ಬೆಂಗಳೂರು(ಜ.19): ಅಮೆಜಾನ್‌ನ ಅತಿ ದೊಡ್ಡ ಮಾರಾಟ ಮೇಳ ‘ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್’ ನಾಳೆ(ಜ.20)ಯಿಂದ ಶುರುವಾಗಲಿದೆ. ಜ.23ರವರೆಗೆ ನಡೆಯುವ ಈ ಮೆಗಾ ಸೇಲ್‌ನಲ್ಲಿ ಹಲವು ಉತ್ಪನ್ನಗಳ ಮೇಲೆ ಶೇ.70 ರಷ್ಟು ರಿಯಾಯ್ತಿ ಘೋಷಿಸಲಾಗಿದೆ.

ಇದೇ ವೇಳೆ ಅಮೆಜಾನ್ ಪ್ರೈಮ್ ಗ್ರಾಹಕರು ಇಂದು(ಜ.19)ರ ಮಧ್ಯಾಹ್ನದಿಂದಲೇ ಉತ್ಪನ್ನಗಳನ್ನು ಖರೀದಿಸುವ ಅವಕಾಶ ಈಗಾಗಲೇ ಪಡೆದಿದ್ದಾರೆ.

ಗ್ರೇಟ್​ ಇಂಡಿಯನ್​ ಸೇಲ್​ ಆಫರ್​ನಲ್ಲಿ ವಾಷಿಂಗ್ ಮಷಿನ್, ಲ್ಯಾಪ್​ಟಾಪ್​, ಮೊಬೈಲ್​ಗಳ ಮೇಲೆ ಭಾರೀ ರಿಯಾಯ್ತಿ ನೀಡಲಾಗಿದೆ. ಪ್ರಮುಖವಾಗಿ OnePlus 6T ಸ್ಮಾರ್ಟ್​ಫೋನ್​ ಮೇಲೆ ಎಕ್ಸ್​ಚೇಂಜ್​ ಆಫರ್ ಅಡಿಯಲ್ಲಿ 2 ಸಾವಿರ ರೂ. ಹೆಚ್ಚುವರಿ ರಿಯಾಯ್ತಿ ಮತ್ತು Redmi Y2 ಮೊಬೈಲ್​ ಕೇವಲ 7,999 ರೂ.ನಲ್ಲಿ ದೊರೆಯುತ್ತಿದೆ.

ಅದರಂತೆ ಮನೆ ಬಳಕೆಯ ಉತ್ಪನ್ನಗಳ ಮೇಲೂ 75% ರಿಯಾಯ್ತಿ ನೀಡಲಾಗಿದ್ದು, ಎಲೆಕ್ಟ್ರಿಕ್​ ಉತ್ಪನ್ನಗಳ ಮೇಲೆ 60% ಡಿಸ್ಕೌಂಟ್​ ಕೊಡಲಾಗಿದೆ. ಸ್ಮಾರ್ಟ್​​ ಟಿವಿ ಮೇಲೆ ಭಾರಿ ಡಿಸ್ಕೌಂಟ್​ ನೀಡಲಾಗಿದ್ದು, ಸ್ಯಾಮ್​ಸಂಗ್​ ಫುಲ್​ ಎಚ್​ಡಿ ಸ್ಮಾರ್ಟ್​ ಟಿವಿ 58,900 ರೂ. ಬದಲಾಗಿ ಕೇವಲ 36,990 ರೂ.ನಲ್ಲಿ ಖರೀದಿಸಬಹುದಾಗಿದೆ. ಇನ್ನುಳಿದಂತೆ ವಾಷಿಂಗ್ ಮಷಿನ್ ಮೇಲೆ 11 ಸಾವಿರ ರೂ. ಡಿಸ್ಕೌಂಟ್ ಘೋಷಿಸಲಾಗಿದೆ.