೆ.
ಬಜಾಜ್ ಫಿನಾನ್ಸ್‌ನ 73 ಮಲಿಯನ್ ಗ್ರಾಹಕರ ಪೈಕಿ 40.2 ಮಿಲಿಯನ್ ಗ್ರಾಹಕರು ಆ್ಯಪ್ ಮೂಲಕ ಸಕ್ರಿಯರಾಗಿದ್ದಾರೆ. ಡಿಜಿಟಲ್ ಮೂಲಕ ಫಿಕ್ಸೆಡ್ ಡೆಪಾಸಿಟ್ ಆಯ್ಕೆಮಾಡಿಕೊಳ್ಳುವ ಗ್ರಾಹಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.
ಬಜಾಜ್ ಫಿನಾನ್ಸ್ ಲಿಮಿಟೆಡ್ ಕುರಿತು:
ಬಜಾಜ್ ಫಿನಾನ್ಸ್ ಲಿಮಿಟೆಡ್(BFL ಬಜಾಜ್ ಫಿನಾನ್ಸ್ ಅಥವಾ ಕಂಪನಿ) ಬಜಾಜ್ ಫಿನ್‌ಸರ್ವ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ. ರಿವರ್ಸ್ ಬ್ಯಾಂಕ್‌ನಲ್ಲಿ ನೋಂದಿಯಿಸಿರುವ ಡೆಪಾಸಿಟ್ ತೆಗೆದುಕೊಳ್ಳುವ ಬ್ಯಾಂಕಿಂಗೇತರ ಹಣಕಾಸು ಕಂಪನಿಯಾಗಿದೆ. ಬಜಾಜ್ ಫೈನಾನ್ಸ್‌ನ್ನು (NBFC-D) ಭಾರತ (RBI) ಮತ್ತು NBFC-ಹೂಡಿಕೆ ಹಾಗೂ ಕ್ರೆಡಿಟ್ ಕಂಪನಿ (NBFC-ICC) ಎಂದು ವರ್ಗೀಕರಿಸಲಾಗಿದೆ. ಬಜಾಜ್ ಫೈನಾನ್ಸ್ ಸಾಲ ನೀಡುವ ಹಾಗೂ ಡೆಪಾಸಿಟ್ ಸ್ವೀಕರಿಸುವ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಕಂಪನಿಯಾಗಿದೆ. ಚಿಲ್ಲರೆ ವ್ಯಾಪಾರ, SME, ವಾಣಿಜ್ಯ ಗ್ರಾಹಕರಾದ್ಯಂತ ವಿವಿಧ ಸಾಲದ ಪೋರ್ಟ್‌ಪೋಲಿಯೋ ಹೊಂದಿದೆ. ವಿಶೇಷವಾಗಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವಿಶೇಷ ಸ್ಥಾನ ಪಡೆದು ಮಹತ್ವದ ಉಪಸ್ಥಿತಿ ಹೊಂದಿದೆ. ಸಾರ್ವಜನಿಕ ಹಾಗೂ ಕಾರ್ಪೋರೇಟ್ ಡೆಪಾಸಿಟ್‌ಗಳನ್ನು ಸ್ವೀಕರಿಸುತ್ತದೆ. ಗ್ರಾಹಕರಿಗೆ ವಿವಿಧ ಹಣಕಾಸು ಸೇವೆ ಹಾಗೂ ಉತ್ಪನ್ನಗಳನ್ನು ನೀಡುತ್ತದೆ. ಬಜಾಜ್ ಫಿನಾನ್ಸ್ 36 ವರ್ಷಗಳಿಂದ ಭಾರತದಲ್ಲಿ ವ್ಯವಾಹರ ನಡೆಸಿಕೊಂಡು ಅತೀದೊಡ್ಡ ಬ್ಯಾಂಕಿಂಗೇತರ ಉದ್ಯಮವಾಗಿ ಬೆಳೆದು ನಿಂತಿದೆ. ಭಾರತದಲ್ಲಿ NBFC ವಲಯದಲ್ಲಿ ಬಜಾಜ್ ಫೈನಾನ್ಸ್ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಬರೋಬ್ಬರಿ 72.98 ಮಿಲಿಯನ್ ಗ್ರಾಹಕರ ಫ್ರಾಂಚೈಸಿ ಹೊಂದಿದೆ. ದೀರ್ಘಾವಧಿ ಸಾಲಕ್ಕಾಗಿ AAA/ಫಿಕ್ಸೆಡ್, ಅಲ್ಪಾವಧಿ ಸಾಲಕ್ಕಾಗಿ A1+ ಹಾಗೂ CRISIL AAA/Stable & [ICRA]AAA(Stable) ಎಫ್‌ಡಿ ಪೋಗ್ರಾಂಗೆ ಅತ್ಯಧಿಕ ಕ್ರೆಡಿಟ್ ರೇಟಿಂಗ್ ಹೊಂದಿದೆ. BBB-/ಸ್ಟೇಬಲ್ a ನ ದೀರ್ಘಾವಧಿಯ ವಿತರಕರ ಕ್ರೆಡಿಟ್ ರೇಟಿಂಗ್ ಹೊಂದಿದೆ. ಇನ್ನು S&P ಗ್ಲೋಬಲ್ ರೇಟಿಂಗ್‌ನಲ್ಲಿ A-3 ಸ್ಥಾನ ಪಡೆದುಕೊಂಡಿದೆ. ಬಜಾಜ್ ಫೈನಾನ್ಸ್ ಕುರಿತು ಹೆಚ್ಚಿನ ಮಾಹಿತಿಗಾಗಿ www.bajajfinserv.in/ ಭೇಟಿ ನೀಡಿ.