ಮನೆಯಲ್ಲಿಯೇ ಕುಳಿತು ದಿನಸಿ ಸಾಮಗ್ರಿಗಳನ್ನು ತರಿಸಿಕೊಳ್ಳುವುದು ನಿಮಗೆ ಇದಾಗಲೇ ಗೊತ್ತು. ಆದರೆ ತಲೆಬಿಸಿ ಇಲ್ಲದೇ ದಿನಸಿ ಸಾಮಗ್ರಿಗಳಲ್ಲಿಯೂ ಉಳಿತಾಯ ಮಾಡಲು ನೆರವಾಗಲಿದೆ ಈ ಹೊಸ ಆ್ಯಪ್. ಇಲ್ಲಿದೆ ಡಿಟೇಲ್ಸ್...
ಇದೀಗ ಮನೆ ಬಾಗಿಲಿಗೇ ಆಹಾರ ಸಾಮಗ್ರಿಗಳು ಬಂದುಬಿಡುತ್ತವೆ. ಒಂದೇ ಒಂದು ಕ್ಲಿಕ್ನಲ್ಲಿ ಮನೆ ಬಾಗಿಲಿಗೆ ಏನು ಬೇಕಾದರೂ ತಂದುಕೊಡುವ ಹಲವಾರು ಆ್ಯಪ್ಗಳು ಇವೆ. ಮನೆಯ ಬಾಗಿಲಿಗೆ ಮಾತ್ರವಲ್ಲದೇ, ಸ್ಪರ್ಧೆಯೊಡ್ಡುವುದಕ್ಕಾಗಿ ದರ ಕಡಿತವೂ ಸಿಗುತ್ತದೆ. ಡಿಸ್ಕೌಂಟ್ನಲ್ಲಿ ದಿನಸಿಗಳು ನಿಮಗೆ ಸಿಗುತ್ತವೆ. ಹೊರಗಡೆ ಹೋಗುವ ಸಮಸ್ಯೆಯೂ ಇಲ್ಲ, ಜೊತೆಗೆ ಕುಳಿತಲ್ಲಿಯೇ ಕಡಿಮೆ ದರದಲ್ಲಿ ಮನೆ ಸಾಮಾನುಗಳು ಬರುತ್ತವೆ. ಆದರೆ ಈಗ ಹತ್ತಾರು ಆ್ಯಪ್ಗಳು ಇದಕ್ಕಾಗಿ ಇವೆ. ಆದ್ದರಿಂದ ಯಾವ ಆ್ಯಪ್ನಲ್ಲಿ ದಿನಸಿ ಸಾಮಗ್ರಿ ಆರ್ಡರ್ ಮಾಡಬೇಕು ಎನ್ನುವ ತಲೆಬಿಸಿ ನಿಮಗೆಆಗಬಹುದು.
ಅದಕ್ಕಾಗಿ ಈಗ ಹೊಸದೊಂದು ಆ್ಯಪ್ ಕಂಡುಹಿಡಿಯಲಾಗಿದೆ. ಸಾಮಾನ್ಯವಾಗಿ ದಿನಸಿಗಳನ್ನು ಮನೆಗೆ ತರುವಲ್ಲಿ ಟಾಪ್ ಸ್ಥಾನದಲ್ಲಿ ಇರುವುದು ಬ್ಲಿಂಕಿಟ್, ಜಿಪ್ಟೋ, ಇನ್‌ಸ್ಟಾಮಾರ್ಟ್ ಇತ್ಯಾದಿ ಆ್ಯಪ್ಗಳು. ಆದರೆ ಇವುಗಳಲ್ಲಿ ಯಾವುದು ಚೀಪ್ ಎನ್ನುವ ಸಮಸ್ಯೆ ಬಹುತೇಕರನ್ನು ಕಾಡುವುದು ಇದೆ. ಆದರೆ ಅದನ್ನು ಕಂಪೇರ್ ಮಾಡಿಕುಳಿತುಕೊಂಡರೆ ಇಡೀ ದಿನ ಬೇಕಾಗುತ್ತದೆ. ಅಷ್ಟೇ ಅಲ್ಲದೇ ಒಂದು ಸಾಮಗ್ರಿ ಒಂದರಲ್ಲಿ ಚೀಪ್ ಇದ್ರೆ, ಮತ್ತೊಂದು ಮತ್ತೊಂದರಲ್ಲಿ. ಆದ್ದರಿಂದ ಯಾವುದರಲ್ಲಿ ಕೊಳ್ಳುವುದು ಎನ್ನುವ ಸಮಸ್ಯೆ ಬಂದೇ ಬರುತ್ತದೆ.
ನಿಮ್ಮ ಈ ಸಮಸ್ಯೆಯನ್ನು ಈಸಿ ಮಾಡಿದೆ ಹೊಸ ಆ್ಯಪ್. ಈ ಆ್ಯಪ್ ಇದೀಗ ಆರಂಭಿಸಲಾಗಿದೆ. ಇದನ್ನು ಡೌನ್ಲೋಡ್ ಮಾಡಿಕೊಂಡರೆ, ನಿಮಗೆ ಬೇಕಾಗಿರುವ ವಸ್ತುಗಳು, ಆಹಾರ ಪದಾರ್ಥಗಳು, ದಿನಸಿಗಳು ಯಾವ ಆ್ಯಪ್ನಲ್ಲಿ ತುಂಬಾ ಚೀಪ್ ಆಗಿ ಸಿಗುತ್ತದೆ ಎಂದು ತಿಳಿದುಬಿಡುತ್ತದೆ. ನೀವು ತಲೆಬಿಸಿ ಮಾಡಿಕೊಂಡು ಲೆಕ್ಕಾಚಾರ ಹಾಕುವುದೇ ಬೇಡ. ಅಲ್ಲಿಯೇ ನಿಮಗೆ ಬೇಕಾದ ದಿನಸಿಯ ಹೆಸರು ಟೈಪ್ ಮಾಡಿದರೆ, ಯಾವುದರಲ್ಲಿ ಅದು ಎಷ್ಟಿದೆ ಎನ್ನುವುದನ್ನು ತೋರಿಸಿಬಿಡುತ್ತದೆ.
ಬ್ಲಿಂಕಿಟ್, ಇನ್‌ಸ್ಟಾಮಾರ್ಟ್ ಮತ್ತು ಜೆಪ್ಟೋದಾದ್ಯಂತ ಒಂದೇ ಉತ್ಪನ್ನಗಳಿಗೆ ಅಂದಿನ ದರ ಹಾಗೂ ಅದು ಯಾವ ಸಮಯದಲ್ಲಿ ನಿಮಗೆ ಪೂರೈಕೆ ಮಾಡುತ್ತದೆ ಎನ್ನುವುದನ್ನು ಈ ಆ್ಯಪ್ನಲ್ಲಿ ನೋಡಬಹುದಾಗಿದೆ. ಅದರ ಹೆಸರು Comparify. ನಕಲಿ ಆ್ಯಪ್ ಅನ್ನು ಡೌನ್ಲೋಡ್ ಮಾಡುವ ಬದಲು ಈ ಕೆಳಗೆ ಅದರ ಲಿಂಕ್ ಕೊಡಲಾಗಿದೆ. ಅದರ ಮೇಲೆ ಕ್ಲಿಕ್ ಮಾಡಿ ಪ್ಲೇಸ್ಟೋರ್ನಿಂದ ಡೌನ್ಲೋಡ್ ಮಾಡಬಹುದು. ಈ ಆ್ಯಪ್ ಮೂಲಕ ನೀವು ಬ್ರೌಸ್ ಮಾಡಲು ಪ್ರಾರಂಭಿಸುವ ಮೊದಲು ನಿಮ್ಮ ಪ್ರದೇಶದಲ್ಲಿ ಯಾವ ಅಂಗಡಿಯು ವೇಗವಾಗಿ ತಲುಪಿಸಬಹುದು ಎಂಬುದನ್ನು ತಕ್ಷಣ ನೋಡಬಹುದಾಗಿದೆ. ಯಾವುದೇ ಐಟಂ ಅನ್ನು ಹುಡುಕಿ ಮತ್ತು ಎಲ್ಲಾ ಮೂರು ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸ್ತುತ ಬೆಲೆಯನ್ನು ಅಕ್ಕಪಕ್ಕದಲ್ಲಿ ನೋಡಲು ಸಾಧ್ಯವಾಗಿದೆ. ನಿಮ್ಮ ಎಲ್ಲಾ ವಸ್ತುಗಳನ್ನು ಸೇರಿಸಿ ಮತ್ತು ಪ್ರತಿ ಪ್ಲಾಟ್‌ಫಾರ್ಮ್‌ನಲ್ಲಿ ಒಟ್ಟು ಬಿಲ್ ಎಣಿಸಿ ನೀವು ಎಷ್ಟು ಉಳಿಸಿದ್ದೀರಿ ಎನ್ನುವುದನ್ನು ಕೂಡ ನೋಡಬಹುದಾಗಿದೆ.
App Link https://play.google.com/store/apps/details?id=com.akshat.comparify
WebSite; https://comparify.pro/
