ಷೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಪವರ್ ನಾಗಾಲೋಟ, 1023 ಕೋಟಿ ರೂ ಬೃಹತ್ ಸಾಲ ತೀರಿಸಿದ ಅನಿಲ್ ಅಂಬಾನಿ!
ಕಳೆದ ಕೆಲವು ದಿನಗಳಲ್ಲಿ, ಅನಿಲ್ ಅಂಬಾನಿಯವರ ರಿಲಯನ್ಸ್ ಮೂರು ಪ್ರಮುಖ ಬ್ಯಾಂಕ್‌ಗಳ ಸಾಲ ತೀರಿಸಿದ್ದರು. ಇದೀಗ ಮತ್ತೆ ರಿಲಯನ್ಸ್ ಪವರ್‌ನ ಬರೋಬ್ಬರಿ 1023 ಕೋಟಿ ರೂಪಾಯಿಗಳ ಬೃಹತ್ ಸಾಲವನ್ನು ತೀರಿಸಿದೆ .
ಮಾರುಕಟ್ಟೆಯಲ್ಲಿ ರಿಲಯನ್ಸ್ ಪವರ್‌ನ ಷೇರಿನ ನಾಗಾಲೋಟ ಮುಂದುವರೆದಿದೆ. ಈ ಮೂಲಕ ಅನಿಲ್ ಅಂಬಾನಿ ಮತ್ತೆ ಮಾರುಕಟ್ಟೆಯಲ್ಲಿ ಏರಿಕೆಯತ್ತ ದಾಪುಗಾಲು ಹಾಕುತ್ತಿದ್ದಾರೆ. ಕಳೆದ ಕೆಲವು ದಿನಗಳಲ್ಲಿ, ಅನಿಲ್ ಅಂಬಾನಿಯವರ ರಿಲಯನ್ಸ್ ಮೂರು ಪ್ರಮುಖ ಬ್ಯಾಂಕ್‌ಗಳ ಸಾಲ ತೀರಿಸಿದ್ದರು. ಇದೀಗ ಮತ್ತೆ ರಿಲಯನ್ಸ್ ಪವರ್‌ನ ಎರಡು ಅಂಗಸಂಸ್ಥೆಗಳಾದ ಕಲೈ ಪವರ್ ಪ್ರೈವೇಟ್ ಲಿಮಿಟೆಡ್ ಮತ್ತು ರಿಲಯನ್ಸ್ ಕ್ಲೀನನ್ ಲಿಮಿಟೆಡ್ ಬರೋಬ್ಬರಿ 1023 ಕೋಟಿ ರೂಪಾಯಿಗಳ ಬೃಹತ್ ಸಾಲವನ್ನು ತೀರಿಸಿದೆ ಎಂದು ತಿಳಿದುಬಂದಿದೆ.
ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ಈ ವಿಚಾರವನ್ನು ಉಲ್ಲೇಖಿಸಲಾಗಿದೆ ಅಂಗಸಂಸ್ಥೆಗಳು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ (RCFL) ನೊಂದಿಗೆ ಸಾಲದ ಪರಿಹಾರ ಮತ್ತು ಡಿಸ್ಚಾರ್ಜ್ ಒಪ್ಪಂದಕ್ಕೆ ಸಹಿ ಹಾಕಿವೆ. ತೀರಿಸಲಾದ ಒಟ್ಟು ಬಾಕಿ ಸಾಲವು 10230000000 ರೂ.ಗಳಷ್ಟಿತ್ತು. ಈಗಾಗಲೇ ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಅನ್ನು ಆಥಮ್ ಇನ್ವೆಸ್ಟ್‌ಮೆಂಟ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕೇವಲ 1 ಕೋಟಿಗೆ ಸ್ವಾಧೀನಪಡಿಸಿಕೊಂಡಿದೆ.
ಏರಿಕೆ ಓಟದಲ್ಲಿ ರಿಲಯನ್ಸ್ ಪವರ್ ಷೇರು, ಈ ಬಾರಿಯಾದ್ರೂ ಸಾಲ ತೀರಿಸಿ ದಿವಾಳಿತನದಿಂದ ಮುಕ್ತರಾಗ್ತಾರಾ ಅಂಬಾನಿ?
ಕಳೆದ ಕೆಲವು ವಾರಗಳಲ್ಲಿ, ಅನಿಲ್ ಅಂಬಾನಿಯವರ ರಿಲಯನ್ಸ್ ಪವರ್ ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಡಿಬಿಎಸ್ ಬ್ಯಾಂಕ್‌ಗೆ ನೀಡಬೇಕಾದ ಸಾಲವನ್ನು ತೀರಿಸಿದೆ. ಅನಿಲ್ ಅಂಬಾನಿ ಈಗ ಜೆಸಿ ಫ್ಲವರ್ಸ್ ಅಸೆಟ್ ರೀಕನ್‌ಸ್ಟ್ರಕ್ಷನ್ ಕಂಪನಿಯೊಂದಿಗೆ ಇರುವ ರೂ 2100 ಕೋಟಿ ಸಾಲವನ್ನು ತೀರಿಸುವ ಗುರಿ ಹೊಂದಿದ್ದಾರೆ.
ಅನಿಲ್ ಅಂಬಾನಿ ದಿವಾಳಿಯಾದ್ರೂ, ಕಿರಿಯ ಮಗನ ಕಾರು ಶೋಕಿಗೇನು ಕಮ್ಮಿ ಇಲ್ಲ!
ಅನಿಲ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯವರ ಕಿರಿಯ ಸಹೋದರ. ಅನಿಲ್ ಒಮ್ಮೆ ರೂ 1.83 ಲಕ್ಷ ಕೋಟಿಗೂ ಹೆಚ್ಚು ನಿವ್ವಳ ಮೌಲ್ಯದೊಂದಿಗೆ ವಿಶ್ವದ ಆರನೇ ಶ್ರೀಮಂತ ವ್ಯಕ್ತಿಯಾಗಿದ್ದರು, ಆದಾಗ್ಯೂ ಅವರು ಫೆಬ್ರವರಿ 2020 ರಲ್ಲಿ ಯುಕೆ ನ್ಯಾಯಾಲಯದ ಮುಂದೆ ದಿವಾಳಿತನವನ್ನು ಘೋಷಿಸಿದರು. ಈಗ ಅಂಬಾನಿ ಅವರು ತಮ್ಮ ಸಂಸ್ಥೆಯ ರಿಲಯನ್ಸ್ ಪವರ್‌ನ ಷೇರುಗಳು ಜಿಗಿದಿರುವುದರಿಂದ ಬಲವಾದ ಪುನರಾಗಮನವನ್ನು ಮಾಡುತ್ತಿದ್ದಾರೆ. ಕಳೆದ ಕೆಲದ ವರ್ಷದಲ್ಲಿ ಇದು 120% ಕ್ಕಿಂತ ಹೆಚ್ಚು.
ಜಿಂದಾಲ್ ಕಂಪೆನಿಯ JSW ನವೀಕರಿಸಬಹುದಾದ ಶಕ್ತಿ ಯೋಜನೆಯೊಂದಿಗೆ 132 ಕೋಟಿ ರೂಪಾಯಿಗಳ ಬೃಹತ್ ಒಪ್ಪಂದಕ್ಕೆ ಸಹಿ ಹಾಕಿದ ನಂತರ ರಿಲಯನ್ಸ್ ಪವರ್ ಬೆಳವಣಿಗೆಯತ್ತ ಸಾಗುತ್ತಿದೆ.