ಮುಂಬೈ(ಜು.17): ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವ ಮಹೀಂದ್ರ ಗ್ರೂಪ್ ಸಂಸ್ಥೆಯ ಮಾಲೀಕ ಆನಂದ್ ಮಹೀಂದ್ರ, ತಮ್ಮ ಟ್ವೀಟ್’ಗಳಿಂದಲೇ ಜನಪ್ರೀಯತೆ ಗಳಿಸಿದ್ದಾರೆ.

ಇದೀಗ ತಾವು ಮಾಡಿದ ಟ್ವೀಟ್’ಗೆ ಪ್ರತಿಕ್ರಿಯೆ ನೀಡಿದ ಯುವತಿಗಾಗಿ ಆನಂದ್, ತಮ್ಮ ಬೋರ್ಡ್ ಮೀಟಿಂಗ್ ನಿಯಮವನ್ನೇ ಬದಲಸಿದ್ದಾರೆ. ಹೌದು, ಬೋರ್ಡ್ ಮೀಟಿಂಗ್’ನಲ್ಲಿ ಇನ್ಮೇಲೆ ಪ್ಲ್ಯಾಸ್ಟಿಕ್ ವಾಟರ್ ಬಾಟಲ್ ಬಳಸುವಂತಿಲ್ಲ ಎಂದು ಆನಂದ್ ಮಹೀಂದ್ರ ಆಜ್ಞೆ ಹೊರಡಿಸಿದ್ದಾರೆ.

ಬೋರ್ಡ್ ಮೀಟಿಂಗ್ ಕುರಿತಾದ ಫೋಟೋವೊಂದನ್ನು ಆನಂದ್ ಮಹೀಂದ್ರ ಟ್ವಿಟ್ಟರ್’ನಲ್ಲಿ ಶೇರ್ ಮಾಡಿದ್ದರು. ಇದಕ್ಕೆ ಮಿತಾಲಿ ಎಂಬ ಯುವತಿ ನಿಮ್ಮ ಸಂಸ್ಥೆಯಲ್ಲಿ ಪ್ಲ್ಯಾಸ್ಟಿಕ್ ಬಾಟಲ್’ಗಳನ್ನು ನಿಷೇಧಿಸಿದರೆ ಒಳ್ಳೆಯದು ಎಂದು ಸಲಹೆ ನೀಡಿದ್ದಳು.

ಯುವತಿ ಸಲಹೆಯನ್ನು ಮೆಚ್ಚಿಕೊಂಡ ಆನಂದ್ ಮಹೀಂದ್ರ, ಇನ್ನು ಮುಂದೆ ಬೋರ್ಡ್ ಮೀಟಿಂಗ್’ನಲ್ಲಿ ಪ್ಲ್ಯಾಸ್ಟಿಕ್ ವಾಟರ್ ಬಾಟಲ್’ಗಳನ್ನು ಬಳಸದಿರುವಂತೆ ಆದೇಶಿಸಿದ್ದಾರೆ.