ಆಯುರ್ವೇದ, ಪತಂಜಲಿ ಉತ್ಪನ್ನಗಳ ಮೂಲಕ ದೇಶಾದ್ಯಂತ ಉದ್ಯಮಕ್ಕೆ ಹೊಸ ರೂಪ ನೀಡಿರುವ ಬಾಬಾ ರಾಮ್‌ದೇವ್ ಇದೀಗ ವಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಬರೋಬ್ಬರಿ 4,500 ಕೋಟಿ ರೂಪಾಯಿಗೆ ಜನರಲ್ ಇನ್ಶೂರೆನ್ಸ್ ಕಂಪನಿ ಖರೀದಿಸಿದೆ. 

ನವದೆಹಲಿ(ಮಾ.13) ಯೋಗ ಗುರು ಬಾಬಾ ರಾಮ್‌ದೇವ್ ಪತಂಜಲಿ ಮೂಲಕ ಭಾರತದಲ್ಲಿ ಉದ್ಯಮ ಸಾಮ್ರಾಜ್ಯ ಕಟ್ಟಿದ್ದಾರೆ. ಬಾಬಾ ರಾಮ್‌ದೇವ್ ಅವರ ನಿತ್ಯ ಉಪಯೋಗಿ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿರುವ ಬಾಬಾ ರಾಮ್‌ದೇವ್ ಪ್ರಮುಖವಾಗಿ ಆಯುರ್ವೇದ ಚಿಕಿತ್ಸೆ, ಆಯುರ್ವೇದಾ ಪದ್ಧತಿಯನ್ನು ಭಾರತದಲ್ಲಿ ಮತ್ತಷ್ಟು ಪ್ರಚುರಗೊಳಿಸಿದ್ದಾರೆ. ಇದೀಗ ಬಾಬಾ ರಾಮ್‌ದೇವ್ ವಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಕೋವಿಡ್ ಲಸಿಕೆ ತಯಾರಕರ ಫಾರ್ಮಾ ಕಂಪನಿ ಮಾಲೀಕ ಆಧಾರ್ ಪೂನಾವಾಲ ಅವರ ಮ್ಯಾಗ್ಮಾ ಜನರಲ್ ಇನ್ಶೂರೆನ್ಸ್ ಕಂಪನಿಯ ಬಹುತೇಕ ಕಾಲನ್ನು ಬಾಬಾ ರಾಮ್‌ದೇವ್ ಖರೀದಿಸಿದ್ದಾರೆ. 

ಬಾಬಾ ರಾಮದೇವ್-ಅದಾರ್ ಪೂನಾವಾಲಾ ಡೀಲ್: 
ಬಾಬಾ ರಾಮದೇವ್ ನೇತೃತ್ವದ ಕಂಪನಿ ಪತಂಜಲಿ ಆಯುರ್ವೇದ ಒಂದು ದೊಡ್ಡ ಒಪ್ಪಂದ ಮಾಡಿಕೊಂಡಿದೆ. ಇದರ ಅಡಿಯಲ್ಲಿ ಪತಂಜಲಿ ಆಯುರ್ವೇದ ಮತ್ತು ರಜನಿಗಂಧ ಬ್ರಾಂಡ್‌ನ ಮಾಲೀಕತ್ವ ಹೊಂದಿರುವ ಧರ್ಮಪಾಲ್ ಸತ್ಯಪಾಲ್ ಗ್ರೂಪ್ ಒಟ್ಟಾಗಿ ಕೊರೊನಾ ಲಸಿಕೆ ತಯಾರಿಸುವ ಅದಾರ್ ಪೂನಾವಾಲಾ ಅವರ ಕಂಪನಿ ಸನೋತಿ ಪ್ರಾಪರ್ಟೀಸ್ ಎಲ್‌ಎಲ್‌ಪಿಯಿಂದ ಮ್ಯಾಗ್ಮಾ ಜನರಲ್ ಇನ್ಶುರೆನ್ಸ್ ಸ್ವಾಧೀನಕ್ಕೆ ಒಪ್ಪಂದ ಮಾಡಿಕೊಂಡಿದೆ. 

ಬಾಬಾ ರಾಮದೇವ್ ಕಂಪನಿಗೆ ಶೇ.71ರಷ್ಟು ಲಾಭ; ಅತಿ ಹೆಚ್ಚು ಆದಾಯ ನೀಡಿದ ಪ್ರೊಡಕ್ಟ್ ಇದೇ ನೋಡಿ

ಎಷ್ಟು ಕೋಟಿಗೆ ಡೀಲ್?
ಮ್ಯಾಗ್ಮಾ ಜನರಲ್ ಇನ್ಶುರೆನ್ಸ್‌ನ ಮಾಲೀಕತ್ವ ಅದಾರ್ ಪೂನಾವಾಲಾ ಮತ್ತು ರೈಸಿಂಗ್ ಸನ್ ಹೋಲ್ಡಿಂಗ್ಸ್ ಅವರ ಬಳಿ ಇದೆ. ಬಾಬಾ ರಾಮದೇವ್ ಅವರ ಪತಂಜಲಿ ಮತ್ತು ರಜನಿಗಂಧದ ಡಿಎಸ್ ಗ್ರೂಪ್ ಈ ಡೀಲ್ ಬರೋಬ್ಬರಿ 4500 ಕೋಟಿ ರೂಪಾಯಿಗಳಿಗೆ ಪೂರ್ಣಗೊಳಿಸಲಿದೆ. ಈ ಡೀಲ್ ನಿಯಂತ್ರಕ ಅನುಮೋದನೆಗೆ ಒಳಪಟ್ಟು 4500 ಕೋಟಿ ರೂಪಾಯಿ ಮೌಲ್ಯದಲ್ಲಿ ನಡೆದಿದೆ ಎಂದು ಸನೋತಿ ಪ್ರಾಪರ್ಟೀಸ್ ಹೇಳಿದೆ.

ಮ್ಯಾಗ್ಮಾ ಜನರಲ್ ಇನ್ಶುರೆನ್ಸ್ ಏನು ಮಾಡುತ್ತದೆ?
ಮ್ಯಾಗ್ಮಾ ಜನರಲ್ ಇನ್ಶುರೆನ್ಸ್ ವಿವಿಧ ವಿಭಾಗಗಳಲ್ಲಿ 70 ಕ್ಕೂ ಹೆಚ್ಚು ಉತ್ಪನ್ನಗಳೊಂದಿಗೆ ಜನರಲ್ ವಿಮಾ ವಲಯದಲ್ಲಿ ಎಲ್ಲಾ ವಿಮಾ ಸೇವೆಗಳನ್ನು ನೀಡುತ್ತದೆ. ಕಂಪನಿಯು ರಿಟೇಲ್ ಗ್ರಾಹಕರಿಗೆ ಆರೋಗ್ಯ, ಅಪಘಾತ, ಮನೆ ವಿಮೆ, ಕಾರ್ಪೊರೇಟ್ ಉತ್ಪನ್ನಗಳಲ್ಲಿ ಬೆಂಕಿ, ಇಂಜಿನಿಯರಿಂಗ್ ಮತ್ತು ಮರೀನ್ ಇನ್ಶುರೆನ್ಸ್ ಸಹ ಮಾಡುತ್ತದೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಸಿಇಒ ಅದಾರ್ ಪೂನಾವಾಲಾ ಅವರ ಸನೋತಿ ಪ್ರಾಪರ್ಟೀಸ್‌ನಲ್ಲಿ 90% ಪಾಲನ್ನು ಹೊಂದಿದ್ದಾರೆ.

ಪತಂಜಲಿಯ ವ್ಯಾಪಕ ನೆಟ್‌ವರ್ಕ್‌ನಿಂದ ಭರ್ಜರಿ ಲಾಭ
ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತದಂತಹ ದೇಶಗಳಲ್ಲಿ ಜನರಲ್ ಇನ್ಶುರೆನ್ಸ್ ತುಂಬಾ ಕಡಿಮೆ ಇದೆ ಎಂದು ಪತಂಜಲಿ ಆಯುರ್ವೇದದ ಕಡೆಯಿಂದ ಹೇಳಲಾಗಿದೆ. ಭವಿಷ್ಯದಲ್ಲಿ ಈ ವಲಯದಲ್ಲಿ ಸಾಕಷ್ಟು ಸಾಧ್ಯತೆಗಳಿವೆ. ಇದರೊಂದಿಗೆ IRDAI 2047 ರ ವೇಳೆಗೆ ಎಲ್ಲರಿಗೂ ವಿಮೆ ಒದಗಿಸುವ ದೃಷ್ಟಿಯೊಂದಿಗೆ ಕೆಲಸ ಮಾಡುತ್ತಿದೆ. ಹೀಗಾಗಿ ಈ ವಲಯದಲ್ಲಿ 100 ಪ್ರತಿಶತ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶಗಳು ಕಾಣಿಸುತ್ತಿವೆ. ಇದರೊಂದಿಗೆ ಮ್ಯಾಗ್ಮಾ ಜನರಲ್ ಇನ್ಶುರೆನ್ಸ್‌ಗೆ ಪತಂಜಲಿ ಆಯುರ್ವೇದದ ವ್ಯಾಪಕ ನೆಟ್‌ವರ್ಕ್‌ನಿಂದ ಲಾಭ ಸಿಗಲಿದೆ. ಪತಂಜಲಿ ಉತ್ಪನ್ನಗಳು ಪ್ರಸ್ತುತ ದೇಶಾದ್ಯಂತ 2 ಲಕ್ಷ ಕೌಂಟರ್‌ಗಳು ಮತ್ತು 250 ಪತಂಜಲಿ ಮೆಗಾ ಸ್ಟೋರ್‌ಗಳಲ್ಲದೆ ರಿಲಯನ್ಸ್ ರಿಟೇಲ್, ಹೈಪರ್ ಸಿಟಿ, ಸ್ಟಾರ್ ಬಜಾರ್‌ನಲ್ಲಿಯೂ ಲಭ್ಯವಿದೆ.

ಈ ನಾಲ್ಕೇ ನಾಲ್ಕು ಟಿಪ್ಸ್ ಪಾಲಿಸಿದ್ರೆ ನಿಮ್ಮ ತಲೆಗೂದಲು ಕಪ್ಪಾಗೋದು ಗ್ಯಾರಂಟಿ