677 ಕೋಟಿಗೆ ರಾಜಸ್ಥಾನದ ಕಂಪನಿ ಪಾಲಾಗಲಿದೆ ಬೆಂಗಳೂರಿನ ಪ್ರಖ್ಯಾತ ಸ್ಟಾರ್ಟ್‌ಅಪ್!
ರಾಜಸ್ಥಾನ ಮೂಲದ ಅಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್, ಬೆಂಗಳೂರು ಮೂಲದ ಎಜುಟೆಕ್ ಸ್ಟಾರ್ಟ್ಅಪ್ ಅನಾಕಾಡೆಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆ ಇದೆ. 677 ಕೋಟಿ ರೂಪಾಯಿಗೆ ಈ ಒಪ್ಪಂದ ನಡೆಯುವ ನಿರೀಕ್ಷೆಯಿದೆ.
ಬೆಂಗಳೂರು (ಡಿ.5): ರಾಜಸ್ಥಾನದ ಕೋಟಾ ಮೂಲದ ಪ್ರಮುಖ ಆಫ್‌ಲೈನ್ ಕೋಚಿಂಗ್ ನೆಟ್‌ವರ್ಕ್ ಆಗಿರುವ ಅಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್, ಬೆಂಗಳೂರು ಮೂಲದ ಎಜುಟೆಕ್ ಸ್ಟಾರ್ಟ್ಅಪ್ ಆಗಿರುವ ಅನಾಕಾಡೆಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಎರಡೂ ಕಂಪನಿಗಳು ಮುಂದುವರಿದ ಚರ್ಚೆಯಲ್ಲಿವೆ ಎಂದು ವರದಿಯಾಗಿದೆ. ಎಕಾನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಅಲೆನ್ ಇನ್‌ಸ್ಟಿಟ್ಯೂಟ್, ಅಂದಾಜು 800 ಮಿಲಿಯನ್ ಯುಎಸ್ ಡಾಲರ್ ಎಂದರೆ, 677 ಕೋಟಿ ರೂಪಾಯಿಗೆ ಅನಾಕಾಡೆಮಿಯನ್ನು ಖರೀದಿ ಮಾಡುವ ಸಾಧ್ಯತೆ ಇದೆ. ಅನಾಕಾಡೆಮಿಯ ಗರಿಷ್ಠ ಮೌಲ್ಯ 3.4 ಶತಕೋಟಿ ಯುಎಸ್ ಡಾಲರ್ ಆಗಿತ್ತು. ಇದರಲ್ಲಿ ಗಮನಾರ್ಹ ಕುಸಿತ ಕಂಡು ಈಗ 800 ಮಿಲಿಯನ್ ಯುಎಸ್ ಡಾಲರ್‌ಗೆ ತಲುಪಿದೆ. ಹಲವಾರು ತಿಂಗಳುಗಳಿಂದ ನಡೆಯುತ್ತಿರುವ ಮಾತುಕತೆಗಳು ಅಲೆನ್‌ನ ಪ್ರವರ್ತಕರಿಂದ ಅಂತಿಮ ಸೈನ್-ಆಫ್‌ಗಾಗಿ ಕಾಯುತ್ತಿವೆ ಎಂದು ವರದಿ ಹೇಳಿದೆ.
ಮಾತುಕತೆಗಳು ಎರಡೂ ಕಂಪನಿಗಳ ಹೂಡಿಕೆ ಬ್ಯಾಂಕ್‌ಗಳು ಷೇರು ಸ್ವಾಪ್ ಅನುಪಾತ ಮತ್ತು ಅನಾಕಾಡೆಮಿಯ ಸಂಸ್ಥಾಪಕರು ಮತ್ತು ಆರಂಭಿಕ ಹೂಡಿಕೆದಾರರಿಗೆ ನಗದು ಪಾವತಿಗಳನ್ನು ಚರ್ಚೆ ಮಾಡಿವೆ.
Bengaluru: 2160 ಕೋಟಿಗೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪಾಲು ಖರೀದಿಸಿದ ಕೆನಡಾ ಕೋಟ್ಯಧಿಪತಿ!
"ಮಾತುಕತೆಗಳು ನಡೆಯುತ್ತಿವೆ. ಹೂಡಿಕೆ ಬ್ಯಾಂಕ್‌ಗಳು ಎರಡೂ ಕಡೆಗಳಲ್ಲಿ ತೊಡಗಿಸಿಕೊಂಡಿವೆ, ಅನಾಕಾಡೆಮಿಯನ್ನು ಅಲೆನ್‌ನೊಂದಿಗೆ ವಿಲೀನಗೊಳಿಸಲು ಮಹೇಶ್ವರಿ ಸಹೋದರರನ್ನು ಮಂಡಳಿಯಲ್ಲಿ ತರುವುದು ಒಪ್ಪಂದದ ಪ್ರಮುಖ ಅಂಶವಾಗಿದೆ" ಎಂದು ಮೂಲವನ್ನು ಉಲ್ಲೇಖಿಸಿ ವರದಿಯಾಗಿದೆ.
ಬೆಂಗಳೂರಿಗೆ NHAI ನಿರ್ಮಾಣ ಮಾಡಲಿದೆ ಹೊಸ ಫ್ಲೈ ಓವರ್!
ಪ್ರಸ್ತುತ ಭಾರತದ ಎಜುಟೆಕ್ ಉದ್ಯಮ ದೊಡ್ಡ ಮಟ್ಟದ ಹಿನ್ನಡೆ ಕಂಡಿದೆ. ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದ್ದ ಎಜುಟೆಕ್ ಕಂಪನಿಗಳು ಬಳಿಕ ಹಿನ್ನಡೆಯ ದಾರಿ ಹಿಡಿದಿದೆ. ಅನಾಕಾಡೆಮಿ ಮಾತ್ರವಲ್ಲ ಅಲೆನ್ ಕೂಡ ಸಂಕಷ್ಟ ಎದುತ್ತಿತ್ತು. ಅನಾಕಾಡೆಮಿ ಆನ್‌ಲೈನ್ ಓನ್ಲಿ ಮಾಡೆಲ್‌ನಲ್ಲಿ ಕೆಲಸ ಮಾಡಿದ್ದರೆ, ರಾಜಸ್ಥಾನದ ಕೋಟಾಸಲ್ಲಿ ಅಲೆನ್‌ನ ಕೋಚಿಂಗ್ ಎಕೋಸಿಸ್ಟಮ್‌ನಲ್ಲೂ ಆದಾಯಗಳು ಕಡಿಮೆ ಆಗುತ್ತಿವೆ. ಈ ಒಪ್ಪಂದವು ಅನಾಕಾಡೆಮಿಯ ಡಿಜಿಟಲ್ ಪರಿಣತಿಯೊಂದಿಗೆ ಅಲೆನ್‌ನ ವ್ಯಾಪಕ ಭೌತಿಕ ನೆಟ್‌ವರ್ಕ್ ಅನ್ನು ಸಂಯೋಜಿಸುವ ಏಕೀಕೃತ ಶಿಕ್ಷಣದ ಶಕ್ತಿ ಕೇಂದ್ರವನ್ನು ರಚಿಸಬಹುದು.
ಮೌಲ್ಯಮಾಪನದ ಭಿನ್ನಾಭಿಪ್ರಾಯಗಳು ಕೂಡ ಚರ್ಚೆಯಲ್ಲಿವೆ. ವಿಶೇಷವಾಗಿ ಅನಾಕಾಡೆಮಿಯ $160 ಮಿಲಿಯನ್ ನಗದು ಮೀಸಲುಗಳ ಬಗ್ಗೆ ಚರ್ಚೆ ಆಗುತ್ತಿದೆ. ಒಪ್ಪಂದ ಅಂತಿಮಗೊಂಡರೆ, ಸಿಇಒ ಗೌರವ್ ಮುಂಜಾಲ್, ರೋಮನ್ ಸೈನಿ ಮತ್ತು ಸುಮಿತ್ ಜೈನ್ ಸೇರಿದಂತೆ ಅನಾಕಾಡೆಮಿಯ ಸಹ-ಸಂಸ್ಥಾಪಕರು ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಇನ್ನೊಬ್ಬ ಸಹ-ಸಂಸ್ಥಾಪಕ ಹೇಮೇಶ್ ಸಿಂಗ್ ಜೂನ್‌ನಲ್ಲಿ ತಮ್ಮ CTO ಪಾತ್ರವನ್ನು ತೊರೆದರು ಆದರೆ ಸಲಹೆಗಾರರಾಗಿ ಉಳಿದಿದ್ದಾರೆ. 2022 ರಲ್ಲಿ ಅಲೆನ್‌ನಲ್ಲಿ $600 ಮಿಲಿಯನ್ ಹೂಡಿಕೆ ಮಾಡಿದ ಗೌರವ್ ಮುಂಜಾಲ್ ಮತ್ತು ಅಲೆನ್ ಅವರ ಹೂಡಿಕೆದಾರರಾದ ಬೋಧಿ ಟ್ರೀ ಅವರು ಮಾತುಕತೆಗಳನ್ನು ನಡೆಸುತ್ತಿದ್ದಾರೆ.
ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಿಗೆ ಪರೀಕ್ಷಾ ಕೋಚಿಂಗ್‌ನಲ್ಲಿ ದೊಡ್ಡ ಹೆಸರು ಅಲೆನ್, FY23 ರಲ್ಲಿ ರೂ 2,277 ಕೋಟಿ ಆದಾಯ ಮತ್ತು ರೂ 427 ಕೋಟಿ ಲಾಭವನ್ನು ವರದಿ ಮಾಡಿದ್ದಾರೆ. ಹಾಗಿದ್ದರೂ, ಇದು ಇನ್ನೂ FY24 ಗಾಗಿ ಆಡಿಟ್ ಮಾಡಲಾದ ಹಣಕಾಸು ವರದಿ ಸಲ್ಲಿಸಿಲ್ಲ. ಈ ನಡುವೆ, 988.4 ಕೋಟಿ ಆದಾಯವನ್ನು ದಾಖಲಿಸಿದ ಅನಾಕಾಡೆಮಿ, FY24 ರಲ್ಲಿ 631 ಕೋಟಿ ರೂಪಾಯಿಗಳ ನಷ್ಟವನ್ನು ದಾಖಲಿಸಿದೆ, ವ್ಯಾಪಕವಾದ ವೆಚ್ಚ ಕಡಿತ ಕ್ರಮಗಳನ್ನು ಕೈಗೊಂಡಿದೆ. ಜುಲೈನಲ್ಲಿ 250 ಉದ್ಯೋಗಿಗಳನ್ನು ವಜಾ ಮಾಡಿದೆ.