Asianet Suvarna News Asianet Suvarna News

ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಹೇಗೆ?

ಕೇಂದ್ರ ಸರಕಾರ ಅನೇಕ ದಾಖಲೆಗಳ ಜತೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿಕೊಂಡೆ ಬರುತ್ತಿದೆ.   ಕೆಲವೊಂದು ಸಂದರ್ಭದಲ್ಲಿ ಆಧಾರ್ ಕಾರ್ಡ್ ಮಾಡಿಸುವಾಗ  ಗೊಂದಲಗಳು ಉಂಟಾಗಿ ನಿಮ್ಮ ಅಡ್ರೆಸ್ ಅಥವಾ ಇತರೆ ವಿವರಗಳು ತಪ್ಪಾಗಿ ದಾಖಲಾಗಿರುವ ಸಾಧ್ಯತೆ ಇರುತ್ತದೆ. ಇದನ್ನು ಬದಲಾವಣೆ ಮಾಡಲು ಮತ್ತೆ ಸರತಿ ಸಾಲಿನಲ್ಲಿ ನಿಲ್ಲಬೇಕೆ? ಖಂಡಿತ ಇಲ್ಲ,, ಆನ್ ಲೈನ್ ನಲ್ಲಿಯೇ ಆಧಾರ್ ಕಾರ್ಡ್ ವಿವರ ಬದಲಾಯಿಸಲು ಸಾಧ್ಯ? ಹೇಗೆ ಅಂತೀರಾ ಇಲ್ಲಿದೆ ವಿವರ...

Asianet Kannada explainer How to update your Aadhaar card address online
Author
Bengaluru, First Published Sep 16, 2018, 6:06 PM IST
  • Facebook
  • Twitter
  • Whatsapp

ಯುಐಡಿಎಐ ಆನ್ ಲೈಮ್ ನಲ್ಲಿ ವಿವರ ಬದಲಾವಣೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಆಧಾರ್  ಸೆಲ್ಫ್ ಸರ್ವೀಸ್ ಅಪ್ ಡೇಟ್ ಪೋರ್ಟಲ್ ಮೂಲಕ ನಿಮ್ಮ ಕೆಲಸ ಸಾಧಿಸಿಕೊಳ್ಳಬಹುದು. ತಪ್ಪುಗಳನ್ನು ಮಾತ್ರ ಮಾಡಲೇ ಬಾರದು.

1. ಸರಿಯಾದ ವಿಳಾಸ ದಾಖಲೆ ಅಪ್ ಲೋಡ್ ಮಾಡಿ:
ವಿಳಾಸ ಬದಲಾವಣೆ ಮಾಡಿಕೊಳ್ಳಬೇಕು ಎಂದಾದರೆ ಸ್ಕಾನ್ ಮಾಡಿದ ಸರಿಯಾದ ದಾಖಲೆ ಅಪ್ ಲೋಡ್ ಮಾಡಬೇಕಾಗುತ್ತದೆ. ಸ್ವಯಂ ದೃಢೀಕೃತ ದಾಖಲೆಗಳನ್ನು ಅಪ್ ಲೋಡ್ ಮಾಡುವುದು ಕಡ್ಡಾಯ.
* ಪಾಸ್ ಪೋರ್ಟ್
* ರೇಶನ್ ಕಾರ್ಡ್
* ಬ್ಯಾಂಕ್ ಸ್ಟೇಟ್ ಮೆಂಟ್ ಅಥವಾ ಪಾಸ್ ಬುಕ್
* ಮತದಾರರ ಗುರುತಿನ ಚೀಟಿ
* ವಾಹನ ಚಾಲನಾ ಪರವಾನಗಿ
* ಸರಕಾರದಿಂದ ಅನುಮೋದನೆಗೆ ಒಳಗಾದ ಫೋಟೋ ಹೊಂದಿರುವ ಗುರುತಿನ ಪತ್ರ
* ವಿದ್ಯುತ್ ಬಿಲ್, ನೀರು, ಲ್ಯಾಂಡ್ ಲೈನ್, ಪ್ರಾಪರ್ಟಿ ಟ್ಯಾಕ್ಸ್ ಸಲ್ಲಿಕೆ ಪಾವತಿ, ಕ್ರೆಡಿಟ್ ಕಾರ್ಡ್ ಸ್ಟೇಟ್ ಮೆಂಟ್[3 ತಿಂಗಳಿಗಿಂತ ಹಳೆಯದು ಉಪಯೋಗಕ್ಕೆ ಬರಲ್ಲ] 
*ವಿಮಾ ಪಾಲಿಸಿ
*ಮಾರಾಟ ಮತ್ತು ಖರೀದಿಯ ನೋಂದಾವಣಿಯಾದ ದಾಖಲೆ
*ಮದುವೆಯಾದ ಮಹಿಳೆ ಗಂಡನ ಐಡಿ ಪ್ರೂಫ್ ನೀಡಬಹುದು
*ಮ್ಯಾರೇಜ್ ಸರ್ಟಿಫಿಕೇಟ್
ಈ ಮೇಲಿನಲ್ಲಿ ಯಾವುದಾದರೊಂದನ್ನು ಸಲ್ಲಿಸಬೇಕಾಗುತ್ತದೆ.

2. ಒಂದು ವೇಳೆ ನೀವು ಸಲ್ಲಿಕೆ ಮಾಡಿದ ದಾಖಲೆ ಸ್ವಯಂ ದೃಢೀಕರಣ ಆಗಿರದಿದ್ದರೆ ರಿಜಕ್ಟ್ ಆಗುವುದು.

3. ಆಧಾರ್ ಅಪ್ ಡೇಶನ್ ಅರ್ಜಿ ಎರಡು ವಿಭಾಗ ಹೊಂದಿರುತ್ತದೆ. ಆಂಗ್ಲ ಭಾಷೆಯಲ್ಲಿ ಒಂದಿದ್ದರೆ ಇನ್ನೊಂದು ಹಿಂದಿ, ಬೆಂಗಾಲಿ, ತಮಿಳು ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಇರುತ್ತದೆ. ಆಂಗ್ಲ ಭಾಷೆಯಲ್ಲಿ ಅಪ್ ಡೇಟ್ ಮಾಡಿದರೆ ತನ್ನಿಂದ ತಾನೆ ಅದನ್ನು ಪ್ರಾದೇಶಿಕ ಭಾಷೆಗೆ ಸೖಟ್ ಭಾಷಾಂತರ ಮಾಡಿಕೊಳ್ಳುತ್ತದೆ.

4. ಯಾವುದೆ ದಾಖಲೆ ಅಪ್ ಲೋಡ್ ಮಾಡುವುದಿದ್ದರೂ ಮೂಲ ಪ್ರತಿಯ ಸ್ಕ್ಯಾನ್ ಕಾಪಿ ಹಾಕಬೇಕು. ಝೆರಾಕ್ಸ್ ನಿಂದ ಕೆಲಸ ಆಗುವುದಿಲ್ಲ.

Follow Us:
Download App:
  • android
  • ios