ಬೆಂಗಳೂರು[ಜು. 29]  ಸಣ್ಣ ಉದ್ಯಮ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದವರಿಗೆ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ದಿನಪತ್ರಿಕೆ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ [ಕೆಎಎಸ್‌ಎಸ್‌ಐಎ], ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ [ಎಸ್‌ಬಿಐ]  ಮತ್ತು ಮಹಿಂದ್ರಾ ಜೀಟೋ ಸಹಯೋಗದಲ್ಲಿ ‘ಉಜ್ವಲ’ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಉದಯೋನ್ಮುಖ ಉದ್ಯಮಿಗಳ ಉತ್ಸಾಹವನ್ನು ಇಮ್ಮಡಿಸುವ ಗುರಿಯೊಂದಿಗೆ ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳ ಉನ್ನತ ಸಂಸ್ಥೆಯಾದ ಕರ್ನಾಟಕ ಸ್ಮಾಲ್ ಸ್ಕೇಲ್ ಇಂಡಸ್ಟ್ರಿ ಅಸೋಸಿಯೇಷನ್ ಈ ಪ್ರಶಸ್ತಿ ನೀಡಲು ಮುಂದಾಗಿದೆ. ಇದಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಮಹಿಂದ್ರಾ ಜೀಟೋ ಪ್ರಧಾನ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ.

ಅನಾಥ ವೃದ್ಧೆಗೆ ಆಶ್ರಯ ದೊರಕಿಸಿದ ಕನ್ನಡಪ್ರಭ, ಸುವರ್ಣ ನ್ಯೂಸ್‌

ಪ್ರಸಿದ್ಧ ಕೈಗಾರಿಕೋದ್ಯಮಿಗಳು ಹಾಗೂ ಕೈಗಾರಿಕಾ ವಲಯದ ಹಿರಿಯ ಅಧಿಕಾರಿಗಳು ತೀರ್ಪುಗಾರರ ಸಮಿತಿಯಲ್ಲಿದ್ದು, ಅರ್ಹ ಉದ್ಯಮಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಿದ್ದಾರೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಆಗಸ್ಟ್ 9, 2019 ರಂದು ಬೆಂಗಳೂರಿನ ಕೆಎಎಸ್‌ಎಸ್‌ಐಎ ಸಭಾಂಗಣದಲ್ಲಿ ನಡೆಯಲಿದೆ.

ಆಸಕ್ತ ಎಸ್‌ಎಂಇಗಳು ಜುಲೈ 31 ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಗಳು http://kassia.com/ ನಲ್ಲಿ ಲಭ್ಯವಿದ್ದು, ಅರ್ಜಿಯನ್ನು ಡೌನ್‌ಲೋಡ್ ಮಾಡಿ, ಮಾಹಿತಿ ತುಂಬಿಸಿ ಕೊರಿಯರ್ ಮೂಲಕ ಕೆಎಎಸ್‌ಎಸ್‌ಐಎ ಕಚೇರಿಗೆ ತಲುಪಿಸಬಹುದು. ಹೆಚ್ಚಿನ ವಿವರಗಳಿಗಾಗಿ 080-23353250 ಸಂಪರ್ಕಿಸಬಹುದು.


ಪ್ರಶಸ್ತಿ ವಿಭಾಗಗಳು
1. ಜವಳಿ, ಉಡುಪುಗಳು, ತಾಂತ್ರಿಕ ಜವಳಿ ಸೇರಿದಂತೆ ಪರಿಕರಗಳು
2. ಕೃಷಿ ಆಹಾರ ಸಂಸ್ಕರಣೆ
3. ಕರಕುಶಲ ವಸ್ತುಗಳು
4. ಸಾಮಾನ್ಯ ಮತ್ತು ರಚನಾತ್ಮಕ ಫ್ಯಾಬ್ರಿಕೇಶನ್
5. ಡೈ ಟೂಲ್ ಮೇಕಿಂಗ್
6. ಒಇಎಂ ತಯಾರಕರು
7. ಆಟೋ ಘಟಕಗಳು
8. ಏರೋಸ್ಪೇಸ್, ರಕ್ಷಣಾ ಮತ್ತು ಬಾಹ್ಯಾಕಾಶ ಘಟಕಗಳು
9. ಇಎಸ್‌ಡಿಎಂ- ಎಲೆಕ್ಟ್ರಾನಿಕ್ ಹಾರ್ಡ್‌ವೇರ್ ಸೇರಿದಂತೆ ಎಲೆಕ್ಟ್ರಾನಿಕ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆ
10. ನವೀಕರಿಸಬಹುದಾದ ಶಕ್ತಿ (ಟ್ರಾನ್ಸ್‌ಫಾರ್ಮರ್, ಎಲ್‌ಇಡಿ ಸೌರ ತಯಾರಕರು) ಸೇರಿದಂತೆ ವಿದ್ಯುತ್ ಉತ್ಪಾದನೆ ಮತ್ತು ವಿತರಣಾ ಸಾಧನಗಳು
11. ಜೈವಿಕ ತಂತ್ರಜ್ಞಾನ ಮತ್ತು ವೈದ್ಯಕೀಯ ಸಾಧನಗಳ ವಿಭಾಗ
12. ಕೃಷಿ ಅಳವಡಿಕೆಗಳು ಮತ್ತು ಸಲಕರಣೆಗಳು
13. ಮರದ ಪೀಠೋಪಕರಣಗಳು, ಕಚೇರಿ ಉಪಕರಣಗಳು ಸೇರಿದಂತೆ ಉಕ್ಕಿನ ಪೀಠೋಪಕರಣಗಳು
14. ರಬ್ಬರ್ಸ್ ಪ್ಲಾಸ್ಟಿಕ್
15. ಮುದ್ರಣ ಮತ್ತು ಪ್ರಕಟಣೆ, ಆಫ್‌ಸೆಟ್ ಮುದ್ರಣ ಕಾಗದ ಸಂಬಂಧಿತ ಉತ್ಪನ್ನಗಳು
16. ಎರಕಹೊಯ್ದ ಸಾಧನಗಳು

ವಿಶೇಷ ಪ್ರಶಸ್ತಿಗಳು
1. ಕೆಎಎಸ್‌ಎಸ್‌ಐಎ ರತ್ನ
2. ವರ್ಷದ ಎಸ್‌ಎಂಇ
3. ವರ್ಷದ ಅತ್ಯಂತ ನವೀನ ಎಸ್‌ಎಂಇ
4. ವರ್ಷದ ಸಾಮಾಜಿಕವಾಗಿ ಜವಾಬ್ದಾರಿಯುತ ಎಸ್‌ಎಂಇ
5. ವರ್ಷದ ವೇಗವಾಗಿ ಬೆಳೆಯುತ್ತಿರುವ ಎಸ್‌ಎಂಇ
6. ವರ್ಷದ ಎಸ್‌ಸಿ / ಎಸ್‌ಟಿ ಉದ್ಯಮಿ
7. ದಿವ್ಯಾಂಗ ಸಾಧಕ ಪ್ರಶಸ್ತಿ
8. ವರ್ಷದ ಮಹಿಳಾ ಉದ್ಯಮಿ
9. ವರ್ಷದ ಸ್ಟಾರ್ಟ್‌ಅಪ್ ಉದ್ಯಮಿ