Asianet Suvarna News Asianet Suvarna News

Nairobi Police Car ಕೀನ್ಯಾ ಪೊಲೀಸರ ಸೇವೆಗೆ ಮಹೀಂದ್ರ ಸ್ಕಾರ್ಪಿಯೋ, ಸಂತಸ ಹಂಚಿಕೊಂಡ ಆನಂದ್ ಮಹೀಂದ್ರ!

  • ಕೀನ್ಯಾದ ನೈರೋಬಿ ಪೊಲೀಸರಿಗೆ ಮಹೀಂದ್ರ ಸ್ಕಾರ್ಪಿಯೋ ಕಾರು
  • ಗಸ್ತು ತಿರುಗಲು, ಪೊಲೀಸ್ ಸೇವೆಗೆ ಭಾರತದ ಕಾರು ಆಯ್ಕೆ ಮಾಡಿದ ಕೀನ್ಯ
  • ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡ ಆನಂದ್ ಮಹೀಂದ್ರ
Anand Mahindra share images fleet of Mahindra Scorpio SUVs as Nairobi police vehicles
Author
Bengaluru, First Published Jan 10, 2022, 2:59 PM IST

ನವದೆಹಲಿ(ಜ.10): ಭಾರತದ ವಾಹನಗಳು ಈಗಾಗಲೇ ಹಲವು ರಾಷ್ಟ್ರಗಳಲ್ಲಿ ಮಿಂಚುತ್ತಿದೆ. ವಿಶೇಷವಾಗಿ ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರ(Mahindra & Mahindra) ವಾಹನಗಳನ್ನು ಹಲವು ದೇಶಗಳ ತಮ್ಮ ಭದ್ರತಾ ವ್ಯವಸ್ಥೆಯಲ್ಲಿ ಬಳಸಿಕೊಂಡಿದೆ. ಈ ಸಾಲಿಗೆ ಮಹೀಂದ್ರ ಸ್ಕಾರ್ಪಿಯೋ(Mahindra Scorpio) ವಾಹನ ಸೇರಿಕೊಂಡಿದೆ. ಕೀನ್ಯಾದ ನೈರೋಬಿ ಪೊಲೀಸರು ಇದೀಗ ಪೊಲೀಸ್ ಸೇವೆಗಾಗಿ ಭಾರತದ ಮಹೀಂದ್ರ ಸ್ಕಾರ್ಪಿಯೋ ವಾಹನ ಬಳಸಿಕೊಂಡಿದೆ.

ನೈರೋಬಿ ಪೊಲೀಸರು(Nairobi Police) 100 ಮಹೀಂದ್ರ ಸ್ಕಾರ್ಪಿಯೋ ವಾಹನ ಖರೀದಿಸಿ ಇದೀಗ ತಮ್ಮ ಪೊಲೀಸ್ ಸೇವೆಯಲ್ಲಿ ನಿಯೋಜನೆ ಮಾಡಿದೆ. ಸಿಂಗಲ್ ಕ್ಯಾಬ್ ಮಹೀಂದ್ರ ಸ್ಕಾರ್ಪಿಯೋ ಪಿಕ್ ವಾಹನಗಳನ್ನು ಕೀನ್ಯಾ(Kenya) ಪೊಲೀಸರು ಬಳಸಿಕೊಂಡಿದ್ದಾರೆ. ನೈರೋಬಿ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೊಚ್ಚ ಹೊಸ ಮಹೀಂದ್ರ ಸ್ಕಾರ್ಪಿಯೋ ಪೊಲೀಸ್ ವಾಹನದ ಫೋಟೋ ಹಂಚಿಕೊಂಡಿದ್ದಾರೆ. ಇದನ್ನು ಮಹೀಂದ್ರ ಮುಖ್ಯಸ್ಥ ಆನಂದ್ ಮಹೀಂದ್ರ ರಿಟ್ವೀಟ್ ಮಾಡಿದ್ದಾರೆ.

Anand Mahindra Offer ಕೈ-ಕಾಲಿಲ್ಲದ ಪರಿಶ್ರಮಿಗೆ ಆನಂದ್ ಮಹೀಂದ್ರ ಉದ್ಯೋಗ ಆಫರ್, ಮುಗ್ದ ಸಾಧಕನ ಹಿಂದಿಂದೆ ನೋವಿನ ಕತೆ!

ಕೀನ್ಯಾ ಪೊಲೀಸರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಹೀಂದ್ರ ವಾಹನ ಕುರಿತ ಮಾಹಿತಿ ನೀಡಿದ್ದಾರೆ. 100 ಮಹೀಂದ್ರ ಸ್ಕಾರ್ಪಿಯೋ ವಾಹವನ್ನು ಹಸ್ತಾಂತರಿಸಲು ಸಂತೋಷವಾಗುತ್ತಿದೆ ಎಂದು ಟ್ವೀಟ್ ಮಾಡಿದೆ. ಇತ್ತ ಆನಂದ್ ಮಹೀಂದ್ರ(Anand Mahindra) ರಿಟ್ವೀಟ್ ಮೂಲಕ  ನೈರೋಬಿ ಪೊಲೀಸರ ಸೇವೆಯಲ್ಲಿ ಮಹೀಂದ್ರ ಸ್ಕಾರ್ಪಿಯೋ ಬಳಸಿಕೊಂಡಿರುವ ಮಾಹಿತಿ ಹೆಚ್ಚು ಸಂತಸ ತಂದಿದೆ ಎಂದು ಹೇಳಿದ್ದಾರೆ.

ಮಹೀಂದ್ರ ಸ್ಕಾರ್ಪಿಯೋ ಸಿಂಗಲ್ ಕ್ಯಾಬ್ ಪಿಕ್‌ಅಪ್ ವಾಹನ ಯಾವುದೇ ರಸ್ತೆಗಳಲ್ಲಿ ಸಂಚರಿಸಲಿದೆ. ಪರ್ವತ, ಕಲ್ಲು ಮಣ್ಣು ಸೇರಿದಂತೆ ಅದೆಂತಾ ಕ್ಲಿಷ್ಟಕರ ಸ್ಥಳಗಳಲ್ಲಿ ಈ ವಾಹನ ನಿರಾಯಾಸವಾಗಿ ಸಾಗಲಿದೆ. ಕೀನ್ಯಾದ ಬಹುತೇಕ ಪ್ರದೇಶಗಳು ಸರಿಯಾದ ರಸ್ತೆಗಳಿಲ್ಲದ ಹಾಗೂ ದುರ್ಗಮ ಹಾದಿಗಳಾಗಿದೆ. ಹೀಗಾಗಿ ಈ ರಸ್ತೆಗಳಲ್ಲಿ ಸಂಚರಿಸಲು ಶಕ್ತಿಶಾಲಿ ವಾಹನವನ್ನೇ ಕೀನ್ಯಾ ಪೊಲೀಸರು ಆಯ್ಕೆ ಮಾಡಿಕೊಂಡಿದ್ದಾರೆ.

ಭಾರತದ ಡ್ರೈವರ್ ಲೆಸ್ ಬೈಕ್, ವೈರಲ್ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ!

ಕೀನ್ಯಾ ಪೊಲೀಸರು ಖರೀದಿಸಿದ ಮಹೀಂದ್ರ ಸ್ಕಾರ್ಪಿಯೋ ಕಾರಿಗೆ ಪೊಲೀಸ್ ವಾಹನಗಳ ಸಹಜ ಬಣ್ಣ ನೀಲಿ ಬಣ್ಣ ನೀಡಲಾಗಿದೆ. ಇದೀಗ ಕೀನ್ಯಾದ ಸರ್ಕಾರಿ ಸೇವೆಯಲ್ಲಿ ಬಳಸಿರುವ ಭಾರತದ ಮೊದಲ ವಾಹನ ಅನ್ನೋ ಹೆಗ್ಗಳಿಕೆಗೆ ಮಹೀಂದ್ರ ಸ್ಕಾರ್ಪಿಯೋ ಪಾತ್ರವಾಗಿದೆ. ಇದೀಗ ಕೀನ್ಯಾದ ರಸ್ತೆಗಳಲ್ಲಿ ಭಾರತದ ಮಹೀಂದ್ರ ಸ್ಕಾರ್ಪಿಯೋ ವಾಹನ ನೋಡಬಹುದಾಗಿದೆ.

ಮಹೀಂದ್ರ ಸ್ಕಾರ್ಪಿಯೋ ಭಾರತದಲ್ಲೂ ಅತ್ಯಂತ ಜನಪ್ರಿಯ ವಾಹನವಾಗಿದೆ. ಭಾರತದ ಹಲವು ರಾಜ್ಯಗಳ ಪೊಲೀಸ್ ಇಲಾಖೆ ಮಹೀಂದ್ರ ಸ್ಕಾರ್ಪಿಯೋ ವಾಹನ ಬಳಸುತ್ತಿದೆ. ಸ್ಕಾರ್ಪಿಯೋ SUV ಹಾಗೂ ಸ್ಕಾರ್ಪಿಯೋ ಸಿಂಗಲ್ ಕ್ಯಾಬ್ ಪಿಕ್‌ಅಪ್ ವಾಹನ ವೇರಿಯೆಂಟ್ ಲಭ್ಯವಿದೆ. ಭಾರತದಲ್ಲಿ ಹೆಚ್ಚಾಗಿ ಸ್ಕರ್ಪಿಯೋ SUV ಕಾರನ್ನು ಬಳಸಲಾಗಿದೆ. ಕೀನ್ಯಾದಲ್ಲಿ ಸಿಂಗಲ್ ಕ್ಯಾಬ್ ಪಿಕ್ಅಪ್ ವೇರಿಯೆಂಟ್ ಬಳಸಿದ್ದಾರೆ.

Upcoming Car ಬಹುನಿರೀಕ್ಷಿತ, ಆಕರ್ಷಕ ಮಹೀಂದ್ರ ಸ್ಕಾರ್ಪಿಯೋ ಕಾರು ಬಿಡುಗಡೆ ದಿನಾಂಕ, ಬೆಲೆ ಬಹಿರಂಗ!

ಮಹೀಂದ್ರ ಸ್ಕಾರ್ಪಿಯೋ ಸಿಂಗಲ್ ಕ್ಯಾಪ್ ಪಿಕ್ಅಪ್ ವಾಹನ 2.2 ಲೀಟರ್ ಟರ್ಬೋ mHawk ಡೀಸೆಲ್ ಎಂಜಿನ್ ಹೊಂದಿದೆ. ಪಿಕ್ಅಪ್ ವಾಹನ 140 PS ಪವರ್( 3,750 rpm) ಹಾಗೂ 320 Nm ಪೀಕ್ ಟಾರ್ಕ್( 1,500-2,800 rpm)ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ. ಈ ಪಿಕ್ಅಪ್ ಟ್ರಕ್ 4x2 ಹಾಗೂ 4x4 ಡ್ರೈವ್ ವ್ಹೀಲ್ ಆಯ್ಕೆ ಲಭ್ಯವಿದೆ.

ಮಹೀಂದ್ರ ಸ್ಕಾರ್ಪಿಯೋ ಹೊಚ್ಚ ಹೊಸ ರೂಪದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಸನ್‌ರೂಫ್ ಸೇರಿದಂತೆ ಹೆಚ್ಚುವರಿ ಫೀಚರ್ಸ್ ಹಾಗೂ ಹೊಸ ವಿನ್ಯಾಸದಲ್ಲಿ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ. ಸುರಕ್ಷತಾ ಫೀಚರ್ಸ್‌ಗಳಾಗ ಡ್ಯುಯೆಲ್ ಏರ್‌ಬ್ಯಾಗ್ ಕೂಡ ನೂತನ ಸ್ಕಾರ್ಪಿಯೋ ಕಾರಿನಲ್ಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಸ್ಕಾರ್ಪಿಯೋ ಕಾರಿನ ಬೆಲೆ 12.91 ಲಕ್ಷ ರೂಪಾಯಿಯಿಂದ 17.60 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 

Follow Us:
Download App:
  • android
  • ios