ಆರ್ಬಿಐನಲ್ಲಿ ಕೊಳೆಯುತ್ತಿದೆ 48,262 ಕೋಟಿ ರೂಪಾಯಿ, ನಿಷ್ಕ್ರೀಯ ಬ್ಯಾಂಕ್ ಖಾತಗೆ ವಾರಸುದಾರರೇ ಇಲ್ಲ!
*ಯಾವುದೇ ಬ್ಯಾಂಕ್ ಖಾತೆ ಹತ್ತು ವರ್ಷಕ್ಕಿಂತ ಹೆಚ್ಚು ಕಾಲ ಬಳಕೆಯಲ್ಲಿರದಿದ್ರೆ ನಿಷ್ಕ್ರಿಯ ಖಾತೆ
*ನಿಷ್ಕ್ರಿಯ ಖಾತೆಗಳ ಹಣ ದುರ್ಬಳಕೆಯಾಗೋ ಸಾಧ್ಯತೆ ಹೆಚ್ಚು
*ವಿಶ್ವ ಬ್ಯಾಂಕ್ ವರದಿ ಪ್ರಕಾರ ಭಾರತದಲ್ಲಿವೆ ಅತೀಹೆಚ್ಚು ನಿಷ್ಕ್ರಿಯ ಬ್ಯಾಂಕ್ ಖಾತೆಗಳು
ನವದೆಹಲಿ (ಆ.18): ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ? ಈ ಪ್ರಶ್ನೆಗೆ ಖಂಡಿತಾ ನಿಮಗೆ ಉತ್ತರ ಗೊತ್ತಿರುತ್ತದೆ. ಇನ್ನು ನಿಮ್ಮಲ್ಲಿಅನೇಕ ಖಾತೆಗಳನ್ನು ಹೊಂದಿರೋರಿಗೆ ಯಾವ ಬ್ಯಾಂಕಿನ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದು ನೆನಪಿಗೆ ಬಂದಿರಬಹುದು. ಆದರೆ, ಅಚ್ಚರಿಪಡುವ ವಿಚಾರ ಏನಂದ್ರೆ ದೇಶದಲ್ಲಿ ಶೇ.35ರಷ್ಟು ಅಂದ್ರೆ 25.63 ಕೋಟಿ ಖಾತೆಗಳು ಕಳೆದ ಒಂದು ವರ್ಷದಿಂದ ನಿಷ್ಕ್ರಿಯವಾಗಿವೆ. ವಿಶ್ವ ಬ್ಯಾಂಕಿನ ಇತ್ತೀಚಿನ ಜಾಗತಿಕ ವರದಿ ಪ್ರಕಾರ ನಿಷ್ಕ್ರಿಯ ಖಾತೆಗಳ ಸಂಖ್ಯೆ ಜಗತ್ತಿನಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರೋದು ಭಾರತದಲ್ಲಿ ಅಂತೆ. ಯಾವುದೇ ಖಾತೆ ಹತ್ತು ವರ್ಷಕ್ಕಿಂತ ಹೆಚ್ಚು ಕಾಲ ನಿಷ್ಕ್ರಿಯವಾಗಿದ್ರೆ ಆಗ ಬ್ಯಾಂಕುಗಳು ಆ ಖಾತೆಯಲ್ಲಿರುವ ಹಣವನ್ನು ಆರ್ ಬಿಐ ಸುರ್ಪದಿಗೆ ವಹಿಸುತ್ತವೆ. ಈ ಹಣವನ್ನು ಆರ್ ಬಿಐ ಠೇವಣಿದಾರರ ಶಿಕ್ಷಣ ಹಾಗೂ ಜಾಗೃತಿ (ಡಿಇಎ) ನಿಧಿಗೆ ಜಮಾ ಮಾಡಲಾಗುತ್ತದೆ. 2022ರ ಮಾರ್ಚ್ 31ರ ತನಕ ಆರ್ ಬಿಐ ಡಿಇಎ ನಿಧಿಯಲ್ಲಿ ಒಟ್ಟು 48,262 ಕೋಟಿ ರೂ. ಇತ್ತು. ಇದು ಮಣಿಪುರ, ತ್ರಿಪುರ ಅಥವಾ ಮಿಜೋರಾಂನಂತಹ ಚಿಕ್ಕ ರಾಜ್ಯದ ವಾರ್ಷಿಕ ಬಜೆಟ್ ಗಿಂತ ಸಾಕಷ್ಟು ಹೆಚ್ಚಿದೆ.
ನಿಷ್ಕ್ರಿಯ ಖಾತೆಗಳ ನಿರ್ವಹಣೆ ಬ್ಯಾಂಕುಗಳ ತಲೆನೋವು ಹೆಚ್ಚಿಸಿದ್ರೆ, ಇಂಥ ಖಾತೆಗಳಿಂದ ವಂಚನೆ ಹೆಚ್ಚುವ ಸಾಧ್ಯತೆಯಿದೆ ಎಂಬುದು ಆರ್ ಬಿಐ ಕಳವಳ. ಈ ಖಾತೆಗಳಲ್ಲಿರುವ ಹಣ ದುರ್ಬಳಕೆ ಆಗುತ್ತದೆ ಎಂಬುದು ಕೂಡ ಆರ್ ಬಿಐ ಚಿಂತೆ ಹೆಚ್ಚಿಸಿದೆ. ನಿಷ್ಕ್ರಿಯ ಖಾತೆಗಳಿಗೆ ಸಂಬಂಧಿಸಿ ಆರ್ ಬಿಐ 2009ರಲ್ಲೇ ಮಾರ್ಗಸೂಚಿಗಳನ್ನು ರೂಪಿಸಿದೆ. ನಿಷ್ಕ್ರಿಯ ಖಾತೆಗಳನ್ನು ಸಕ್ರಿಯಗೊಳಿಸಲು ಅಭಿಯಾನ ರೂಪಿಸುವಂತೆಯೂ ಬ್ಯಾಂಕುಗಳಿಗೆ ಸೂಚಿಸಿದೆ. ಆದರೆ, ಇಂಥ ಖಾತೆಗಳ ಸಂಖ್ಯೆ ತಗ್ಗುವ ಬದಲು ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದೆ.
ಗುಡ್ ಫೆಲೋಸ್ ನಲ್ಲಿ ರತನ್ ಟಾಟಾ ಹೂಡಿಕೆ;ವೃದ್ಧರ ಒಂಟಿತನ ದೂರ ಮಾಡಲಿದೆ ಈ ವಿನೂತನ ಸ್ಟಾರ್ಟಪ್
ವಿಶ್ವ ಬ್ಯಾಂಕಿನ ಪ್ರಕಾರ ನಿಷ್ಕ್ರಿಯ ಖಾತೆಗಳು ಖಾತೆದಾರ ಮುಖ್ಯ ಆರ್ಥಿಕ ವಾಹಿನಿಯಲ್ಲಿ ಭಾಗವಹಿಸುತ್ತಿಲ್ಲ ಎಂಬುದರ ಸಂಕೇತವಾಗಿದೆ. ಇನ್ನೊಂದೆಡೆ ಜಗತ್ತಿನಲ್ಲಿ ಬ್ಯಾಂಕ್ ಖಾತೆಗಳನ್ನೇ ಹೊಂದಿರದವರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾರತದಲ್ಲಿದ್ದಾರೆ. ಇನ್ನು ಭಾರತದಲ್ಲಿ ಬ್ಯಾಂಕ್ ಖಾತೆ ಹೊಂದಿದ್ದರೂ ಡಿಜಿಟಲ್ ವಹಿವಾಟು ನಡೆಸದ ಜನರು ಕೂಡ ಜಾಸ್ತಿ ಪ್ರಮಾಣದಲ್ಲಿದ್ದಾರೆ.
ಬ್ಯಾಂಕುಗಳಿಗೆ RBI ಸೂಚನೆ ಏನಿದೆ?
RBI 'ಬ್ಯಾಂಕುಗಳಲ್ಲಿ ಗ್ರಾಹಕರ ಸೇವೆ' ಎಂಬ ಮಾಸ್ಟರ್ ಸುತ್ತೋಲೆ ಹೊರಡಿಸಿದ್ದು, ಅದ್ರಲ್ಲಿ ಬ್ಯಾಂಕುಗಳು ಖಾತೆಗಳ ವಾರ್ಷಿಕ ಪರಿಶೀಲನೆ ನಡೆಸಿ ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ಕ್ರಿಯಾಶೀಲರಾಗಿರದ ಗ್ರಾಹಕರನ್ನು ಸಂಪರ್ಕಿಸಿ ಅವರ ಖಾತೆಯಲ್ಲಿ ಯಾವುದೇ ವ್ಯವಹಾರ ನಡೆದಿಲ್ಲ ಎಂಬ ಮಾಹಿತಿಯನ್ನು ಲಿಖಿತ ರೂಪದಲ್ಲಿ ನೀಡೋ ಜೊತೆ ಕಾರಣವನ್ನೂ ಕೋರುವಂತೆ ಸೂಚನೆ ನೀಡಿದೆ. ಎರಡು ವರ್ಷಗಳಿಂದ ನಿಷ್ಕ್ರಿಯವಾಗಿರೋ ಖಾತೆಗಳ ಹಕ್ಕುದಾರರು ಅಥವಾ ಕಾನೂನುಬದ್ಧ ಉತ್ತರಾಧಿಕಾರಿಗಳನ್ನು ಪತ್ತೆಹಚ್ಚಲು ವಿಶೇಷ ಕಾರ್ಯಕ್ರಮ ಪ್ರಾರಂಭಿಸುವಂತೆ ಬ್ಯಾಂಕ್ಗಳಿಗೆ ಸಲಹೆ ನೀಡಲಾಗಿದೆ. ಬ್ಯಾಂಕ್ ಗಳು ತಮ್ಮ ವೆಬ್ ಸೈಟ್ ಗಳಲ್ಲಿ ಠೇವಣಿ ಹಿಂಪಡೆಯದ ಅಥವಾ ಯಾವುದೇ ವ್ಯವಹಾರ ನಡೆಸದ ನಿಷ್ಕ್ರಿಯ ಅಥವಾ 10 ವರ್ಷಗಳಿಂದ ಸಕ್ರಿಯವಾಗಿರದ ಖಾತೆಗಳ ಪಟ್ಟಿಯನ್ನು ಪ್ರಕಟಿಸಬೇಕು.ಇದ್ರಲ್ಲಿ ಖಾತೆದಾರರ ಹೆಸರು ಹಾಗೂ ವಿಳಾಸ ಕೂಡ ಇರಬೇಕು.
ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿಸುತ್ತೇನೆ ಎಂದಿದ್ದು ತಮಾಷೆಗೆ: ಎಲಾನ್ ಮಸ್ಕ್
ನಿಷ್ಕ್ರಿಯ ಖಾತೆ ಹಣ DEAFಗೆ ವರ್ಗಾ
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ತಿದ್ದುಪಡಿ ಹಾಗೂ ಈ ಕಾಯ್ದೆಗೆ ಸೆಕ್ಷನ್ 26ಎ ಸೇರ್ಪಡೆ ಬಳಿಕ ಆರ್ ಬಿಐ ಠೇವಣಿದಾರರ ಶಿಕ್ಷಣ ಹಾಗೂ ಜಾಗೃತಿ ನಿಧಿ (DEAF) ಯೋಜನೆ 2014 ರೂಪಿಸಲಾಗಿದೆ. ಇದರ ಅನ್ವಯ ಬ್ಯಾಂಕ್ ಗಳು 10 ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಂದ ಸಕ್ರಿಯವಾಗಿರದ ಎಲ್ಲ ಖಾತೆಗಳ ಬ್ಯಾಲೆನ್ಸ್ ಅನ್ನು ಬಡ್ಡಿ ಸಮೇತ ಲೆಕ್ಕ ಹಾಕಿ ಹಣವನ್ನು DEAF ಗೆ ವರ್ಗಾಯಿಸಬೇಕು. RBI ನಿರ್ದೇಶನದಂತೆ ಠೇವಣಿದಾರರ ಹಿತ ಕಾಯಲು ಹಾಗೂ ಅಂಥ ಇತರ ಉದ್ದೇಶಗಳಿಗೆ DEAF ಬಳಸಲಾಗುತ್ತದೆ. ಒಂದು ವೇಳೆ DEAFಗೆ ಹಣ ವರ್ಗಾಯಿಸಿರೋ ಖಾತೆಯ ಗ್ರಾಹಕ ತನ್ನ ಠೇವಣಿ ಹಣಕ್ಕೆ ಬೇಡಿಕೆಯಿಟ್ಟರೆ ಅಂಥ ಸಂದರ್ಭದಲ್ಲಿ ಬ್ಯಾಂಕ್ ಗ್ರಾಹಕರಿಗೆ ಬಡ್ಡಿ ಸಹಿತ ಹಣವನ್ನು ಮರುಪಾವತಿ ಮಾಡಬೇಕು ಹಾಗೂ ತನಗೆ ಮರುಪಾವತಿ ಮಾಡುವಂತೆ DEAFಗೆ ಮನವಿ ಮಾಡಬೇಕು.