ಎಲ್ಲಾ ಸಾಲ ತೀರಿಸಿ ಮತ್ತೆ ಕೋಟ್ಯಧಿಪತಿಯಾಗುವ ಹಾದಿಯಲ್ಲಿ ಅನಿಲ್ ಅಂಬಾನಿ, ಇದಕ್ಕೆ ಕಾರಣ ಇವರಿಬ್ಬರು!

ಅನಿಲ್ ಅಂಬಾನಿ ಪುತ್ರರಾದ ಜೈ ಅನ್ಮೋಲ್ ಮತ್ತು ಜೈ ಅನ್ಶುಲ್, ಕುಸಿಯುತ್ತಿರುವ ರಿಲಯನ್ಸ್ ಸಾಮ್ರಾಜ್ಯವನ್ನು ಪುನರುಜ್ಜೀವನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಾಲದ ಹೊರೆಯನ್ನು ಕಡಿಮೆ ಮಾಡುವುದರಿಂದ ಹಿಡಿದು ಹೊಸ ವ್ಯವಹಾರಗಳನ್ನು ಗಳಿಸುವವರೆಗೆ, ಈ ಯುವ ಉದ್ಯಮಿಗಳು ತಮ್ಮ ತಂದೆಯ ವ್ಯವಹಾರವನ್ನು ಪುನಶ್ಚೇತನಗೊಳಿಸಲು ಶ್ರಮಿಸುತ್ತಿದ್ದಾರೆ.

Anil Ambani become billionaire again after clearing all debts  san

ಮುಂಬೈ (ಡಿ.31): ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್‌ ಅಂಬಾನಿ ಹೆಸರು ಹೇಳುವಾಗ ಅವರ ಬಡ ತಮ್ಮ ಅನಿಲ್‌ ಅಂಬಾನಿ ಹೆಸರೂ ಕೇಳಿ ಬರುತ್ತದೆ. ರಿಲಯನ್ಸ್‌ ಸಮೂಹ ಮುಖೇಶ್‌ ಹಾಗೂ ಅನಿಲ್‌ ಅಂಬಾನಿ ನಡುವೆ ಹರಿದು ಹಂಚಿಹೋದಾಗ ಬಹುತೇಕ ಲಾಭದಾಯಕವಾಗಿದ್ದ ಉದ್ಯಮವನ್ನುಇಬ್ಬರೂ ಪಡೆದುಕೊಂಡಿದ್ದರು. ಆದರೆ, ಕಳೆದ ಕೆಲವೊಂದು ವರ್ಷಗಳಲ್ಲಿ ಎದುರಾದ ಹಣಕಾಸು ಹಿನ್ನಡೆಗಳು, ಆಧುನಿಕತೆಗೆ ಹೊಂದಿಕೊಳ್ಳದೇ ಇರುವ ಮನಸ್ಥಿತಿಯಿಂದಾಗಿ ಅನಿಲ್‌ ಅಂಬಾನಿಯ ಉದ್ಯಮ ಜಗತ್ತು ಕುಸಿತ ಕಂಡರೆ, ಮುಖೇಶ್‌ ಅಂಬಾನಿ ಏರುಗತಿಯ ಹಾದಿಯಲ್ಲಿ ಸಾಗಿದರು. ಈ ಹಾದಿಯಲ್ಲಿ ಅನಿಲ್‌ ಅಂಬಾನಿಯ ಹಲವು ಉದ್ಯಮಗಳು ಮುಚ್ಚಿಹೋದರೆ, ಕೆಲವನ್ನು ಮಾರಾಟ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದರು. ಲಾಭ ನೀಡುತ್ತಿದ್ದ ಕೆಲವು ಕಂಪನಿಗಳ ಮೇಲೆ ಸಾಲದ ಪರ್ವತಗಳೇ ಬೆಳೆದುಕೊಂಡಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅನಿಲ್‌ ಅಂಬಾನಿಯ ಅದೃಷ್ಟ ಬದಲಾಗುತ್ತಿದ್ದಂತೆ ಕಂಡಿದೆ. ದಿನದಿಂದ ದಿನಕ್ಕೆ, ತಿಂಗಳಿನಿಂದ ತಿಂಗಳಿಗೆ ಅನಿಲ್‌ ಅಂಬಾನಿ ಪರಿಸ್ಥಿತಿ ಉತ್ತಮವಾಗುತ್ತಿದೆ. ಈ ಪರಿವರ್ತನೆಗೆ ಕಾರಣವಾಗಿರುವುದು ಇಬ್ಬರು ವ್ಯಕ್ತಿಗಳು. ಜೈ ಅನ್ಮೋಲ್‌ ಅಂಬಾನಿ ಹಾಗೂ ಜೈ ಅನ್ಶುಲ್‌ ಅಂಬಾನಿ. ಅನಿಲ್‌ ಅಂಬಾನಿಯ ಇಬ್ಬರು ಪುತ್ರರು.

ಇಬ್ಬರಲ್ಲಿ ಜೈ ಅನ್ಮೋಲ್‌ ಅಂಬಾನಿ ಹಿರಿಯ. ಇಬ್ಬರೂ ಕೂಡ ತಂದೆಯ ಉದ್ಯಮವನ್ನು ನಡೆಸುವಲ್ಲಿ ಭಾರೀ ಆಸಕ್ತಿ ತೋರಿದಿದ್ದಾರೆ. ರಿಲಯನ್ಸ್‌ ಗ್ರೂಪ್‌ ಹೊಸ ಹೊಸ ಡೀಲ್‌ ಪಡೆಯುವ ನಿಟ್ಟಿನಲ್ಲಿ ಮುಂದಾಳತ್ವ ವಹಿಸಿದ್ದಾರೆ. ಅದರೊಂದಿಗೆ ಕಂಪನಿಯ ಮೇಲೆ ಬೆಳೆದುಕೊಂಡಿದ್ದ ಸಾಲದ ಪರ್ವತವನ್ನು ಇಳಿಸುವ ಪಣ ತೊಟ್ಟು ಅದರಲ್ಲಿ ಯಶಸ್ಸನ್ನೂ ಸಂಪಾದಿಸಿದ್ದಾರೆ. ರಿಲಯನ್ಸ್‌ ಕ್ಯಾಪಿಟಲ್‌ನ  ಪರಿವರ್ತನೆಯ ಹಾದಿಯಲ್ಲಿ ಜೈ ಅನ್ಮೋಲ್‌ ಅಂಬಾನಿ ಕಂಕಣ ತೊಟ್ಟಿದ್ದರೆ, ಕಿರಿಯ ಸಹೋದರ ಜೈ ಅನ್ಶುಲ್‌ ಅಂಬಾನಿ ರಿಲಯನ್ಸ್‌ ಗ್ರೂಪ್‌ನ ಹೊಸ ಕಂಪನಿಗಳಾದ ರಿಲಯನ್ಸ್‌ ಲೈಫ್‌ ಇನ್ಶುರೆನ್ಸ್‌ ಮತ್ತು ರಿಲಯನ್ಸ್‌ ಕ್ಯಾಪಿಟಲ್‌ ಅಸೆಟ್‌ ಮ್ಯಾನೇಜ್‌ಮೆಂಟ್‌ನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ನಿಧಾನವಾಗಿ ಹಾಗೂ ಅಷ್ಟೇ ಭದ್ರವಾಗಿ ಉದ್ಯಮದಲ್ಲಿ ಜೈ ಅನ್ಶುಲ್‌ ಆಕ್ಟೀವ್‌ ಆಗಿದ್ದಾರೆ. ಇನ್ನು 18ನೇ ವರ್ಷದಲ್ಲಿಯೇ ತಂದೆಯೊಂದಿಗೆ ಕೈಜೋಡಿದ್ದ ಜೈ ಅನ್ಮೋಲ್‌ ಅಂಬಾನಿ ಈಗಾಗಲೇ ಹಿರಿಯ ಉದ್ಯಮಿ ಎನಿಸಿಕೊಂಡಿದ್ದಾರೆ. ಅಷ್ಟು ಪ್ರಮಾಣದ ಅನುಭವ ಅವರಿಗಾಗಿದೆ.

2014ರಲ್ಲಿ ಜೈ ಅನ್ಮೋಲ್‌, ರಿಲಯನ್ಸ್‌ ಮ್ಯೂಚುವಲ್‌ ಫಂಡ್‌ಗೆ ಜೊತೆಯಾಗಿದ್ದಾರೆ. ಅದಾದ ಮೂರು ವರ್ಷದ ಬಳಿಕ 2017ರಲ್ಲಿ ಅವರು ರಿಲಯನ್ಸ್‌ ಕ್ಯಾಪಿಟಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇಷ್ಟು ವರ್ಷಗಳಲ್ಲಿ, ಅನಿಲ್ ಅಂಬಾನಿಯವರ ಹಿರಿಯ ಮಗ ರಿಲಯನ್ಸ್ ಗ್ರೂಪ್‌ನಲ್ಲಿ ದೊಡ್ಡ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ ಮತ್ತು ರಿಲಯನ್ಸ್ ನಿಪ್ಪಾನ್ ಲೈಫ್ ಅಸೆಟ್ ಮ್ಯಾನೇಜ್‌ಮೆಂಟ್‌ನಲ್ಲಿ ಜಪಾನಿನ ಸಂಸ್ಥೆ ನಿಪ್ಪಾನ್‌ನ ಪಾಲನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಕೀರ್ತಿಗೆ ಪಾತ್ರವಾಗಿದೆ, ಇದು ಕಂಪನಿಯ ಮೌಲ್ಯಮಾಪನವನ್ನು ಗಮನಾರ್ಹವಾಗಿ ಹೆಚ್ಚಿಸಿದೆ.

Anil Ambani become billionaire again after clearing all debts  sanAnil Ambani become billionaire again after clearing all debts  san

 

ಬ್ಯಾಂಕ್‌, ಮ್ಯೂಚುಫಲ್‌ ಫಂಡ್‌ ಯಾವುದ್ರಲ್ಲೂ ಅಲ್ಲ... ಮುಖೇಶ್‌ ಅಂಬಾನಿ ತಮ್ಮ ಹಣ ಹೂಡಿಕೆ ಮಾಡೋದು ಎಲ್ಲಿ?

ಜೈ ಅನ್ಮೋಲ್ ಅಂಬಾನಿ ಅವರಿಗೆ 33 ವರ್ಷ, ಜೈ ಅನ್ಶುಲ್ ಅಂಬಾನಿ ಅವರಿಗೆ 28 ​​ವರ್ಷ. ಒಂದು ಕಾಲದಲ್ಲಿ ಶ್ರೀಮಂತಿಕೆಯಿಂದ ಇದ್ದ ತಂದೆಯ ಉದ್ಯಮವನ್ನು ಪುನರುಜ್ಜೀವನಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ಪಣ ತೊಟ್ಟಿದ್ದಾರೆ. ರಿಲಯನ್ಸ್ ಗ್ರೂಪ್ ಅನ್ನು ಅದರ ಹಿಂದಿನ ವೈಭವಕ್ಕೆ ತರಲು ನಿರ್ಧರಿಸಿದ್ದು, ಅವರ ಇತ್ತೀಚಿನ ಕ್ರಮಗಳಿಂದ ಗೊತ್ತಾಗಿದೆ.

 

ದಿವಾಳಿಯಾದ ಅಪ್ಪನನ್ನು ಉಳಿಸಿದ ಅನಿಲ್‌ ಅಂಬಾನಿ ಮಕ್ಕಳು ಎಷ್ಟು ಓದಿಕೊಂಡಿದ್ದಾರೆ?

Latest Videos
Follow Us:
Download App:
  • android
  • ios