Asianet Suvarna News Asianet Suvarna News

Anand Mahindra Journey ನಿರ್ದೇಶಕನಾಗಲು ಹೊರಟಿದ್ದ ಆನಂದ್ ಮಹೀಂದ್ರ, ದಶಕದ ಹಿಂದಿನ ಸಿನಿ ಪಯಣ!

  • ಉದ್ಯಮಿಯ ಕಾಲೇಜು ಹಾಗೂ ವೃತ್ತಿ ಜೀವನದ ಆರಂಭಿಕ ದಿನದ ಪಯಣ
  • ಸಿನಿಮಾ ನಿರ್ದೇಶಕನಾಗಲು ಫಿಲ್ಮ್ ಕಾಲೇಜಿನಲ್ಲಿ ಪದವಿ ಪಡೆದಿರುವ ಮಹೀಂದ್ರ
  • ಸಾಕ್ಷ್ಯ ಚಿತ್ರ ಸೇರಿದಂತೆ ಕೆಲ ಮಹತ್ವದ ಸಿನಿ ಚಿತ್ರೀಕರಣ ನಡೆಸಿದ್ದ ಆನಂದ್
Anand Mahindra wanted to be a filmmaker business tycoon reveals college days ambition ckm
Author
Bengaluru, First Published Jan 20, 2022, 8:12 PM IST

ನವದೆಹಲಿ(ಜ.20): ಭಾರತದ ಖ್ಯಾತ ಉದ್ಯಮಿ, ಮಹೀಂದ್ರ ಅಂಡ್ ಮಹೀಂದ್ರ ಕಂಪನಿ ಮುಖ್ಯಸ್ಛ, ಹಲವು ಉದ್ಯಮದಲ್ಲಿ ಹೂಡಿಕೆ ಮಾಡಿರುವ ಆನಂದ್ ಮಹೀಂದ್ರ(Anand Mahindra) ಇದೀಗ ತಮ್ಮ ಕಾಲೇಜು(College) ಹಾಗೂ ವೃತ್ತಿ ಜೀವನದ ಆರಂಭಿಕ ದಿನಗಳ ಕುರಿತ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಆನಂದ್ ಮಹೀಂದ್ರ ಸಿನಿಮಾ ನಿರ್ದೇಶಕನಾಗಲು(Film Maker) ಹೊರಟಿದ್ದರು. ಇಷ್ಟೇ ಅಲ್ಲ ಇದಕ್ಕಾಗಿ ಅವಿರತ ಪ್ರಯತ್ನ ಮಾಡಿದ್ದರು. ಈ ಕುರಿತ ಫೋಟೋ ಹಾಗೂ ಅದರ ಹಿಂದಿನ ಸುಂದರ ಕತೆಯನ್ನು ಬಿಚ್ಚಿಟ್ಟಿದ್ದಾರೆ.

ಆನಂದ್ ಮಹೀಂದ್ರ ಸಿನಿಮಾ ಕ್ಷೇತ್ರದಲ್ಲಿ ವೃತ್ತೀ ಜೀವನ ಆರಂಭಿಸಲು ಬಯಸಿದ್ದರು. ಕೈಗಾರಿಕೋದ್ಯಮಿ(Industrialist ಹರೀಶ್ ಮಹೀಂದ್ರ ಹಾಗೂ ಇಂದಿರಾ ಮಹೀಂದ್ರ ಪುತ್ರ ಆನಂದ್ ಮಹೀಂದ್ರ ಈ ನಿಟ್ಟಿನಲ್ಲಿ ತಮ್ಮ ಪ್ರಯತ್ನ ಕೂಡ ಆರಂಭಿಸಿದ್ದರು. ಸಿನಿಮಾ ನಿರ್ದೇಶಕನಾಗಲು ಆನಂದ್ ಮಹೀಂದ್ರ ಫಿಲ್ಮ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದರು. ಬಳಿಕ ಕೆಲ ಡಾಕ್ಯುಮೆಂಟರಿಗಳನ್ನು ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಈ ವಿಚಾರ ಹಲವರಿಗೆ ತಿಳಿದಿಲ್ಲ. ಇದೀಗ ಟ್ವೀಟ್ ಮೂಲಕ ಕುತೂಹಲ ಮಾಹಿತಿಯನ್ನು ಬಹಿರಂಗ ಮಾಡಿದ್ದಾರೆ.

Nairobi Police Car ಕೀನ್ಯಾ ಪೊಲೀಸರ ಸೇವೆಗೆ ಮಹೀಂದ್ರ ಸ್ಕಾರ್ಪಿಯೋ, ಸಂತಸ ಹಂಚಿಕೊಂಡ ಆನಂದ್ ಮಹೀಂದ್ರ!

ಆನಂದ್ ಮಹೀಂದ್ರ 77 ಕುಂಭಮೇಳದ ಕುರಿತ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಾರೆ. ಇನ್ನು ಟ್ವಿಟರ್ ಮೂಲಕ ಪೊಸ್ಟ್ ಮಾಡಿರುವ ಫೋಟೋ ಮಧ್ಯಪ್ರದೇಶದ ಇಂದೋರ್‌ನ ಕುಗ್ರಾಮದಲ್ಲಿ ಡಾಕ್ಯುಮೆಂಟರಿ ಚಿತ್ರದ ಶೂಟಿಂಗ್ ವೇಳೆ ಫೋಟೋ ಆಗಿದೆ. ಕೈಯಲ್ಲಿರುವ 16MM ಕ್ಯಾಮಾರ ಹಿಡಿದ್ದಾರೆ. ಈ ಕುರಿತ ಟ್ವೀಟ್ ಇದೀಗ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಆನಂದ್ ಮಹೀಂದ್ರ ದಶಕದ ಹಿಂದಿನ ಹಲವು ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. 

 

ಪೋಷಕರು ಹಾಗೂ ಕುಟುಂಬಸ್ಥರು ದೇಶದ ಅತೀ ದೊಡ್ಡ ಕೈಗಾರಿಕೋದ್ಯಮಿಗಳಾಗಿ ಗುರುತಿಸಿಕೊಂಡಿದ್ದರು. ಹೀಗಾಗಿ ಕೈಗಾರಿಗಳ ಜವಾಬ್ದಾರಿ ನೇರವಾಗಿ ಆನಂದ್ ಮಹೀಂದ್ರ ಹೇಗಲಮೇಲೇರಿತ್ತು. ಹೀಗಾಗಿ ಸಿನಿಮಾ ಕನಸುಗಳನ್ನು ಬದಿಗೊತ್ತಿ ನೇರವಾಗಿ ಹಾರ್ವರ್ಡ್ ಬ್ಯೂಸಿನೆಸ್ ಸ್ಕೂಲ್‌ನಿಂದ MBA ಪದವಿ ಪಡೆದುಕೊಂಡರು. 1981ರಲ್ಲಿ MBA ಮುಗಿಸಿದ ಆನಂದ್ ಮಹೀಂದ್ರ ಅದೇ ವರ್ಷ ಮಹೀಂದ್ರ ಸ್ಟೀಲ್ ಕಂಪನಿಯಲ್ಲಿ ಅಸಿಸ್ಟೆಂಟ್ ಫಿನಾನ್ಸ್ ಡೈರೆಕ್ಟರ್ ಆಗಿ ವೃತ್ತಿ ಆರಂಭಿಸಿದರು. 1989ರಲ್ಲಿ ಆನಂದ್ ಮಹೀಂದ್ರ, ಸ್ಟೀಲ್ ಕಂಪನಿಯ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ನೇಮಕಗೊಂಡರು.

Anand Mahindra Offer ಕೈ-ಕಾಲಿಲ್ಲದ ಪರಿಶ್ರಮಿಗೆ ಆನಂದ್ ಮಹೀಂದ್ರ ಉದ್ಯೋಗ ಆಫರ್, ಮುಗ್ದ ಸಾಧಕನ ಹಿಂದಿಂದೆ ನೋವಿನ ಕತೆ!

1991ರಲ್ಲಿ ಆನಂದ್ ಮಹೀಂದ್ರ ಮತ್ತೊಂದು ಮಹತ್ವದ ಜವಾಬ್ದಾರಿಗೆ ಹೆಗಲೊಡ್ಡಿದ್ದರು. ಮಹೀಂದ್ರ ಅಂಡ್ ಮಹೀಂದ್ರ ಕಂಪನಿಯ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ನೇಮಕಗೊಂಡರು. 1997ರಲ್ಲಿ ಆನಂದ್ ಮಹೀಂದ್ರ ಆಫ್ ರೋಡ್ ವಾಹನ ಹಾಗೂ ಟ್ರಾಕ್ಟರ್ ಉತ್ಪಾದನೆ ಆರಂಭಿಸಿದರು. 2001ರಲ್ಲಿ ಆನಂದ್ ಮಹೀಂದ್ರರನ್ನು ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ನೇಮಕ ಮಾಡಲಾಯಿತು. ಅದೇ ವರ್ಷ ಕಂಪನಿಯ ಉಪಾಧ್ಯಕ್ಷ ಜವಾಬ್ದಾರಿ ವಹಿಸಿಕೊಂಡರು. 2012ರಲ್ಲಿ ಮಹೀಂದ್ರ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಜವಾಬ್ದಾರಿ ವಹಿಸಿಕೊಂಡರು. 

ಭಾರತ ಹಾಗೂ ವಿದೇಶಗಳಲ್ಲಿ ಆನಂದ್ ಮಹೀಂದ್ರ ಹಲವು ಉದ್ಯಮಗಳನ್ನು ಮುನ್ನಡೆಸುತ್ತಿದ್ದಾರೆ. ದೇಶ ವಿದೇಶಗಳಲ್ಲಿ ಮಹೀಂದ್ರ ಕಾರು ಮಾರುಕಟ್ಟೆ ಹೊಂದಿದೆ. ಮಹೀಂದ್ರ ಕಾರುಗಳು ಹಲವು ದೇಶಗಳಲ್ಲಿ  ಜನಪ್ರಿಯವಾಗಿದೆ. ಹಲವು ದೇಶಗಳ ಪೊಲೀಸ್ ಇಲಾಖೆಯಲ್ಲಿ ಮಹೀಂದ್ರ ಕಾರು ಬಳಕೆ ಮಾಡುತ್ತಿದ್ದಾರೆ. 5 ಸ್ಟಾರ್ ಸೇಫ್ಟಿ ಕಾರು ನೀಡುತ್ತಿರುವ ಮಹೀಂದ್ರ, ಟ್ರಕ್, ಬಸ್, ಟ್ರಾಕ್ಟರ್, ಸೇನಾ ವಾಹನಗಳ ಉತ್ಪಾದನೆಯಲ್ಲೂ ಮುಂಚೂಣಿಯಲ್ಲಿದೆ. ಇನ್ನು ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ. ಹಲವು ಕೌತುಕ ವಿಚಾರಗಳನ್ನು ಹಂಚಿಕೊಂಡು ಭಾರಿ ಸಂಚಲನ ಮೂಡಸಿದಿದಾರೆ. ಇನ್ನು ಹಲವು ಸಾಮಾಜಿಕ ಕಾರ್ಯಗಳನ್ನು ಆನಂದ್ ಮಹೀಂದ್ರ ಮಾಡುತ್ತಿದ್ದಾರೆ.

Follow Us:
Download App:
  • android
  • ios