Asianet Suvarna News Asianet Suvarna News

MCLR ದರ ಹೆಚ್ಚಿಸಿದ ಆಕ್ಸಿಸ್ ಬ್ಯಾಂಕ್; ಏರಿಕೆಯಾಗಲಿದೆ ಗೃಹ, ವಾಹನ ಸಾಲಗಳ ಇಎಂಐ

*ಎಂಸಿಎಲ್ ಆರ್  35 ಬೇಸಿಸ್ ಪಾಯಿಂಟ್ ಹೆಚ್ಚಳ ಮಾಡಿದ ಆಕ್ಸಿಸ್ ಬ್ಯಾಂಕ್
*ಆರ್ ಬಿಐ ರೆಪೋದರ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಈ ಹೆಚ್ಚಳ
*ಮೇ 18ರಿಂದಲೇ ಹೊಸ ದರ ಜಾರಿಗೆ 

Axis Bank Hikes MCLR Rates Home Car Loan EMIs to Increase details here
Author
Bangalore, First Published May 18, 2022, 8:21 PM IST

ನವದೆಹಲಿ (ಮೇ 18): ಭಾರತದ ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಕ್ಸಿಸ್ ಬ್ಯಾಂಕ್ ( Axis Bank) ಕನಿಷ್ಠ ವೆಚ್ಚ ಆಧಾರಿತ ಸಾಲ ದರವನ್ನು (MCLR) ಅನ್ನು ಬುಧವಾರ (ಮೇ 18) ಹೆಚ್ಚಿಸಿದೆ. ವಿವಿಧ ಸಾಲಗಳ ಬಡ್ಡಿದರ (Interest rate) ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಎಂಸಿಎಲ್ ಆರ್ ಅನ್ನು 35 ಬೇಸಿಸ್ ಪಾಯಿಂಟ್ ಗಳಷ್ಟು (Basis Points) ಹೆಚ್ಚಳ ಮಾಡಲಾಗಿದೆ ಎಂದು ಆಕ್ಸಿಸ್ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಹೊಸ ದರವು ಇಂದಿನಿಂದಲೇ (ಮೇ 18) ಜಾರಿಗೆ ಬರಲಿದೆ.

ಎಂಸಿಎಲ್ಆರ್ (MCLR) ಹೆಚ್ಚಳದಿಂದ ಬ್ಯಾಂಕಿನಿಂದ ಪಡೆಯುವ ಪ್ರತಿ ಸಾಲ (Loan) ಕೂಡ ದುಬಾರಿಯಾಗುತ್ತದೆ. ಎಂಸಿಎಲ್ ಆರ್ ದರದ ದಿಢೀರ್ ಹೆಚ್ಚಳದಿಂದ ಆಕ್ಸಿಸ್ ಬ್ಯಾಂಕಿನ ಓವರ್ ನೈಟ್ ಹಾಗೂ ಒಂದು ತಿಂಗಳ ಎಂಸಿಎಲ್ ಆರ್ ದರ ಪ್ರಸ್ತುತ ಶೇ.7.55ಕ್ಕೆ ಬಂದು ನಿಂತಿದೆ. ಈ ಹಿಂದೆ ಈ ದರ ಶೇ.7.20  ಆಗಿತ್ತು. ಮೂರು ತಿಂಗಳ ಎಂಸಿಎಲ್ ಆರ್ ದರವನ್ನು ಶೇ.7.30 ರಿಂದ ಶೇ. 7.65 ಕ್ಕೆ ಹೆಚ್ಚಿಸಲಾಗಿದೆ. ಇನ್ನು ಆರು ತಿಂಗಳ ಎಂಸಿಎಲ್ ಆರ್ ದರವನ್ನು ಶೇ.7.35ರಿಂದ ಶೇ.7.70ಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ ಒಂದು ವರ್ಷದ ಎಂಸಿಎಲ್ ಆರ್ ದರವನ್ನು ಶೇ.7.40 ನಿಂದ ಶೇ.7.75 ಕ್ಕೆ ಹೆಚ್ಚಿಸಲಾಗಿದೆ. ಎರಡು ವರ್ಷಗಳ ಎಂಸಿಎಲ್ ಆರ್ ದರವನ್ನು ಶೇ.7.50ರಿಂದ ಶೇ.7.85 ಕ್ಕೆ ಹೆಚ್ಚಿಸಲಾಗಿದೆ. ಇನ್ನು ಮೂರು ವರ್ಷಗಳ ಎಂಸಿಎಲ್ ಆರ್ ದರವನ್ನು ಶೇ.7.55ರಿಂದ ಶೇ.7.90ಕ್ಕೆ ಏರಿಕೆ ಮಾಡಲಾಗಿದೆ.

ಡೆಬಿಟ್ ಕಾರ್ಡ್‌ ಇಲ್ಲದೆಯೇ ಕ್ಯಾಶ್ ತೆಗೆಯಬಹುದು, ಇಲ್ಲಿವೆ ಸಿಂಪಲ್ ಟಿಪ್ಸ್

ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರವನ್ನು (Repo rate) ಏರಿಕೆ ಮಾಡಿದ ಎರಡು ವಾರಗಳ ಬಳಿಕ ಆಕ್ಸಿಸ್ ಬ್ಯಾಂಕ್ ಎಂಸಿಎಲ್ ಆರ್ ದರ ಹೆಚ್ಚಳದ ನಿರ್ಧಾರ ಪ್ರಕಟಿಸಿದೆ. ಮೇ 4ರಂದು ನಡೆದ ಆರ್ ಬಿಐ ಹಣಕಾಸು ನೀತಿ ಸಮಿತಿ (MPC) ತುರ್ತು ಸಭೆಯಲ್ಲಿ ರೆಪೋ ದರವನ್ನು 40 ಬೇಸಿಸ್ ಪಾಯಿಂಟ್ ಗಳಷ್ಟು ಅಂದರೆ ಶೇ.4ರಿಂದ ಶೇ.4.40 ಹೆಚ್ಚಳ ಮಾಡಲಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ (Inflation) ನಿಯಂತ್ರಣಕ್ಕೆ (Control) ಆರ್ ಬಿಐ ಈ ಕ್ರಮ ಕೈಗೊಂಡಿತ್ತು. ರೆಪೋ ದರ ಏರಿಕೆಯ ಬಳಿಕ ದೇಶದ ಸಾರ್ವಜನಿಕ ಹಾಗೂ ಖಾಸಗಿ ವಲಯದ ಪ್ರಮುಖ ಬ್ಯಾಂಕುಗಳು ಎಂಸಿಎಲ್ ಆರ್ ದರವನ್ನು ಒಂದರ ಹಿಂದೆ ಮತ್ತೊಂದರಂತೆ ಹೆಚ್ಚಳ ಮಾಡುತ್ತಿವೆ. 

ಎಂಸಿಎಲ್ ಆರ್ ಅಂದ್ರೇನು?
ಸರಳವಾಗಿ ಹೇಳೋದಾದ್ರೆ ಎಂಸಿಎಲ್ ಆರ್  (MCLR) ಅಥವಾ ಕನಿಷ್ಠ ವೆಚ್ಚ ಆಧಾರಿತ ಸಾಲ ದರವು ಬ್ಯಾಂಕುಗಳ ಬಡ್ಡಿದರದ ಬೆಂಚ್ ಮಾರ್ಕ್ (Bench Mark) ಆಗಿದೆ. ಅಂದರೆ ಬ್ಯಾಂಕುಗಳು (Banks) ಗ್ರಾಹಕರಿಗೆ (Customers) ನೀಡುವ ಸಾಲಗಳ ಮೇಲೆ ವಿಧಿಸುವ ಕನಿಷ್ಠ ಬಡ್ಡಿದರ. ಎಂಸಿಎಲ್ ಆರ್ ಹೆಚ್ಚಳದಿಂದ ಆಕ್ಸಿಸ್ ಬ್ಯಾಂಕಿನಿಂದ ಗೃಹ ಹಾಗೂ ಇತರ ಸಾಲಗಳನ್ನು ಪಡೆದಿರುವ ಗ್ರಾಹಕರ ಮೇಲಿನ ಬಡ್ಡಿ ಹೊರೆ ಹೆಚ್ಚಲಿದೆ. ಇಎಂಐ (EMI) ಮೊತ್ತ ಕೂಡ ಏರಿಕೆಯಾಗುವ ಮೂಲಕ ನೇರವಾಗಿ ಜೇಬಿನ ಮೇಲೆ ಪರಿಣಾಮ ಬೀರಲಿದೆ. 

Deadline Extended:ಪೋರ್ಟಲ್ ನಲ್ಲಿ ತಾಂತ್ರಿಕ ಸಮಸ್ಯೆ, GST ಫೈಲಿಂಗ್ ಗಡುವು ವಿಸ್ತರಣೆ; GSTR-3B ಸಲ್ಲಿಕೆಗೆ ಮೇ 24ರ ತನಕ ಸಮಯ

ಈಗಾಗಲೇ ಎಚ್ ಡಿಎಫ್ ಸಿ ಬ್ಯಾಂಕ್ (HDFC bank), ಕೆನರಾ ಬ್ಯಾಂಕ್ (Canara Bank), ಬ್ಯಾಂಕ್ ಆಫ್ ಮಹಾರಾಷ್ಟ್ರ (Bank Of Maharastra), ಕೆನರಾ ಬ್ಯಾಂಕ್ (Canara Bank) ಹಾಗೂ ಇಂಡಿಯನ್ ಓವರ್‌ಸೀಸ್ (Indian Oversis) ಬ್ಯಾಂಕ್ ಗಳು ಸಾಲದ ಮೇಲಿನ ಬಡ್ಡಿದರವನ್ನು ಏರಿಕೆ ಮಾಡುವ ಮೂಲಕ ಗ್ರಾಹಕರ ಮೇಲಿನ ಹೊರೆಯನ್ನು ಇನ್ನಷ್ಟು ಹೆಚ್ಚಿಸಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರ ಹೆಚ್ಚಳದ ನಿರ್ಧಾರ ಪ್ರಕಟಿಸುವ ನಿರೀಕ್ಷೆಯಿದೆ. 

Follow Us:
Download App:
  • android
  • ios