ಸಿಡ್ನಿ(ಮೇ.10): ಸಣ್ಣದೊಂದು ತಪ್ಪು ಇಡೀ ಸರ್ಕಾರ ಮತ್ತು ದೇಶದ ಮಾನವನ್ನು ಹರಾಜು ಹಾಕಬಲ್ಲದು ಎಂಬುದಕ್ಕೆ ಆಸ್ಟ್ರೆಲೀಯಾ ಇತ್ತೀಚಿಗೆ ಬಿಡುಗಡೆ ಮಾಡಿರುವ 50 ಡಾಲರ್ ನೋಟುಗಳೇ ಸಾಕ್ಷಿ.

ರಿಸರ್ವ್ ಬ್ಯಾಂಕ್ ಆಫ್ ಆಸ್ಟ್ರೆಲೀಯಾ(RBA) ಇತ್ತಿಚೀಗೆ 50 ಡಾಲರ್ ಮುಖಬೆಲೆಯ ಹೊಸ ನೋಟುಗಳನ್ನು ಮುದ್ರಿಸಿದ್ದು, ನೊಟಿನ ಹಿಂಭಾಗದಲ್ಲಿ ಇಂಗ್ಲಿಷ್ ಭಾಷೆಯ 'RESPONSIBILITY' ಪದವನ್ನು ತಪ್ಪಾಗಿ ಮುದ್ರಿಸಿದೆ.

ಎಡಿತ್ ಕೋವನ್ ಅವರ ಭಾವಚಿತ್ರವುಳ್ಳ 50 ಡಾಲರ್ ಮುಖಬೆಲೆಯ ನೋಟಿನಲ್ಲಿ 'RESPONSIBILTY' ಎಂದು ಮುದ್ರಿಸಿದ್ದು, ಇದರಲ್ಲಿ ಇಂಗ್ಲಿಷ್ ಪದ I ಮಿಸ್ ಆಗಿದೆ. ಕಳೆದ ಅಕ್ಟೋಬರ್‌ನಲ್ಲಿ ಈ ನೋಟುಗಳನ್ನು ಆರ್‌ಬಿಎ ಮುದ್ರಿಸಿತ್ತು.

ಆದರೆ ಈಗಾಗಲೇ ಈ ನೋಟುಗಳು ಮಾರುಕಟ್ಟೆಯಲ್ಲಿ ಬಳಕೆಯಲ್ಲಿರುವುದರಿಂದ ಇವುಗಳನ್ನು ಹಿಂಪಡೆಯವುದಿಲ್ಲ ಎಂದು ಆರ್‌ಬಿಎ ಸ್ಪಷ್ಟಪಡಿಸಿದೆ. 50 ಡಾಲರ್ ಮುಖಬೆಲೆಯ ಒಟ್ಟು 184 ಮಿಲಿಯನ್ ಹೊಸ ನೋಟುಗಳನ್ನು ಆರ್‌ಬಿಎ ಮುದ್ರಿಸಿದೆ. ಅಲ್ಲದೇ ತಪ್ಪು ಮುದ್ರಣಕ್ಕಾಗಿ ಕ್ಷಮೆ ಕೋರಿದೆ.