*ಆಶಿಶ್ ಕುಮಾರ್ ಚೌಹಾಣ್ ಅವರಿಗೆ ಈ ಹಿಂದೆ ಎನ್ ಎಸ್ ಇಯಲ್ಲಿ ಕಾರ್ಯನಿರ್ವಹಿಸಿದ ಅನುಭವ *ಈ ಹಿಂದೆ ಎಂಡಿ ಹಾಗೂ ಸಿಇಒ ಹುದ್ದೆ ನಿರ್ವಹಿಸುತ್ತಿದ್ದ ವಿಕ್ರಮ್ ಲಿಮಾಯೆ ಅವಧಿ ಜು.16ಕ್ಕೆ ಮುಕ್ತಾಯ*ನೂತನ ಸಿಇಒ ಅಧಿಕಾರ ವಹಿಸಿಕೊಳ್ಳುವ ತನಕ ಎನ್ ಎಸ್ ಇ ವ್ಯವಹಾರಗಳನ್ನು ನಿಯಂತ್ರಿಸಲು ಕ ಕಾರ್ಯಕಾರಿ ಸಮಿತಿ ನೇಮಕ
ನವದೆಹಲಿ (ಜು.18): ರಾಷ್ಟ್ರೀಯ ಷೇರು ವಿನಿಮಯ (ಎನ್ ಎಸ್ ಇ) ಕೇಂದ್ರದ ನೂತನ ಎಂಡಿ ಹಾಗೂ ಸಿಇಒ ಆಗಿ ಆಶಿಶ್ ಕುಮಾರ್ ಚೌಹಾಣ್ ಅವರ ನೇಮಕಕ್ಕೆ ಸೆಬಿ (SEBI) ಅನುಮೋದನೆ ನೀಡಿದೆ. ಚೌಹಾಣ್ ಕೂಡ ಈ ಹಿಂದೆ ಎನ್ ಎಸ್ ಇಯಲ್ಲಿ 1993ರಿಂದ ಏಳು ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ವಿಕ್ರಮ್ ಲಿಮಾಯೆ ಈ ತನಕ ಎನ್ ಎಸ್ ಇಯಲ್ಲಿಎಂಡಿ ಹಾಗೂ ಸಿಇಒ ಹುದ್ದೆ ನಿರ್ವಹಿಸುತ್ತಿದ್ದರು. ಅವರು ಈ ಹುದ್ದೆಗೆ ರಾಜೀನಾಮೆ ನೀಡಿದ್ದರು. ಲಿಮಾಯೆ ಅವಧಿ ಜುಲೈ 16ಕ್ಕೆ ಮುಕ್ತಾಯವಾಗಿತ್ತು. ನೂತನ ಸಿಇಒ ಅಧಿಕಾರ ವಹಿಸಿಕೊಳ್ಳುವ ತನಕ ಎನ್ ಎಸ್ ಇ ವ್ಯವಹಾರಗಳನ್ನು ನಡೆಸಲು ಆಂತರಿಕ ಕಾರ್ಯಕಾರಿ ಸಮಿತಿಯನ್ನು ಎನ್ ಎಸ್ ಇ ಆಡಳಿತ ಮಂಡಳಿ ನೇಮಕ ಮಾಡಿದೆ. ಕಾರ್ಪೋರೇಟ್ ವ್ಯವಹಾರಗಳ ಗ್ರೂಪ್ ಸಿಎಫ್ ಒ ಮುಖ್ಯಸ್ಥರಾಗಿ ಯಾತ್ರಿಕ್ ವಿನ್, ಪ್ರಿಯಾ ಸುಬ್ಬರಾಮನ್ ಮುಖ್ಯ ನಿಯಂತ್ರಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇವರೊಂದಿಗೆ ಇನ್ನೂ ಕೆಲವರಿಗೆ ನಿರ್ದಿಷ್ಟ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ. ನೂತನ ಎಂಡಿ ಹಾಗೂ ಸಿಇಒ ಅಧಿಕಾರ ವಹಿಸಿಕೊಂಡ ಬಳಿಕ ಈ ಸಮಿತಿಯನ್ನು ರದ್ದುಗೊಳಿಸಲಾಗುತ್ತದೆ.
22 ವರ್ಷಗಳ ಬಳಿಕ ಮರಳಿ ಎನ್ ಎಸ್ ಇಗೆ ಚೌಹಾಣ್ ಎಂಟ್ರಿ
ವಿಕ್ರಮ್ ಲಿಮಾಯೆ ರಾಜೀನಾಮೆ ಬಳಿಕ ಎನ್ ಎಸ್ ಇಯ (NSE) ಉನ್ನತ ಹುದ್ದೆ ಖಾಲಿಯಾಗಿತ್ತು. ಎನ್ ಎಸ್ ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣನ್ ಅವಧಿಯಲ್ಲಿ ಅಕ್ರಮ ಹಣ ವರ್ಗಾವಣೆ ಸೇರಿದಂತೆ ಇತರ ವಿವಾದಗಳು ಚೌಹಾಣ್ ಮೇಲೆ ಹೆಚ್ಚಿನ ಒತ್ತಡ ಹೇರುವ ಸಾಧ್ಯತೆಯಿದೆ. ಅಕ್ರಮ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗಷ್ಟೇ ಚಿತ್ರಾ ರಾಮಕೃಷ್ಣನ್ ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿ ನಾಲ್ಕು ದಿನಗಳ ಕಸ್ಟಡಿಗೆ ವಹಿಸಿತ್ತು.
Vegetable Price Decrease; ಆಷಾಡ ಹಿನ್ನೆಲೆ ತರಕಾರಿ ಬೆಲೆ ಕೊಂಚ ಇಳಿಕೆ
ಇನ್ನು ಚೌಹಾಣ್ ಗೆ ಎನ್ ಎಸ್ ಇ ಹೊಸತೇನಲ್ಲ. ಈ ಹಿಂದೆ ಏಳು ವರ್ಷಗಳ ಕಾಲ ಉಪಾಧ್ಯಕ್ಷರಾಗಿ (Vice-President) ಸೇವೆ ಸಲ್ಲಿಸಿದ ಅನುಭವ ಬೆನ್ನಿಗಿದೆ. ಆ ಬಳಿಕ ಅವರು ರಿಲಯನ್ಸ್ ಇನ್ಫೋಕಾಮ್ (Reliance Infocomm), ರಿಲಯನ್ಸ್ ಕಮ್ಯೂನಿಕೇಷನ್ಸ್ (Reliance Communications) ಹಾಗೂ ರಿಲಯನ್ಸ್ ಇಂಡ್ ಸ್ಟ್ರೀಸ್ (Reliance Industries) ಸೇರಿದಂತೆ ರಿಲಯನ್ಸ್ ಗ್ರೂಪ್ ನ (Reliance group) ವಿವಿಧ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಬಿಎಸ್ ಇಯ ಡೆಪ್ಯುಟಿ ಸಿಇಒ ಆಗಿ ನೇಮಕಗೊಳ್ಳುವ ಮುನ್ನ ಮುಂಬೈ ಇಂಡಿಯನ್ಸ್ ನಲ್ಲಿ (Mumbai Indians) ಕೂಡ ಅಲ್ಪಾವಧಿ ಕಾರ್ಯನಿರ್ವಹಿಸಿದ್ದರು.
ಅಗಾಧ ಅನುಭವ
ಆಶಿಶ್ ಕುಮಾರ್ ಚೌಹಾಣ್ ಅವರಿಗೆ ಮಾರುಕಟ್ಟೆ ನೀತಿಗಳು, ಆಧುನಿಕ ಹಣಕಾಸು ಉತ್ಪನ್ನಗಳ ಬಗ್ಗೆ ಅಗಾಧ ಜ್ಞಾನವಿದೆ. ಭಾರತದಲ್ಲಿ ಹಣಕಾಸು ಮಾರುಕಟ್ಟೆ ನೀತಿಗಳು, ದೂರಸಂಪರ್ಕ ಸೇರಿದಂತೆ ವಿವಿಧ ಹಣಕಾಸು ವಲಯಗಳಿಗೆ ಸಂಬಂಧಿಸಿ ಅಗಾಧ ಮಾಹಿತಿ ಹೊಂದಿರುವ ತಜ್ಞರಲ್ಲಿಇವರು ಕೂಡ ಒಬ್ಬರು. ಎನ್ಎಸ್ಇ (NSE), ಬಿಎಸ್ ಇ (BSE) ಜೊತೆಗೆ ಕಾರ್ಪೋರೇಟ್ (Corporate) ಜಗತ್ತಿನಲ್ಲೂ ಕಾರ್ಯನಿರ್ವಹಿಸಿದ ಅನುಭವ ಇರುವ ಕಾರಣ, ಎನ್ ಎಸ್ ಇ ಎಂಡಿ ಹಾಗೂ ಸಿಇಒ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಇವರಿಗಿದೆ.
ಜೇಬಿಗೆ ಮತ್ತೆ ಬೀಳುತ್ತೆ ಕತ್ತರಿ, ಈ ಅಗತ್ಯ ವಸ್ತುಗಳ ಮೇಲೆ ಶೇ.5ರಷ್ಟು ಜಿಎಸ್‌ಟಿ!
ಇವರು ಐಐಎಂ (IIM) ಕೋಲ್ಕತ್ತ ಹಾಗೂ ಐಐಟಿ (IIT) ಬಾಂಬೆಯ ಹಳೆಯ ವಿದ್ಯಾರ್ಥಿ ಕೂಡ ಹೌದು. ಎನ್ ಎಸ್ ಐ (NSE) ಸ್ಥಾಪನೆಗೊಂಡಾಗ ಅದರ ಪ್ರಮುಖ ಸದಸ್ಯರ ತಂಡದಲ್ಲಿ ಚೌಹಾಣ್ ಕೂಡ ಇದ್ದರು. ಅಲ್ಲದೆ, ಈಕ್ವಿಟಿ (EQuity) ಮತ್ತು ಉತ್ಪನ್ನಗಳ ಮಾರುಕಟ್ಟೆಗಳನ್ನು ಸ್ಥಾಪಿಸುವ ಜವಾಬ್ದಾರಿಯನ್ನು ಚೌಹಾಣ್ ನಿರ್ವಹಿಸಿದ್ದರು ಕೂಡ.
