Asianet Suvarna News Asianet Suvarna News

ಸೂಪರ್ ಗುಡ್ ನ್ಯೂಸ್: ಚಿನ್ನ, ಬೆಳ್ಳಿ ರೇಟ್ ಫುಲ್ ಡೌನ್!

ಚಿನ್ನದ ದರದಲ್ಲಿ ಭಾರೀ ಇಳಿಕೆ! ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ದರ ಇಳಿಕೆ! ಬೆಳ್ಳಿ ದರದಲ್ಲೂ ಗಮರ್ನಾಹ ಇಳಿಕೆ! ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ದರ ಇಳಿಕೆ
 

Amid Weak Global Cues Gold Prices Fall
Author
Bengaluru, First Published Oct 7, 2018, 2:35 PM IST

ಮುಂಬೈ(ಅ.7): ಕಳೆದ ಕೆಲ ದಿನಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿದ್ದ ಚಿನ್ನ,ಬೆಳ್ಳಿ ಬೆಲೆಯಲ್ಲಿ ಇಂದು ಸ್ವಲ್ಪ ಮಟ್ಟದ ಇಳಿಕೆ ಕಂಡು ಬಂದಿದೆ. ನಿನ್ನೆಯಷ್ಟೇ ಚಿನ್ನದ ಬೆಲೆಯಲ್ಲಿ 500 ರೂ ಏರಿಕೆ ಕಂಡು ಬಂದಿತ್ತು.

ಇದೀಗ ಚಿನ್ನಾಭರಣ ಕೊಳ್ಳುವ ಬೇಡಿಕೆ ಕಡಿಮೆಯಾಗುತ್ತಿದ್ದಂತೆ 250 ರೂಪಾಯಿ ಇಳಿಕೆ ಕಂಡ ಬಂಗಾರ 10 ಗ್ರಾಂಗೆ 31,850 ರೂ. ನಂತೆ ಮಾರಾಟವಾಗಿದೆ. ಇತ್ತ ನಾಣ್ಯ ತಯಾರಕರಲ್ಲೂ ಬೇಡಿಕೆ ಇಳಿಕೆಯಾದ ಕಾರಣ ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡು ಬಂದಿದೆ. ಬೆಳ್ಳಿ 100 ರೂ. ಇಳಿಕೆ ಕಂಡಿದೆ. ಕೆ.ಜಿ ಬೆಳ್ಳಿ ಶುಕ್ರವಾರ 39,250 ರೂ. ಗೆ ಬಂದು ನಿಂತಿದೆ.

ಅಂತರಾಷ್ಟ್ರೀಯ ಮಾರುಕಟ್ಟೆ ಸಿಂಗಾಪುರದಲ್ಲಿ ಬಂಗಾರ ಶೇ. 0.16ರಷ್ಟು ಇಳಿಕೆ ಕಂಡು 1,199.40 ಡಾಲರ್ ಪ್ರತಿ ಔನ್ಸ್ ಆಗಿದೆ. ಬೆಳ್ಳಿ ಬೆಲೆ ಶೇ. 0.03 ಇಳಿಕೆ ಕಂಡು 14.64 ಡಾಲರ್ ಪ್ರತಿ ಔನ್ಸ್ ಆಗಿದೆ. 

ಸ್ಥಳೀಯ ಮಾರುಕಟ್ಟೆಯಲ್ಲಿ ಶೇ. 99.9 ಹಾಗೂ ಶೇ. 99.5 ಶುದ್ಧ ಚಿನ್ನ 250 ರೂಪಾಯಿ ಇಳಿಕೆ ಕಂಡು, ಪ್ರತಿ 10 ಗ್ರಾಂಗೆ 31,850 ರೂ. ಹಾಗೂ 31,700 ರೂ. ಆಗಿದೆ.
 

Follow Us:
Download App:
  • android
  • ios