ನವದೆಹಲಿ(ಮೇ.05): ಅಮೆರಿಕ-ಚೀನಾ ನಡುವೆ ವಾಣಿಜ್ಯ ಸಮರ ತೀವ್ರಗೊಂಡ ಹಿನ್ನೆಲೆಯಲ್ಲಿ ಹಾಗೂ ಕೋವಿಡ್‌-19 ಬಿಕ್ಕಟ್ಟಿನಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡುತ್ತಿದ್ದು, ಭಾರತದಲ್ಲೂ ಷೇರು ಸೂಚ್ಯಂಕ 2000 ಅಂಕಗಳಷ್ಟುಪತನಗೊಂಡಿದೆ.

ಬಾಂಬೆ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್‌ ಸೂಚ್ಯಂಕ ಸೋಮವಾರ ಇಡೀ ದಿನ ತೀವ್ರ ಹೊಯ್ದಾಟ ಕಂಡು, ದಿನದಂತ್ಯಕ್ಕೆ 2002 ಅಂಕ ಪತನಗೊಂಡು 31,715.35ಕ್ಕೆ ತಲುಪಿತು. ಬಿಎಸ್‌ಇ ಸೂಚ್ಯಂಕ ಒಟ್ಟಾರೆ ಶೇ.5.94ರಷ್ಟುಪತನಗೊಂಡಿತು. ಎನ್‌ಎಸ್‌ಇ ನಿಫ್ಟಿಸೂಚ್ಯಂಕ ಕೂಡ 556.4 ಅಂಕ ಪತನಗೊಂಡು, ಶೇ.5.74ರಷ್ಟು ಕುಸಿತ ಕಂಡಿತು.

ದಿನದಂತ್ಯಕ್ಕೆ ನಿಫ್ಟಿ9293.5 ಅಂಕಕ್ಕೆ ತಲುಪಿತು. ಐಸಿಐಸಿಐ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌, ಎಚ್‌ಡಿಎಫ್‌ಸಿ, ಇಂಡಸ್‌ಇಂಡ್‌ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌ ಮತ್ತು ಮಾರುತಿ ಷೇರುಗಳು ಭಾರಿ ಪ್ರಮಾಣದಲ್ಲಿ ಕುಸಿತ ಅನುಭವಿಸಿದವು.